ಮಕ್ಕಳು

ನಿನಗೆ ಕೊಡಲಿಲ್ಲವಾ?” ಪುಟ್ಟ ಮಗುವೊಂದು ಮತ್ತೊಂದು ಮಗುವನ್ನು ಕೇಳಿತು.

ಇಲ್ಲ” ಎನ್ನುವಂತೆ ತಲೆಯಾಡಿಸಿತು ಆ ಮಗು.

ತನಗೆ ಹಲವರು ಕೊಟ್ಟಿದ್ದ ಮಿಠಾಯಿಯಲ್ಲಿ ಕೆಲವನ್ನು ಆ ಮಗುವಿಗೆ ಕೊಟ್ಟಿತು ಮೊದಲಮಗು. ಹಾಗೆಯೇ ಹಲವು ಮಕ್ಕಳಿಗೆ ಕೊಟ್ಟಿತು.

ಕೊನೆಗೆ ಅದಕ್ಕೇನೂ ಉಳಿಯಲಿಲ್ಲ!

ನಿನಗೆ?” ಕೇಳಿತು ಮತ್ತೊಂದು ಮಗು .

ತುಟಿ ಬಾಗಿಸಿ, ಇಲ್ಲ ಎನ್ನುವಂತೆ ತಲೆಯಾಡಿಸಿತು.

ಉಳಿದ ಮಕ್ಕಳೆಲ್ಲಾ ಒಂದೊಂದು ಮಿಠಾಯಿಯನ್ನು ಆ ಮಗುವಿಗೆ ಕೊಟ್ಟರು.

ಅತಿ ಹೆಚ್ಚಿನ ಮಿಠಾಯಿ ಆ ಮಗುವಿನಲ್ಲೇ ಉಳಿಯಿತು.

Comments

  1. ಸೂಪರ್ ಸಹಕಾರ ಹಂಚಿತಿನ್ನುವ ಗುಣ

    ReplyDelete

Post a Comment

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!