ತತ್ತ್ವವೆಂದರೆ...
*
"ಒಂದು ತತ್ತ್ವ ಹೇಳು!"
"ತತ್ತ್ವ ಹೇಳಲಿರುವುದಲ್ಲ!"
"ಮತ್ತೆ?"
"ಕಂಡುಕೊಳ್ಳಲಿರುವುದು!"
"ಸರಿ..., ನೀ ಕಂಡುಕೊಂಡ ತತ್ತ್ವ ಹೇಳು!"
"ನನ್ನ ತತ್ತ್ವ ನಿನಗೆ ತತ್ತ್ವವಾಗಬೇಕೆಂದಿಲ್ಲ!"
"ಪರವಾಗಿಲ್ಲ ಹೇಳು!"
"ಕತ್ತಲಿರುವುದು ಅವಿತುಕೊಳ್ಳಲು ಅಲ್ಲ- ಮರೆಯಾಗಿರಲು!"
"ಅರ್ಥವಾಗಲಿಲ್ಲ!"
"ಹಾಗಿದ್ದರಿದು ತತ್ತ್ವವೆಂದು ಖಚಿತವಾಯಿತು!"
"ಹೇಗೆ?"
"ಹೇಳಿದೆನಲ್ಲಾ...! ತತ್ತ್ವವಿರುವುದು ಕಂಡುಕೊಳ್ಳಲು! ಅರ್ಥ ಕಂಡುಕೋ!"
"ಎಲ್ಲಿಗೆ ಹೋಗುತ್ತಿದ್ದೀಯ... ಒಂದು ಕ್ಲೂ ಕೊಟ್ಟು ಹೋಗು"
"ಜನಪ್ರಿಯತೆಯೆಂಬ ಅಮಲಿನಿಂದ ಕತ್ತಲಿಗೆ!"
Comments
Post a Comment