ಜೋಡಿ
ಸಮಯವನ್ನೊಮ್ಮೆ ನೋಡಿಕೊಂಡೆ. ಇನ್ನೂ ಐದುನಿಮಿಷವಿತ್ತು. ತಾಳ್ಮೆಯಿಂದ ಕಾದೆ. ಬಂದರು. ಆಹಾ ಅನ್ನಿಸುವ ಜೋಡಿ. ಮೊದಲಬಾರಿ ಇಂತಾ ಐಶಾರಾಮಿ ಹೋಟೆಲ್ಲಿಗೆ ಬಂದಿದ್ದಳೇನೋ..., ಅವಳ ಮುಖದಲ್ಲಿ ಸಂತೋಷ. ಇಬ್ಬರೂ ಕಂಫರ್ಟ್ ಆಗಿ ಕುಳಿತುಕೊಂಡರು. ಅವನು ಎದ್ದುನಿಂತು ಪ್ಯಾಂಟಿನ ಜೇಬಿಗೆ ಕೈಹಾಕಿದ. ಗೊಂದಲದಿಂದ ತಡಕಾಡಿದ. "ಈಗ ಬಂದೆ" ಎಂದು ಹೇಳಿ ಹೊರಕ್ಕೆ ಹೋದ. ಅವಳು ತಳಮಳದಿಂದಲೂ ಉದ್ವೇಗದಿಂದಲೂ ಕುಳಿತಿದ್ದಳು. ನಿಧಾನಕ್ಕೆ ಹೋಗಿ ಅವಳಮುಂದೆ ಕುಳಿತೆ. ಮುಗುಳುನಕ್ಕೆ. ಪರಿಚಿತನೋ ಅಪರಿಚಿತನೋ ತಿಳಿಯದ ಗೊಂದಲದ ಮುಖಭಾವ. ಎಷ್ಟು ಮುಗ್ಧೆ. "ಅವನಿಂದ ನಮಗೆ ದೊರಕಿದ ಹನ್ನೊಂದನೆಯ ಹುಡುಗಿ ನೀನು" ಎಂದೆ.
Comments
Post a Comment