ಕವಿಯಾದ ಕಥೆಗಾರ- ಕವಿತೆ

 

ಕಥೆಗಾರ ಕವಿಯಾದ-
ಹೇಗೆ...?
ಕಾರಣ ಅವಳು-
ಅವಳೊಂದಿಗಿನ ಮಾತುಕಥೆಯೆಲ್ಲಾ ಸಾಹಿತ್ಯವೇ!
ಒಲವಾಯಿತಾ ಅನ್ನುತ್ತಾಳೆ-
ಏನೂ ಗೊತ್ತಿಲ್ಲದವಳಂತೆ!
ಆಗದಿರಲು ಕಾರಣವನ್ನು ಹುಡುಕುತ್ತಿದ್ದೇನೆ-
ಅನ್ನುತ್ತೇನೆ!
ಸಿಕ್ಕಿತಾ ಕಾರಣ-
ಅನ್ನುತ್ತಾಳೆ!
ನೀನಲ್ಲದಿದ್ದರೆ ಪಟ್ಟಿ ಕೊಡುತ್ತಿದ್ದೆ-
ಅನ್ನುತ್ತೇನೆ!
ಗೊಂದಲಗೊಳ್ಳುತ್ತಾಳೆ!
ಮಾತಾಡು-
ಅನ್ನುತ್ತೇನೆ!
ಯಾಕೆ-
ಅನ್ನುತ್ತಾಳೆ!
ನೀನನ್ನ ಪ್ರತಿದಿನದ ಕವಿತೆ-
ಅನ್ನುತ್ತೇನೆ!
ಕಥೆಗಾರ ನೀನು-
ಅನ್ನುತ್ತಾಳೆ!
ಅರಾಧಿಸುತ್ತಿದ್ದೇನೆ,
ಒಲವನ್ನೂ ಮೀರಿ...,
ಪ್ರೇಮಿಸುತ್ತಿದ್ದೇನೆ ನಿನ್ನನ್ನು-
ಅನ್ನುತ್ತೇನೆ!!!

Comments

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!