ಸೀಟು
ಬಸ್ಸು ಜನರಿಂದ ತುಂಬಿದೆ. ವೃದ್ಧೆಯೊಬ್ಬರು ಜನಗಳಮದ್ಯೆ ಸಿಕ್ಕಿ ನಲುಗುತ್ತಿದ್ದಾರೆ.
“ಈ ಕಡೆ ಬನ್ನಿ ಅಮ್ಮ... ಅಲ್ಲಿ ನಿಂತರೆ ಜನ ನಿಮ್ಮನ್ನು ಚಟ್ನಿ ಮಾಡುತ್ತಾರೆ”ಎಂದೆ.
ನನ್ನ ಕೈ ಹಿಡಿದು ಮುಂದಕ್ಕೆ ಸರಿದು ನಿಂತರು.
ಇಷ್ಟು ವಯಸ್ಸಾಗಿರುವವರನ್ನು ನೋಡಿದರೂ ಯಾರೂ ಸೀಟು ಕೊಡಲಿಲ್ಲ.
ಪಕ್ಕದಲ್ಲಿ ಕುಳಿತಿದ್ದ ಹುಡುಗಿಯನ್ನು ಕರೆದೆ.
ನನ್ನ ಮುಖ ನೋಡಿದಳು.
“ವಯಸ್ಸಾದವರು, ಪಾಪ, ನಿಂತುಕೊಳ್ಳಲಾಗುತ್ತಿಲ್ಲ... ಸೀಟು ಬಿಟ್ಟುಕೊಡುತ್ತೀರ?” ಕೇಳಿದೆ.
“ನಿನ್ನ ಕೆಲಸ ನೀನು ನೋಡಿಕೋ... ನಿನಗೆ ಸೀಟಿಲ್ಲವೆಂದು ನನ್ನನ್ನು ಎಬ್ಬಿಸುತ್ತೀಯ? ಸೀಟಿದ್ದಿದ್ದರೆ ನೀನೂ ಬಿಟ್ಟುಕೊಡುತ್ತಿರಲಿಲ್ಲ ಬಿಡು”ಎಂದಳು.
ಜನರೆಲ್ಲಾ ಕನಿಕರದಿಂದ ನನ್ನನ್ನು ನೋಡಿದರು. ಯಾರೂ ಸೀಟು ಬಿಟ್ಟುಕೊಡಲಿಲ್ಲ.
ಮುಂದಿನ ಸ್ಟಾಪ್ ಬಂತು. ಆ ಹುಡುಗಿ ಎದ್ದು ಹೋದಳು.
“ಕುಳಿತುಕೊಳ್ಳಿ ಅಮ್ಮಾ...”ಎಂದೆ.
“ಆ ಸೀಟು ನನಗೆ ಬೇಡ ಕಣಪ್ಪಾ”ಎಂದರು.
ಕಾರಣವೇನೋ ತಿಳಿಯದು, ನನ್ನ ಕಣ್ಣಲ್ಲಿ ನೀರು ತುಂಬಿತು.
ನನ್ನನ್ನು ನೋಡಿದ ಸೀಟು ಕೂಡ ನಿಟ್ಟುಸಿರು ಬಿಟ್ಟಂತೆನ್ನಿಸಿತು.
ಅಲ್ಲಿ ಕೂತಿದ್ದ ವ್ಯಕ್ತಿಯಿಂದ ಆ ಸೀಟು ಬೆಲೆಇಲ್ಲದ್ದು ಅಂತ ಗೊತ್ತಾಯಿತು ಅದಕ್ಕೆ ಅಲ್ಲಿ ಕೂರುವುದಕ್ಕಿಂತ ನಿoತಿರುವುದೇ ವಾಸಿಯೆಂದು 😊
ReplyDelete