ಸತ್ಯಭಾಮಾರುಕ್ಮಿಣೀಯಂ!

ಸತ್ಯಭಾಮಾರುಕ್ಮಿಣೀಯಂ!

ಒಂದು ಕನಸುಬಿತ್ತು. ತುಂಬಾ ಸೀರಿಯಸ್ ಕನಸು! ನಗಬಾರದು! ಇದೊಂದು ದೊಡ್ಡ ಸಮಸ್ಯೆ ನನಗೆ! ನಾನು ತಮಾಷೆಯ ವಿಷಯ ಹೇಳುವಾಗ ಯಾರೂ ನಗುವುದಿಲ್ಲ! ಸೀರಿಯಸ್ ವಿಷಯ ಹೇಳುವಾಗ ನಗುತ್ತಾರೆ! ಆದ್ದರಿಂದ ಒಂದು ನಿಯಮವನ್ನು ಇಟ್ಟುಕೊಂಡಿದ್ದೇನೆ! ಹೇಳುತ್ತಿರುವುದು ಸೀರಿಯಸ್ ವಿಷಯವೋ ತಮಾಷೆಯೋ ಎಂದು ಮೊದಲೇ ಹೇಳಿಬಿಡುವುದು!

ಅದೊಂದು ದೊಡ್ಡ ವೇದಿಕೆ! ಅಂತರರಾಷ್ಟ್ರೀಯ ಮಟ್ಟದ ಇಂಟರ್‌ವ್ಯೂ! ಇಂಟರ್‌ವ್ಯೂ ಮಾಡುತ್ತಿರುವುದು ಯಾರೋ ವಿದೇಶೀ ಹೆಣ್ಣು! ಮನುವಿಗೂ ಇಂಗ್ಲೀಷಿಗೂ ಆಗಿಬರುವುದಿಲ್ಲ! ಕಲಿಯುವುದಿಲ್ಲ ಅನ್ನುವ ಹಠ ಮನೂಗಾದರೆ ಅರ್ಥವಾದರೆ ತಾನೆ ಕಲಿಯುವುದು ಅನ್ನುವ ಧಿಮಾಕು ಇಂಗ್ಲೀಷಿಗೆ!

ಆದರೇನು? ಆ ಹೆಣ್ಣಿನ ಪ್ರತಿ ಪ್ರಶ್ನೆಯೂ ಮನೂಗೆ ಅರ್ಥವಾಯಿತು! ಅವನು ಉತ್ತರಿಸುತ್ತಿದ್ದದ್ದು ಸಂಸ್ಕೃತದಲ್ಲಿ! ವಾಸ್ತವದಲ್ಲಿ ಇಂಗ್ಲೀಷಿನಷ್ಟೂ ಗೊತ್ತಿಲ್ಲದ ಸಂಸ್ಕೃತವನ್ನು ಎಷ್ಟು ಸ್ಪಷ್ಟವಾಗಿ ಹೇಳುತ್ತಿದ್ದೆನೆಂದರೆ…, ಮನೂಗೇ ಮನೂಮೇಲೆ ಅಸಾಮಾನ್ಯ ಅಭಿಮಾನ ಹುಟ್ಟುವಷ್ಟು!

ಇನ್ನು ಇಂಟರ್‌ವ್ಯೂ ನಡೆಯುತ್ತಿರುವುದು ಯಾವ ವಿಷಯದ ಬಗ್ಗೆ? ಮನುವಿನ ಅಸಾಮಾನ್ಯ ಕಥೆಗಳಬಗ್ಗೆಯೋ ಅವನ ಅದ್ಭುತ ವಿಧ್ವತ್ತಿನ ಬಗ್ಗೆಯೋ ಅಲ್ಲ! ಯಾಕೆ ಹಾಗೆಂದು ಕೇಳಿದರೆ…, ಆ ಇಂಟರ್‌ವ್ಯೂ ನಡೆಯುತ್ತಿದೆ- ಅದಕ್ಕೆ ಯೋಗ್ಯರಾದವರೊಂದಿಗೆ ಅನ್ನುವ ಉತ್ತರ! ಸರಿ…, ಮನುವಿನ ಇಂಟರ್‌ವ್ಯೂ ಯಾವುದರಬಗ್ಗೆ?

ಅವನ…, ಸತ್ಯಭಾಮ- ರುಕ್ಮಿಣಿಯರಬಗ್ಗೆ!

ವಿ-ಹೆ (ವಿದೇಶೀ ಹೆಣ್ಣು!):- “ಹೇಳಿ…, ಸತ್ಯಭಾಮಾ ರುಕ್ಮಿಣಿಯರಬಗ್ಗೆ!”

ಮನು:- “ನ್ತ ಸಾವು ಹೇಳೋದು?”

ವಿ-ಹೆ:- “ಎಷ್ಟು ಜನ ಸತ್ಯಭಾಮಾ ರುಕ್ಮಿಣಿಯರಿದ್ದಾರೆ?”

ಅವಳಬಗ್ಗೆ ಅಭಿಮಾನವೆನ್ನಿಸಿತು! ಮನುವಿನಬಗ್ಗೆ ಸರಿಯಾದ ರಿಸರ್ಚ್ ಮಾಡಿಯೇ ಬಂದಿದ್ದಾಳೆ!

ಅದು ಬಿಡಿ! ಈಗಿನವರಬಗ್ಗೆ ಏನಾದರೂ ತಿಳಿಯಬೇಕೆಂದಿದ್ದರೆ ಕೇಳಿ!” ಎಂದೆ.

ಸತ್ಯಭಾಮಾರುಕ್ಮಿಣಿಯರು ನಿಮಗೇಕೆ ಬೇಕು!” ಎಂದಳು.

ಅವರ ಕರ್ತವ್ಯವನ್ನು ಮಾಡಲು!” ಎಂದೆ.

ವ್ಹಾಟ್?”

ಹಾ…! ಮನೂಗೆ ಹೆಣ್ಣೆಂದರೆ ಪ್ರಾಣ!” ಎಂದೆ.

ಅದಕ್ಕೆ?”

ಪ್ರತಿ ಹೆಣ್ಣಿನೊಂದಿಗಿನ ಮನು ನಿಜ!” ಎಂದೆ.

ಸರೀ….!”

ಪ್ರತಿ ಹೆಣ್ಣಿನೊಂದಿಗಿನ ಮನುವಿನ ಪ್ರೇಮ ನಿಜ…, ನಿಯತ್ತಿನಿಂದ ಕೂಡಿರುವುದು!” ಎಂದೆ.

ಅವಳ ಬಾಯಿ ಕಟ್ಟಲ್ಪಟ್ಟಿತು! ಇಂಟರ್‌ವ್ಯೂ ಮುಂದುವರೆಸುವ ಜವಾಬ್ದಾರಿ ಮನೂದೆ ಅನ್ನಿಸಿ…,

ಪ್ರೇಮಿಸುವುದಷ್ಟೆ…, ಅಥವಾ ಹೃದಯದಲ್ಲಿ ಅನುಭಾವಿಸಲ್ಪಟ್ಟ- ಉದ್ಭವಿಸಿದ ಪ್ರೇಮವನ್ನು ವ್ಯಕ್ತಪಡಿಸುವುದಷ್ಟೆ!” ಎಂದೆ.

ಇದರಲ್ಲಿ ಸತ್ಯಭಾಮಾ ರುಕ್ಮಿಣಿಯರ ಕರ್ತವ್ಯವೇನು?” ಎಂದಳು.

ಈಗ ಪಾಯಿಂಟ್‌ಗೆ ಬಂದಿರಿ!” ಎಂದು ನಿಲ್ಲಿಸಿ…,

ಯಾವ ಒಂದು ಹೆಣ್ಣೂ…, ಕೇಲವ ಅವಳೊಂದಿಗಿನ ಮನುವನ್ನು ಅನುಭಾವಿಸಿದರೆ…, ಜೀವನ ಪರ್ಯಂತ ಅವನನ್ನು ಬಿಟ್ಟು ಹೋಗುವುದಿಲ್ಲ! ಯಾಕೆಂದರೆ ಯಾವುದೇ ನಿಯಮಗಳೋ ಕಟ್ಟುಪಾಡುಗಳೋ ಇಲ್ಲದ ಬಾಂಧವ್ಯ ಅದು! ಆದರೆ…, ಒಮ್ಮೆ ಮನುವಿನ ಬದುಕಿಗೆ ಬಂದ ಹೆಣ್ಣು…, ನಿಧಾನವಾಗಿ ಅವನನ್ನು ಪರೀಕ್ಷಿಸತೊಡಗುತ್ತಾಳೆ! ಅವಳ ಅಸ್ಮಿತೆಯನ್ನು- ಅವಳ ಸ್ಥಾನವನ್ನು ಅರಿಯಲು ಶ್ರಮಿಸುತ್ತಾಳೆ! ಹೋಲಿಕೆ ಶುರುವಾಗುತ್ತದೆ! ಕೊನೆಕೊನೆಗೆ…, ಇನ್ನೊಬ್ಬರೊಂದಿಗಿನ ಮನುವನ್ನು ಹೈಲೈಟ್ ಮಾಡಿ…, ತನ್ನೊಂದಿಗೆ ಇರುವಂತೆಯೇ ಮನು ಎಲ್ಲರೊಂದಿಗೂ ಇರಬಲ್ಲ ಅನ್ನುವುದನ್ನು…, ಅದನ್ನೂ ಮೀರಿ…, ತನಗಿಂತ ಮನು ಉಳಿದ ಎಲ್ಲರೊಂದಿಗೆ ತನ್ನೊಂದಿಗಿರುವುದಕ್ಕಿಂತ ಚೆನ್ನಾಗಿ ಇರಬಲ್ಲ ಎಂದು ತೀರ್ಮಾನಿಸಿ…, ತಾನು ಕೀಳು ಎಂದು ನಿಶ್ಚಯಿಸುತ್ತಾಳೆ! ಪ್ರತಿ ಹೆಣ್ಣೂ ವೈಯಕ್ತಿಕ…, ಪ್ರತಿ ಹೆಣ್ಣಿಗೂ ಪ್ರತ್ಯೇಕವಾದ ಹೃದಯವಿದೆ- ಮನಸ್ಸಿದೆ ಅನ್ನುವುದನ್ನು ಮರೆತು ಹೋಗುತ್ತಾಳೆ- ಅವನ ಬದುಕಿಗೆ ಬಂದ ಪ್ರತಿ ಹೆಣ್ಣೂ!” ಎಂದೆ.

ಪರಮಾತ್ಮ! ಅದಕ್ಕೂ ಈ ಇಬ್ಬರ ಕರ್ತವ್ಯಕ್ಕೂ ಏನು ಸಂಬಂಧ ದೊರೆಯೇ?”

ಹೆಣ್ಣಿನ ವಿಷಯದಲ್ಲಿ ಮನೂಗೆ ಯಾವ ನಿಯಂತ್ರಣವೂ ಇಲ್ಲ! ಪ್ರತಿಯೊಬ್ಬರಮೇಲೂ ಅಸಾಧ್ಯ ಪ್ರೇಮವುಂಟಾಗುತ್ತದೆ! ಮನಸ್ಸು ಮತ್ತು ಹೃದಯ ಸ್ಪಂದಿಸುವುದಕ್ಕೆ ಅನುಗುಣವಾಗಿ ಬಾಂಧವ್ಯ ಬೆಳೆಯುತ್ತದೆ!” ಎಂದೆ.

ಅಯ್ಯೋ ಶಿವನೇ…! ವಿಷಯ ಹೇಳು ಮಾರಾಯ!”

ನನಗೆ ಇಂಟರ್‌ವ್ಯೂ ಮಾಡುತ್ತಿರುವವಳು ಪಕ್ಕಾ ಭಾರತೀಯ ಹೆಣ್ಣಿನ ಪ್ರತಿಬಿಂಬ ಅನ್ನಿಸಿತು! ಅಥವಾ ಪ್ರಪಂಚದ ಹೆಣ್ಣೆಲ್ಲರೂ ಒಂದೇಯೋ…! ಏನೋಪ್ಪ!

ಇಲ್ಲಿ…, ರುಕ್ಮಿಣಿಯ ಕರ್ತವ್ಯವೆಂದರೆ…, “ತಾನು ಮನುವಿನ ಬದುಕಿನಲ್ಲಿ ಭಾರಿ- ಏನೋ!” ಎಂದು ಬಿಂಬಿಸುವ ಮೂಲಕ- ಮನುವಿನ ಬಳಿ ಬೇರೆ ಹೆಣ್ಣು ತಲುಪದಂತೆ ನೋಡಿಕೊಳ್ಳುವುದು! ಸತ್ಯಭಾಮೆಯ ಕರ್ತವ್ಯ…, ಪ್ರತಿ ಕ್ಷಣ ಮನುವಿನೊಂದಿಗಿದ್ದು- ಮನು ಬೇರೆ ಹೆಣ್ಣಿನ ಬಳಿ ತಲುಪದಂತೆ ನೋಡಿಕೊಳ್ಳುವುದು!” ಎಂದೆ.

ಹಾಗಿದ್ದರೆ…, ಇಷ್ಟು ಜನ ಸತ್ಯಭಾಮಾ- ರುಕ್ಮಿಣಿಯರೇಕೆ ಮನುವಿನ ಬದುಕಿನಲ್ಲಿ?” ಎಂದಳು.

ಅವರೂ ಕೂಡ ತಮ್ಮ ಅಸ್ಮಿತೆಯನ್ನು ಹುಡುಕುವುದರಿಂದ!” ಎಂದೆ.

ಕೋಟಿ ಕೋಟಿ ಚಪ್ಪಾಳೆಗೆ ಯಾಕೆ ಅಲರಾಮಿನ ಶಬ್ದ!!??

Comments

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!