ಇತಿಹಾಸ
ಇತಿಹಾಸ!
*
ಕೆಲವೊಂದು ಪ್ರಶ್ನೆಗಳಿಗೆ ತೀರಾ ಆಕಸ್ಮಿಕವಾಗಿ ಉತ್ತರಗಳು ಸಿಗುತ್ತದೆ.
ಇತಿಹಾಸಕಾರರು ಅಷ್ಟು ಚಂದಚಂದವಾಗಿ ಹೇಗೆ ಇತಿಹಾಸವನ್ನು ಬರೆಯುತ್ತಾರೆ ಅನ್ನುವ ಗೊಂದಲ ಮುಂಚಿನಿಂದಲೂ ಇತ್ತು!
ಇವತ್ತು ಒಬ್ಬರ ಬರಹವನ್ನು ಓದಿದೆ.
ವಿದೇಶಿಗರಾದ ಬ್ರಿಟಿಷರನ್ನು ಓಡಿಸಲು ಹೋರಾಡಿದವರಲ್ಲಿ…, ಇಲ್ಲಿಯ ಪ್ರಜೆಗಳಾದ ಟಿಪ್ಪು ಮತ್ತು ಹೈದರ್ ಅತಿ ಮುಖ್ಯರು ಎಂದು ಬರೆದಿದ್ದರು.
“ಅರೆ…, ಹೈದರ್ ಮತ್ತು ಟಿಪ್ಪು ಕೂಡ ಮೈಸೂರು ಅರಸರಲ್ಲಿ ಕೆಲಸ ಹುಡುಕಿಕೊಂಡು ಬಂದ ವಿದೇಶಿಯರೇ ಅಲ್ಲವೇ..!?” ಅನ್ನುವುದು ನನ್ನ ಪ್ರಶ್ನೆ!
ಅದಕ್ಕೆ ಅವರು ಕೊಟ್ಟ ಉತ್ತರದಲ್ಲಿ ನನ್ನ ಗೊಂದಲಗಳಿಗೆ ಪರಿಹಾರವಿದೆ!
“ನಿಮ್ಮನ್ನು ನಾನು ಸಾಕಷ್ಟು ಅರ್ಥ ಮಾಡಿಕೊಂಡಿದ್ದೇನೆ! ಆದ್ದರಿಂದ ಉತ್ತರಿಸುವ ಗೊಡವೆಗೆ ಹೋಗುವುದಿಲ್ಲ!” ಅನ್ನುವುದು ಅವರು ಕೊಟ್ಟ ಉತ್ತರ!
ಒಮ್ಮೆಯೂ ಭೇಟಿಯಾಗದೆ, ಒಮ್ಮೆಯೂ ವೈಯಕ್ತಿಕ ಸಂಭಾಷಣೆಯಾಗದೆ, ಪರಸ್ಪರ ಯಾವ ಅರಿವೂ ಇಲ್ಲದೆ- ಅವರು ನನ್ನನ್ನು ಅರ್ಥಮಾಡಿಕೊಂಡರು ಅನ್ನುವಲ್ಲಿ…, ಇತಿಹಾಸದ ಉತ್ಪತ್ತಿಯಿದೆ!
ಅವರು ಅರಿತ ನನ್ನನ್ನು ಬರೆದರೆ- ಅದೇ ಇತಿಹಾಸ!!!
Comments
Post a Comment