ಋಣ

 ಋಣ

*

ಬೊಗಸೆಯಲ್ಲಿ ತುಂಬಿಕೊಂಡ,

ಅರಳಿದ ತಾವರೆಯಂತೆ

ನಿನ್ನ ಮುಖ!

ಮುತ್ತಿಗಾಗಿ ಕಾಯುತ್ತಿರುವ

ಅರೆಬಿರಿದ

ನೆನೆದ ತುಟಿಗಳು!

ಮುತ್ತು ಕೊಡುತ್ತೇನೇನೋ ಅನ್ನುವಂತೆ

ಅರೆಮುಚ್ಚಿದ,

ಕೊಡುವುದಿಲ್ಲವೇನೋ ಅನ್ನುವಂತೆ

ಅರೆತೆರೆದ ಕಣ್ಣುಗಳು!

ಗೊಂದಲದ ನಿನ್ನ ನೋಟ!

ಆ ನಿನ್ನ ತನ್ಮಯತೆ-

ಎಷ್ಟು ಚಂದ!

ನೋಡುತ್ತಾ ಇದ್ದುಬಿಡುತ್ತೇನೆ ಹೊರತು

ಆ ಭಾವಕ್ಕೆ ಧಕ್ಕೆಯನ್ನು ತರಲಾರೆ!

ನಿನ್ನ ಸಮರ್ಪಣೆ ನನ್ನ ಹೊಣೆ!

ನಿನ್ನ ನಂಬಿಕೆಗೆ,

ಪ್ರೇಮಾಧಿಕ್ಯ ಸೌಂಧರ್ಯಕ್ಕೆ

ನಾನು ಶರಣು!

ಮನಸ್ಸಿಗೆ ಕಡಿವಾಣ ಹಾಕುವುದಕ್ಕಿಂತಲೂ

ಕಡಿವಾಣ ಹಾಕಬೇಕಾದ ಆ-

ಕಾರಣವನ್ನು ಮೀರಿದ

ಸ್ಥಾಯೀಭಾವಕ್ಕೆ

ನನ್ನ ಮನಸ್ಸನ್ನು

ಅಣಿಗೊಳಿಸಿದ

ನಿನಗೆ ನಾನು-

ಋಣಿ!

Comments

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!