ಪ್ರೇಮ- ಜೀವನ ಧರ್ಮ!
ಪ್ರೇಮ- ಜೀವನ ಧರ್ಮ!
ಇದು ನಾಂದಿಯೋ…, ಮುಕ್ತಾಯವೋ…, ಹೊಸ ನಾಂದಿಯ ನಾಂದಿಯೋ… ತಿಳಿಯದು!
ಪೂರ್ಣವಿರಾಮ ಯಾವತ್ತಿಗೂ ಹೊಸ ವಾಕ್ಯದ ನಾಂದಿಯೇ ಆಗಿರುತ್ತದೆ!
ಆದ್ದರಿಂದ…,
ನಾಂದಿ:-
ಅದೇನು ಮಾಯವೋ…, ಬೆಳಗಿನಿಂದಲೂ ಏನೋ ದುಗುಡ! ಕಿಬ್ಬೊಟ್ಟೆಯಲ್ಲೇನೋ ತಳಮಳ! ಅವ್ಯಕ್ತ ಗೊಂದಲ!ಹೃದಯಬಡಿತದಲ್ಲಿಯೂ ವ್ಯತ್ಯಾಸ…!
ಅವಳನ್ನು ಭೇಟಿಯಾಗುತ್ತಿರುವುದರ ಉದ್ವೇಗವೋ…? ಅಥವಾ ಭೇಟಿಯಲ್ಲಿ ನಡೆಯಬಹುದಾದ ವಿಪರೀತದ ಮುನ್ಸೂಚನೆಯೋ?
ಮೊದಲ ಭೇಟಿಯೇನೂ ಅಲ್ಲ! ಪ್ರತಿ ಭೇಟಿಯಲ್ಲೂ ಈ ಉದ್ವೇಗದ ಅನುಭವವಾಗಿದೆ! ಆದರೆ ಇಂದಿನ ತಳಮಳ ಮೊದಲಬಾರಿ!
ವಿಚಿತ್ರ ಒತ್ತಡ!
ಒತ್ತಡವಾ?
ಅಲ್ಲ!
ಇನ್ನೇನು…?
ತಿಳಿಯದು!
ಅವಳೊಂದು ಅದ್ಭುತ ನನಗೆ. ಅಸಾಧ್ಯ ಸೌಂಧರ್ಯ! ಅದಕ್ಕನುಗುಣವಾದ ಬೌದ್ಧಿಕಮಟ್ಟ!
ಅಸಾಮಾನ್ಯ ಅಲ್ಲದಿದ್ದರೂ ಅಪರೂಪದ ಘಟನೆಯೊಂದರಿಂದ ಪರಿಚಯವಾಗಿದ್ದೆವು!
ಘಟನೆಯಾ…? ಅಂದರೆ- ಅಲ್ಲ! ಅದೊಂದ ಆಕಸ್ಮಿಕ!
ಮೊಟ್ಟಮೊದಲಬಾರಿ…, ನನ್ನ ಕಥೆಯೊಂದಕ್ಕೆ ಅವಳೂ ಅವಳ ಕವಿತೆಯೊಂದಕ್ಕೆ ನಾನೂ ಏಕಕಾಲದಲ್ಲಿ ಕಮೆಂಟ್ ಮಾಡಿದ್ದೆವು! ನಂತರ ಪರಸ್ಪರ ಪ್ರತಿಕ್ರಿಯೆ, ಅಭಿಪ್ರಾಯ ವ್ಯತ್ಯಾಸ, ಜಗಳ…!
ಒಡನಾಟಕ್ಕೆ ಅಷ್ಟು ಸಾಕಿತ್ತು!
ಎಷ್ಟೆಷ್ಟು ವಿಷಯಗಳು…, ಚರ್ಚೆಗಳು ವಾದ ವಿವಾದಗಳು!
ಅರಿಯದೆ ಆಕರ್ಷಿತರಾಗಿದ್ದೆವು.
ಅದೇನು ವಿಚಿತ್ರವೋ…, ಅವಳು ನನಗಿಂತ ಹೆಚ್ಚು ಅನ್ನುವ ಭಾವ! ಅವಳ ಪ್ರೌಢತೆ…, ವಿಧ್ವತ್ತು…, ಪಕ್ವತೆ!
ಅರಿಯದೆ ಆರಾಧಿಸತೊಡಗಿದ್ದೆ. ಆರಾಧಾನೆ ಪ್ರೇಮವಾಗಿ ಬದಲಾಗಿದ್ದು ಅರಿವಿಗೆ ಬರಲೇ ಇಲ್ಲ!
ಪ್ರೇಮ…!
ಅದೆಷ್ಟು ಮಹಾಕಾವ್ಯಗಳು! ಅದೆಷ್ಟು ಯುದ್ಧಗಳು! ಅದೆಷ್ಟು ಹೃದಯ ಪರಿವರ್ತನೆಗಳು…!
ಪ್ರೇಮ…!
ಅದೊಂದು ಅದ್ಭುತ! ಅದೊಂದು ಉನ್ಮಾದ! ಅದೊಂದು ಆನಂದಾತಿರೇಕ!
ಪ್ರೇಮವೇ ಪರಮಪದ!
ಪೆಟ್ಟುಬಿದ್ದಷ್ಟೂ ಪಕ್ವವಾಗುವುದು ಪ್ರೇಮ! ಪೆಟ್ಟುಬಿದ್ದಷ್ಟೂ ರಮಣೀಯವಾಗುವುದು ಪ್ರೇಮ! ಪೆಟ್ಟುಬಿದ್ದಷ್ಟೂ ವಿಸ್ತಾರಗೊಳ್ಳುವುದು ಪ್ರೇಮ! ಪೆಟ್ಟುಬಿದ್ದಷ್ಟೂ ಮೃದುಮಧುರವಾಗುವುದು ಪ್ರೇಮ! ಪೆಟ್ಟುಬಿದ್ದಷ್ಟೂ ವಿಶ್ವಜನೀಯವಾಗುವುದು ಪ್ರೇಮ!
ಇಷ್ಟುದಿನದ ನಮ್ಮ ಭೇಟಿ ಖಾಸಗಿಯಾಗಿರಲಿಲ್ಲ! ಇಂದು ಹೌದು! ಇಂದಿನ ನನ್ನ ಮಾನಸಿಕ ಅವಸ್ತೆಗೆ ಅದೇ ಕಾರಣವೇನೋ?
ಅಲ್ಲ, ಅಲ್ಲ, ಅಲ್ಲ, ಬೇರೇನೋ ಇದೆ ಅನ್ನುವ ತುಡಿತ!
ಪಾರ್ಕ್ ಒಂದರಲ್ಲಿ ಕಾಯುತ್ತಾ ಕುಳಿತಿದ್ದೆ. ಇಂದಿನ ಸಂದರ್ಭವನ್ನೂ ಅವಳೇ ಸೃಷ್ಟಿಸಿದ್ದಳು. ಅವಳ ಸೂಚನೆ, ಅವಳ ಪ್ಲಾನ್, ಅವಳದೇ ಖರ್ಚುವೆಚ್ಚ- ತಯಾರಿ!
ಬೆಂಚಿನ ಹಿಂದಕ್ಕೆ ಒರಗಿ ಆರಾಮವಾಗಿ ಕುಳಿತಿದ್ದರೂ…, ಮನಸ್ಸು ಎಲ್ಲೋ ಇತ್ತು!
“ಹಾಯ್!” ಎಂದು ಹೆಗಲು ಮುಟ್ಟಿ ಕರೆದಾಗಲೇ ವಾಸ್ತವಕ್ಕೆ ಬಂದಿದ್ದು!
“ಎಲ್ಲಿದ್ದೆ?” ಎಂದಳು.
“ಗೊತ್ತಿಲ್ಲ…, ಇಲ್ಲಂತೂ ಇರಲಿಲ್ಲ!” ಎಂದೆ.
“ಸರಿ ಬಾ!” ಎಂದು ನಡೆದಳು.
ಅವಳೊಂದಿಗೆ ಹೆಜ್ಜೆಹಾಕಿದೆ.
ಅವಳು- ಉಷೆ!
ಅವಳೊಂದು ಮೇರು ಪರ್ವತ ನನಗೆ! ಅವಳಮುಂದೆ ನಾ ತುಂಬಾ ಚಿಕ್ಕವನೆಂಬ ಭಾವ!
ಗೌರವಪೂರಿತ ಪ್ರೇಮ!
ನನಗಿಂತ ಹಿರಿಯಳೆಂದೆ? ಪ್ರೌಢಳೆಂದೆ? ಪ್ರಬುದ್ಧಳೆಂದೆ?
ತಿಳಿಯದು!
ಮೌನವಾಗಿ ಹೆಜ್ಜೆ ಹಾಕಿದೆವು.
ನಾ ಮಗುವಂತಾಗಿದ್ದೆ!
ಎಷ್ಟು ಚಂದದ ಮನೆ! ಗೇಟನ್ನು ತೆಗೆದು ಒಳನುಗ್ಗುವಾಗ…,
“ನನ್ನದೇ ಮನೆ! ಹೇಗಿದೆ?” ಎಂದಳು.
“ನಿನ್ನಂತೆ!” ಎಂದೆ.
“ಅಷ್ಟು ಕೆಟ್ಟದ್ದಾಗಿದೆಯೇ?” ಎಂದು ನಕ್ಕಳು.
ನಾನೇನೂ ಮಾತನಾಡಲಿಲ್ಲ. ಅವಳು ಬೀಗವನ್ನು ತೆಗೆಯುತ್ತಿದ್ದರೆ ಮನದೊಳಗೆ ಅವ್ಯಕ್ತ ಹೆ-ದ-ರಿ-ಕೆ!
ಒಬ್ಬಳೇ ಇದ್ದಾಳೆ!!
“ಇವತ್ತು ಹೆಣ್ಣಿನ ವಿಷಯಕ್ಕೆ ಸಂಬಂಧಪಟ್ಟಂತೆ ನನಗೆ ವಿಶೇಷವಾದ ದಿನ- ಗೊತ್ತಾ?” ಎಂದಳು.
ಗೊಂದಲದಿಂದ ನೋಡಿದೆ.
“ಮುಟ್ಟು- ಎರಡನೇ ದಿನ!” ಎಂದಳು.
ಮುಗುಳುನಕ್ಕೆ.
“ನೆನಪಿದೆಯಾ ನಿನಗೆ…? ನೀನು ಹೇಳಿದ್ದು? ಮುಟ್ಟಿನದಿನ ಹೆಣ್ಣಿನ ಅಲ್ಲಿಗೆ ಮುತ್ತುಕೊಡುವುದು ನನ್ನ ಪ್ರೇಮದ ಪರಾಕಾಷ್ಠೆ ಅಂತ?” ಎಂದಳು.
“ಹೇಳಿದ್ದಲ್ಲ! ಕಥೆಯೊಂದರಲ್ಲಿ ಬರೆದಿದ್ದೆ! ಅದೇ ನಮ್ಮಿಬ್ಬರ ಜಗಳಕ್ಕೆ ಕಾರಣವಾಗಿತ್ತು!” ಎಂದೆ.
ಮನೆ ಅಚ್ಚಕಟ್ಟಾಗಿತ್ತು. ಶಿಸ್ತು ಎದ್ದು ಕಾಣುತ್ತಿತ್ತು. ಆಕರ್ಷಕವಾಗಿ ಅಲಂಕರಿಸಿದ ಶೋಕೇಸ್, ಡೈನಿಂಗ್‌ಟೇಬಲ್, ಪುಸ್ತಗಳರಾಕ್, ಮೂರು ಬೆಡ್‌ರೂಂ!
“ಇದು ನನ್ನದು…!” ಎಂದು ಹೇಳಿ ಕೈಹಿಡಿದು ಒಳಕ್ಕೆ ಕರೆದುಕೊಂಡು ಹೋದಳು.
ಗಂಡು ಹೆಣ್ಣು! ಏಕಾಂತ! ನೆರಳು ಬೆಳಕಿನ ಆಟ!
ಹಿಂದಕ್ಕೆ ಕೈಯ್ಯೂರಿ ಮಂಚದ ಮೇಲೆ ಸ್ವಲ್ಪವೇ ಸ್ವಲ್ಪ ಕಾಲಗಲಿಸಿ ಕುಳಿತಳು! ಅವಳ ಮುಂದೆ ಮಂಡಿಯೂರಿ ನೆಲದಮೇಲೆ ನಾನು!
ಸ್ವಲ್ಪಸ್ವಲ್ಪವೇ ಸೀರಯನ್ನು ಮೇಲಕ್ಕೆ ಸರಿಸಿದೆ. ಅವಳು ನನ್ನನ್ನೇ ನೋಡುತ್ತಿದ್ದಳು.
ಹಾಲಿನ ಬಣ್ಣದ ಅವಳೊಂದು ಸೌಂಧರ್ಯರಾಶಿ!
ಕಲುಷಿತ ರಕ್ತ- ಛಿದ್ರ ಮಾಂಸಪಿಂಡವನ್ನು ಹೊರಚೆಲ್ಲುತ್ತಿದ್ದ ತಾವರೆಯ ಮೊಗ್ಗಿಗೆ ತುಟಿಯೊತ್ತಿದೆ- ಗಾಢವಾಗಿ ಒತ್ತಿದೆ!
ಇಂದು ನನ್ನ ಜನ್ಮದ ಧನ್ಯತೆಯ ಗರಿಷ್ಠ! ಹಾಗೆಯೇ ಮೇಲಕ್ಕೆ ಸರಿದು ಹೊಕ್ಕಳಿಗೊಂದು ಧನ್ಯತೆ ತಿಳಿಸಿ…, ಎರಡು ಬೆಣ್ಣೆಮುದ್ದೆಗಳ ತುದಿಯಲ್ಲಿನ ರಕ್ತಚಂದನಕ್ಕೆ ಮುಖವೊತ್ತಿ…, ತುಟಿಯತ್ತ ಸರಿಯುವಾಗ ಅವಳೆಂದಳು…,
“ಇದಕ್ಕಾಗಿಯಾ ಇಷ್ಟು ದಿನ ನೀನು ಪ್ರೇಮದ ನಾಟಕವಾಡಿದ್ದು?”
ಪ್ರೇ-ಮ-ದ-ನಾ-ಟ-ಕ! ಹೃದಯದಲ್ಲಿ ಅಗ್ನಿಪರ್ವತವೊಂದು ಸ್ಪೋಟಿಸಿದ ಭಾವ!
ತುಟಿಯೊತ್ತಿದ ಅವಳ ತಾವರೆಯಮೂಲಕ ಹರಿದು ಹೋಗಿದ್ದು ಕಲುಷಿತ ರಕ್ತವೋ ಛಿದ್ರಗೊಂಡ ಪಿಂಡವೋ ಅಲ್ಲ- ನುಚ್ಚುನೂರಾದ ನನ್ನ ಹೃದಯ!
ಅಸಾಧ್ಯ ನೋವು! ತಲೆಯೊಳಗೆ ಸುನಾಮಿಬಂದ ಸಾಗರದ ಮೊರೆತ! ಕುಸಿದೆ!
ಅವಳ ಪುಣ್ಯ! ಸಾಯಲಿಲ್ಲ! ಅಲ್ಲಿಯೇ ಸತ್ತಿದ್ದರೆ ಅವಳಿಗೆಷ್ಟು ಕಷ್ಟವಾಗುತ್ತಿತ್ತು…!
೧
ಬದುಕು- ಎಷ್ಟು ಚಂದ!
ನನಗನ್ನಿಸುವುದು…, ಪ್ರತಿಯೊಬ್ಬರ ಹುಟ್ಟಿಗೂ ಒಂದು ರಹಸ್ಯವಿರುತ್ತದೆ! ಆ ರಹಸ್ಯದ ಅರಿವಾಗಲು ಪದೇ ಪದೇ ನಿಮಿತ್ತಳು ಎದುರಾಗುತ್ತಲೇ ಇರುತ್ತದೆ! ಅಧಿಕ ಜನರಿಗೆ ಆ ನಿಮಿತ್ತದ ಅರಿವೇ ಆಗುವುದಿಲ್ಲ! ಕೆಲವರಿಗೆ ಅರಿವಾದರೂ ಅದರಕಡೆ ಗಮನವಿರುವುದಿಲ್ಲ! ಗಮನ ಕೊಟ್ಟವರಿಗೋ- ಆ ರಹಸ್ಯದಿಂದೇನು ಉಪಯೋಗವೆಂಬ ತಾತ್ಸರ! ಕೆಲವೇ ಕೆಲವರುಮಾತ್ರ ತಮ್ಮ ಜನ್ಮದ ರಹಸ್ಯವನ್ನು ಅರಿತುಕೊಂಡು ಅದಕ್ಕನುಗುಣವಾಗಿ ಬದುಕುತ್ತಾರೆ! ಕೆಲವೊಮ್ಮೆ ರಹಸ್ಯದ ಅರಿವಾದರೂ ಅದನ್ನು ನೆರವೇರಿಸುವುದು ಹೇಗೆಂದು ತಿಳಿಯದಾದಾಗ…, ಪ್ರಕೃತಿಯೇ ನಮ್ಮನ್ನು ಅದಕ್ಕನುಗುಣವಾಗಿ ರೂಪಿಸುತ್ತದೆ!
ಹಾಗೆ ರೂಪುಗೊಂಡದ್ದು- ರೂಪುಗೊಳ್ಳುತ್ತಿರುವುದು ನನ್ನ ಬದುಕು!
ಅದೆಷ್ಟು ಹೊಡೆತಗಳು, ಅದೆಷ್ಟು ನೋವುಗಳು!
ಯಾರಿಗಾದರೂ ಗೊತ್ತೆ?
ಇಲ್ಲ- ಅದೆಲ್ಲ ನನ್ನೊಬ್ಬನಿಗೆ ಸ್ವಂತ!
ನನ್ನ ಭಾವನೆಗಳನ್ನು ಯಾರೊಬ್ಬರಮೇಲೆ ಹೇರಿದವನಲ್ಲ! ನನ್ನ ಕಷ್ಟ ನನ್ನ ಸಂಕಟಗಳು ನನ್ನೊಬ್ಬನದು! ಅದರ ಪ್ರಭಾವ ಇನ್ನೊಬ್ಬರಮೇಲೆ ಬೀರದಂತೆ ನೋಡಿಕೊಂಡಿದ್ದೇನೆ! ಹಾಗೆ ಮಾಡುವುದೂ ಕೆಲವೊಮ್ಮೆ ಅಪಾರ್ಥಕ್ಕೆ ಕಾರಣವಾಗುತ್ತದೆ! ಬೇರೆ ಯಾರು ಅಪಾರ್ಥ ಮಾಡಿಕೊಂಡರೂ ಚಿಂತೆಯಿಲ್ಲ! ಕೆಲವೊಮ್ಮೆ ನನ್ನವರಿಗೆ ಅದರ ಅರಿವು ಮೂಡಿಸಲೇ ಬೇಕಾಗುತ್ತದೆ! ಅದಕ್ಕೊಂಡು ಸಣ್ಣ ಸಂದರ್ಭ ಒದಗಿತು!
“ಅನಿರುದ್ಧ! ಇವತ್ತು ನೀನೇ ಮಕ್ಕಳನ್ನು ಶಾಲೆಯಿಂತ ಕರೆತರಬೇಕು!” ಎಂದರು ಅಕ್ಕ.
“ನಿಮಗೆ ಬರುವ ಸ್ಯಾಲರಿಯಲ್ಲಿ ಅರ್ಧ ನನಗೆ ಕೊಡಬೇಕು!” ಎಂದೆ.
ಅಕ್ಕನಿಗೆ ಅರ್ಥವಾಗಲಿಲ್ಲ!
“ನಿಮ್ಮ ಅರ್ಧ ಹೊರೆ ನನಗೆ ಇಳಿಸುತ್ತಿದ್ದೀರ ಗೊತ್ತೇ?” ಎಂದೆ.
ಅಕ್ಕ ಏನೂ ಮಾತನಾಡಲಿಲ್ಲ! ಮುನಿಸಿಕೊಂಡರು! ಅಕ್ಕನ ದೃಷ್ಟಿಯಲ್ಲಿ- ಮನೆಯಲ್ಲಿ ಸುಮ್ಮನೆ ಕುಳಿತಿರುವ ನನಗೆ ಒಂದು ಕ್ಷಣ ಮಕ್ಕಳನ್ನು ಕರೆತಂದರೇನು- ಅನ್ನುವ ಚಿಂತೆ!
ಎರಡುಮೂರು ದಿನ ಮುಖ ಊದಿಸಿಯೇ ಇದ್ದ ಅಕ್ಕನನ್ನು ಕರೆದು ಕೂರಿಸಿದೆ.
“ಅಕ್ಕಾ…, ನಿಮ್ಮ ತಮ್ಮ ಏನೂ ಮಾಡದೆ ಸುಮ್ಮನೆ ಮನೆಯಲ್ಲಿ ಕುಳಿತುಕೊಂಡಿದ್ದಾನೆ ಅನ್ನಿಸುತ್ತಿದೆಯೇ? ಇಷ್ಟು ವರ್ಷದ ಪ್ರಯತ್ನ…, ಪ್ರತಿ ಪ್ರಯತ್ನವೂ ಸೋಲು…, ಆದರೂ ಬಿಡದ ಛಲ! ನಿಮಗೆ ಗೊತ್ತೇ…? ಗುರಿ ನಿರ್ಧರಿಸಿದವನು ನಾನು! ಅದನ್ನು ಸೇರಬೇಕಾದವನೂ ನಾನು! ಆ ಗುರಿ ಸೇರಲು ನಾನು ಪಡುತ್ತಿರುವ ಪ್ರಯತ್ನ- ನಿಮಗೆ ವ್ಯರ್ಥ ಪ್ರಯತ್ನ ಅನ್ನಿಸಬಹುದು! ಯಾಕೆಂದರೆ, ಆ ಗುರಿ ಸಾಧಿಸಲು ನಿಮ್ಮಿಂದ ಸಾಧ್ಯವಿಲ್ಲ! ನೀವು ನಿಮ್ಮ ದೃಷ್ಟಿಕೋನದಲ್ಲಿ ಮಾತ್ರ ಯೋಚಿಸುತ್ತೀರಿ! ಗೊತ್ತೇ…? ನನ್ನೊಳಗಿನ ಅಗ್ನಿಪರ್ವತ? ಪ್ರತಿಭಾರಿ ಏಟು ತಿಂದಾಗಲೂ, ಅಪಮಾನಿತನಾದಾಗಲೂ, ಎಷ್ಟು ದಿನವೆಂದು ತಿಳಿಯದೆಯೇ ಕಾಯಬೇಕಾಗಿ ಬಂದಾಗಲೂ, ನಿಮಗೆ ನನ್ನಲ್ಲಿನ ವ್ಯತ್ಯಾಸ ತಿಳಿಯುವುದಿಲ್ಲ! ನಿಮಗೆ ಗೊತ್ತು…, ಸೊನ್ನೆಯಿಂದ ಶುರು ಮಾಡಿದವನು ನಿಮ್ಮ ತಮ್ಮ! ಇದುವರೆಗೆ ಗುರಿ ಸಾಧನಗೆ ಎಷ್ಟು ಜನರನ್ನು ಭೇಟಿಯಾಗಿರಬಹುದೆಂಬ ಊಹೆಯಾದರೂ ನಿಮಗಿದೆಯೇ? ಒಂದು ಅನುಭವಕ್ಕಾಗಿ ಎಷ್ಟೊಂದುಕಡೆ ಅಲೆದಿದ್ದೇನೆಂದು ತಿಳಿದಿದೆಯೇ? ಎಷ್ಟು ಜನ ಹೀನಾಯವಾಗಿ ಅಪಮಾನಿಸಿದ್ದಾರೆಂದು ತಿಳಿದಿದೆಯೇ? ಎಷ್ಟು ಜನ ಸಮಯವನ್ನು ಕೊಂದು, ಕೆಲಸ ಮಾಡಿಸಿಕೊಂಡು, ದುಡ್ಡುಕೊಡದೆ ಮೋಸ ಮಾಡಿದ್ದಾರೆಂದು ಗೊತ್ತೇ? ಅಲ್ಲದೆ ನೀವೂ ಅಮ್ಮನೂ ಜೊತೆಯವರೂ ಅದೆಷ್ಟು ಸಾರಿ ಹಿಂದಕ್ಕೆ ಎಳೆದಿದ್ದೀರಿ ಗೊತ್ತೆ? ಆಗಲೂ ನಿಮ್ಮೊಂದಿಗೆ ಮುನಿಸಿಕೊಂಡವನಲ್ಲ- ನಿಮ್ಮನ್ನು ತಪ್ಪೆಂದು ಹೇಳಿದವನಲ್ಲ!
ಈಗ…, ಅಪಾರವಾದ ಅನುಭಗಳಿಂದ…, ಗುರಿಯನ್ನು ಸೇರುತ್ತಿರುವ ಈ ಸಮಯದಲ್ಲಿಯೂ…, ಶುರುವಾಗಲಿರುವ ಕೋಟಿಗಳ ವ್ಯವಹಾರದ ಹಿಂದೆ ಬಿದ್ದಿರುವ ಈ ಸಮಯದಲ್ಲಿಯೂ ನಿಮಗಾಗಿ ಸಮಯವನ್ನು ಕೊಡುತ್ತಿರುವುದು ಯಾಕೆ ಹೇಳಿ? ಕೆಲವೊಮ್ಮೆ- ಅತಿ ಮುಖ್ಯವಾದ ಮೀಟಿಂಗ್‌ಗಳನ್ನು ಬಿಟ್ಟು…, ನಿಮಗೆ ಬೇಕಾದ ಸಮಯಕ್ಕೆ ಸಮಯವನ್ನು ಹೊಂದಿಸಿಕೊಳ್ಳುವುದು ಯಾಕೆ ಹೇಳಿ? ಹೌದು…, ನನ್ನ ಮೀಟಿಂಗ್‌ಗಳನ್ನು ಬಿಟ್ಟು ನಿಮಗೆ ಸಮಯವನ್ನು ಕೊಡುತ್ತಿದ್ದೇನೆನ್ನುವ ಅರಿವು ನಿಮಗಿಲ್ಲ! ನೀವು ಕರೆದಾಗಲೆಲ್ಲಾ ಬರುವುದು ಸುಮ್ಮನೆ ಕುಳಿತಿರುವುದರಿಂದ ಅನ್ನುವ ನಿಮ್ಮ ನಂಬಿಕೆ ಹುಟ್ಟಿದ್ದು…, ಯಾವ ಒಂದು ಸಂದರ್ಭದಲ್ಲಿಯೂ ನಿಮ್ಮನ್ನು ನಾನು ಇಗ್ನೋರ್ ಮಾಡದೇ ಇದ್ದುದ್ದರಿಂದ!
ಅಕ್ಕಾ…, ನಿಮ್ಮ ತಮ್ಮ ಪ್ರಪಂಚಕ್ಕೆ ಕೊಡುತ್ತಿರುವ ಇಂಪ್ರೆಷನ್ ಏನುಗೊತ್ತಾ…? ನನಗೆ ಅಕ್ಕಂದಿರಿದ್ದಾರೆ…, ಅಮ್ಮನಿದ್ದಾರೆ…, ಇವರಿಲ್ಲದಿದ್ದರೆ ನಾನೀಗ ಅಲೆಮಾರಿಯಾಗುತ್ತಿದ್ದೆ- ಅಂತ! ಅದು ನಿಜ! ಯಾವಾಗಲೋ ಏನೋ ಒಂದು ಮಾತು ಆಡಿದೆನೆಂದು ನಿಮಗೆ ಕೊಟ್ಟಿರುವ ಮಹತ್ವಕ್ಕೆ ಚ್ಯುತಿ ತರಬೇಡಿ! ತಮ್ಮನ ಗುರಿ ನಿಮ್ಮ ಗುರಿಯೂ ಆಗಲಿ! ಅವ ಸುಮ್ಮನೆ ಕುಳಿತುಕೊಳ್ಳುವ ಸೋಮಾರಿಯೋ, ವ್ಯಕ್ತಿತ್ವವಿಲ್ಲದ ಹಾಳು ಜೀವವೋ ಅಲ್ಲ! ಭಾವನೆಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡಿರುವ ಪಕ್ಕಾ ಪ್ರಾಕ್ಟಿಕಲ್ ಮನುಷ್ಯ! ಇಂಟರ್‌ನ್ಯಾಷನಲ್ ಲೆವಲ್ಲಿಗೆ ಬೆಳೆಯಬೇಕಾದ- ಬೆಳೆಯುವ ಸಮರ್ಥ!” ಎಂದು ನಿಲ್ಲಿಸಿದೆ.
ನನ್ನ ಅಕ್ಕನಲ್ಲವಾ…! ಒಂದೇ ಸಾರಿಗೆ ಬಿಗುಮಾನ ಬಿಟ್ಟು ಇಳಿದುಬರುವುದಿಲ್ಲ! ನಿಧಾನಕ್ಕೆ…, ಮೊದಲಿಗಿಂತ ಹೆಚ್ಚಿಗೆ ಅಂಟಿಕೊಳ್ಳುತ್ತಾರೆ!
೨
ಗುರಿಬೇರೆ, ಜೀವನೋದ್ದೇಶ ಬೇರೆ!
ಗುರಿ ನಾವೇ ನಿರ್ಧರಿಸುವುದು! ಜೀವನೋದ್ದೇಶ- ಅಂದರೆ ಹುಟ್ಟಿನ ರಹಸ್ಯ ದೈವ ನಿಯಾಮಕ!
ನನ್ನ ಜೀವನೋದ್ದೇಶವೇನು…?
ಧರ್ಮ…!
ಧರ್ಮ- ನಾವು ಮಾಡಲೇ ಬೇಕಾದ ಕರ್ಮ!
ಕರ್ಮ- ಅಯ್ಯೋ ನನ್ನ ಕರ್ಮವಲ್ಲ- ಕರ್ತವ್ಯ!
ಹಿಂದು- ಕೋಮುವಾದಿ! ನಾನು ಹಿಂದೂ- ಆದರೆ ಹಿಂದುತ್ವ ವಿರೋಧಿ! ಹಿಂದೂಗಳು ಕ್ರೂರಿಗಳು, ದಲಿತರನ್ನು ತುಳಿಯುವವರು…! ಹಿಂದೂಗಳಿಂದಾಗಿ ಅಲ್ಪಸಂಖ್ಯಾತರ ಜೀವನ ಆಪತ್ತಿನಲ್ಲಿದೆ…!
ಇತ್ತೀಚಿನ ದಿನಗಳಲ್ಲಿ ಹಿಂದೂವಿರೋಧಿ ಅಲೆಯೊಂದು ತಲೆಯೆತ್ತಿದೆ!
ಇದು ಯಾರಬಗ್ಗೆ ಯಾರ ಆರೋಪ- ವಿರೋಧ?
ಎರಡು ಸಾವಿರದ ಹದಿನೆಂಟನೇ ಇಸವಿಯಲ್ಲಿ- ಕರ್ನಾಟಕದಲ್ಲಿ ಒಂದು ಸಮೀಕ್ಷೆ ನಡೆಯಿತು!
ಜಾತಿವಾರು ಜನಸಂಖ್ಯೆಯ ವಿಂಗಡಣೆ…, ಅಂದರೆ ಸರ್ವೇ!
ಅದರ ಪ್ರಕಾರ…,
ಪರಿಶಿಷ್ಟ ಜಾತಿಯವರ ಸಂಖ್ಯೆ ಒಂದುಕೋಟಿ ಹತ್ತು ಲಕ್ಷ! ಪರಿಶಿಷ್ಟ ಪಂಗಡದವರ ಸಂಖ್ಯೆ ನಲವತ್ತೊಂದು ಲಕ್ಷ! ಮುಸ್ಲೀಮರ ಸಂಖ್ಯೆ ಎಪ್ಪತ್ತು ಲಕ್ಷ! ಒಕ್ಕಲಿಗರು ಅರವತ್ತು ಲಕ್ಷ! ಕುರುಬರು ನಲವತ್ತೈದು ಲಕ್ಷ! ಈಡಿಗ ಹದಿನೈದು ಲಕ್ಷ!ವಿಶ್ವಕರ್ಮ ಹದಿನೈದು ಲಕ್ಷ! ಬೆಸ್ತ ಹದಿನೈದು ಲಕ್ಷ! ಬ್ರಾಹ್ಮಣ ಹದಿನಾಲ್ಕು ಲಕ್ಷ! ಗೊಲ್ಲ ಅಥವಾ ಯಾದವರು ಹತ್ತು ಲಕ್ಷ!ಮಡಿವಾಳ ಸಮಾಜ ಆರು ಲಕ್ಷ! ಅರೆ ಅಲೆಮಾರಿ ಆರು ಲಕ್ಷ! ಕುಂಬಾರರು ಐದು ಲಕ್ಷ! ಸವಿತಾ ಸಮಾಜ ಐದು ಲಕ್ಷ!
ಇದನ್ನು ನೋಡಿದ ನಂತರ…, ನನ್ನಲ್ಲೊಂದು ತುಮುಲ ಶುರುವಾಗಿದೆ! ಹಲವಾರು ಪ್ರಶ್ನೆಗಳು ಎದ್ದಿದೆ!
ನನ್ನ ಜಾತಿ ಯಾವುದೆಂದು ನನಗೆ ತಿಳಿಯದು- ಎಂದಿರುವಾಗ…,
ಹಿಂದೂಗಳು ಅಂದರೆ ಯಾರು? ಹಿಂದೂಗಳಲ್ಲ ಅನ್ನುವವರು ಯಾರು?
ಒಂದೊಂದು ಜಾತಿಯವರೂ ನಾವು ಸಪರೇಟ್ ಅಂದಮೇಲೆ ಇಲ್ಲಿ…,
ಬಹುಸಂಖ್ಯಾತರೆಂದರೆ ಯಾರು? ಅಲ್ಪಸಂಖ್ಯಾತರು ಯಾರು?
ಇಲ್ಲಿರುವವರೆಲ್ಲಾ ಒಟ್ಟುಗೂಡಿ ನಾವು ಭಾರತೀಯರು ಅನ್ನುವುದಾದರೆ…,
ಕೋಮುವಾದ ಅಂದರೇನು? ಜಾತ್ಯಾತೀತತೆ ಅಂದರೇನು?
ನನ್ನ ಅರಿವಿನಂತೆ ಹಿಂದೂ ಅನ್ನುವ ಪದವನ್ನು ಎರಡುರೀತಿಯಲ್ಲಿ ವ್ಯಾಖ್ಯಾನಿಸಲಾಗುತ್ತಿದೆ!
ಒಂದು:-
ಭಾರತವನ್ನು ಆಕ್ರಮಿಸಿದ ಪರ್ಷಿಯಾದ ರಾಜನೊಬ್ಬ…, ಸಿಂಧೂನದಿ ಮೂಲವಾಗಿರುವವರು ಹಿಂದೂಗಳು ಎಂದು ಕರೆದನಂತೆ! ಅಂದರೆ ಸಿಂಧೂವನ್ನು ಆತ ಉಚ್ಛರಿಸಿದ ರೀತಿ ಹಿಂದೂ ಎಂದು. ಅಲ್‌ಹಿಂದ್!
ಭಾರತೀಯರಿಗೆ ಪ್ರತ್ಯೇಕ ಮತವಿಲ್ಲ! ಸಾವಿರಾರು ಮತಗಳ ಒಟ್ಟು ಮೊತ್ತ ಭಾರತ! ಆ ಭಾರತದಲ್ಲಿ ನೆಲಸಿರುವವರೆಲ್ಲಾ ಹಿಂದೂಗಳು ಎಂದು ಅರ್ಥ! ಭಾರತದ ಮೂಲವಲ್ಲ ಅನ್ನುವುದರ ಹೊರತು…, ಕ್ರಿಶ್ಚಿಯನ್ ಮತ್ತು ಇಸ್ಲಾಂ ಕೂಡ ಒಂದೊಂದು ಮತಗಳು- ಭಾರತದ ಸಾವಿರಾರು ಮತಗಳಲ್ಲಿ ಇವುಗಳೂ ಸೇರುತ್ತವೆಯೇ ಹೊರತು ಪೂರ್ತಿ ಭಾರತದ ಸಂಸ್ಕಾರವನ್ನು ಕೇವಲ ಈ ಮತಗಳೊಂದಿಗೆ ಹೋಲಿಸಲಾಗದು!
ಎರಡು:-
ಹಿಂದೂ ಅನ್ನುವ ಪದಕ್ಕೆ ಹಳೆಯ, ಸನಾತನ ಅನ್ನುವ ಅರ್ಥವಿದೆಯಂತೆ! ಹಾಗಿದ್ದರೆ ಹಿಂದೂ ಧರ್ಮ ಅಂದರೆ ಏನು?
ಹಿಂದೂಗಳ ಒಟ್ಟು ಧರ್ಮ! ಭಾರತದಲ್ಲಿ ನೆಲೆಸಿರುವವರ ಒಟ್ಟು ಧರ್ಮವನ್ನು ಸನಾತನ ಧರ್ಮ ಅಥವಾ ಹಿಂದೂ ಧರ್ಮ ಎನ್ನುತ್ತಾರೆಯೇ ಹೊರತು ಒಬ್ಬ ವ್ಯಕ್ತಿಯಿಂದ ರೂಪುಗೊಂಡ ಮತವನ್ನಲ್ಲ!
ಹಾಗಿದ್ದರೆ ಧರ್ಮ ಎಂದರೇನು?
ಸಂದರ್ಭಕ್ಕೆ ಅನುಗುಣವಾದ ಮಾನವನ ಕರ್ತವ್ಯಗಳಿಗೆ ಹೆಸರು ಧರ್ಮ…,
ಪಿತೃಧರ್ಮ, ಮಾತೃಧರ್ಮ, ಬ್ರಾತೃಧರ್ಮ, ಪುತ್ರಧರ್ಮ, ಮಿತ್ರಧರ್ಮ, ರಾಷ್ಟ್ರಧರ್ಮ, ಒಟ್ಟಿನಲ್ಲಿ ಮನುಷ್ಯನಾದವನು ಆಚರಿಸಲೇಬೇಕಾದ ಒಟ್ಟುಧರ್ಮ- ಮನುಷ್ಯಧರ್ಮವನ್ನು- ಧರ್ಮ ಅನ್ನುತ್ತಾರೆಯೇ ಹೊರತು ಮತವನ್ನಲ್ಲ!
ಭಾರತದಲ್ಲಿ ನೆಲೆಸಿದ್ದು, ನಾನು ಹಿಂದೂವಲ್ಲ- ಎಂದು ಹೇಳುವುದರ ಅರ್ಥ ತಿಳಿಯುವವರೆಗೆ…,
ಭಾರತದಲ್ಲಿ ಹೆಂಗಸರು ನೀರಿಗೆ ಬಟ್ಟೆಯನ್ನು ಅದ್ದಿ ಕಲ್ಲಿಗೆ ಬಡಿದು ಕಲ್ಲನ್ನು ಒಡೆಯುತ್ತಾರೆ ಅನ್ನುವಂತೆ ಇತಿಹಾಸವನ್ನು ಬರೆಯುವ ಐರೋಪ್ಯರು…, ಭಾರತದ ಅಪಾರ ಜ್ಞಾನ- ವಿಜ್ಞಾನ- ವಿಧ್ವತ್ತನ್ನು ಕಂಡು…, ಪ್ರಪಂಚದಲ್ಲೆಲ್ಲೂ ತಮಗಿಂತ ಬುದ್ಧಿವಂತರಿಲ್ಲ ಎಂದು ಬಿಂಬಿಸಲು…, ಆರ್ಯರು ಯೂರೋಪಿನಿಂದ ಬಂದವರೆಂದು ಬರೆದ ಇತಿಹಾಸವನ್ನು ನಂಬುವ ಗುಲಾಮರಿರುವಷ್ಟು ಕಾಲ…,
ಭಾರತದಲ್ಲಿ ಒಗ್ಗಟ್ಟು ಸಾಧ್ಯವಿಲ್ಲ!
ಸುಮಾರು ಸಾವಿರದ ನಾನೂರು ವರ್ಷಗಳ ಹಿಂದೆ, ಪುಸ್ತಕವೊಂದನ್ನು ಬರೆದ ವ್ಯಕ್ತಿ, ನಾನು ದೇವರ ವಕ್ತಾರನೆಂದು ಹೇಳಿಕೊಂಡ!
ಸುಮಾರು ಎರಡುಸಾವಿರ ವರ್ಷಗಳ ಹಿಂದೆ, ತಾನೇ ಸ್ವತಃ ಪುಸ್ತಕವನ್ನು ಬರೆಯದಿದ್ದರೂ…, ತನ್ನೊಡನಿದ್ದವರು ಬರೆಯುವಂತೆ ಮಾಡಿದ ವ್ಯಕ್ತಿ, ತಾನು ದೇವರ ಮಗನೆಂದು ಹೇಳಿಕೊಂಡ!
ಕಾಲಾತೀತ ವರ್ಷಗಳ ಹಿಂದೆ, ಯಾರ ತತ್ತ್ವಗಳ ಹೊರತು ಭಾರತದಲ್ಲಿ ಪುಸ್ತಕಗಳೇ ಇಲ್ಲವೋ ಆತ…, ತಾನೇ ದೇವರೆಂದು ಹೇಳಿಕೊಂಡ! ಹಾಗೆ ಹೇಳಿಕೊಂಡವನು ಪ್ರತಿ ಯುಗದಲ್ಲೂ ಅವತಾರವೆತ್ತುವುದಿಲ್ಲ! ಧರ್ಮ ನಶಿಸುತ್ತಿದೆ ಅನ್ನಿಸಿದಾಗ…, ಧರ್ಮವೇ ಧರ್ಮವನ್ನು ರಕ್ಷಿಸಿಕೊಳ್ಳುತ್ತದೆ…! ಅದು…, ನಮ್ಮೊಳಗೆ ಉದ್ಭವಿಸುವ ಒಂದದ್ಭುತ ಭಾವ ಸಂಚಲನವಾದರೂ ಆಗಬಹುದು! ಆ ಸಂಚಲನವನ್ನು ಅರಿತು ಅದಕ್ಕನುಗುಣವಾಗಿ ನಡೆದುಕೊಂಡರೆ…, ಅದೇ ನಮ್ಮ ಧರ್ಮ! ಇಲ್ಲ…, ಅರಿತಿಲ್ಲ…, ಅರಿತರೂ ಧಿಕ್ಕರಿಸಿದೆವಾದರೆ…, ಹಲವಾರು ಕಷ್ಟ-ನಷ್ಟಗಳ ರೂಪದಲ್ಲಿ ಸಂದರ್ಭಗಳು ತಾನಾಗಿ ಒದಗಿ- ನಮ್ಮನ್ನು ಕರ್ತವ್ಯಕ್ಕೆ ತಳ್ಳುತ್ತದೆ! ಒಟ್ಟಿನಲ್ಲಿ ಫಲಿತಾಂಶ- ಧರ್ಮದ ರಕ್ಷಣೆಯೇ ಆಗಿರುತ್ತದೆ!
ನನ್ನ ಧರ್ಮದ ಅರಿವಿದ್ದೂ, ನನ್ನ ಮುಂದೆಯೇ ಪದೇ ಪದೇ ಸನಾತನ ಧರ್ಮವನ್ನು ಸನಾತನ ಧರ್ಮೀಯರೇ ಕೀಳಾಗಿಸುತ್ತಿದ್ದರೂ, ನಾನು ಕರ್ತವ್ಯವಿಮುಖನಾಗಲು ಕಾರಣ…,
೩
ಅದೇನು ಮಾಯವೋ ಏನೋ…, ಚಿಕ್ಕಂದಿನಿಂದಲೂ…, ದೇವಿ ಅನ್ನುವ ಶಬ್ದ ಅಥವಾ ಯಾವುದೇ ದೇವಿಯ ನಾಮ ಕೇಳಿದರೆ ಸಾಕು ಕಿಬ್ಬೊಟ್ಟೆಯಿಂದ ಒಂದು ಪುಳಕ ಮೈಪೂರ್ತಿ ಹರಡುತ್ತದೆ. ಅದೊಂದು ಅನಿರ್ವಚನೀಯ ಆನಂದ. ದೇವಿ ಅನ್ನುವುದು ದೈವ ಸಂಕಲ್ಪದ ಸ್ತ್ರೀ ರೂಪ! ಸ್ತ್ರೀ ಅಂದರೆ ಹೆಣ್ಣು! ಪ್ರತೀಹೆಣ್ಣೂ ದೇವಿಯ ಪ್ರತಿಬಿಂಬ! ಹೆಣ್ಣೆಂದರೆ ನನಗೆ ಪ್ರಾಣ! ದೇವಿ- ನನಗೆ ಪ್ರೇಮದ ಸಂಕೇತ!
ಯಾರಿಗೆ ಬೇಡ ಅಮ್ಮಂದಿರ ಪ್ರೇಮ?
ಯಾರಿಗೆ ಬೇಡ ಸಹೋದರಿಯರ ಪ್ರೇಮ?
ಯಾರಿಗೆ ಬೇಡ ಪುತ್ರಿಯರ ಪ್ರೇಮ?
ಯಾರಿಗೆ ಬೇಡ ಪ್ರೇಯಸಿಯರ ಪ್ರೇಮ…?!
ನೆನಪುದಿಸುತ್ತಿದ್ದ ಕಾಲದಲ್ಲಿ ಕೇಳಿದ ಕಥೆಯೊಂದು- ಹೆಣ್ಣಿನೊಳಗೆ ನನ್ನ ಪ್ರೇಮದ ಹುಡುಕಾಟಕ್ಕೆ ಕಾರಣವಾಯಿತು! ಆ ಕಥೆಗೂ ನನ್ನ ಪ್ರೇಮ ಸಂಕಲ್ಪಕ್ಕೂ ಏನು ಸಂಬಂಧವೆಂದು ಕೇಳಿದರೆ…, ತಿಳಿಯದು! ಒಟ್ಟಿನಲ್ಲಿ ನನ್ನಮೇಲೆ ಅತಿ ಪ್ರಭಾವ ಬೀರಿದ ಕಥೆ ಅದು! ಪ್ರಭಾವಬೀರಲು ಕಾರಣ- ಅನಿರುದ್ಧನೆನ್ನುವ ನನ್ನ ಹೆಸರೂ ಇರಬಹದು! ಚಿತ್ರವಿಚಿತ್ರ ಗೊಂದಲ ಹುಟ್ಟಿಸುವ ಕಥೆ! ನನಗಿಂತ ಹಿರಿಯ ಹೆಣ್ಣಿನಲ್ಲಿ ನನಗುಂಟಾಗುವ ಪ್ರೇಮಕ್ಕೆ- ನಾ ಕಂಡುಕೊಂಡ ಕಾರಣ- ನಾ ಕಟ್ಟಿಕೊಂಡ ಕಥೆ!
ಸತಿದೇವಿಯ ತಿರೋಧಾನದ ನಂತರ…, ತಪಸ್ಸಿನಲ್ಲಿ ಮುಳುಗಿದ ಶಿವನ ತಪಸ್ಸನ್ನು ಕೆಡಿಸಬೇಕೆಂದು ದೇವತೆಗಳು ತೀರ್ಮಾನಿಸಿದರು!
ಸತಿಯ ಮರುಹುಟ್ಟಾದ ಪಾರ್ವತಿಯಲ್ಲಿ ಪ್ರೇಮಮೂಡಲೆಂಬ ಉದ್ದೇಶವೇ ಆದರೂ…, ಯಾರಿಗೆ- ಅನ್ನುವ ವಿವೇಚನೆಯಿಲ್ಲದೆ ಬಾಣ ಪ್ರಯೋಗವನ್ನು ಮಾಡಿ…, ಶಿವನನ್ನು ರುದ್ರನನ್ನಾಗಿ ಮಾಡಿದ ಮನ್ಮಥ- ಕಾಮ, ಸುಟ್ಟು ಕರಕಲಾದ!
ನನ್ನ ಗತಿಯೇನೆಂದು ದುಃಖಿಸುತ್ತಿದ್ದ ರತಿದೇವಿಗೆ…, ಮನ್ಮಥನು ದ್ವಾಪರಾಯುಗದಲ್ಲಿ ಕೃಷ್ಣನ ಮಗನಾಗಿ ಹುಟ್ಟುತ್ತಾನೆ…, ನೀನು ಮಾಯಾವತಿಯಾಗಿ ಕಾಯುತ್ತಿರು ಎಂದು ಹೇಳಿದರು ದೇವತೆಗಳು!
ಇಲ್ಲಿಯೇ ನನಗೆ ಭಯಂಕರವಾದ ಗೊಂದಲ!
ಹೆಸರಿನ ಕಾರಣವಾಗಿ ನಾನು ಕೆಲವಮೊಮ್ಮೆ ದ್ವಾಪರಯುಗದ ಅನಿರುದ್ಧನೇ ಆಗಿ ಹೋಗುತ್ತೇನೆ!
ನನ್ನ ತಾಯಿ ಯಾರು?
ರುಕ್ಮಾವತಿ?
ಮಾಯಾವತಿ?
ಇಬ್ಬರೂ ಪ್ರಧ್ಯುಮ್ನ- ಕಾಮ-ನ ಹೆಂಡತಿಯರು!
ಬೇರೆಬೇರೆ ಮೂಲಗಳಲ್ಲಿ ಇಬ್ಬರೂ ರತಿಯ ಅವತಾರಗಳೇ!
ರುಕ್ಮಾವತಿಯ ವಿಷಯದಲ್ಲಿ ಗೊಂದಲವಿಲ್ಲ- ಅವಳು ರುಕ್ಮಿಣಿಯ ಅಣ್ಣ ರುಕ್ಮಿಯ ಮಗಳು!
ರತಿದೇವಿಯೇ ರುಕ್ಮಿಯ ಮಗಳಾಗಿ ಹುಟ್ಟಿದಳು ಅಂದರೆ ಕಥೆ ಮುಗಿಯಿತು!
ಮಾವನ ಮಗಳನ್ನು ಮದುವೆಯಾದ ಪ್ರಧ್ಯುಮ್ನ! ಅವರಿಬ್ಬರ ಮಗ ಅನಿರುದ್ಧ!
ಇಷ್ಟು ಹೇಳಿದರೆ ಏನು ಸ್ವಾರಸ್ಯ?
ಮಾಯಾವತಿ! ಮಾಯಾಪ್ರೇಮ! ಅದೃಶ್ಯರೂಪ-ದ ಪ್ರೇಮ…,
ಇವಳಾರು?
ಇವಳೋ ಅನಿರುದ್ಧನ ತಾಯಿ? ಅಥವಾ ಕಾಮನ ಹೆಂಡತಿ ರತಿ ಅನ್ನುವ 'ಭಾವ' ಮಾತ್ರವೋ?
ಕಾಮನ ಮರುಹುಟ್ಟಿಗೆ ಕಾಯುತ್ತಿದ್ದ ರತಿದೇವಿ…, ಅವಳ ಮಾನಸಿಕ ಅಸ್ವಸ್ಥತೆಯಿಂದಾಗಿ…, ನಾರದನನ್ನು ಅಗೌರವಿಸಿದಳಂತೆ! ಅಂದರೆ…, ಆತನಿಗೆ ಗೌರವ ತೋರಲಿಲ್ಲ- ಕಡೆಗಣಿಸಿದಳು- ಎಂದು ಅರ್ಥ!
ನಾರದರಾದರೋ…, ಕೆಡುಕಿನ ದಾರಿಯಲ್ಲಿ ಒಳಿತು ಮಾಡುವ ಮಹಾಚತುರ- ಬ್ರಹ್ಮಪುತ್ರ!
ಕೃಷ್ಣನಿಗೆ ಹುಟ್ಟುವ ಮಗನಿಂದ ಸಂಬರಾಸುರನ ವಧೆ ಅನ್ನುವ ವಿಧಿನಿಯಮವನ್ನು ಅರಿತಿರುವ ತ್ರಿಕಾಲ ಜ್ಞಾನಿ!
ತನಗೆ ತೋರಿದ ಅಗೌರವದ ಫಲವಾಗಿ…, ಸಂಬರಾಸುರ ಮಾಯಾವತಿಯನ್ನು ಅಪಹರಿಸುವಂತೆ ಮಾಡಿದ!
ಕೇವಲ ರಾಕ್ಷಸನ ಹೆಂಡತಿಯಾಗಬೇಕೆ ಮಾಯಾವತಿ??
ಇಲ್ಲಿಯೇ ಪಾರ್ವತೀದೇವಿಯ ಪ್ರವೇಶ!
ತನಗಾಗಿ ಗಂಡನನ್ನು ಕಳೆದುಕೊಂಡವಳು ರತಿದೇವಿ! ಅವಳ ಮಾನವನ್ನು ಕಾಪಾಡಬೇಕಾದ ಹೊಣೆ ತನ್ನದಲ್ಲವೇ?
ಮಾಯಾವತಿಯ ಇಚ್ಛೆಗೆ ವಿರುದ್ಧವಾಗಿ ಸಂಬರಾಸುರನೇನಾದರೂ ಅವಳನ್ನು ಕಾಮಿಸಿದರೆ…, ಕಾಮಿಸುವುದಿರಲಿ ಕಿರುಬೆರಳಿನಿಂದ ಮುಟ್ಟಿದರೂ ಸಾಕು- ಸುಟ್ಟು ಕರಕಲಾಗುತ್ತಾನೆ- ಅನ್ನುವ ಶಾಪವನ್ನು ಕೊಟ್ಟಳು!
ಒಬ್ಬರ ಶಾಪ ಮತ್ತೊಬ್ಬರಿಗೆ ವರ!
ಕಾಲಗಳುರುಳಿತು!
ಕೃಷ್ಣನ ಮಗನಿಂದ ತನ್ನ ಸಾವು ಎಂದರಿತ ಸಂಬರಾಸುರ…, ಕೃಷ್ಣ- ರುಕ್ಮಿಣಿಯರಿಗೆ ಹುಟ್ಟಿದ ಮಗುವನ್ನು- ಪ್ರಧ್ಯುಮ್ನನನ್ನು- ಅಪಹರಿಸಿದ! ಅಪಹರಿಸಿ- ಕಡಲಿಗೆ ಎಸೆದ!
ಮೀನೊಂದು ಮಗುವನ್ನು ನುಂಗಿತು!
ಬೆಸ್ತನೊಬ್ಬನ ಬಲೆಗೆ ಬಿದ್ದ ಮೀನು- ಸಂಬರಾಸುರನ ಅರಮನೆಯನ್ನೇ ಸೇರಿತು!
ಮೀನನ್ನು ಕುಯ್ದ ಮಾಯಾವತಿ ಕಂಡದ್ದೇನು?
ಮೀನಿನ ಹೊಟ್ಟೆಯಲ್ಲಿ ಅಸಾಮಾನ್ಯ ಕಳೆಯ ಮಗು!
ಬೆಳೆಸಿದಳು!
ಮಗನಂತೆ ಬೆಳೆಸಿದರೂ…, ಬರುಬರುತ್ತಾ ಆತ ತನ್ನ ಮದನನೆಂದರಿತು ಪುಳಕಗೊಂಡಳು!
ಅವಳೇ ಮಾಯೆ!
ಮಾಯಾವೃತನಾಗಿದ್ದ ಪ್ರದ್ಯುಮ್ನನ ಮಾಯೆಯನ್ನು ಸರಿಸಿ ನಿಜದರಿವನ್ನು ಕೊಟ್ಟಳು- ಅವನ ಜನನದ ಉದ್ದೇಶವನ್ನು ತಿಳಿಸಿದಳು!
ಅಲ್ಲಿಂದ ಸಂಬರಾಸುರನನ್ನು ಕೊಂದ ಪ್ರಧ್ಯುಮ್ನ 'ಹೆಂಡತಿಯೊಂದಿಗೆ' ದ್ವಾರಕೆಯನ್ನು ಸೇರಿದ!
ರುಕ್ಮಾದೇವಿಯೊಂದಿಗೆ ಪ್ರಧ್ಯುಮ್ನನ ಮದುವೆಯಾದಾಗ…, ಭಾವವಾಗಿ ರುಕ್ಮಾದೇವಿಯಲ್ಲಿ ಬೆರೆತು ಹೋದಳು ಮಾಯಾವತಿ!
ಪ್ರಧ್ಯುಮ್ನನ ಹೆಂಡತಿ ಗಂಡನಿಗಿಂತಲೂ ಹೇಗೆ ಹಿರಿಯಳೋ…, ಹಾಗೆ…, ಮಾಯೆಯಿಂದ ತನ್ನನ್ನು ಅಪಹರಿಸಿ ಗಂಡನನ್ನಾಗಿ ಮಾಡಿಕೊಂಡ ಅನಿರುದ್ಧನ ಹೆಂಡತಿ ಉಷೆಯೂ ಅವನಿಗಿಂತ ಹಿರಿಯೆ- ಎಂದು ಹೇಳಲು ಇಷ್ಟುದೊಡ್ಡ ಕಥೆಯನ್ನು ಹೇಳಬೇಕಾಯಿತು!
ಜೊತೆಗೆ…,
ಕೆಲವರೊಂದಿಗಿನ ನಮ್ಮ ಸಂಬಂಧಗಳಿಗೆ ಕಾರಣ…, ಪೂರ್ವಜನ್ಮದ ಸುಕೃತವೂ ಇರಬಹುದೆಂಬ ನನ್ನ ನಂಬಿಕೆಯನ್ನು ಬಿಂಬಿಸಲು!
ಇಲ್ಲದಿದ್ದರೆ ಯಾಕೆ ಹೆತ್ತಮ್ಮನಲ್ಲದ ಹೆಣ್ಣೂ ಅಮ್ಮನಂತೆ ಅನುಭಾವಿಸಲ್ಪಡುವುದು?
ಇಲ್ಲದಿದ್ದರೆ ಯಾಕೆ ಒಡಹುಟ್ಟಿದವಳಲ್ಲದವಳೂ ಸಹೋದರಿಯಂತೆಯೇ ಭಾವಿಸಲ್ಪಡುವುದು?
ಇಲ್ಲದಿದ್ದರೆ ಯಾಕೆ ನಮಗೆ ಹುಟ್ಟದ ಮಗುವೂ ನಮಗೇ ಹುಟ್ಟಿದ ಮಗಳಂತೆ ಭಾಸವಾಗುವುದು?
ಇಲ್ಲದಿದ್ದರೆ ಯಾಕೆ ವಯಸ್ಸು, ಮನಸ್ಸು, ಹೃದಯ, ಭಾವಾನುಭೂತಿಗಳಲ್ಲಿ ಸಾಮ್ಯತೆ ಇರುವವರಲ್ಲಿ ಮಾತ್ರ ಪ್ರೇಮ ಹುಟ್ಟುವುದು?
ಹಾಗೆ ಹುಡುಕತೊಡಗಿದಾಗ ಸಿಕ್ಕಿದವಳೇ…, ಅವಳು…, ನನಗಿಂತ ಹಿರಿಯೆ- ನನ್ನದೆಂದು ನಾನು ನಂಬಿದ ಉಷೆ!
ಪಾಪ ಅವಳಿಗೇನು ಗೊತ್ತು ಈ ನನ್ನ ಭ್ರಮೆಯಿಂದ ಹುಟ್ಟಿಕೊಂಡ ಪ್ರೇಮ ಅವಳೆಂದು?
ಭ್ರಮೆ ಕಳಚಲು…, ವಾಸ್ತವಕ್ಕೆ ಬರಲು…, ಈ ಸಂದರ್ಭದ ಅಗತ್ಯವಿತ್ತು!
ಎಷ್ಟು ಸುಲಭದಲ್ಲಿ ಹೇಳಿದಳು!
“ಹೆಣ್ಣು ಅಂದರೆ ಪ್ರಾಣ ಅನ್ನುತ್ತೀಯ! ನನ್ನ ಸ್ಥಾನದಲ್ಲಿ ಯಾರೇ ಇದ್ದರೂ ನೀನು ಹೀಗೆಯೇ ಅಲ್ಲವಾ? ಅದು ನಾಟಕ ತಾನೆ?”
ನಾನೇನೂ ಹೇಳಲಿಲ್ಲ! ನಾಟಕವಾ? ಹೆಣ್ಣೆಂದರೆ ಪ್ರಾಣ ಅನ್ನುವುದು ನಾಟಕವಾ? ಪ್ರಪಂಚದ ಪ್ರತಿಯೊಂದರಮೇಲೆ ನನಗಿರುವ ಪ್ರೇಮ ನಿಜ ಎಂದಿರುವಲ್ಲಿ…, ಉಷೆ…, ಇವಳ ಮೇಲಿನ ಪ್ರೇಮ ಅದೆಷ್ಟು ಅಗಾಧವಾಗಿರಬೇಡ?
ಆದರೆ…, ಅವಳು ಕೊಟ್ಟ ಪೆಟ್ಟು…, ಅವಳೊಂದಿಗಿನ ನನ್ನ ಬದುಕಿನ ಮುಕ್ತಾಯ…,
ನನ್ನದೇ ಆದ ಪ್ರಪಂಚದ ಸೃಷ್ಟಿಗೆ- ನಾಂದಿ!
೪
ಈಗ ಅರ್ಥವಾಗುತ್ತಿದೆ…, ಇಷ್ಟುಕಾಲ ನನ್ನ ಗುರಿ ಯಾಕೆ ನೆರವೇರಲಿಲ್ಲವೆಂದು- ಹಣವಂತನಾಗಲಿಲ್ಲವೆಂದು!
ನನ್ನ ಧರ್ಮದ ಅರಿವಾಗಲು! ರಾಷ್ಟ್ರಧರ್ಮದ ಹಿಂದೆ ಬೀಳಲು!
ಇಷ್ಟರಲ್ಲಾಗಲೇ ನಾನು ದುಡ್ಡಿನ ಹಿಂದೆ ಬಿದ್ದಿದ್ದರೆ…, ಅದು ನನ್ನೊಬ್ಬನ ಸುಖ ಸಂತೋಷ ವಿಲಾಸಗಳಿಗೆ ಸೀಮಿತವಾಗುತ್ತಿತ್ತು ಹೊರತು ನನ್ನಿಂದ ನನ್ನ ದೇಶಕ್ಕೆ ಏನೊಂದೂ ಉಪಯೋಗವಾಗುತ್ತಿರಲಿಲ್ಲ!
ಈಗ…, ಹಣವನ್ನು ಸಂಪಾದಿಸಲೇ ಬೇಕೆಂಬ ಒತ್ತಡ ಹೇರಿದ ಸಣ್ಣ ಘಟನೆಯೊಂದು ನಡೆಯಿತು…, ಆ ಘಟನೆ…, ಉಷೆಯೊಬ್ಬಳಲ್ಲಿ ಕೇಂದ್ರೀಕೃತವಾಗಬಹುದಾಗಿದ್ದ ನನ್ನ ಪ್ರೇಮ ಸಂಪೂರ್ಣ ಪ್ರಪಂಚಕ್ಕೆ ಹರಡುವಲ್ಲಿ ಪ್ರಮುಖ ಪಾತ್ರ ವಹಿಸಿತು!
ಗೆಳೆಯನೊಂದಿಗೆ ವೃದ್ಧಾಶ್ರಮವೊಂದಕ್ಕೆ ಹೋದೆ. ಸ್ವಲ್ಪ ದುಡ್ಡು ಡೊನೇಷನ್ ಕೊಡಲು.
ಎಷ್ಟು ಜನ ವೃದ್ಧರು!
ಅದರಲ್ಲಿ…, ಮನೋಸ್ಥಿತಿ ಸರಿಯಿಲ್ಲದ ಒಬ್ಬರು…, ಸುಮಾರು ಎಪ್ಪತ್ತು ವರ್ಷವಿರಬಹುದು…, ಕುಪ್ಪಳಿಸುತ್ತಾ…, ಅಳುತ್ತಾ…, ನಗುತ್ತಾ…, ಬಾಯಿಗೆ ಗುದ್ದಿಕೊಳ್ಳುತ್ತಾ…, ಬೆತ್ತ ಹಿಡಿದು ಮಕ್ಕಳನ್ನು ಬೆದರಿಸುವಂತೆ ಬೆತ್ತ ಇಲ್ಲದೆಯೇ ಬೆದರಿಸುತ್ತಾ ಇದ್ದವರು…, ನನ್ನನ್ನು ಕಂಡು ಮಗನೆಂದುಕೊಂಡರೋ ಏನೋ…, “ಬಾ…!” ಎಂದು ಕೈಯ್ಯಗಲಿಸಿದಾಗ…, ಅವರೊಳಗಿನ ಭಾವ!
ದೇವರೇ…!
ನಾನೊಬ್ಬನಿದ್ದೇನೆ!
ಅವರನ್ನು ತೆಕ್ಕೆಯೊಳಕ್ಕೆ ತೆಗೆದುಕೊಂಡು ತಲೆಯನ್ನೊಮ್ಮೆ ನೇವರಿಸಬೇಕೆಂಬ ಒತ್ತಡ!
ಹಾಗೆ ಮಾಡಲಿಲ್ಲ!
ಅದು- ಒಂದು ದಿನಕ್ಕೆ ಸೀಮಿತವಾಗಬಾರದು!
ನಾನು ಹಾಗೆ ಮಾಡುವ ದಿನದಿಂದ…, ನನ್ನ ಪ್ರಪಂಚವೇ ಬೇರೆಯಾಗಬೇಕು!
ಈ ತೀರ್ಮಾನವನ್ನು ತೆಗೆದುಕೊಂಡ ಈ ಸಂದರ್ಭದಲ್ಲಿ ಗುರಿ ನಡೆಯುತ್ತಿದೆಯೆಂದರೆ ಅರ್ಥ….
-0-
Comments
Post a Comment