ಮನುಷ್ಯ
ಬೆಳಗ್ಗೆ ತಂದು ಹಾಕಿದರು. ಸಂಜೆ ತೆಗೆದುಕೊಂಡು ಹೋದರು. ಅದುವರೆಗಿನ ಆತನ ಸಂಪಾದನೆ ಅವರಿಗೆ, ಆ ಸಂಪಾದನೆಗೋಸ್ಕರ ತುತ್ತು ಅನ್ನ ಆತನಿಗೆ!
ಪುನಹ ಎಂದಿನಂತೆ ತಂದು ಹಾಕುತ್ತಾರೆ, ಆತ ಕೂಗುತ್ತಾನೆ, “ಅಮ್ಮಾ.... ಅಪ್ಪಾ.... ಧರ್ಮ ಮಾಡಿ ಸ್ವಾಮಿ...”
ಸಂಜೆ ಬರುತ್ತಾರೆ, ಆತನ ಸಂಪಾದನೆಯೊಂದಿಗೆ ಆತನನ್ನೂ ಎತ್ತಿಕೊಂಡು ಹೋಗುತ್ತಾರೆ!
ಸಂಪಾದನೆ ಹೆಚ್ಚಿದ್ದ ದಿನ ಖುಷಿ ಅವರಿಗೆ! ಸಂಪಾದನೆ ಕಡಿಮೆಯಿದ್ದ ದಿನ ನರಕ ಆತನಿಗೆ!
ಇದೇ ಅವರ ಜೀವನ.
ಏಕೆ ಹೀಗೆ?
ಮೃಗಗಳಲ್ಲಿ ಸಿಂಹ, ಹುಲಿ, ಕರಡಿ, ನರಿಗಳೆಂಬ ವರ್ಗಗಳಿರುವಂತೆ ಮನುಷ್ಯನೂ ಒಂದು ವರ್ಗ.
ಸಿಂಹಗಳಲ್ಲಿ ಕೆಳಜಾತಿಯ ಸಿಂಹ, ಮೇಲ್ಜಾತಿಯ ಸಿಂಹ ಎಂದು ವರ್ಗಗಳಿಲ್ಲ!
ಮತ್ತೆ ಮನುಷ್ಯರಲ್ಲೇಕಿದೆ?
ತಿಳಿಯದು!
ಪರಸ್ಪರ ಸಹಕರಣೆ, ಪ್ರೀತಿ ವಿಶ್ವಾಸಗಳಿಂದ ಸಂತೋಷವಾಗಿ ಬದುಕಬೇಕಾದವನು ಮನುಷ್ಯ. ಆದರೆ...
ಅಯ್ಯೋ... ಉಸಿರು ಕಟ್ಟುತ್ತಿದೆ... ಯಾರದು ಕುತ್ತಿಗೆಯಲ್ಲಿ ಕಂಬಿಯನ್ನು ಸುತ್ತಿ ಎಳೆಯುತ್ತಿರುವುದು?
“ಎರಡು ವರ್ಷದ ಹಿಂದೆ ತೆಗೆದುಕೊಂಡ ಸಾಲ... ಬಡ್ಡೀ ಮಗನೆ, ನನ್ನ ಕಯ್ಯಿಂದಾನೆ ತಪ್ಪಿಸಿಕೊಳ್ಳಲು ನೋಡುತ್ತೀಯಾ...”
ಇದೇ ಮನುಷ್ಯ ಜನ್ಮ!!
ಮನುಷ್ಯನ ವಿವಿಧ ವಿಕಾರಗಳು ನಿಷ್ಕಾರುಣ್ಯ ಅಮಾನವೀಯತೆ 😊
ReplyDelete