ಹೃದಯದ ಮಾತು!

ಹೃದಯದ ಮಾತು!

ಅವನೆಂದ….,

ನಿನ್ನ ಮೇಲಿನ ನನ್ನ ಪ್ರೇಮಕ್ಕಿಂತ ಉಳಿದ ಯಾವುದೂ ಹೆಚ್ಚಲ್ಲವೇ ಹುಡುಗಿ! ನಿನ್ನ ಮೇಲಿನ ನನ್ನ ಪ್ರೇಮ ಎಷ್ಟೆಂದರೆ…, ಯಾವ ಒಂದು ಕಾರಣಕ್ಕೂ…, ಯಾವ ಒಂದು ಕ್ಷಣವೂ ಬಿಟ್ಟಿರಲಾರೆ ನಾ- ಪ್ರಾಣವಿರುವವರೆಗೂ…, ಮನಸ್ಸಿನಿಂದ!

ತರಲೆ ಮಾಡುತ್ತೇನೆ!

ಅಳಿಸುತ್ತೇನೆ!

ಪುಟಾಣಿ ಪಾಪುವಿನಂತೆ ನೀ ಬಿಕ್ಕಿಬಿಕ್ಕಿ ಅಳುವಾಗ ನಿನ್ನ ಮುಖವನ್ನು ನನ್ನ ಬೊಗಸೆಯಲ್ಲಿ ತೆಗೆದುಕೊಂಡು…,

ಅಳುತ್ತಿದ್ದೀಯ?” ಅನ್ನುತ್ತೇನೆ!

ಆಗಿನ ನಿನ್ನ ಭಾವ ಪ್ರಕಟಣೆಯಿದೆಯಲ್ಲಾ…, ಅದು ನನ್ನ ಪ್ರೇಮದ ಸಂಕೇತ!

ಅದೇನು ಮಾಯವೋ ಏನೋ…, ನಾನು ಈ ಪ್ರಪಂಚದಲ್ಲಿ ಅತಿ ಹೆಚ್ಚು ಪ್ರೀತಿಸುವವಳಿಗೆ ನನ್ನಿಂದ ಯಾವಾಗಲೂ ನೋವೇ!

ಅತಿ ಹೆಚ್ಚು ಪ್ರೀತಿಸುವವಳಿಗೆ ಅನ್ನುವಲ್ಲಿ ಗಮನಿಸಬೇಕಿರುವುದು ನನ್ನ ಪ್ರೇಮ- ಅದೇನೂ ಸಾಮಾನ್ಯವಲ್ಲ!

ಹಾಗೆಯೇ…,

ನನ್ನ ಮೇಲಿನ ನಿನ್ನ ಪ್ರೇಮದ ಕಾರಣಕ್ಕಾದರೂ ಬಿಟ್ಟು ಹೋಗುವಂತಿಲ್ಲ ನೀನು!

ಹೃದಯದ ಮಾತು ಕೇಳೇ ಹುಡುಗಿ!

ಅವಳೆಂದಳು…,

ಇವನೊಬ್ಬ!

ಒಂದು ಸಣ್ಣ ಮುನಿಸಿನಿಂದ ಮೌನವಾದರೆ ಸಾಕು! ಪ್ರಪಂಚವೇ ಮುಳುಗಿಹೋದವನಂತೆ…,

ಬಿಟ್ಟು ಹೋದಳು ಬಿಟ್ಟು ಹೋದಳು…, ಬಿಟ್ಟೇ ಹೋದಳು!! ಎಂದು ಬೊಬ್ಬೆ ಹೊಡೆಯುತ್ತಾನೆ!

ತಾನೊಬ್ಬ ರೋಧಿಸಿದರೆ ಸಾಲದೆಂಬಂತೆ ಪ್ರಪಂಚಕ್ಕೆಲ್ಲಾ ಹೇಳುತ್ತಾನೆ!

ನಿನ್ನದು ಮಾತ್ರ ಪ್ರೇಮವಲ್ಲವೋ ಹುಡುಗ!

ನೀನು ನನ್ನದೆಂಬಧಿಕಾರದಲ್ಲಿ…,

ನಿನ್ನ ಗಮನ ಅಲ್ಪಸ್ವಲ್ಪವಾದರೂ ಆಚೆ ಈಚೆ ಸರಿದರೆ ಸಹಿಸಲಾಗುವುದಿಲ್ಲವೆನ್ನುವ ಅವಸ್ತೆಗೆ ಏನನ್ನುತ್ತೀಯ?

ನಿನ್ನ ರೋಧನೆಗೆ ಅರ್ಥವಿಲ್ಲವೆನ್ನುವ ನಿಜದರಿವಾಗಲು…,

ನನ್ನ ಹೃದಯದ ಮಾತು ನೀನು ಕೇಳು…!

Comments

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!