ಹನಿಟ್ರಾಪರ್!

ಹನಿಟ್ರಾಪರ್!

ಇದೊಂದು ವಿಚಿತ್ರ ಅನುಭವ ನನಗೆ!

ಒಮ್ಮೆ ನೋಡಿದರೆ ಸಾಕು ಪ್ರೇಮಿಸಬೇಕು ಅನ್ನಿಸುವ ಪ್ರೊಫೈಲ್ ಫೋಟೋ ಇರುವ ಹೆಣ್ಣೊಬ್ಬಳು ಫೇಸ್‌ಬುಕ್‌ನಲ್ಲಿ ಫ್ರೆಂಡ್‌ರಿಕ್ವೆಸ್ಟ್ ಕಳಿಸಿದ್ದಳು!

ಅಪರಿಚಿತಳಾದ್ದರಿಂದ ಎಬೌಟ್ ಚೆಕ್ ಮಾಡಿದೆ!

ವಯಸ್ಸು ಎಪ್ಪತ್ತ ಏಳು!!

ಇದೆಂತ ಮಾರ್ರೆ ವಯಸ್ಸು ಇಷ್ಟು ತೋರಿಸುತ್ತಿದೆ?” ಎಂದು ಇನ್‌ಬಾಕ್ಸಿನಲ್ಲಿ ಕೇಳಿದೆ.

ನಿಜ!” ಎಂದಳು.

ಅರ್ಥವಾಯಿತು- ಗಂಡಸರೆಂದರೆ ತುಂಬಾ ಹಗುರವಾದ ಅಭಿಪ್ರಾಯವಿರುವ ಹೆಣ್ಣೆಂದು!

ಅವಳ ಬರಹವೊಂದಕ್ಕೆ ಹೋಗಿ ಕಮೆಂಟ್ ಮಾಡಿದೆ!

ವಯಸ್ಸು ಎಪ್ಪತ್ತೇಳು! ಹಾಕಿರುವ ಪಟ ಮೂವತ್ತೈದರ ಹೆಣ್ಣಿನದ್ದು! ಬರಹವೋ…, ಹರೆಯದವರಿಗೆ ಅನುಗುಣವಾಗಿ! ಯಾಕೆ ಹೀಗೆ?” ಎಂದು.

ವಯಸ್ಸು ಎಷ್ಟಾದರೂ ಹಾಕಬಹುದು! ಬೇರೆಯವರ ಪಟ ಹಾಕಲಾಗುವುದಿಲ್ಲ!” ಎನ್ನುವ ಉತ್ತರ ಬಂತು!

ಅಷ್ಟೇ! ಹಾಕಿರುವ ವಯಸ್ಸು ನಿಜವಲ್ಲ! ಅವಳ ವಯಸ್ಸನ್ನು ಇಟ್ಟುಕೊಂಡು ನನಗೇನೂ ಆಗಬೇಕಾಗಿಲ್ಲ! ಅಷ್ಟು ಚಂದ ಪಟ ಹಾಕಿ…, ವಯಸ್ಸು ಅಷ್ಟು ಅತಿಯಾಗಿ ಹಾಕುವುದರ ಉದ್ದೇಶ ಅರ್ಥವಾಗುತ್ತದೆ! ಆ ಉದ್ದೇಶ ಏನೇ ಇರಲಿ…, ನಿಜವಾದ ವಯಸ್ಸನ್ನು ಹೇಳಬೇಕಾಗಿರಲಿಲ್ಲ- ಆದರೆ ಸುಳ್ಳು ಹೇಳದೆ ಇರಬಹುದಿತ್ತು!

'ಅದು ನಿಜ' ಅನ್ನುವುದಕ್ಕಿಂತ 'ಏನೋ ಒಂದು ಹಾಕಿದೆ' ಅಂದಿದ್ದರೆ ನನ್ನ ಕುತೂಹಲ ಅಲ್ಲಿಗೆ ಮುಗಿಯುತ್ತಿತ್ತು!

ಸುಳ್ಳು ಹೇಳಿದ್ದರ ಉದ್ದೇಶವೇನು?

ನಾನವಳ ಹಿಂದೆ ಬೀಳುತ್ತೇನೆಂದೆ?

ಅಥವಾ…,

ಅದೇ ಕುತೂಹಲದಿಂದ ನಾನವಳ ಹಿಂದೆ ಬೀಳಲಿ ಎಂದೇ…?

ಹನಿಟ್ರಾಪ್‌ನ ಹೊಸ ವಿಧಾನ?

ಕಳೆದುಕೊಳ್ಳಲು ಏನೂ ಇಲ್ಲದವನು! ಹನಿಟ್ರಾಪ್‌ನ ನೆಪದಿಂದಲಾದರೂ ಅವಳು ಸಿಗುತ್ತಾಳೆಯೇ ಅನ್ನುವ ಆಸೆ!

ಪರೀಕ್ಷಿಸುವ ನೆಪದಿಂದ- ಹಿಂದೆ ಬಿದ್ದೆ!!

ಒಂದು ವರ್ಷ ಬೇಕಾಯಿತು ಉದ್ದೇಶ ಸಾಧನೆಗೆ!

ಯಾರ ಉದ್ದೇಶ?

ಹನಿಟ್ರಾಪ್ ಮಾಡುವ ಅವಳ ಉದ್ದೇಶ ಮತ್ತು ಅದಕ್ಕೆ ಒಳಗಾಗುವ ನನ್ನ ಉದ್ದೇಶ!

ಕೆಲವೊಮ್ಮೆ ಭಾರಿ ಗೊಂದಲ ಉಂಟಾಗುತ್ತಿತ್ತು- ಅವಳ ನಿಯತ್ತು!

ನಿಜಕ್ಕೂ ಹನಿಟ್ರಾಪ್ ಮಾಡುತ್ತಿದ್ದಾಳೋ ಅಥವಾ ಅವಳಿಗೆ ನನ್ನಂಥವನೊಬ್ಬನ ಅಗತ್ಯವಿತ್ತೋ?

ಅಥವಾ ಯಾರೂ ಬೇಡ ಅಂದುಕೊಂಡಿದ್ದ ಅವಳನ್ನು ನಾನೇ ಸೆಳೆದೆನೋ?

ಏನೋ…, ನನಗಂತೂ ಅವಳು ಹನಿಟ್ರಾಪರ್!!

ಇಬ್ಬರಿಗೂ ದೂರವಾದ ಸ್ಥಳವೊಂದರಲ್ಲಿ ಸೇರಿದೆವು!

ಸೇ-ರಿ-ದೆ-ವು!

ಮೂರು ತಿಂಗಳ ಅವಧಿಯಲ್ಲಿ ಅದೆಷ್ಟು ಸಾರಿಯೋ…!

ಪ್ರೇಮ ಅದೆಷ್ಟು ಚಂದ!” ಎಂದಳು.

ಟ್ರಾಕ್ ಪ್ಯಾಂಟ್ ಮಾತ್ರ ಧರಿಸಿ…, ಮಂಚದಮೇಲೆ…, ಗೋಡೆಗೊರಗಿ ಕುಳಿತ ನನ್ನ ಎದೆಗೊರಗಿ ಕುಳಿತಿದ್ದಳು. ನನ್ನ ಬಲಗೈಯ್ಯನ್ನು ಎರಡೂ ಕೈಗಳಲ್ಲಿ ತೆಗೆದುಕೊಂಡು ಎದೆಗೊತ್ತಿಕೊಂಡಳು! ಕಣ್ಮುಚ್ಚಿ…, ತನ್ಮಯಳಾಗಿ…,

ಎಲ್ಲಿದ್ದೆ ಇಲ್ಲಿಯವರೆಗೆ?” ಎಂದಳು.

ನೀನೇ ಇಷ್ಟು ತಡವಾಗಿ ಫ್ರೆಂಡ್‌ರಿಕ್ವೆಸ್ಟ್ ಕಳಿಸಿದ್ದು!” ಎಂದೆ.

ಮುಗುಳುನಕ್ಕಳು.

ಮಾಧವಾ…! ಇನ್ನೊಮ್ಮೆ ನಾವು ಸಿಗುವುದು ಅಸಾಧ್ಯ ಅನ್ನಿಸುತ್ತಿದೆ!” ಎಂದಳು.

ಎಡಗೈಯಿಂದ ಅವಳ ತಲೆಯನ್ನು ಹಿಡಿದು ಮುಖವನ್ನು ನನ್ನೆಡೆಗೆ ತಿರುಗಿಸಿ…, ತಾಗಿಯೂ ತಾಗದಂತೆ ಮುತ್ತೊಂದು ಕೊಟ್ಟು…,

ಹಾಗನ್ನದಿರು!” ಎಂದೆ.

ಅವಳ ಕಾರ್ಯಸಾಧನೆ ಆಯಿತೇನೋ ಅನ್ನಿಸಿತು!

ನಿನಗೇ ಗೊತ್ತಲ್ಲೋ…! ಆಲ್ರೆಡಿ ಮನೆಯವರಿಗೆ ಡೌಟ್ ಬಂದಿದೆ! ಮುಂದಿನ ತಿಂಗಳು ಅಬುದಾಬಿಗೆ ಮರಳುತ್ತಿದ್ದೇವೆ!” ಎಂದಳು.

ನೀನಿರಲಾಗುವುದಿಲ್ಲವೇ?” ಎಂದೆ.

ಹೇಗೆ ಸಾಧ್ಯವೋ ಮಾಧವಾ…!? ಗಂಡ ಮಕ್ಕಳನ್ನು ಬಿಟ್ಟು ಇಷ್ಟು ಸ್ವಾತಂತ್ರ್ಯ ವಹಿಸಿದ್ದು ಇದೇ ಮೊದಲಸಾರಿ!” ಎಂದಳು.

ನಾನೇನೂ ಮಾತನಾಡಲಿಲ್ಲ!

ನಿನ್ನ ಈ ಪ್ರೀತಿಗೆ ಬದಲಾಗಿ ನಾನೇನು ಮಾಡಲಿ ಹೇಳು!” ಎಂದಳು.

ಅದನ್ನು ನಾನು ಕೇಳಬೇಕು!” ಎಂದೆ.

ನಿನಗೆ ಸ್ಮೂಚ್ ಮಾಡುವುದು ಗೊತ್ತೇನೋ…?” ಎಂದಳು.

ಅಮಾಯಕವಾಗಿ ನಕ್ಕೆ!

ಒರಗಿದ್ದ ಅವಳು ಎದ್ದು ನನ್ನೆಡೆಗೆ ತಿರುಗಿ ನನ್ನ ಮುಖವನ್ನು ತನ್ನ ಬೊಗಸೆಯಲ್ಲಿ ತೆಗೆದುಕೊಂಡು ಗಾಢವಾಗಿ ಚುಂಬಿಸಿದಳು!

ಇಲ್ಲೊಂದು ಗುರುತುಮಾಡು!” ಎಂದಳು- ಎದೆಯ ಕೆಳ ಭಾಗವನ್ನು ತೋರಿಸಿ!

ಅದು ನನಗೆ ಮಾತ್ರ ಗೊತ್ತಿರುವ ವಿದ್ಯೆ ಅನ್ನುವ ನಂಬಿಕೆ ನನ್ನದು!

ಮುತ್ತು ಕೊಟ್ಟ ಹಾಗೂ ಇರಬೇಕು! ನೋವೂ ಆಗಬಾರದು! ಕೆಂಪನೆಯ ಕಲೆಯೂ ಮೂಡಬೇಕು!

ಮೂಡಿಸಿದೆ!

ಫಿನಾನ್ಷಿಯಲಿ ತುಂಬಾ ಕಷ್ಟದಲ್ಲಿದ್ದೀಯ ಅಂದೆಯಲ್ಲಾ…? ಸ್ವಲ್ಪ ದುಡ್ಡು ಕೊಡಲಾ ಮಾಧವ?” ಎಂದಳು.

ಇಬ್ಬರೂ ತಯಾರಾಗಿ ಹೊರಡುತ್ತಿದ್ದೆವು.

ಹನಿಟ್ರಾಪ್ ಮಾಡುವವಳಾ ಇವಳು?

ಎದೆಯಲ್ಲಿ ಸಣ್ಣ ಕಂಪನ!

ಇನ್ನಿವಳು ಸಿಗುವುದಿಲ್ಲ!

ಏನು ಮಾಡಲಿ?

ಏನು ಮಾಡಲಿ?

ಏನು ಮಾಡಲಿ?

ಅವಳ ನಿಯತ್ತಿಗೆ ಬೆಲೆಕೊಟ್ಟು ಡಿಲಿಟ್ ಮಾಡಲ?

ಅಥವಾ…,

ಏನಿದ್ದರೂ ಸಿಗುವುದಿಲ್ಲ ಅನ್ನುವ ಧೈರ್ಯದಲ್ಲಿ ಮಾರಿಬಿಡಲಾ?

ಮಾರ್ಕೆಟ್‌ನಲ್ಲಿ ನನ್ನ ವೀಡಿಯೋಗಳಿಗೆ ಅದರದೇ ಆದ ಬೆಲೆಯಿದೆ!!!

Comments

  1. ಪ್ರೇಮನಾ ಇದು ನೆಪ ಅಷ್ಟೇ ಪ್ರೇಮನು ಇಲ್ಲ ಪ್ರೀತಿನು ಇಲ್ಲ.ಟ್ರಾಪ್ ಮಾಡಿ ಹಣಗಳಿಸಲು ವಿಡಿಯೋಗಳ ಅಶ್ಲೀಲ ದಂದೆಗಾರಅವನು.ಕಥಾನಾಯಕ.ಪ್ರೇಮ ಅಂತಾ ಹೆಸರಿಟ್ಟು ಮಾಯಗೊಳಿಸಿದರೆ ತಾನೇ ಬರತಾರೆ.ಇಲ್ಲ ಡೈರೆಕ್ಟ್ಯಾಗಿ ಬಾ ನನ್ನ ಪಕ್ಕದಲ್ಲಿ ಮಲಗು ನಾನು ವಿಡಿಯೋ ಮಾಡಿ ಹಣ ಸಂಪಾದನೆ ಮಾಡಬೇಕು ಅಂದರೆ ಬರತಾರಾ.ಅವಳೇ ಪರವಾಗಿಲ್ಲ ನಿಜವಾಗಿ ಪ್ರೇಮಿಸಿದಳೆನೋ ಒಂದು ವರ್ಷ ಬೇಕಾಯಿತು ಅವನ ಬಲೆಗೆ ಬೀಳಲು. ಕಾಮ ಪ್ರೇರಿತಳು ಹಾಗಿದ್ದರೆ ಇಷ್ಟು ಸಮಯ ಬೇಕಿರಲಿಲ್ಲ.ಅವನೇ ಟ್ರಾಪ್ ಮಾಡಿದ್ದೂ...ಅವನೇ ದ್ರೋಹಿ..

    ReplyDelete

Post a Comment

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!