ಬದುಕು
ಬದುಕು!
*
ಒಂದು ಪ್ರಯಾಣ ಹೊರಟಿದ್ದೆ. ಯಾವುದೇ ಆತುರವಿಲ್ಲದ ಪ್ರಯಾಣ. ನನ್ನಿಷ್ಟದಂತೆಯೇ ಹೋಗುತ್ತೇನೆಂದು- ಗಂಟೆಗೆ ನಲವತ್ತು ಕಿಲೋಮೀಟರ್ ವೇಗದಲ್ಲಿ ಗಾಡಿ ಓಡಿಸುತ್ತಿದ್ದೆ. ಬಸ್ಸೊಂದು ನನ್ನನ್ನು ಓವರ್‌ಟೇಕ್ ಮಾಡಲು ಶ್ರಮಿಸುತ್ತಿತ್ತು. ಅದೇ ಸಮಯದಲ್ಲಿ ಹಿಂದಿನಿಂದ ಕಾರಿನವನೊಬ್ಬ ಹಾರನ್ ಮಾಡುತ್ತಿದ್ದ. ಬಸ್ ನನ್ನನ್ನು ದಾಟಿ ಹೋಗುವಷ್ಟು ಸಮಯ ಕಾಯುವ ವ್ಯವಧಾನ ಕಾರಿನವನಿಗಿಲ್ಲ. ನಾನೇ ವೇಗ ಹೆಚ್ಚಿಸಿ ಬಸ್ಸಿನ ಮುಂದಕ್ಕೆ ಬಂದು ಕಾರಿನವನಿಗೆ ದಾರಿಕೊಟ್ಟೆ. ನಂತರ ಬಸ್ಸು ಹೇಗೋ ಮುಕ್ಕರಿಸಿ ನನ್ನನ್ನು ಓವರ್‌ಟೇಕ್ ಮಾಡಿತು. ಮುಂದಕ್ಕೆ ಹೋದ ಬಸ್ಸಿನಿಂದ ಭಯಂಕರ ಹೊಗೆ. ಸಣ್ಣ ಅಪ್ ಬಂದಿದ್ದರಿಂದ ಬಸ್ಸಿನ ವೇಗ ಕಡಿಮೆಯಾಯಿತು! ಹಿಂದೆ ಸಿಕ್ಕಕೊಂಡ ನನಗೆ ಹೊಗೆ ತಡೆದುಕೊಳ್ಳಲಾಗದೆ..., ಬಸ್ಸನ್ನು ಓವರ್‌ಟೇಕ್ ಮಾಡಲು ಶ್ರಮಿಸಿದೆ! ಎದುರುಗಡೆಯಿಂದ ಒಂದರ ಹಿಂದೊಂದು ಗಾಡಿಗಳು! ಹೋಗಲಿ ಬಸ್ಸಿನಿಂದ ತುಂಬಾ ದೂರ ಉಳಿಯೋಣವೆಂದು ಸ್ಲೋ ಮಾಡಲು ಹೋದರೆ ಹಿಂದೆ ಒಂದು ಲಾರಿ! ನಿಲ್ಲಿಸಿದರೆ ಟ್ರಾಫಿಕ್ ಜಾಂ!
ಇಷ್ಟೆ- ಬದುಕು!
Comments
Post a Comment