ನೆಮ್ಮದಿ!
ನೆಮ್ಮದಿ!
“ಕಥೆ ಬರೆಯಲೇ ಬೇಕು ಅನ್ನುವ ಒತ್ತಡ!”
“ಬರಿ!”
“ಏನೂ ಹೊಳೆಯುತ್ತಿಲ್ಲ!”
“ಮತ್ತೆ ಒತ್ತಡವೆಂದರೆ?!”
“ಕಥೆ ಬರೆಯದಿದ್ದರೆ ನೆಮ್ಮದಿಯಾಗಿದ್ದೇನೆಂದು ಅರ್ಥ!”
“ಇಲ್ಲವಾ?”
“ಅದನ್ನು ಒಪ್ಪಿಬಿಟ್ಟರೇನು ಸ್ವಾರಸ್ಯ?”
“ಅಂದರೆ…?”
“ನೆಮ್ಮದಿಯಾಗಿದ್ದೇನೆಂದು ಒಪ್ಪಿಬಿಟ್ಟರೆ ಹುಚ್ಚನೆಂದು ಅನ್ನಿಸಿಕೊಳ್ಳಬೇಕಾಗುತ್ತದೆ!”
“ನೆಮ್ಮದಿಯಾಗಿರುವವರೆಲ್ಲಾ ಹುಚ್ಚರೇ?”
“ನೆಮ್ಮದಿಯಾಗಿರುವವರೊಬ್ಬರನ್ನಾದರೂ ತೋರಿಸು ನೋಡೋಣ!”
“……!”
“ನಾನೇನೋ ಭಯಂಕರ ದುಃಖದಲ್ಲಿದ್ದೇನೆ, ನನ್ನ ಬದುಕು ಶೂನ್ಯ, ನನ್ನಂಥಾ ದುರಾದೃಷ್ಟವಂತ ಇಲ್ಲ, ಪ್ರಪಂಚ ಪೂರ್ತಿ ಸ್ವಾರ್ಥ ತುಂಬಿದೆ…! ನನ್ನ ಹೊರತು ಪ್ರಪಂಚವೆಲ್ಲಾ ಸಂತೋಷದಿಂದಿದೆ…, ಈ ರೀತಿ ಅಂದುಕೊಳ್ಳುವವರ ಮಧ್ಯೆ ಇದ್ದು ನೆಮ್ಮದಿಯಾಗಿದ್ದೇನೆಂದರೇನರ್ಥ!”
“ಸರಿ…, ಬೇಗ ಕಥೆ ಬರಿ!”
Comments
Post a Comment