ಇರುವೆಯ ಸೇಡು
ಇರುವೆಯೊಂದಿಗೆ ಆಡಿರುವಿರ? ನಾನು ಆಗಾಗ ಆಡುತ್ತಿರುತ್ತೇನೆ! ಏನು ಮಜವಿರುವುದು ಗೊತ್ತೇ? ಮಸ್ತು!!
ಒಂದುದಿನ, ನಾನೊಂದು ದಪ್ಪ ಕಪ್ಪಿರುವೆಯನ್ನು ಹಿಡಿದೆ. ಆ ಕೈಯಿಂದ ಈ ಕೈಗೆ, ಈ ಕೈಯಿಂದ ಆ ಕೈಗೆ ಓಡಾಡುವಂತೆ ಮಾಡಿ ಆಟವಾಡಿದೆ. ಸೂಕ್ಷ್ಮವಾಗಿ ಅದರ ಅಂಗಾಂಗಗಳನ್ನೆಲ್ಲಾ ಪರೀಕ್ಷಿಸಿದೆ. ಅದರ ಮೂತಿ ಕೋಪದಿಂದ ಬುಸುಗುಡುವಂತಿತ್ತು!
ಕೋಪವನ್ನು ಹೆಚ್ಚಿಸಲು ಅದರ ಹಿಂಬಾಗವನ್ನು ಅದುಮಿದೆ. ಇರುವೆ ತಾನೆ, ಇ.ರು.ವೆ. ತಾನೆ ಎನ್ನುವ ಅಸಡ್ಡೆ ನನಗೆ! ನಾನು ಅದುಮಿದ್ದು ಅದಕ್ಕೆ ಹಿಡಿಸಲಿಲ್ಲ! ಬಾಯಿಯಿಂದ ಒಂದುರೀತಿಯ ದ್ರವ ಸ್ರವಿಸಿತು!!
ಅಷ್ಟರಲ್ಲಿ ಯಾರೋ ನನ್ನನ್ನು ಕರೆದರು.
ಇರುವೆಯನ್ನು ಬಿಟ್ಟು ಎದ್ದು ಹೋದೆ.
ಸ್ವಲ್ಪ ಸಮಯ ಬಿಟ್ಟು ನೋಡಿದಾಗ, ಇರುವೆಯ ದ್ರವ ಬಿದ್ದ ಸ್ತಳದಲ್ಲಿ ಕಜ್ಜಿಯಂತೆ ಒಂದು ಬೊಬ್ಬೆ ಎದ್ದಿತ್ತು!!
😂😂😂ಮುಯ್ಯಿಗೆ ಮುಯ್ಯಿ ಸರಿಹೋಯಿತು 😂😂
ReplyDelete