ಜೇಡ
ಜೇಡವೊಂದು ಬಲೆ ಹೆಣೆಯುತ್ತಿತ್ತು. ಜೇಡನಮೇಲೆ ನನಗೆ ಯಾವಾಗಲೂ ಅಸೂಯೆಯೇ... ಅದರ ಇಚ್ಛಾಶಕ್ತಿ... ಬಲೆ ಎಷ್ಟುಬಾರಿ ತುಂಡಾದರೂ, ಏನೇ ಅಡಚಣೆಯಾದರೂ ಅದು ನೇಯುತ್ತಲೇ ಇರುತ್ತದೆ! ಅದನ್ನು ಕಂಡು ನನಗೆ ಹೊಟ್ಟೆ ಉರಿದು, ಜೇಡ ಬಲೆ ಹೆಣೆಯುವುದಕ್ಕೆ ಅನುಸಾರವಾಗಿ ನಾನು ಬಿಡಿಸುತ್ತಾ ಇರುತ್ತಿದ್ದೆ.
ಪಾಪ (ನಾನೋ ಜೇಡನೋ?!) ಪುನಹ ಪುನಹ ಹೆಣೆಯುತ್ತಲೇ ಇತ್ತು.
ಕೊನೆಗೆ ಬೇಸತ್ತ ನಾನು ಸೋಲೊಪ್ಪಿಕೊಂಡು ಅದರ ಪಾಡಿಗೆ ಬಿಟ್ಟೆ.
ಮಾರನೆಯ ದಿನ ಯಾವುದೋ ನೆನಪಿನಲ್ಲಿ ಬಂದ ನಾನು ಜೇಡರ ಬಲೆಯಿರುವುದು ನೆನಪಾಗದೆ ಮುನ್ನುಗ್ಗಿದೆ. ಜೇಡ ಮೂಗಿಗೆ ತಾಗುವಂತೆ ಬಲೆ ಪೂರ್ತಿಯಾಗಿ ನನ್ನ ಮುಖವನ್ನು ಆವರಿಸಿಕೊಂಡಿತು!
ಕೋಪದಿಂದ ಬುಸುಗುಟ್ಟಿದೆ. ಜೇಡ ಕಣ್ಣು ಮಿಟುಕಿಸಿ ಗೋಡೆಯ ಮೇಲಕ್ಕೆ ಎಗರಿತು.!
ಅದನ್ನೇ ದುರುಗುಟ್ಟಿ ನೋಡುತ್ತಾ ಹೊರಟೆ.
ಸಂಜೆ ಮನೆಗೆ ಬಂದು ನೋಡಿದರೆ ಜೇಡ ಪುನಹ ಬಲೆ ಹೆಣೆಯುತ್ತಿತ್ತು...!!!
ಒಂದು ಸಮಯಪರಿಧಿಯನ್ನು ನಿಶ್ಚಯಿಸಿ, ಆ ಪರಿಧಿ ದಾಟಿ ಹಲವು ವರ್ಷವಾದರೂ ಸಾಧಿಸಲಾಗದ ಗುರಿಯನ್ನು ನೆನೆದು, ಜೇಡಕ್ಕೆ ತಲೆಬಾಗಿ ಮನೆಯೊಳಕ್ಕೆ ನಡೆದೆ..!!!
ಕರ್ತವ್ಯ ನಿಷ್ಠೆ ನಿರಾಸೆ ಗೊಲ್ಲದಿರುವುದು ಅದರ ಗುಣ.ಯಾಕೆ ಅಂದರೆ ಅದಕ್ಕೆ ನಾನು ನಿರ್ಮಿಸಿಕೊಳ್ಳಬಲ್ಲೆ ಅನ್ನೋ ಛಲ ವಿಶ್ವಾಸ 😊
ReplyDelete