ಹೆಣ್ಣೇ!

ಹೆಣ್ಣೇ!

ಅವಳೇ ತುಂಬಿದ್ದ ಹೃದಯವನ್ನು ಛಿದ್ರಗೊಳಿಸಿ ಅವಳೆಂದಳು- ಹೃದಯವಿಲ್ಲದವ! ನಾನೆಂದೆ- ಬಂಧವಿಮುಕ್ತನಾಗುವುದೆಂದರೆ ಇದೇ!”

ಹೆಣ್ಣೇ…,

ನಿನಗೆ ನೋವು ಕೊಟ್ಟಲ್ಲದೆ ನಿನ್ನಿಂದ ಹೊರಬರಲಾರೆ. ನಿನಗೆ ನೋವು ಕೊಡಬೇಕೆಂದರೆ ನೀನು ನನಗೆ ಕೊಟ್ಟ ನೋವನ್ನೇ ನೆಪ ಮಾಡಿಕೊಳ್ಳಬೇಕು! ನೀನು ಕೊಟ್ಟ ನೋವಿಗೆ ನಾನು ಅರ್ಹನಲ್ಲವೇ! ಏನಂದುಕೊಂಡಿದ್ದೀಯ? ನಿನ್ನದು ಮಾತ್ರ ಹೃದಯ ನನ್ನದು ಕಲ್ಲುಬಂಡೆಯೆಂದೆ? ಪ್ರೇಮ ತಾಕದಿದ್ದರೆ ಬಿಟ್ಟು ಬಿಡು- ನಿಷೇಧಿಸಬೇಡ! ನಿನಗೆಟುಕದ್ದು ಇಲ್ಲವೆಂದು ಅರ್ಥವಲ್ಲ! ಅರಿವಾಗಬೇಕಾದರೆ ನಿನ್ನ ಹೃದಯವೂ ತೆರೆದಿರಬೇಕು! ಸ್ವಾರ್ಥವೆಂಬ ಪರದೆಯಿಂದ ಮುಚ್ಚಿದ ನಿನ್ನ ಹೃದಯಕ್ಕೆ ಉಳಿದವರ ಹೃದಯವೂ ಅದರಂತೆಯೇ ಕಾಣುವುದು ಪ್ರಕೃತಿ ನಿಯಮ! ಒಬ್ಬರನ್ನು ಭರ್ತ್ಸನೆ ಮಾಡುವಾಗ ಅದರ ಪ್ರತ್ಯಾಘಾತಕ್ಕೂ ತಯಾರಿರಬೇಕು! ಪ್ರೇಮವಾದರೂ ನೋವಾದರೂ ಅದು ಎರಡೂಕಡೆಗೆ ಅನ್ನುವುದು ಮರೆಯದಿರು! ನಿನ್ನ ಪ್ರೇಮ ನಿಜ- ನಂಬಿದೆ! ನಾನು ಹೇಳುವುದು- ನನ್ನ ಪ್ರೇಮವೂ ನಿಜವೆಂದು! ನಿನ್ನಪ್ರೇಮ- ನನಗೂ ನಿನಗೂ ನಿನಗೆ ಸಂಬಂಧಿಸಿದವರಿಗೂ ಸೀಮಿತವಾದರೆ…, ನನ್ನದು- ಅದನ್ನೂ ಮೀರಿದ್ದು- ದೇಶವನ್ನೇ ಆವರಿಸಿಕೊಂಡಿರುವುದು! ನನ್ನ ದೇಶದ ಪ್ರತಿಯೊಂದೂ ನನಗೆ ಪ್ರಿಯವೇ! ಇಲ್ಲಿ ಪ್ರೇಮ ಅನ್ನುವುದು "ನಿಜ"! ಎಲ್ಲಾಕಡೆಯು ಹರಡಿಕೊಂಡಿರುವ ನನ್ನ ಪ್ರೇಮವನ್ನು ನಿನ್ನಮೇಲಿನ ಪ್ರೇಮದೊಂದಿಗೆ ಹೋಲಿಸಿ- ನಿನ್ನ ಮೇಲೆ ಪ್ರೇಮವೇ ಇಲ್ಲವೆಂದು ಸಾಬೀತುಮಾಡಲು ಹೋದರೆ ನಾನೇನು ಮಾಡಲಿ? ಖಂಡಿತವಾಗಿ ನನಗೆ ನಿನಗಿಂತ ದೇಶವೇ ಮುಖ್ಯ! ಅದನ್ನು ಹೀಗೂ ಹೇಳಬಹುದು- ಕಂಡಿತವಾಗಿ ನನಗೆ ನಿನ್ನನ್ನೂ ಒಳಗೊಂಡಂತೆ ದೇಶವೇ ಮುಖ್ಯ! ನಿನ್ನಮೇಲಿನ ಪ್ರೇಮವನ್ನು ಸಾಬೀತು ಪಡಿಸಲು ಉಳಿದವುಗಳ ಮೇಲಿನ ಪ್ರೇಮವನ್ನು ಬಿಡಬೇಕೆಂದರೆ ಅಸಾಧ್ಯ! ನಿನಗೆ ನೋವೇ! ಅದಕ್ಕೆ ನಾ ಹೊಣೆಗಾರನೆನ್ನುವುದಾದರೆ…, ನನ್ನ ಪ್ರೇಮದೊಂದಿಗೆ ನೀನೂ ಸೇರಿ ಪ್ರಪಂಚವನ್ನು ಪ್ರೇಮಿಸುವುದೆನ್ನುವುದಕ್ಕೆ ಯಾರು ಹೊಣೆ? ಹೊಣೆಗೇಡಿಯಾಗದಿರು! ಪ್ರೇಮ ಸಂಕುಚಿತವಾಗದಿರಲಿ. ಇಲ್ಲಿ ಪ್ರೇಮ ಅನ್ನುವುದು ನಿಜವೇ ಹೊರತು- ಸುಳ್ಳಲ್ಲ! ನಿನ್ನಮೇಲಿನ ಪ್ರೇಮ ಮಾತ್ರವಲ್ಲದೆ ಎಲ್ಲದರಮೇಲೂ ಎಲ್ಲರ ಮೇಲೂ ಪ್ರೇಮ ಅನ್ನುವುದೇ ನಿನ್ನ ಸಮಸ್ಯೆಯಾದರೆ…, ನನ್ನನ್ನು ಪರೀಕ್ಷೆಮಾಡದೆ ನಿನ್ನಪಾಡಿಗೆ ಇದ್ದು ಬಿಡು! ಮಾನಸಿಕವಾಗಿ ದೂರವಿದ್ದರೂ ದೇಶ ಅಂದಮೇಲೆ ನೀನೂ ಒಳಗೊಳ್ಳುತ್ತೀಯ ಅನ್ನುವಲ್ಲಿ- ನಿನ್ನಮೇಲಿನ ಪ್ರೇಮ ಇಲ್ಲವಾಗುವುದಿಲ್ಲ!

Comments

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!