ಕವಿ
ಕವಿ
*
ನನ್ನ ಅರಿವಿಲ್ಲದೆ
ಅವಳಲ್ಲಿ ಮೂಡಿದ
ಆರಾಧನೆ-
ಪ್ರೇರಣೆಯಾಗಿ
ನಿರಕ್ಷರ ಕುಕ್ಷಿಯಾದ
ನಾನೂ
ಕವಿಯಾದೆ!
ಅವಳು
ಕವಿತೆಯಾದಳು...
ಬರೆದವ ನಾನಾದ್ದರಿಂದ
ಕವಿತೆ
ಶ್ರೇಷ್ಠವಲ್ಲದಿರಬಹುದು
ಆದರೆ
ಆ-
ಕವಿತೆ,
ತಪಸ್ಸು ಮಾಡಿಯಾದರೂ
ಒಲಿಸಿಕೊಳ್ಳಬೇಕು ಅನ್ನಿಸುವಷ್ಟು
ಆಕರ್ಷಣೆಯನ್ನು ಹುಟ್ಟಿಸಿದ,
ಪ್ರೇಮವನ್ನು ಬೆಳೆಸಿದ-
"ಅವಳು"
ಆದ್ದರಿಂದ...,
ಇದಕ್ಕಿಂತ ಶ್ರೇಷ್ಠ
ಕವಿತೆಯಾವುದು??
Comments
Post a Comment