ಭಿಕ್ಷುಕ
ಗೆಳೆಯ ಭಿಕ್ಷುಕನೊಬ್ಬನನ್ನು ಹಿಡಿದು ಎಳೆಯುತ್ತಿದ್ದ. ಭಿಕ್ಷುಕನೆಂದು ತಿಳಿಯದೆ ಎಳೆಯುತ್ತಿದ್ದಾನೋ ಏನೋ...
“ಅವನೊಬ್ಬ ಭಿಕ್ಷುಕ, ಬಿಟ್ಟುಬಿಡು”ಎಂದೆ.
“ಗೊತ್ತು, ಅವನನ್ನು ಕಾಪಾಡಬೇಕೆಂದಿದ್ದೇನೆ”ಎಂದ.
"ಪ್ರಪಂಚದ ಭಿಕ್ಷುಕರನ್ನೆಲ್ಲಾ ಕಾಪಾಡಲು ಸಾದ್ಯವೇ?”ಕೇಳಿದೆ.
“ನನ್ನೊಬ್ಬನಿಂದ ಸಾದ್ಯವಿಲ್ಲ! ಆದರೂ ಶ್ರಮಿಸುವುದರಲ್ಲೇನು ತಪ್ಪು?”
“ಶ್ರಮಿಸು, ಶ್ರಮಿಸು... ಸೋತುಹೋಗದಿದ್ದರೆ ಸಾಕು”ಎಂದೆ.
ನಕ್ಕ. ಅವನ ನಗುವಿನಲ್ಲಿ ವೇದನೆಯಿತ್ತು.
“ಸರಿ, ಈ ಪ್ರಪಂಚದಲ್ಲಿ ಭಿಕ್ಷುಕನಲ್ಲದ ಯಾರಾದರೂ ಒಬ್ಬನನ್ನು ತೋರಿಸು, ಇವನನ್ನು ಬಿಟ್ಟುಬಿಡುತ್ತೇನೆ”ಎಂದ.
ಒಂದು ರೀತಿ ಎಲ್ಲರು ಭಿಕ್ಷುಕರೆ 😊😊
ReplyDelete