ನೆಮ್ಮದಿ
ನೆಮ್ಮದಿ!
*
"ಪೆಟ್ಟಿನ ಮೇಲೆ ಪೆಟ್ಟು ಬಿದ್ದರೂ ನೀ ಹೇಗೆ ಇಷ್ಟು ನೆಮ್ಮದಿಯಾಗಿದೀಯೋ ಅರ್ಥವಾಗುತ್ತಿಲ್ಲ!"
"ಇದರಲ್ಲಿ ಅರ್ಥವಾಗೋಕೆ ಏನಿದೆ? ನನಗೆ ಅಮ್ಮ ಇದಾರೆ!"
"ಎಷ್ಟು ದಿನ?!"
"ಇದೆಂತ ಪ್ರಶ್ನೆ!! ನನ್ನಮ್ಮ ಮಿನಿಮಂ ಎಂಬತ್ತು ವರ್ಷ ಬದುಕುತ್ತಾರೆ- ಮಿನಿಮಂ!"
"ಆಮೇಲೆ?"
"ಆಮೇಲೆಂತ? ಆಗ ನನಗೂ ಐವತ್ತು ವರ್ಷ ವಯಸ್ಸಾಗಿರುತ್ತೆ! ನಂತರ ನಮ್ಮಮ್ಮ ಎಷ್ಟು ವರ್ಷ ಬದುಕುತ್ತಾರೆ ಅನ್ನುವುದು ನನ್ನ ಆಯುಸ್ಸಿಗೂ ಬೋನಸ್!"
ಸ್ವಲ್ಪ ಸಮಯಕ್ಕೆ ಅವಳ ಬಿಟ್ಟ ಬಾಯಿ ಮುಚ್ಚಲಿಲ್ಲ..., ಸೊ..., ಸಂಭಾಷಣೆ ಮುಂದುವರೆಯಲಿಲ್ಲ!
Comments
Post a Comment