ಅಪರಾಧಿ!
ಅಪರಾಧಿ
“ಪಾಪ ಅವನಿಗೆ ಗಲ್ಲು ಶಿಕ್ಷೆಯಂತೆ?”
“ಪಾಪಾನ? ಒಬ್ಬ ವ್ಯಕ್ತಿಯನ್ನ ನಿರ್ದಾಕ್ಷಿಣ್ಯವಾಗಿ ಕೊಂದಿದಾನೆ ಮಾರಾಯ!”
“ಯಾರು ಹೇಳಿದ್ದು?”
“ಸಾಬೀತಾಗಿದೆ!”
“ಆದರೆ ಅವರೇನೂ ಅವನನ್ನು ಕಷ್ಟಪಟ್ಟು ಹುಡುಕಿ ಅರೆಸ್ಟ್ ಮಾಡಲಿಲ್ಲವಲ್ಲ!?”
“ಮತ್ತೆ?”
“ಹೆಣವನ್ನು ಕಂಡವ ಪೋಲೀಸರಿಗೆ ಮಾಹಿತಿ ಕೊಡಲು ಹೋದ! ಪಾಪ- ಅವನೇ ಅಪರಾಧಿಯಾದ!”
“ಅವನೇಕೆ ಹೆಣ ಇರುವಲ್ಲಿಗೆ ಹೋದ? ಅವನೇ ಕೊಂದು ಯಾಕೆ ನಾಟಕ ಮಾಡಿರಬಾರದು?”
“ಯಾಕೆಂದರೆ…, ಆ ಕೊಲೆ ಮಾಡಿದ್ದು ನಾನು!”
Comments
Post a Comment