ಸಂಶೋಧನೆ!

ಸಂಶೋಧನೆ!

*

ನಮ್ಮ ವಿಷಯದಲ್ಲಿ ನಾನೊಂದು ಭಯಂಕರ ಸಂಶೋಧನೆ ಮಾಡಿದ್ದೀನ್ಯೆ!”

ಏನಪ್ಪಾ ಅದು…? ಅಂಥಾ ಸಂಶೋಧನೆ?”

ಮುಖ ಮೂತಿ ನೋಡದೆ ಮಾತನಾಡುವವನು…, ಯಾರಬಳಿಯೂ ಸುಳ್ಳು ಹೇಳದವನು…, ಯಾರಬಗ್ಗೆಯೂ ತಲೆ ಕೆಡಿಸಿಕೊಳ್ಳದವನು ಇತ್ಯಾದಿ ಇತ್ಯಾದಿ ಬಿರುದಿರುವ ನಾನು ನಿನ್ನಲ್ಲಿ ಮಾತ್ರ ಸುಳ್ಳು ಹೇಳಿದ್ದೇನೆಂದರೆ…, ಅರ್ಥವೇನು?”

ನನ್ನ ಮಾತ್ರ ನಿನಗೆ ಇಷ್ಟವಿಲ್ಲಂತ!”

ನಿನ್ನ ತಲೆ…! ಯಾರು ಇದ್ದರೂ ಹೋದರೂ ಚಿಂತೆಯಿಲ್ಲದ ನನಗೆ ನೀನು ಇರಲೇ ಬೇಕು ಅನ್ನುವ ಆಸೆ!”

ಅದಕ್ಕೆ ಸುಳ್ಳು ಹೇಳಬೇಕ?”

ಇಲ್ಲವೇ…! ನಿನ್ನ ಮನಸ್ಸು ನನಗೆ ಗೊತ್ತು! ಅದಕ್ಕೆ ಇಷ್ಟವಾಗದ್ದು ಹೇಳಿದರೆ…!?”

ಇದೋ…, ತಮ್ಮ ಸಂಶೋಧನೆ?”

ಹೂಂನೆ! ಈ ಪ್ರಪಂಚದಲ್ಲಿ ಪ್ರತಿ ಹುಡುಗನೂ ಮಾಡುವ ಮೂರ್ಖತನ! ತನ್ನ ಪ್ರೇಮಿ ತನ್ನನ್ನು ಬಿಟ್ಟು ಹೋಗಬಾರದು ಅನ್ನುವ ಕಾರಣಕ್ಕೆ ಅವಳಿಗೆ ಇಷ್ಟವಿಲ್ಲದ ಸತ್ಯಗಳನ್ನು ಮುಚ್ಚಿಡುವುದು! ನಂತರ…, ಅದೇ ಕಾರಣಕ್ಕೆ ಅವಳನ್ನು- ಶಾಶ್ವತವಾಗಿ ಕಳೆದುಕೊಳ್ಳುವುದು!!”

ಇಂಥಾ ಗಂಭೀರ ಸಂಶೋಧನೆಯಿಂದ ನಮ್ಮ ವಿಷಯದಲ್ಲಿ ಏನೂ ಪ್ರಯೋಜನವಿಲ್ಲ ಕಂದ! ಬಿಟ್ಟು ಬಿಡು ನನ್ನ!”

ಈಗ ನಾನೇನು ಮಾಡಲಿ ಹೇಳು…!”

ನಿಜವನ್ನು ಒಪ್ಪಿಬಿಡು!”

ಎಲ್ಲರೂ ಹೀಗೇ ಹೇಳಿದರೆ ನಾನೇನು ಮಾಡಲಿ?”

"ಅಂದ್ರೆ...??? ಏನರ್ಥ?"
"ಒಪ್ಪಿಕೊಂಡು ಬಿಡು ಅಂದ್ಯಲ್ಲೇ? ನನ್ನ ಪ್ರಶ್ನೆಯಲ್ಲೇ ಒಪ್ಪಿಗೆಯಿದೆ!"
"ನಿನ್ನ ತಲೆ! ಸರಿಯಾಗಿ ಹೇಳು!"
"ಒಂದು ಪದವನ್ನು ಅಂಡರ್‌ಲೈನ್ ಮಾಡು ಸಾಕು!"
"ಯಾವ ಪದ?"
"ಎಲ್ಲರೂ!"
"ಗುಡ್‌ಬೈ!"
"ನೋಡಿದ್ಯ?"
"ನ್ತ..!"
"ನನ್ನ ಸಂಶೋಧನೆ ನಿಜವಾಯಿತು!!"

Comments

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!