ಹಾರರ್ ಥೀಂ ! “ ದೆವ್ವ ಭೂತಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು ?” ಎಂದು ಕೇಳಿದೆ . ಗೊಂದಲದಿಂದ ನೋಡಿದ ! ಅಪರಿಚಿತ ವ್ಯಕ್ತಿಯೊಬ್ಬ ಏಕಾಏಕಿ ಹೀಗೆ ಪ್ರಶ್ನಿಸಿದರೆ ಯಾರಿಗಾದರೂ ಗೊಂದಲವುಂಟಾಗುತ್ತದೆ ! ಅದರಲ್ಲೂ ಯಾವ ಪೀಠಿಕೆಯೂ ಇಲ್ಲದೆ… ! “ ಕ್ಷಮಿಸಿ… ನಿಮ್ಮ ಬಸ್ಸಿನಲ್ಲೇ ಇದ್ದೆ - ನಿಮ್ಮ ಹಿಂದಿನ ಸೀಟ್ ! ನೀವು ಪಕ್ಕದ ಸೀಟಿನವರೊಂದಿಗೆ ಏನೋ ಹೇಳುತ್ತಿದ್ದದ್ದು ಕೇಳಿಸಿತು… ರಾಜರಾಜ ಚೋಳನೆಂದೋ ಏನೋ… ! ಏಳುನೂರು ವರ್ಷದಷ್ಟು ಹಳೆಯ ಮರದಬಗ್ಗೆ… !” ಎಂದೆ . ಆತ ರಿಲಾಕ್ಸ್ ಆಗಿ ಮುಗುಳುನಕ್ಕು… , “ ಇಂಗ್ಲೀಷ್ ಹಾರರ್ ಮೂವಿಗಳನ್ನು ನೋಡಿದ ಪ್ರಭಾವ ಗುರುವೆ ! ಕನ್ನಡದಲ್ಲೂ ಹಾಗೊಂದು ಮೂವಿ ಮಾಡುವ ಯೋಚನೆ !” ಎಂದ . ಈಬಾರಿ ನಾನು ಗೊಂದಲದಿಂದ ನೋಡಿದೆ ! “ ನಾನೊಬ್ಬ ರೈಟರ್ ! ಪ್ರೊಡ್ಯೂಸರೊಬ್ಬರು ಹಾರರ್ ಥೀಂ ಕಥೆ ಬೇಕು ಅಂದರು ! ಅದೇ ಮಾಮೂಲಿ ಬಿಳಿಸೀರೆ , ರಕ್ತ ಹೀರುವ ದೆವ್ವಗಳನ್ನು ಬಿಟ್ಟು ಬೇರೆ ಬರೆಯೋಣ ಅನ್ನಿಸಿತು !” ಎಂದ . ನನ್ನ ಮುಖದಲ್ಲಿ ಕುತೂಹಲವನ್ನು ಕಂಡನೋ ಏನೋ… , “ ಆದರೂ ಸುಮ್ಮಸುಮ್ಮನೆ ಏನೋ ಬರೆದರೆ ಆಗದಲ್ಲಾ… ? ನಿಜಕ್ಕೆ ಹತ್ತಿರವಾಗಿರುವ ಹಾಗೆ ಬರೆಯಬೇಕು ! ನಿಜವೇ ಎಂದು ನಂಬುವಂತಿರಬೇಕು !” ಎಂದು ಹೇಳಿ ಕೈಯ್ಯಲ್ಲಿದ್ದ ಟೀ ಕಪ್ಪನ್ನು ಸಿಪ್ ಮಾಡಿ ನನ್ನ ಮುಖ ನೋಡಿ .., “ ಸಾರಿ ! ಒಬ್ಬನೇ ಕುಡಿಯುತ್ತಿದ್ದೇನೆ… ! ನಿಮಗೆ ಟೀ ?” ಎಂದ . “ ಅಯ್ಯೋ ಬೇಡ ! ನೀವು ಮಾತನಾಡುತ್ತಿದ್...
ಕಡಲು ಬೆಟ್ಟ ಮತ್ತು ನಾನು! * ಇದು ಕಥೆಯ? ಗೊತ್ತಿಲ್ಲ. ಬರೆಯಬೇಕು ಅನ್ನಿಸುತ್ತಿದೆ- ಬರೆಯುತ್ತಿದ್ದೇನೆ! ಯಾಕೆ ಅನ್ನಿಸುತ್ತಿದೆ? ಗೊತ್ತಿಲ್ಲ! ಕಡಲನ್ನು ಕಂಡಾಗ, ಬೆಟ್ಟವನ್ನು ಹತ್ತಿದಾಗ…, ಆಗಾಗ…, ಬರೆಯಬೇಕು ಅನ್ನಿಸುತ್ತದೆ! ಪ್ರಸ್ತುತಾ ಹೇಳಬೇಕು ಅಂದುಕೊಂಡಿರುವ ವಿಷಯವನ್ನು ವಿವರಿಸುವುದು ಸ್ವಲ್ಪ ಕಷ್ಟ! ಆದ್ದರಿಂದ…, ಅವಳ ಸಹಾಯವನ್ನು ಪಡೆದುಕೊಳ್ಳುತ್ತೇನೆ. ಶಾರದೆ! ಯಾರವಳು? ವಾಗ್ದೇವಿ ಅಂದುಕೊಳ್ಳೋಣ! ಪ್ರತೀ ಅವಳೂ…, ಶಾರದೆಯೇ! ಪ್ರತೀ ಶಾರದೆಯೂ…, ಅವಳೇ! ಇಷ್ಟಕ್ಕೂ ವಿಷಯವೇನು? ಎಷ್ಟು ಬರೆದರೂ ಮುಗಿಯದ…, ವಿವರಿಸಲಾಗದ…, ಎಷ್ಟು ದಕ್ಕಿದರೂ ಸಾಲದ…, ಅರ್ಥಕ್ಕೆ ಎಟುಕದ…, ಅನುಭವಿಸಿ ಮಾತ್ರ ಅರಿತುಕೊಳ್ಳಬಹುದಾದ…, ಅದ್ಭುತ ಆನಂದಾನುಭೂತಿಗೆ ಕಾರಣವಾದ…, ಪ್ರೇಮ! * ಮತ್ತೆ ಬರಬೇಡವೆಂದು ಎಷ್ಟೇ ಹೇಳಿದರೂ…, ಮತ್ತೆ ಮತ್ತೆ ಉರುಳುರುಳಿಬಂದು ಮುತ್ತಿಕ್ಕಿ ಹೋಗುತ್ತಿದೆ…, ಅಲೆಗಳು! ಅಲೆಗಳಿಂದ ಆಚೆಗೆ ದೃಷ್ಟಿ ಹಾಯಿಸಿದರೆ…, ಶಾಂತಗಂಭೀರವಾಗಿ ಹರಡಿಕೊಂಡಿದೆ…, ಕಡಲು! ಕಡಲಿನಂಚಿನಲ್ಲಿ…, ಎಷ್ಟು ಅದ್ಭುತವಾದ ದೃಶ್ಯ! ಆಕಾಶದಿಂದ ಜಾರಿ…, ಕಡಲನ್ನು ಚುಂಬಿಸಿ…, ತನ್ನನ್ನು ತಾನು ಕಳೆದುಕೊಳ್ಳುತ್ತಿದ್ದಾನೆ…, ಸೂರ್ಯ! ಕತ್ತಲು ಬೆಳಕಿನ ಆಟ! ಅಲೆಗಳಂತೆ ಪ್ರಕ್ಷುಬ್ಧವಾಗಿದ್ದ ನನ್ನ ಮನಸ್ಸು…, ಅದೇ ಅಲೆಗಳ ಒಡೆಯನಾದ ಕಡಲಿನಂತೆ ಶಾಂತವಾದ ಭಾವ! ಹೌದು…, ನಾನು ನಿರಾಳವಾಗಿದ್ದೇನೆ…, ನೆಮ್ಮದಿಯಾಗಿದ್ದೇನೆ…, ಇದುವರೆಗಿನ ನನ್ನ ಜೀವನದ...
ಹೇಗಿದ್ದೀಯೆ? ಬ್ಯುಸಿ- ಅಲಾ? ಗೊತ್ತು…, ದಿನಕ್ಕೆ ಇಪ್ಪತ್ತನಾಲ್ಕು ಗಂಟೆ ಸಮಯ ಸಾಲದ ಪಾಪದ ಹೆಣ್ಣು ನೀನು! ವಿಷಯ ನ್ತ ಗೊತ್ತ? ನೀ ಎಷ್ಟೇ ಬ್ಯುಸಿಯಾಗಿದ್ರೂ, ಫ್ರೀಯಾಗಿದ್ರೂ, ನೆನಪಿಸಿಕೊಂಡರೂ- ಕೊಳ್ಳದಿದ್ದರೂ ಐ ಲವ್ಯು! ಬದುಕು ಎಷ್ಟು ಚಂದ! ಪಾಪ ನನ್ನ ಅಮ್ಮ…, ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆದಿದ್ದರೆ ನಾನಿಂದು ಎಲ್ಲಿರುತ್ತಿದ್ದೆನೋ ಏನೋ! ಅದು ಹಾಗೆಯೇ ನೋಡು…, ಹಲ್ಲಿದ್ದವನಿಗೆ ಕಡಲೆಯಿಲ್ಲ ಕಡಲೆಯಿದ್ದವನಿಗೆ ಹಲ್ಲಿಲ್ಲ ಅನ್ನುವಂತೆ ನನ್ನ ಜೀವನ. ಅತಿ ಸಮರ್ಥ ನಾನು! ನದಿಯ ಹರಿವಿಗೆ ನನ್ನನ್ನು ಒಡ್ಡಿಕೊಂಡಿದ್ದರೂ ಸಾಕಿತ್ತು- ಕುಟುಂಬದ, ಗೆಳೆಯರ, “ಇತರರ" ದೃಷ್ಟಿಕೋನದ ಗೆಲುವನ್ನು ಅತಿ ಸುಲಭದಲ್ಲಿ ಸಾಧಿಸುತ್ತಿದ್ದೆ. ಆದರೇನು ಮಾಡುವುದು…? ಇದು- ನಾನು ಅಲಾ? ನನಗೆ ಸಹಜವಾಗಿ ಒಲಿದಿದ್ದ ಸಾಮರ್ಥ್ಯಕ್ಕೆ, ಅವಕಾಶಗಳಿಗೆ ವಿರುದ್ಧವಾಗಿ…, ಪ್ರವಾಹಕ್ಕೆ ಇದಿರಾಗಿಯೇ ಈಜಬೇಕೆಂದು ತೀರ್ಮಾನಿಸಿದವ! ತೀರ್ಮಾನ ನನ್ನದು! ಪ್ರವಾಹವೆಂದರೇನೆಂಬ ಅರಿವೇ ಇಲ್ಲದೆ- ಅದಕ್ಕೆ ಇದಿರಾಗಿ! ಅದೆಷ್ಟುಸಾರಿ ಶುರುಮಾಡಿದ ಸ್ಥಳವನ್ನೇ ಸೇರಿದೆ! ಇಲ್ಲದ ದಾರಿಯನ್ನು ಸೃಷ್ಟಿಸಿ ಅದೆಷ್ಟುಸಾರಿ ಗಮ್ಯದ ಹತ್ತಿರಕ್ಕೆ ತಲುಪಿದೆ! ನನಗೆ ಸಂಬಂಧವೇ ಇಲ್ಲದ ಅಡತಡೆಗಳು…, ಅನೂಹ್ಯ ತಿರುವುಗಳು…, ಪೆಟ್ಟುಗಳು! ಇದೋ…, ಪುನಃ ಅದೇ ಶುರುವಿನ ಹಂತಕ್ಕೆ ಬಂದು ನಿಂತಿದ್ದೇನೆ. ಪ್ರವಾಹದ ಸಂಪೂರ್ಣ ಅರಿವು ದೊರಕಿದ ತೃಪ್ತಿಯೇನೋ ಇದೆ…, ಆದರೆ ಆದರೆ…, ಮತ್ತೊಮ್ಮೆ ಈಜು ಶು...
Comments
Post a Comment