ಹೆಣ್ಣೇ- ಕವಿತೆ

 ಹೆಣ್ಣೇ...,

ನೀನು- ನಾನೆಂಬ

ನಮ್ಮ ಪ್ರಪಂಚದಲ್ಲಿ

ಒಲವಿದೆ,

ನಗುವಿದೆ,

ಸಂತೋಷವಿದೆ,

ಮುನಿಸಿದೆ,

ಜಗಳವಿದೆ,

ಕೋಪವಿದೆ,

ವಾಗ್ವಾದವಿದೆ,

ಸಾಂತ್ವಾನವಿದೆ,

ದೈಹಿಕ-

ಸಂತೃಪ್ತಿಯಿದೆ!

ಯಾವಾಗ...,

ನೀನು-ನಾನು

ಮಾತ್ರವೆಂಬ

ನಮ್ಮ ಪ್ರಪಂಚದ

ಸರಿ ತಪ್ಪುಗಳಲ್ಲಿ

ನನ್ನಿಂದ ಮನ್ನಿಸಲ್ಪಟ್ಟ ನಿನ್ನ ತಪ್ಪುಗಳನ್ನು ಮುಚ್ಚಿಟ್ಟು,

ನನ್ನ ತಪ್ಪುಗಳನ್ನು ಪ್ರಪಂಚಕ್ಕೆ ಸಾಬೀತುಮಾಡಿ,

ನಾನು- ನೀನೆಂಬ ಪ್ರಪಂಚಕ್ಕೆ-

ಹೊರ ಪ್ರಪಂಚವನ್ನು ಎಳೆದು ತಂದೆಯೋ...,

ನಿನ್ನಿಂದ ನನ್ನ ಕೊಲೆ

ನನಗೆ ನಿನ್ನ ಸಾವು!

Comments

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!