ಸನ್ಯಾಸಿ!

ಸನ್ಯಾಸಿ!

ಬರೆಯುವ ಕಥೆ ಎಲ್ಲರೂ ಓದುವಂತಿರಬೇಕು! ಮಾಡುವ ಸಿನೆಮಾ ಎಲ್ಲರೂ ನೋಡುವಂತಿರಬೇಕು!” ಎಂದೆ.

ಕಾಲ ಬದಲಾಗಿದೆ ಗುರುವೆ! ಮಾನದಂಡಗಳೂ… ಈಗ ಎಲ್ಲರೂ ಎಲ್ಲವನ್ನೂ ಓದುತ್ತಾರೆ- ನೋಡುತ್ತಾರೆ!”

ಹಾಗೆಂದು ನೀನು ಹೇಳುತ್ತೀಯ! ವಾಸ್ತವ ಹೀಗೆಯೇ ಎಂದು ನಿರ್ಣಯಿಸಲು ನೀನು ಪ್ರಾಪ್ತನೇ?” ಎಂದೆ.

ಅವನ ಮುಖದಲ್ಲಿ ಗೊಂದಲ!

ನಿಜ! ನನ್ನ ಅಮ್ಮನೂ ಹೇಳುತ್ತಿದ್ದರು- ವಯಸ್ಕರಿಗೆ ಮಾತ್ರ ಅನ್ನುವುದರಿಂದ ಯಾರಿಗೆ ಬೇಕಿದ್ದರೂ ಅನ್ನುವ ಅವಸ್ತೆಗೆ ಪರಿಸ್ತಿತಿಗಳನ್ನು ತಲುಪಿಸುವಲ್ಲಿ ನೀನೂ ನಿನ್ನ ಪಾತ್ರ ನಿರ್ವಹಿಸುತ್ತಿದ್ದೀಯೆಂದು! ನನಗರ್ಥವಾಗುತ್ತಿಲ್ಲ ನೀವು ಹೇಳುವುದು!” ಎಂದ.

ಇದರಲ್ಲಿ ಅರ್ಥವಾಗುವುದಕ್ಕೆ ಏನಿದೆ? ಸಮಾಜ ಒಂದು ಕಟ್ಟುಪ್ಪಾಡುಗಳಿಗೆ ಒಳಗಾಗಿದೆ! ಹೀಗೆ ಇದ್ದರೇ ನೆಮ್ಮದಿ- ಚಂದ ಎಂದು ಆ ಕಟ್ಟುಪ್ಪಾಡುಗಳು ನಮ್ಮನ್ನು ಕಲಿಸುತ್ತಿದೆ! ಇಲ್ಲ…, ನಾನೀ ಕಟ್ಟುಪ್ಪಾಡುಗಳಿಗೆ ಇಲ್ಲ ಅನ್ನುವವನು ಸಮಾಜದ ನೆಮ್ಮದಿಗೆ ಭಂಗ ತರುವವನಲ್ಲವೇ? ನಿಯಮಗಳನ್ನು ಮೀರುವುದು ಹೇಗೆ ಅಪಾಯಕಾರಿಯೋ ಹಾಗೆಯೇ ಕಟ್ಟುಪ್ಪಾಡುಗಳನ್ನು ಮೀರುವುದೂ ಅಪಾಯಕಾರಿ!”

ತೀವ್ರವಾದ ಯೋಚನೆಗೆ ತೊಡಗಿದ. ಅವನು ಅರ್ಜುನನಂತೆ! ವಾದಿಸುತ್ತಾನೆ- ಹುಳುಕುಗಳನ್ನು ಎತ್ತಿ ತೋರಿಸಿ ಪ್ರಶ್ನಿಸುತ್ತಾನೆ… ವಾದದ ನಡುವೆ ಯಾರನ್ನೂ ಒಪ್ಪದವನಂತೆ ಕಾಣುತ್ತಾನೆ! ಆದರೆ ಯಾವುದನ್ನೂ ನಿಷೇಧಿಸುವುದಿಲ್ಲ!

ಅವನನ್ನು ಅವನ ಪಾಡಿಗೆ ಬಿಟ್ಟು ಹೊರನಡೆದೆ!

ವಿಚಿತ್ರ ಹುಡುಗ! ಅವನ ಸ್ವೇಚ್ಚೆಗೆ ಕಟ್ಟು ಬೀಳಿಸಲೆಂದು ನಾನು ಹೇಳಿದ ಉದಾಹರಣೆ ಅವನನ್ನು ಇಷ್ಟು ಮಟ್ಟಿಗೆ ಚಂಚಲಗೊಳಿಸುತ್ತದೆಂದು ಅರಿಯದಾದೆ!

ಮೌನಿಯಾಗಿದ್ದಾನೆ! ಯಾವಾಗಲೂ ಯಾವುದೋ ಯೋಚನೆಯಲ್ಲಿರುವಂತೆ ಕಾಣುತ್ತಾನೆ! ಒಂದು ನಿಗಮನಕ್ಕೆ ಬಂದಿದ್ದರೂ ಅದಕ್ಕೆ ಅಂಟಿಕೊಳ್ಳಲು ಕಷ್ಟ ಪಡುತ್ತಿದ್ದಾನೆ!

ಇವನ ವಿಷಯವೇ ಹಾಗೆ…, ಒಮ್ಮೆ ಒಂದು ತೀರ್ಮಾನವನ್ನು ತೆಗೆದುಕೊಂಡರೆ ಅದರಿಂದ ವಿಮುಖನನ್ನಾಗಿ ಮಾಡುವುದು ಕಷ್ಟ! ಈಗ ಅದು ಯಾವ ತೀರ್ಮಾನಕ್ಕೆ ಬರುತ್ತಾನೋ ಏನೋ!

ಹೋಗು! ನೋಡೋಣ ಅವನ ಪ್ರತಿಕ್ರಿಯೆ ಏನೆಂದು!” ಎಂದು ಅವಳನ್ನು ಮುಂದಕ್ಕೆ ತಳ್ಳಿದೆ.

ಅವಳು ಹಿಂಜರಿದು ನಿಂತಳು…,

ಯಾಕೋ ಹೆದರಿಕೆಯಾಗುತ್ತಿದೆ! ಮೊದಲೇ ಮುಖ ಮೂತಿ ನೋಡದೆ ಮಾತನಾಡುವವನು!” ಎಂದಳು.

ನಾನೇನೂ ಮಾತನಾಡಲಿಲ್ಲ. ಅವಳೇ…,

ಅವನಿಚ್ಚೆಯಂತೆ ಬದುಕುತ್ತಿದ್ದ ಅವನ ಸ್ವೇಚ್ಛಾ ಬದುಕಿಗೆ ಅಣೆಕಟ್ಟೆಯನ್ನು ಕಟ್ಟಿದವರು ನೀವು! ಈಗ ಪುನಃ ಅವನನ್ನು ಅವನದೇ ದಾರಿಗೆ ಎಳೆದು ತರಲು ಶ್ರಮಿಸುವುದು ತಪ್ಪಲ್ಲವೇ?” ಎಂದಳು.

ಅವನು ಪೂರ್ತಿ ಜೀವನದಿಂದಲೇ ವಿಮುಖನಾಗುತ್ತಾನೆ ಅಂದುಕೊಳ್ಳಲಿಲ್ಲವಲ್ಲ?” ಎಂದೆ.

ಇಷ್ಟಕ್ಕೂ ಅವನನ್ನು ತಡೆದು ನಿಲ್ಲಿಸಲು ನೀವು ಹೇಳಿದ ಉದಾಹರಣೆಯಾದರೂ ಏನು?” ಎಂದು ಕೇಳಿದಳು.

ಹೇಳಲು ಹಿಂಜರಿದೆ. ನನ್ನ ಕಣ್ಣುಗಳನ್ನೇ ದಿಟ್ಟಿಸಿ ನೋಡಿದಳು. ಅವಳನ್ನೇ ನೋಡುತ್ತಾ…,

ನಿನ್ನ ಅಪ್ಪ- ಅಮ್ಮನಿಗೆ ಬೇರೊಬ್ಬರೊಂದಿಗೆ ದೈಹಿಕ ಸಂಬಂಧವಿತ್ತು ಅನ್ನುವ ಅರಿವು ನಿನಗಾದರೆ ನಿನ್ನ ಮಾನಸಿಕಾವಸ್ತೆ ಹೇಗಿರುತ್ತದೆ? ಹಾಗೆಯೇ…, ನಿನಗೆ ಬೇರೆ ಹೆಣ್ಣಿನೊಂದಿಗೆ ಇರುವಂತೆ ನಿನ್ನ ಹೆಂಡತಿಗೂ ಬೇರೆ ಪುರುಷನೊಂದಿಗೆ ದೈಹಿಕ ಸಂಬಂಧವಿದ್ದು- ಹೆಂಡತಿಯಲ್ಲಿ ಹುಟ್ಟಿದ ಮಗುವಿನ ಅಸ್ತಿತ್ವದ ಪ್ರಶ್ನೆ ಬಂದಾಗ ನಿನಗೇನನ್ನಿಸುತ್ತದೆ?” ಎಂದೆ- ಎಂದೆ.

ಅವನನ್ನು ಪರೀಕ್ಷಿಸಲು ನಾನಿಲ್ಲ!” ಎಂದು ಹೇಳಿ ಎದ್ದು ಹೋದಳು!

ಇಲ್ಲ..! ನೀವು ಹೆದರಿದಂತೆ ನಾನು ಪೂರ್ತಿ ಜೀವನದಿಂದಲೇ ವಿಮುಖನಾಗಿಲ್ಲ! ಜೀವನವನ್ನು ಮತ್ತಷ್ಟು ಆನಂದಿಸುತ್ತಿದ್ದೇನೆ!” ಎಂದ.

ಅರ್ಥವಾಗಲಿಲ್ಲ!” ಎಂದೆ.

ಈ ಪ್ರಪಂಚದಲ್ಲಿ ಎಲ್ಲಿ ನೋಡು ನೋವು- ದುಃಖ- ಹಸಿವು… ಇದೇ ತುಂಬಿದೆ! ಹೀಗಿರುವಾಗ ನಾವು ಹೇಗೆ ಆನಂದದಿಂದಿರಲು ಸಾಧ್ಯ- ಅನ್ನುವ ಪ್ರಶ್ನೆಯಿತ್ತು! ಒಂದು ಸಾರಿ ನಾನು ಅವರ ದುಃಖಕ್ಕೆ ಸ್ಪಂದಿಸಿದೆ! ನನ್ನ ಅಳತೆಯಲ್ಲಿ ಅವರಿಗೊಂದು ಸಾಂತ್ವಾನವಾದೆ! ಎಂತಾ ಖುಷಿ ಅನ್ನುತ್ತೀರ…? ನಮ್ಮ ನೆಮ್ಮದಿ- ಪ್ರಪಂಚದ ದುಃಖವನ್ನು ನೋಡಿ ಮರುಗುವುದಕ್ಕಿಂತ ಅದಕ್ಕೆ ನಾವು ಹೇಗೆ ಪ್ರತಿಸ್ಪಂದಿಸಿದೆವು ಅನ್ನುವುದರಲ್ಲಿದೆ- ಇತರರಿಂದ ನಮಗೇನಾಯಿತು ಅನ್ನುವುದಕ್ಕಿಂತ ಇತರರಿಗೆ ನಾವೇನಾದೆವು ಅನ್ನುವುದರಲ್ಲಿದೆ!” ಎಂದ.

ಏನನ್ನೋ ಹುಡುಕುವವನಂತೆ ಅವನ ಕಣ್ಣಿನಾಳಕ್ಕೆ ನೋಡಿದೆ. ನಕ್ಕ…,

ಗುರುವೇ…, ನನ್ನ ಬದುಕಿನಲ್ಲಿ ಹೆಣ್ಣಿನಬಗ್ಗೆ ಯೋಚಿಸುತ್ತಿದ್ದೀರ? ಅದೊಂದು ಅದ್ಭುತ ಭಾವತರಂಗ! ಮುಂಚೆ- ನನ್ನ ಮನಸ್ಸಿನಲ್ಲೇ ಕಲೆಯಿತ್ತು ಅನ್ನಿಸುತ್ತಿದೆ! ನೋಡಿದ ಪ್ರತಿ ಹೆಣ್ಣಿನಲ್ಲಿ ನನ್ನ ಮನಸ್ಸಿಗನುಗುಣವಾಗಿ ಏನುಬೇಕೋ ಅದೇ ಕಾಣಿಸುತ್ತಿತ್ತು! ಈಗ ಹಾಗಿಲ್ಲ- ಅವಳೇನೋ ಅದು ಕಾಣಿಸುತ್ತಿದೆ! ನಾನು ಹುಟ್ಟಿಬಂದ ರೀತಿಯ ನೆನಪಾಗುತ್ತದೆ! ಒಂದೆರಡು ಕ್ಷಣದ ಕ್ಷಣಿಕ ಸುಖವನ್ನು ಮೀರಿದ ಏನೋ ಗಂಡು ಹೆಣ್ಣಿನ ಸಂಬಂಧದಲ್ಲಿ ಕಾಣಿಸುತ್ತಿದೆ! ಅವಳಿಗೂ ಕೂಡ ನನ್ನ ಕಣ್ಣಿನಲ್ಲಿ ನನಗೇನು ಬೇಕೋ ಅದಕ್ಕೆ ಹೊರತಾಗಿ ನಾನೇನೋ ಅದು ಕಾಣಿಸುತ್ತಿದೆ!” ಎಂದ.

ಇಷ್ಟು ಬೇಗ ಇಷ್ಟುಮಟ್ಟಿನ ಪರಿವರ್ತನೆ ಹೇಗೆ ಸಾಧ್ಯ?” ಎಂದೆ.

ಇಷ್ಟು ಬೇಗ ಎಂದೇಕೆ ಹೇಳುವಿರಿ ಗುರುವೇ…? ನಿರಂತರ ತುಮುಲದ ಅಂತ್ಯ! ನಿಮ್ಮ ಮಾತೊಂದು ನಿಮಿತ್ತ! ಏಕೋ ಏನೋ ಪ್ರತಿಯೊಬ್ಬರಲ್ಲೂ ಪ್ರೇಮ ಮೂಡುತ್ತಿದೆ- ಪ್ರತಿಯೊಂದರಲ್ಲೂ ಪ್ರೇಮ! ಪ್ರಕೃತಿಯ ಮಡಿಲು ಎಷ್ಟು ಚಂದ! ಹೆಣ್ಣು ಸನಿಹಕ್ಕೆ ಬರುವಾಗಲೇ ಕಣ್ಣು ತುಂಬುತ್ತದೆ! ಆ ಸಾನ್ನಿಧ್ಯ! ಹಾಗೆಯೇ…, ಸೂರ್ಯೋದಯ ಸೂರ್ಯಾಸ್ತಗಳು- ವರ್ಣರಂಜಿತ ಪ್ರಪಂಚ- ಮರಗಿಡಪ್ರಾಣಿಪಕ್ಷಿಮಣ್ಣುಕಲ್ಲುಬಂಡೆಗಳು ಕೂಡ ನನ್ನ ಭಾವವನ್ನು ಮೀಟುತ್ತಿದೆ! ಇಂತಾ ಹೆತ್ತವರಿಗೆ ಹುಟ್ಟಿ ಎಂತಾ ಕಳಂಕವಾಗುತ್ತಿದ್ದೆನಲ್ಲಾ ಅನ್ನುವ ಅರಿವು… ಅದನ್ನು ಹೇಗೆ ವಿವರಿಸಲಿ? ಹೆತ್ತವರಂತಾ ಗುರು ಹಿರಿಯರ ಆಶೀರ್ವಾದ ಯಾವತ್ತಿಗೂ ಶ್ರೀರಕ್ಷೆಯಾಗಿರುತ್ತದೆ ಅನ್ನುವುದಕ್ಕೆ ಇದಕ್ಕಿಂತ ಸಾಕ್ಷಿಯೇನುಬೇಕು? ಧನ್ಯೋಸ್ಮಿ!”

ಯಾಕೋ ಇವನ ಈ ಬದಲಾವಣೆ ನನಗೆ ಒಪ್ಪಿಗೆಯಾಗಲಿಲ್ಲ! ಒಂದೋ ಅನಾಸಕ್ತಿ ಅಥವಾ ಅತಿಲೋಭ! ಅದೆರಡರ ನಡುವೆ ಪ್ರಪಂಚ ನಿಂತಿದೆ ಎನ್ನುವ ಅರಿವು ಇವನಿಗೆ ಯಾವಾಗ ಆಗುತ್ತದೋ…! ಇರಲಿ! ಪ್ರಪಂಚದ ಸಮತೋಲನಕ್ಕೆ ಎಲ್ಲವೂ ಅಗತ್ಯವೇ!

ಇವನ ವಿಷಯದಲ್ಲಿ ಇನ್ನು ಲೋಭ ಅಸಾಧ್ಯ! ಪ್ರಪಂಚದಿಂದ ವಿಮುಖನಾದವನಲ್ಲ ಇವನು- ತನ್ನ ಪ್ರಪಂಚವನ್ನು ಮತ್ತಷ್ಟು ವಿಸ್ತರಿಸಿಕೊಂಡವನು- ಸನ್ಯಾಸಿ!!

Comments

  1. ನಿಜಾ ನಿಯಮಗಳಿಲ್ಲದ ಜೀವನಕ್ಕೆ ಸ್ಥಿರತೆ ಇರುವುದಿಲ್ಲ.ಗಾಳಿಯಲ್ಲಿ ಹಾರಾಡುವ ಗಾಳಿಪಟದಂತೆ.ಊರ ಮೇಲೆ ಬಿಟ್ಟ ಗೊಳ್ಳೇತ್ತಿನಂತೆ.ಯಾವುದಕ್ಕೂ ಕಟ್ಟುಪಾಡು ನಿಯಮವಿರಬೇಕು.ಸನ್ಯಾತ್ವಕ್ಕೂ ನಿಯಮವಿದೆ ❤😊

    ReplyDelete

Post a Comment

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!