ಅಸ್ಮಿತೆ!
ಅಸ್ಮಿತೆ!
“ನ್ತ ಮಹಾರಾಜರು ಭಾರಿ ಚಿಂತೆಯಲ್ಲಿದ್ದೀರಿ?”
“ಒಂದು ಕಥೆ ಬರೆದೆನೆ! ಕ್ಲೈಮಾಕ್ಸ್ ಸಿಕ್ತಿಲ್ಲ!”
“ಎಲ್ಲಿ ಕೊಡು ನೋಡ್ತೀನಿ!”
“ಬೇಡ, ಬೇಡ…, ಅಡಲ್‌ಟ್ಸ್ ಓನ್ಲಿ!”
“ಮಗನೆ! ನಿನ್ನ ಯಾವ ಕಥೆ ಯೂನಿವರ್ಸಲ್?”
“ಅದೂ ನಿಜಾ ಅನ್ನು…! ಆದರೂ…!”
“ನಿನ್ತಲೆ! ಕೊಡಿಲ್ಲಿ!”
“ಕ್ಲೈಮಾಕ್ಸ್ ಹೇಳ್ತೀಯ ಅಂದ್ರೆ ಕೊಡ್ತೀನಿ!”
“ನಿನ್ನ ಕಥೆಗೆ ನಾನು ಕ್ಲೈಮಾಕ್ಸ್ ಹೇಳೋದಾ? ಅಸಂಭವ!”
“ಹಾಗಿದ್ರೆ ಓದಬೇಡ!”
“ಕಥೆ ಓದಿ ನನ್ನ ಅಭಿಪ್ರಾಯವಂತೂ ಹೇಳ್ತೀನಿ! ಯೋಚನೆ ಮಾಡು…!”
“ನೀನು ಏನು ಹೇಳ್ತೀಯೋ ಅದೇ ಕ್ಲೈಮಾಕ್ಸ್!”
೧
“ಲೋ ಮಗಾ! ಕಾಂಡಮ್ಸ್ ತಗೋಬೇಕು! ಏನೋ ಮಾಡ್ಲಿ!?” ಎಂದ ಗೆಳೆಯ.
ತಟ್ಟನೆ ಅವನ ಮುಖವನ್ನು ನೋಡಿದೆ.
“ನಿನ್ನ ಹೆಂಡ್ತೀಗೆ ಹೇಳ್ತೀನಿರು ಮಗ್ನೆ!” ಎಂದೆ.
“ನೀನು ತಕ್ಕೊಟ್ಟೆ ಅಂದ್ರೆ ಗ್ರಹಾಚಾರ ಬಿಡಿಸ್ತಾಳೆ ಅಷ್ಟೆ!” ಎಂದ.
ತಲೆ ಗಿರ್ರ್ ಅಂದಿತು! ಗೊಂದಲದಿಂದ ಅವನ ಮುಖವನ್ನು ನೋಡಿದೆ. ಆಗ ನನ್ನ ಪ್ರಶ್ನೆಯ ಧಾಟಿ ಅರ್ಥವಾದವನಂತೆ..,
“ಕರ್ಮ! ಈಗ್ಲೇ ಮಕ್ಳಾಗೋದು ಬೇಡ ಅಂತ ತೀರ್ಮಾನ ಮಾಡಿದೀವಿ! ಸೋ ಕಾಂಡಮ್ ಯೂಸ್ ಮಾಡೋಣಾ ಅಂತ…!” ಎಂದ.
ಒಂದೆರಡು ಕ್ಷಣ ಅವನ ಮುಖವನ್ನೇ ನೋಡಿ..,
“ನಿನಗೆ ತಗೋಳೋಕೆ ನಾಚಿಕೆ! ಡಿವೋರ್ಸ್ ಆಗಿರೋ ನಾನು ಕಾಂಡಮ್ ತಗೊಂಡ್ರೆ ಚಿಂತೆ ಇಲ್ಲ! ನ್ತ ಸಾವು ಮಾರಾಯ?!”
“ಲೋ..! ಪ್ಲೀಸ್ ಮಗಾ…!” ಎಂದ.
ಮೆಡಿಕಲ್‌ಷಾಪ್‌ನಿಂದ ಕಾಂಡಮ್ಸ್ ತಂದು ಅವನ ಕೈಗೆ ಕೊಡುವಾಗ…,
“ಸಧ್ಯಕ್ಕೆ ನಿನ್ನ ಜೇಬಲ್ಲೇ ಇರಲಿ- ಹೊರಡುವಾಗ ಕೊಡು!” ಎಂದ.
ಇಬ್ಬರೂ ಟೀ ಕುಡಿಯುತ್ತಾ ನಿಂತಿದ್ದೆವು. ನಾನು ಸಿಗರೇಟು ಸೇದುತ್ತಿದ್ದೆ! ಅವನಿಗೆ ಯಾವುದೋ ಕಾಲ್ ಬಂತು…,
“ಬಂದೆ…, ಬಂದೆ…, ಐದೇ ನಿಮಿಷ!” ಎಂದು ಫೋನ್‌ನಲ್ಲಿ ಹೇಳಿ…,
“ಮಗಾ…, ಸಂಜೆ ಸಿಕ್ತೀನೋ..!” ಎಂದು ಹೇಳಿ ಹೊರಟೇ ಹೋದ!
ಕಾಂಡಮ್ ನನ್ನಲ್ಲೇ ಉಳಿಯಿತು!
೨
“ಇವತ್ತು ಬೇಡ ಅನ್ನಿಸ್ತಿದೆ ಮನು!” ಎಂದಳು!
“ಬೇಕು ಅಂತ ಯಾರು ಹೇಳಿದ್ರು?” ಎಂದೆ.
“ಲೋ…! ಇಷ್ಟುದೊಡ್ಡ ಗ್ಯಾಪ್ ಮುಂಚೆ ಯಾವತ್ತೂ ಬಂದಿರ್ಲಿಲ್ಲ! ಸಿಕ್ತೀಯೋ ಇಲ್ವೋ ಅಂತಾನೇ ಇದ್ದೆ! ಸಿಕ್ಕಿದೀಯ! ಆದ್ರೂ ಯಾಕೋ ಮೂಡ್ ಬರ್ತಿಲ್ಲ!” ಎಂದಳು.
“ಅಂದ್ರೇ…, ಸಿಕ್ಕಾಗೆಲ್ಲಾ ಸೆಕ್ಸ್ ಆಗಲೇಬೇಕು ಅಂತಾನ? ಅಥವಾ ನಿನ್ನ ಭೇಟಿಯಾಗೋ ಉದ್ದೇಶಾನೇ ಅದು ಅಂತಾನ?” ಎಂದೆ.
“ಹಾಗಲ್ವೋ…! ನಾನೇ ಪ್ರಾಕ್ಟೀಸ್ ಮಾಡ್ಸಿದ್ದು! ಈ ಸಾರೀನೂ ಎಕ್ಸ್‌ಪೆಕ್ಟ್ ಮಾಡಿರ್ತೀಯೇನೋ ಅಂತ…!”
“ಕಣ್ಮಣಿ! ಇದು ಮನು! ನಿನ್ನ ಮೇಲಿನ ನನ್ನ ಪ್ರೇಮ ಯಾವೊಂದನ್ನೂ ಡಿಪೆಂಡ್ ಆಗಿಲ್ಲ! ಅಂದುಕೊಂಡಾಗೆಲ್ಲ ನಿನ್ನ ನೋಡುವ ಅದೃಷ್ಟ ನನಗಿಲ್ಲ- ನಮ್ಮ ಸಂದರ್ಭ ಹಾಗಿದೆ! ನಿನ್ನ ಭೇಟಿಯಾಗೋದಷ್ಟೇ ನನಗೆ ಮುಖ್ಯ! ಫುಲ್ ಖುಷಿಯಲ್ಲಿದ್ದೀನಿ… ಹಾಳು ಮಾಡಬೇಡ!”
ಕುಳಿತಿದ್ದ ನನ್ನ ಎದುರಿಗೆ ಬಂದು ನಿಂತಳು. ನನ್ನ ಮುಖವನ್ನು ತನ್ನ ಎದೆಗೆ ಒತ್ತಿಕೊಂಡು…,
“ಅರ್ಥವಾಗುತ್ತೋ..! ನನಗೆ ಗೊತ್ತಿಲ್ಲವಾ ನನ್ನ ಮನು? ಆದರೂ ಅಷ್ಟು ದೂರದಿಂದ ಬಂದು- ರೂಮೆಲ್ಲಾ ಬುಕ್ ಮಾಡಿ… ಒಂದು ರೀತಿಯಲ್ಲಿ- ಮನೆಗೆ ಬಂದ ಅಥಿತಿಗೆ ಊಟ ಬಡಿಸದೆ ಕಳಿಸುತ್ತಿರುವ ಫೀಲ್!” ಎಂದಳು.
“ಯಪ್ಪಾ! ನ್ತಾ ಉಪಮೆ! ಹೀಗೆಲ್ಲಾ ಹೇಳೊ ಮೂಲಕ ನೀನು ನನಗೆ ಅವ್ಮಾನ ಮಾಡ್ತಿದೀಯ ಅಂತ ಅನ್ನಿಸ್ತಿಲ್ವ?”
ನನ್ನ ಮುಖವನ್ನು ಮತ್ತಷ್ಟು ಒತ್ತಿಕೊಂಡಳು…!
“ಅದೇನ್ಗೊತ್ತಾ ಮನು…? ನೀನು ನನಗೊಂಥರಾ ಆಫೀಮು! ಈಗ ನಾವು ಸೇರಿದೆವೂ ಅನ್ಕೋ… ನನಗೆ ಪದೇ ಪದೇ ಬೇಕು ಅನ್ನಿಸ್ತೀಯ! ನಾನು ಕಾಲ್ ಮಾಡ್ತೀನಿ! ನೀನು ಬರೋ ಸಂದರ್ಭ ಇರುತ್ತೋ ಇಲ್ವೋ..! ಅಂದೊಂಕೊಂಡಾಗೆಲ್ಲಾ ಸಿಗದೇ ಇದ್ದಾಗಿನ ಡಿಪ್ರೆಶನ್ ಬೇರೆ… ಇನ್ನೊಂದು…, ನನ್ನ ಫ್ಯಾಮಿಲಿ ಲೈಫ್! ಗಂಡನಿಗೆ ಮಾತು ಕೊಟ್ಟಿದ್ದೀನಿ- ನೀನು ದೂರವೇ ಅಂತ! ಇಷ್ಟುದೊಡ್ಡ ಗ್ಯಾಪ್‌ನಲ್ಲಿ ಒಂದು ಸಾರಿ ಭೇಟಿಯಾದರೆ ದೂರ ಅನ್ನೋ ಮಾತಿಗೆ ಸುಳ್ಳಾಡಿದಂತೆ ಆಗುವುದಿಲ್ಲ ಅನ್ನೋ ಧೈರ್ಯದಲ್ಲಿ ಭೇಟಿಯಾಗಿದ್ದೀನಿ!” ಎಂದಳು.
ಎದ್ದುನಿಂತು ಅವಳ ಮುಖವನ್ನು ನನ್ನ ಬೊಗಸೆಯಲ್ಲಿ ತೆಗೆದುಕೊಂಡೆ…,
“ನಿನ್ನ ಮಾತು ನನ್ನ ಮಾತಲ್ಲವೇನೆ? ನನಗೂ ನಿನ್ನ ಸಾನ್ನಿಧ್ಯವಷ್ಟೇ ಮುಖ್ಯ… ಮಾನಸಿಕವಾಗಿ ನಾವೆಂದೂ ದೂರ ಆಗಬಾರದು…! ನನ್ನ "….” ನನಗಿದ್ದಾಳೆ ಅನ್ನೋಫೀಲ್… ಅದರ ಸುಖಕ್ಕಿಂತ ಇನ್ನೇನು ಬೇಕು? ಆರುತಿಂಗಳೇನು…, ವರ್ಷವೇನು…, ಜೀವಿತ ಕಾಲದಲ್ಲಿಯೇ ಭೇಟಿಯಾಗುವುದಿಲ್ಲವೆಂದರೂ… ಮನಸ್ಸಿನೊಳಗಿನಿಂದ ನಿನ್ನ ನೆನಕೆ ನನ್ನನ್ನು ತಾಕುತ್ತದೆ! ನಾ ನೆಮ್ಮದಿ!” ಎಂದೆ.
ಇದುವರೆಗಿನ ನನ್ನ ಬದುಕಿನಲ್ಲಿ ಈ ಭಾವ ಅರ್ಥವಾಗಿರುವುದು ಅವಳಿಗೆ ಮಾತ್ರ!
“ಏನು ಹೇಳುತ್ತಾರೆ ನಿನ್ನ ಇತರ ಗೆಳತಿಯರು?” ಎಂದಳು- ಎಂದಿನ ಮೂಡ್‌ಗೆ ಬಂದು!
“ಅದೆಲ್ಲಾ ನೀನು ಕೇಳಬಾರದು!” ಎಂದೆ.
“ನೀನು ಎಕ್ಸ್‌ಪ್ಲೋರ್ ಆಗಬೇಕು! ನಿನ್ನಂಥಾ ಗಂಡಿನ ಅಗತ್ಯ ಎಷ್ಟೋ ಹೆಣ್ಣಿಗೆ ಇದೆ! ಹಾಗೆಯೇ ಹೆಣ್ಣಿನ ಅಗತ್ಯ ನಿನಗೂ! ನೀನಾಗಿ ಟ್ರೈ ಮಾಡಬೇಡ- ನಿನ್ನ ಹತ್ತಿರಕ್ಕೆ ತಲುಪಿದ ಹೆಣ್ಣಿಗೆ ಸಾಂತ್ವಾನವಾಗು ಸಾಕು! ಗೊತ್ತು…, ನೀನು ಯಾರೊಬ್ಬರ ಕೈಬಿಡುವುದಿಲ್ಲವೆಂದು! ಆದರೂ ಹೇಳಿದೆ ಅಷ್ಟೆ…!” ಎಂದಳು.
ನಾನೇನೂ ಮಾತನಾಡಲಿಲ್ಲ. ಅವಳೇ…,
“ಏನೇನೋ ಯೋಚನೆಗಳು ಮನು! ಈಗ ಯಾವುದರಲ್ಲಿಯೂ ಆಸಕ್ತಿಯಿಲ್ಲ! ಈ ಪ್ರೇಮ, ಅಫೆಕ್ಷನ್, ಸೆಂಟಿಮೆಂಟ್, ಇಮೋಷನ್… ಎಲ್ಲದರಿಂದ ಹೊರಕ್ಕೆ ಬರ್ತಿದೀನಿ! ಈಗ ನೀ ಸಿಕ್ಕಿದೀಯ… ನಿನ್ನ ಆಸೆಯಂತೆ ನಾವು ಅಪ್ಪಿ ಮಲಗಿದೆವೂ ಅನ್ಕೋ…, ಅದೊಂದು ಅದ್ಭುತ ಎಫೆಕ್ಟ್! ಅದರಲ್ಲೂ ನಿನ್ನ ತೋಳಮೇಲೆ ತಲೆಯಿಟ್ಟು ಮಲಗುವ ಫೀಲ್… ಈಗೇನೋ ಸಾಧ್ಯ- ಆಮೇಲೆ? ಪುನಃ ಪ್ರಾಕ್ಟೀಸ್ ಆಗಬಾರದೆಂಬ ಚಿಂತೆ! ಕ್ಷಮಿಸು..!” ಎಂದಳು.
“ಇದೊಂಥರ ಹೊಸಾ ಫೀಲ್! ಈ ರೀತಿಯ ಯೋಚನೆ ಮನೂಗೆ ಬಂದೇ ಇರಲಿಲ್ಲ! ಮನೂ ಚಿಂತೆ ಹೇಗಿತ್ತು ಅಂದ್ರೇ…, ಈಗ ನಾವು ಸೇರಿದರೆ…, ಮುಂದಿನ ಸೇರುವಿಕೆಯ ತನಕ ಈ ನೆನಪು ಸಾಕು-ನ್ತ! ಆದರೆ ನಿನ್ನ ಯೋಚನೆಯೇ ಸರಿಯೇನೋ…? ಆ ಭಾವದಿಂದಲೇ ಹೊರಬಂದರೆ..? ಅದರ ಚಿಂತೆಯೇ ಇಲ್ಲದಿದ್ದರೆ..? ಅದೇ ನೆಮ್ಮದಿ! ನೀನೇ ಸರಿ! ನಿನ್ನಮೇಲಿನ ನನ್ನ ಪ್ರೀತಿ ಮತ್ತಷ್ಟು ಹೆಚ್ಚಾಗಿದೆ ಹುಡುಗಿ!” ಎಂದೆ.
ಮುಂದೆ ನಾವಿಬ್ಬರು ಭೇಟಿಯಾಗುವ ಸಂದರ್ಭ ಒದಗಲೇ ಇಲ್ಲ!
೩
ಅವಳೊಂದು ಅದ್ಭುತ ನನಗೆ! ಯಾರಲ್ಲ ಅನ್ನದಿರಿ- ಆದರೂ!
ಎದೆಯಮೇಲೆ ತಲೆಯಿಟ್ಟು ಅಪ್ಪಿ ಮಲಗಿದ್ದಾಳೆ. ಮುಖದಲ್ಲಿ ಸಂಪೂರ್ಣ ತೃಪ್ತಿಯಿದೆ. ಅಪ್ಪಿದ ಕೈಯನ್ನು ಸಡಿಲಿಸಿ ಎದೆಯ ಮೇಲಕ್ಕೆ ತಂದು ರೋಮಗಳೊಂದಿ ಆಟವಾಡುತ್ತಾ ಕೇಳಿದಳು…,
“ನೀನೇಕೆ ಯಾವುದನ್ನೂ ಓಪನ್ ಆಗಿ ಹೇಳುವುದಿಲ್ಲ? ನಾನೂ ಎಲ್ಲರಂತೆಯೇ ಏನು?” ಎಂದಳು.
“ಇದೇ ಪ್ರಶ್ನೆ ಕೇಳಿದ ಮೂರನೇ ಹೆಣ್ಣು ನೀನು!” ಎಂದೆ.
ಸ್ವಲ್ಪ ಡಿಸ್ಟರ್ಬ್ ಆದಳು.
“ಅದಲ್ಲ ಮನು! ಎಲ್ಲರೂ ನಿನಗೆ ಒಂದೇ ಅಂದಮೇಲೆ…, ನನ್ನ ಅಸ್ಮಿತೆಯೇನು?” ಎಂದಳು.
“ಎಲ್ಲರೂ ಒಂದೇ ಎಂದು ನಾನೆಲ್ಲಿ ಹೇಳಿದೆ?” ಎಂದೆ.
“ಅಲ್ವಾ…?” ಎಂದಳು ತಲೆಯೆತ್ತಿ ನನ್ನ ಕಣ್ಣುಗಳನ್ನು ನೋಡಿ!
“ಅಲ್ಲ- ಪ್ರತಿಯೊಬ್ಬರೂ ನನಗೆ ವೈಯುಕ್ತಿಕ!” ಎಂದೆ.
“ಏನು ವೈಯಕ್ತಿಕವೋ ಏನೋ…?! ನಿನ್ನಬಗ್ಗೆ ನನಗೆ ಗೊತ್ತಿರುವುದು ಎಲ್ಲರಿಗೂ ಗೊತ್ತು!” ಎಂದಳು.
“ಹಾಗಿದ್ದರೆ ಸಮಸ್ಯೆ ನಾನು ಏನೂ ಹೇಳುವುದಿಲ್ಲ ಅನ್ನುವುದಲ್ಲ- ಎಲ್ಲವನ್ನೂ ಹೇಳುತ್ತೇನೆ ಅನ್ನುವುದು! ಹೇಳುವುದಿಲ್ಲ ಅನ್ನುವುದು ಇದು- ನಿನ್ನಬಗ್ಗೆ ಬೇರೊಂದು ಹೆಣ್ಣು ಕೇಳಿದರೆ ಏನು ಹೇಳಲಿ?” ಎಂದೆ.
“ಅಂದ್ರೇ…?”
“ನನ್ನ ನಿನ್ನ ರಿಲೇಷನ್ ಏನು ಅಂತ ಕೇಳಿದ್ರೆ ಏನು ಹೇಳಲಿ?” ಎಂದೆ.
“ಬೆಸ್ಟ್ ಫ್ರೆಂಡ್ಸ್ ಅನ್ನು! ತುಂಬಾ ಕ್ಲೋಸ್ ಅನ್ನು!”
“ಸೆಕ್ಸ್ ಮಾಡಿದ್ದೀರ… ಅಂದ್ರೆ?”
ತಟ್ಟನೆ ಮುಖವೆತ್ತಿ ನೋಡಿ…,
“ಅದೆಲ್ಲಾ ಅವರಿಗೇಕೆ?”
“ಪ್ರತಿ ಹೆಣ್ಣೂ ಇದೇ ಉತ್ತರವನ್ನು ಕೊಟ್ಟಳು!” ಎಂದೆ.
೪
“ಈಗ ನಾನು ನಿನಗೇನು ದ್ರೋಹ ಮಾಡಿದೆನೆಂದು ನನ್ನ ಬಿಟ್ಟು ದೂರ ಹೋಗ್ತಿದೀಯ?” ಎಂದೆ.
“ಗೊತ್ತಿಲ್ಲ ಮನು! ಯಾಕೋ ಆಗ್ತಾ ಇಲ್ಲ ನಿನ್ನ ಜೊತೆ!” ಎಂದಳು.
“ರೀಸನ್ ಹೇಳು! ನಾನು ನಿನಗೆ ಮಾಡಿದ ದ್ರೋಹ ಹೇಳು!”
“ಅವಳೊಂದಿಗೆ ನೀನು ಸೆಕ್ಸ್ ಮಾಡಿದ್ದೀಯೋ ಇಲ್ಲವೋ ಹೇಳು!”
“ನಿನ್ನೊಂದಿಗೆ ನಾನು ಸೆಕ್ಸ್ ಮಾಡಿದ ವಿಷಯ ಅವಳಿಗೆ ಹೇಳಲಾ?” ಎಂದೆ.
“ಥೂ ನಾಯಿ!” ಎಂದಳು.
“ನೋಡು ಪುಟ್ಟಾ…, ಪುನಃ ಹೇಳುತ್ತಿದ್ದೇನೆ! ನನಗೆ ಯಾವುದೇ ಕಟ್ಟುಪ್ಪಾಡುಗಳಿಲ್ಲ! ನಾನು ಸ್ವತಂತ್ರ! ಯಾರೊಂದಿಗಿನ ಬಂಧನಕ್ಕೂ ನಾನು ತಯಾರಲ್ಲ! ಹೆಣ್ಣೆಂದರೆ ನನಗೆ ಪ್ರಾಣ… ಅದೇನು ಮಾಯವೋ ಏನೋ…, ಏನೇನೋ ಕಾರಣಗಳಿಗಾಗಿ ಹೆಣ್ಣು ಅಂಟಿಕೊಳ್ಳುತ್ತಾಳೆ… ಕಥೆ ಓದಿಯೋ, ಅಥವಾ ಏನಾದರೂ ಸಂದರ್ಭ ಒದಗಿಯೋ ಪರಿಚಯವಾಗಿ ಅದು ತೀರಾ ವೈಯಕ್ತಿಕ ಹಂತಕ್ಕೆ ತಲುಪುತ್ತದೆ! ಇಲ್ಲಿ ನಾನು ಸೆಳೆದೆ ಅವಳು ಸೆಳೆದಳು ಅನ್ನುವುದೇನೂ ಇಲ್ಲ. ಅದಾಗಿಯೇ ಅಂಟಿಕೊಳ್ಳುವಂತೆ ಮಾಡುತ್ತದೆ. ಹಾಗೆಂದು ಅದನ್ನು ನಿಷೇಧಿಸಲೇ? ಇಲ್ಲವೆನ್ನಲೆ? ಪ್ರತಿ ಹೆಣ್ಣಿಗೂ ಹೃದಯವಿದೆ- ಭಾವನೆಗಳಿದೆ… ಅದಕ್ಕೆ ನಾನು ರೆಸ್ಪೆಕ್ಟ್ ಕೊಡುತ್ತೇನೆ…! ಹಾಗೆಯೇ ಪ್ರತಿ ಹೆಣ್ಣೂ ನನ್ನನ್ನು ನಂಬಿದ್ದಾಳೆ…! ಅದನ್ನೂ ನಾನು ಉಳಿಸಿಕೊಳ್ಳುತ್ತೇನೆ…! ಆದರೂ ಯಾವೊಬ್ಬ ಹೆಣ್ಣೂ ನನಗೆ ಉಳಿಯುವುದಿಲ್ಲ- ಯಾಕೆ ಹೇಳು?” ಎಂದೆ.
ನನ್ನ ಕಣ್ಣಿನಾಳಕ್ಕೆ ದಿಟ್ಟಿಸಿ ನೋಡಿದಳು. ಮುಗುಳುನಕ್ಕು ಹೇಳಿದೆ…,
“ಯಾವೊಂದು ಹೆಣ್ಣನ್ನೂ- ನೀನೇ ನನ್ನ ಸರ್ವಸ್ವ- ಎಂದು ಬಿಂಬಿಸಲು ಮತ್ತೊಂದು ಹೆಣ್ಣನ್ನು ನಿಷೇಧಿಸಿದವನಲ್ಲ ನಾನು! ಪ್ರತಿಯೊಬ್ಬರಿಗೂ ವೈಯುಕ್ತಿಕ ಸ್ಥಾನಮಾನವನ್ನು ಕೊಟ್ಟವನು! ಆದರೂ ಪ್ರತಿಯೊಬ್ಬರೂ ಬಂದು ತಲುಪುವುದು…, ಅವರೊಂದಿಗಿನ ನಾನು ಏನು ಅನ್ನುವುದಕ್ಕಿಂತ- ಇನ್ನೊಬ್ಬರೊಂದಿಗಿನ ನಾನು ಏನು ಅನ್ನುವುದರಲ್ಲಿ!” ಎಂದೆ.
“ಇನ್ನೇನು ಮತ್ತೆ? ನಿನ್ನ ತೀಟೆಗೆ ಪ್ರೇಮ ಅನ್ನುವ ಹೆಸರು ಕೊಡಬೇಡ ಮನು! ಹೆಣ್ಣಿನ ಹೃದಯ ನಿನಗೆ ಅರ್ಥವಾಗುವುದಿಲ್ಲ!” ಎಂದಳು.
“ಅರ್ಥಮಾಡಿಕೊಳ್ಳಲು ನಾನು ಶ್ರಮಿಸಿದವನೂ ಅಲ್ಲ! ಈಗ ಹೇಳು- ನಿನ್ನಿಂದ ನಾನೇನು ನಿರೀಕ್ಷಿಸಿದೆನೆಂದು ನನಗೆ ತೀಟೆ ಎಂದೆ?” ಎಂದೆ!
ಅವಳೇನೂ ಮಾತನಾಡಲಿಲ್ಲ! ನಾನೇ…,
“ನೋಡು ಗೆಳತಿ…, ನನ್ನ ನಿನ್ನ ಮಧ್ಯೆ ಸೆಕ್ಸ್ ಆಗಿದ್ದರೆ ಅದಕ್ಕೆ ಇಬ್ಬರಲ್ಲಿ ಒಬ್ಬರನ್ನು ಕಾರಣ ಮಾಡಲಾಗುವುದಿಲ್ಲ. ಇಬ್ಬರೂ ಅದಕ್ಕೆ ಹೊಣೆಗಾರರೇ..! ಹಾಗೆಯೇ ನನಗೆ ಬೇರೊಂದು ಹೆಣ್ಣಿನೊಂದಿಗೂ…!” ಎಂದು ಒಂದು ಕ್ಷಣ ನಿಲ್ಲಿಸಿ…,
“ನನಗೆ ಮಾತ್ರ ನಿನ್ನೊಂದಿಗೇ ಆಗಿರುವುದು- ಆಗುವುದು ಅನ್ನಬೇಡ! ಹಾಗೆ ನೀನು ಹೇಳಿದರೆ ಅದಕ್ಕೆ ನನ್ನ ರೆಸ್ಪೆಕ್ಟ್ ಇದೆ! ಹಾಗೆಂದು ನನ್ನನ್ನೂ ಹಾಗೇ ಇರು ಅನ್ನಬೇಡ! ಅದಕ್ಕೆ ರೆಸ್ಪೆಕ್ಟ್ ಕೊಡಲಾಗುವುದಿಲ್ಲ! ಮೊದಲೇ ಹೇಳಿದ್ದೇನೆ- ನಿನ್ನಂತೆ ನನಗೆ ಬಂಧನವೋ ಕಟ್ಟುಪ್ಪಾಡುಗಳೋ ಇಷ್ಟವಿಲ್ಲ!” ಎಂದೆ.
“ಈಗ ನಾನೇನು ಮಾಡಲಿ?” ಎಂದಳು!
“ಗೊತ್ತಿಲ್ಲವೇ…! ಮನು ಹೀಗೆಯೇ ಎಂದು ಗೊತ್ತಿದ್ದೂ ಅಂಟಿಕೊಂಡವಳು ನೀನು! ಈಗ ನಿನಗಾಗಿ ಬದಲಾಗು ಅನ್ನುತ್ತಿದ್ದೀಯ! ಆಗಲಾರೆ! ಮನೂಗೆ ಪ್ರತಿ ಹೆಣ್ಣೂ ಒಂದೇ… ಅವನೊಂದಿಗೆ ಅವಳು ಹೇಗೆ ಅನ್ನುವುದರಮೇಲೆ ವೈಯಕ್ತಿಕ ಅಭಿಪ್ರಾಯ ರೂಪುಗೊಳ್ಳುತ್ತದೆ! ನೀವು ಹೆಣ್ಣುಮಕ್ಕಳ ಸಮಸ್ಯೆಯೇ ಇದು! ಮುಂಚಿನಿಂದ ನಿಮ್ಮೊಂದಿಗೆ ಹೇಗಿದ್ದೇನೋ ಹಾಗೆಯೇ ಈಗಲೂ ಇದ್ದೇನೆ! ಆದರೆ…, ಬೇರೆ ಹೆಣ್ಣಿನೊಂದಿಗಿನ ಮನುವಿನಲ್ಲಿ ನೀನು ನಿನ್ನ ಅಸ್ಮಿತೆಯನ್ನು ಹುಡುಕುತ್ತಿದ್ದೀಯ ಹೊರತು- ನಿನ್ನೊಂದಿಗಿನ ಮನುವಿನಲ್ಲಿ ಅಲ್ಲ!” ಎಂದೆ.
“ಅದೇನೋ…, ನೀನು ನನಗೆ ಅರ್ಥವಾಗುವುದಿಲ್ಲ! ನಿನ್ನಂಥವನೊಂದಿಗಿನ ಸಂಬಂಧವೇ ನನಗೊಂದುರೀತಿಯ ಕಳಂಕ! ದೂರ ಹೋಗಿಬಿಡುತ್ತೇನೆ!” ಎಂದಳು.
*
“ಯಪ್ಪ! ಎಂತಾ ಕಥೇನೋ ಇದು?”
“ಹೇಗಿದೆ?”
“ಇದೂ ಒಂದು ಕಥೇನ? ಭಾರಿ ಗೊಂದಲ!”
“ಹೇಳಿರೋದು ನಿಜ ತಾನೆ? ಪ್ರತಿ ಹೆಣ್ಣೂ ಅವಳ ಪ್ರೇಮಿಯಲ್ಲಿ ಸರ್ವಸ್ವವನ್ನೂ ಹುಡುಕುತ್ತಾಳೆ! ಅವನು ಅವಳೊಬ್ಬಳಿಗೇ ಉಳಿಯಬೇಕು ಅಂದುಕೊಳ್ಳುತ್ತಾಳೆ- ಬಂಧಿಸಲು ಶ್ರಮಿಸುತ್ತಾಳೆ! ಅಲ್ಲವೇ?”
“ಪುಟ್ಟಾ…! ಬರೀ ಹೆಣ್ಣನ್ನು ಹಾಗೆ ಹೇಳಬೇಡ! ಗಂಡು ಹೆಣ್ಣಿಗಿಂತಾ ಪಾಸೆಸಿವ್! ನೀನೊಬ್ಬ ಅಪವಾದವೆಂದು ಪ್ರತಿ ಗಂಡೂ ನಿನ್ನಂತೆ ಅಂದುಕೊಳ್ಳಬೇಡ!”
“ನಿಜಾ ಅಲ್ವಾ! ಈಗೇನು ಮಾಡ್ಲಿ?”
“ಏನು ಮಾಡ್ಲಿ ಅಂದ್ರೆ? ಗಂಡು ಪ್ರಾಣಿಗಳಲ್ಲಿರುವ ನಿನ್ನಂಥಾ ಅಪವಾದ ಹೆಣ್ಣಿನಲ್ಲೂ ಇದ್ದಾಳೆ ಅಂತ ನಿರೂಪಿಸು!”
“ಹೇಗೆ?”
“ಹೇಗಾ…? ನನಗೇನು ಗೊತ್ತು ಸಾವು! ಈ ಕಥೆ ನಿನ್ನದೇ ಅಂತ ನನಗೆ ಗೊತ್ತು! ಇಷ್ಟು ಮಾತ್ರ ಹೇಳಬಲ್ಲೆ…, ಯಾವ ಹೆಣ್ಣಿನೊಂದಿಗೆ ನೀನು ಹೇಗಾದರೂ ಇರು! ನನ್ನೊಂದಿಗೆ ನೀನು ಹೇಗೆ ಅನ್ನುವುದಷ್ಟೇ ನನಗೆ ಮುಖ್ಯ! ನಂಬಿದ್ದೀನಿ! ನಾನಂತೂ ಇರುವವಳೇ…! ಸದ್ಯಕ್ಕೆ ಗೆಳೆಯನಿಗಾಗಿ ಕೊಂಡ ಕಾಂಡಮ್ಸ್ ವೇಸ್ಟ್ ಆಗೋದು ಬೇಡ- ಬಾ…!”
“ಪರ್ಫೆಕ್ಟ್ ಕ್ಲೈಮಾಕ್ಸ್!”
Comments
Post a Comment