ಪ್ರೇಮಪತ್ರ
ನನ್ನ ಗೆಳೆಯ,
“ಒಂದು ಪ್ರೇಮಪತ್ರ ಬರೆದುಕೊಡೋ... ಓದಿದ ತಕ್ಷಣ ಹುಡುಗಿ ಓಡೋಡಿ ಬಂದು ತಬ್ಕೊಂಡ್ ಬಿಡ್ಬೇಕು... ಆ ತರ ಇರಬೇಕು ಪತ್ರ”ಎಂದ.
ಬರೆದೆ... ಒಂದು ತಿಂಗಳು ಕಷ್ಟಪಟ್ಟು, ಯೋಚಿಸಿ ಬರೆದೆ. ಕೊನೆಯಲ್ಲಿ...,
"ಶುಭ ಕಾಂಕ್ಷೆಗಳು... ನಿನ್ನ ಗೆಳೆಯ" ಎಂದು ಹೆಸರು ಸೇರಿಸಿದೆ.
ಆ ಪೆದ್ದ ಅದನ್ನು ಬೇರೆ ಪ್ರತಿಗೆ ಇಳಿಸದೆ ನೇರವಾಗಿ ಗೆಳತಿಗೆ ಕೊಟ್ಟ.
“ಪ್ರೇಮಪತ್ರ ಬರೆಯಲಾರದ ನೀನೊಬ್ಬ ಪ್ರೇಮಿನಾ? ಥೂ...” ಎಂದಳಂತೆ.
ಬಂದು ನನ್ನ ಮುಂದೆ ನಿಂತು,
“ಒಂದು ಪ್ರೇಮಪತ್ರ ಬರೆಯಲು ಎಷ್ಟು ತೆಗೆದುಕೊಳ್ಳುತ್ತೀಯ?” ಕೇಳಿದಳು.
ಗೆಳೆಯನ ಪೆದ್ದು ತನಕ್ಕೆ ನಗಬೇಕೋ ಅಳಬೇಕೋ ತಿಳಿಯದೆ ನಿಂತಿದ್ದಾಗ,
“ತುಂಬಾ ಚೆನ್ನಾಗಿ ಬರೆಯುತ್ತೀಯಾ ಕಣೋ, ಐ ಲವ್ ಯೂ” ಎಂದಳು.
ಅಷ್ಟೇ ಪ್ರೇಮವನ್ನು ವ್ಯಕ್ತಪಡಿಸಲು ಇನ್ನೊಬ್ಬರ ಸಹಾಯ ಪಡೆದರೆ ಹಾಗೇನೇ ಪ್ರೀತಿಯನ್ನು ಇನ್ನೊಬ್ಬರಿಗೆ ಮಾರಿಕೊಂಡಂತೆ 😊
ReplyDelete