ಕಷ್ಟ

"ನನಗೆ ಸೌಂದರ್ಯವಿಲ್ಲ''ಎಂದ ಗೆಳೆಯ.

ಅವನ ಮುಖವನ್ನೇ ನೋಡಿದೆ.

"ನಾನು ತುಂಬಾ ಕಷ್ಟದಲ್ಲಿದ್ದೇನೆ, ನನ್ನ ಕಷ್ಟ ಶತ್ರುವಿಗೂ ಬೇಡ''ಎಂದ.

ಅವನ ಕೈ ಹಿಡಿದುಕೊಂಡು ನಡೆದೆ.

ರಸ್ತೆಯ ಪಕ್ಕದಲ್ಲಿ ಭಿಕ್ಷೆಬೇಡುತ್ತಿದ್ದವರನ್ನು ತೋರಿಸಿದೆ, ಕೈಕಾಲು ಮುರಿದವರನ್ನು ತೋರಿಸಿದೆ, ಕುಷ್ಟರೋಗಿಗಳನ್ನು ತೋರಿಸಿದೆ, ಅನಾಥರನ್ನು ತೋರಿಸಿದೆ...,

"ಇವರಲ್ಲಿ ಯಾರಿಗಿಂತ ಹೆಚ್ಚು ಸೌಂದರ್ಯವಿಲ್ಲ? ಯಾರಿಗಿಂತ ಹೆಚ್ಚು ಕಷ್ಟಪಡುತ್ತಿದ್ದೀಯ?''ಕೇಳಿದೆ.

ನನ್ನ ಮುಖವನ್ನೇ ನೋಡುತ್ತಿದ್ದ.

"ನನಗೆ ಸೌಂದರ್ಯವಿಲ್ಲ, ಕಷ್ಟದಲ್ಲಿದ್ದೇನೆ ಎಂದು ಕೊರಗುವುದಕ್ಕಿಂತ, ಇವರಿಗೋಸ್ಕರ ಏನೂ ಮಾಡಲು ಸಾದ್ಯವಾಗುತ್ತಿಲ್ಲವಲ್ಲಾ ಎಂದು ದುಃಖ ಪಡು" ಎಂದೆ!

ನನ್ನ ಕೈಯಿಂದ ಬಿಡಿಸಿಕೊಂಡು,

"ನನ್ನ ಕಷ್ಟ ಯಾರಿಗೂ ಅರ್ಥವಾಗುವುದಿಲ್ಲ" ಎಂದು ಹೇಳಿ ಹೊರಟುಹೋದ!

Comments

  1. ಅವರವರ ಕಷ್ಟ ಅವರದು ಅವರು ದೇವರು ಅಲ್ವಲ್ಲ ಅವರ ಆಸೆಗಳೇ ಈಡೇರುತ್ತಿಲ್ಲ ಅವನೇ ವಿಷಾದದಲ್ಲಿರುವಾಗ ಬೇರೊಬ್ಬರ ಕಷ್ಟ ಅವನಿಗೆ ಯಾಕೆ ಅವನು ಎಲ್ಲ ರೀತಿಯಲ್ಲಿ ಸುಖವಾಗಿದ್ದರೆ ಬೇರೊಬ್ಬರಿಗೂ ಹಂಚುತ್ತಾನೆ ಬೇರೊಬ್ಬರ ಏಳಿಗೆಗೋಸ್ಕರ ನಾನು ಏನು ಮಾಡುತ್ತಿಲ್ಲವಲ್ಲ ಅನ್ನೋ ಭಾವನೆ ಅವರಲ್ಲಿ ಮೂಡಬೇಕಲ್ವಾ 😊

    ReplyDelete

Post a Comment

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!