ಸೈಕಲಾಜಿಕಲ್ ಮಿಸ್‌ಲೀಡಿಂಗ್
ಇಲ್ಲಿರುವ ೭೦% ಬರಹ ಡಾ:- Ruupa Rao ಅವರದ್ದು! ನನ್ನ ಮತ್ತು ಅವರ ಕಮೆಂಟ್‌ಗಳನ್ನು ಅವರೊಂದು ಪೋಸ್ಟ್ ಆಗಿ ಹಾಕಿದ್ದಾರಾದ್ದರಿಂದ ನಾನೂ ಹಾಕುತ್ತಿದ್ದೇನೆ! ಮಾಮೂಲಿನಂತೆ ನಾನೇನೇ ಬರೆದರೂ ಕಥೆಯಂತೆ ಇರಬೇಕೆನ್ನುವ ಹಠದಿಂದಾಗಿ ಅವರಿಲ್ಲದ ಮೊದಲ ಮತ್ತು ಕೊನೆಯ ಸಂಭಾಷಣೆಗಳನ್ನು ಸೇರಿಸಿದ್ದೇನೆ!
*
ಸೈಕಲಾಜಿಕಲ್ ಮಿಸ್ ಲೀಡಿಂಗ್!
*
“ನ್ತದ ನೀನು ಸುಮ್ಮನೆ ಕಾಲು ಕೆರೆದು ಜಗಳಕ್ಕೆ ಹೋಗುವುದು!” ಎಂದಳು.
“ಕಾಲು ಕೆರೆಯುವುದಷ್ಟೆ! ಜಗಳದ ಉದ್ದೇಶವೇನೂ ಇರುವುದಿಲ್ಲ! ಆದರೂ ಆ ಜಗಳ ಮಜವಾಗಿರುತ್ತದೆ! ಆರೋಗ್ಯಪೂರ್ಣವಾಗಿರುತ್ತದೆ!” ಎಂದೆ.
“ಈಗೆನ್ತ? ಅವರು ಹೇಳಿದ್ದನ್ನು ನೀನು ಒಪ್ಪುತ್ತೀಯೋ ಇಲ್ಲವೋ?”
“ಇಲ್ಲಿ ಒಪ್ಪುವುದು ಬಿಡುವುದು ಅನ್ನುವುದು ಇಲ್ಲವೇ… ಅವರೊಬ್ಬರು ಸೈಕಾಲಜಿಸ್ಟ್… ಡಾಕ್ಟರ್… ಅವರು ಹೇಳಿದ ವಿಷಯದಲ್ಲಿ ನನಗೆ ಗೊಂದಲವಾದರೆ ನಾನು ಕೇಳುವವನೇ! ಯಾಕೆಂದರೆ ಅವರು ಹೇಳಿದ ವಿಷಯ ನನ್ನ ಅನುಭವದಲ್ಲಿ ಅವರು ಹೇಳಿದ್ದಕ್ಕೆ ವಿರುದ್ಧವಾಗಿದೆ! ಅದನ್ನು ಕಾಲು ಕೆರೆಯುವುದು, ಜಗಳ ಅನ್ನುವುದು ತಪ್ಪು! ಇನ್ನೂ ಹೇಳಬೇಕೆಂದರೆ…, ಅವರು ಶ್ರೀಕೃಷ್ಣನಂತೆ- ನಾನು ಅರ್ಜುನ! ಎಲ್ಲವೂ ಗೊತ್ತಿರುವವರೊಂದಿಗೆ ಏನೂ ಗೊತ್ತಿಲ್ಲದವ ಹೇಗೆ ಜಗಳ ಮಾಡುವುದು?” ಎಂದೆ.
“ಆಹಾ…! ಆದರೆ ಅವರನ್ನು ನೀನು ಅಧ್ಯಯನ ಮಾಡಿದ್ದೀಯ ಅಂದರೆ ಏನರ್ಥ? ಅವರನ್ನು ವೈಯಕ್ತಿಕ ಧಾಳಿ ಮಾಡಿದರೆ ಹೇಗೆ?”
“ವೈಯಕ್ತಿಕ ಧಾಳಿ- ವೈಯಕ್ತಿಕ ಜಡ್ಜ್‌ಮೆಂಟ್ ಅನ್ನುವುದು…, ನಾನು ವೈಯಕ್ತಿಕವಾಗಿ ಜಡ್ಜ್‌ಮೆಂಟ್ ಮಾಡುತ್ತಿದ್ದೇನೆಂದು ಅವರು ಯಾವಾಗ- ಅಂದರೆ ಯಾವ ಸಂಧರ್ಭದಲ್ಲಿ ಹೇಳಿದ್ದಾರೆ ಅನ್ನುವುದನ್ನು ಅವಲಂಬಿಸಿದೆ!”
“ಮಾರಾಯ ಅವರು ಸೈಕಾಲಜಿಸ್ಟ್ ಕಣೋ! ಡಾಕ್ಟರ್!” ಎಂದಳು.
“ಅದಕ್ಕೆ? ನೆನಪಿರಲಿ…, ನನ್ನ ಪೂರ್ತಿ ಚರ್ಚೆ, ವಾದ, ಮಂಡನೆಗಳು…, ನಾನು ಶಾಸ್ತ್ರವನ್ನಾಗಲಿ, ಥೀಸಿಸ್‌ಗಳನ್ನಾಗಲಿ ಪ್ರಶ್ನೆ ಮಾಡುತ್ತೇನೆ, ನಿಷೇಧಿಸುತ್ತೇನೆ ಅನ್ನುವುದರ ತಳಪಾಯದ ಮೇಲೆ ರೂಪುಗೊಂಡದ್ದು! ಶಾಸ್ತ್ರವೇ ಆದರೂ ತತ್ತ್ವಗಳೇ ಆದರೂ ನಿಷೇಧಿಸಲ್ಪಡಬೇಕು, ಪ್ರಶ್ನಿಸಲ್ಪಡಬೇಕು, ಕೊನೆಗೆ ನಮ್ಮ ತೀರ್ಮಾನಕ್ಕೆ ನಾವು ಬರಬೇಕು-ಅದಕ್ಕೆ ವಿರುದ್ಧವಾಗಿರುವುದು ರೂಪಿಸಲ್ಪಡಬೇಕು!!” ಎಂದೆ.
“ಈಗೆನ್ತ ಮಾಡ್ತೀಯ? ನೀನೂ ಅಧ್ಯಯನಶೀಲ, ಮನಃಶ್ಶಾಸ್ತ್ರದ ಅಧ್ಯಯನ ಮಾಡಿದವ ಅನ್ನುವುದು ನನಗೆ ಗೊತ್ತು! ಆದರೆ ಅವರದ್ದು ಸಿಸ್ಟಮ್ಯಾಟಿಕ್! ಈಗ ನನ್ನ ವಯಸ್ಸನ್ನು ಯಾರಾದರೂ ಕೇಳಿದರೆ ಮೂವತ್ತು ಅನ್ನುತ್ತೇನೆ! ಏನು ಆಧಾರವೆಂದರೆ ಎಸ್‌ಎಸ್‌ಎಲ್‌ಸಿ ಮಾರ್ಕ್ಸ್‌ಕಾರ್ಡ್ ತೋರಿಸುತ್ತೇನೆ! ನನ್ನ ಬಳಿ ಅದು ಇಲ್ಲ ಅಂದರೆ ಅರ್ಥ- ನನಗೆ ಮೂವತ್ತು ಆಗಿಲ್ಲವೆಂದಲ್ಲ! ಹಾಗೆಯೇ…, ಅದರಲ್ಲೂ ತಪ್ಪಿರುವ ಸಾಧ್ಯತೆ ಇದೆ, ನನ್ನ ಅಕ್ಕನ ನಿಜ ವಯಸ್ಸಿಗೂ ಮಾರ್ಕ್ಸ್‌ಕಾರ್ಡ್‌ನಲ್ಲಿರುವ ವಯಸ್ಸಿಗೂ ವ್ಯತ್ಯಾಸ ಇರುವಂತೆ! ಅದನ್ನು ಅವರು ಕೇಳುವುದಿಲ್ಲ! ಅವರು ಒಪ್ಪುವುದೇ ಅದನ್ನು! ಅದರಲ್ಲಿರುವುದೇ ನಿಜ ಎಂದು ಸಾಬೀತು ಮಾಡುತ್ತಾರೆ!” ಎಂದಳು.
“ಅಷ್ಟೆ! ಅವರು ಕಥೆ ಕಾದಂಬರಿಗಳನ್ನು ಕೇವಲ ಮನರಂಜನೆಗಾಗಿ ಓದುವವರಂತೆ! ನಾನೋ…, ಮನಃಶ್ಶಾಸ್ತ್ರವಾಗಲಿ, ತತ್ತ್ವಶಾಸ್ತ್ರವಾಗಲಿ, ಅರ್ಥಶಾಸ್ತ್ರವೇ ಆಗಲಿ, ಅದನ್ನು ಕಥೆಯಂತೆ ಬರೆಯುವವ!! ನಾನು ಏನೇ ಬರೆದರೂ ಕಥೆಯಂತೆ ಇರಬೇಕು ಅಂದುಕೊಳ್ಳುವವ!! ಅವರು…, ನನ್ನ ಮತ್ತು ಅವರ ಸಂಭಾಷಣೆಯನ್ನು ಪಬ್ಲಿಕ್ ಪೋಸ್ಟ್‌ನಂತೆ ಹಾಕಿದ್ದಾರೆ. ಆದರೆ ಅದು ಅಸ್ತವ್ಯಸ್ತವಾಗಿದೆ. ಅರ್ಥವಾಗದಂತೆ ಗೋಜಲು ಗೋಜಲಾಗಿದೆ! ಜೊತೆಗೆ ಅವರು ಕೆಲವು ಸಂಭಾಷಣೆಗಳನ್ನು ಎಡಿಟ್ ಮಾಡಿದ್ದಾರೆ! ಸೋ…, ನಾನೀಗ ನನ್ನ ಮತ್ತು ಅವರ ಸಂಭಾಷಣೆಗಳನ್ನು ಕಥೆಯಂತೆ ಜೋಡಿಸುತ್ತೇನೆ! ಇಲ್ಲಿ ಸೋಲು ಗೆಲುವು ಅಹಂಗಳಿಲ್ಲ! ಒಂದಷ್ಟು ಅಭಿಪ್ರಾಯ ಮಂಡನೆಗಳಾಗಿದೆ. ನನ್ನಬಳಿ ಎಸ್‌ಎಸ್‌ಎಲ್‌ಸಿ ಮಾರ್ಕ್ಸ್‌ಕಾರ್ಡ್ ಇಲ್ಲದಿರುವುದರಿಂದ ಅವರೇ ಒಂದು ಹಜ್ಜೆ ಮುಂದಿದ್ದಾರೆ ಅನ್ನುವುದನ್ನು ಒಪ್ಪಿ…, ಅವರಿಗೆ ಅನುಗುಣವಾಗಿಯೇ ಮುಗಿಸಲು ಶ್ರಮಿಸುತ್ತೇನೆ! ಓದುಗರಿಗೆ ಅದೊಂದು ಚಿಂತನೆಯ ವಿಷಯವಾಗಬಹುದು!” ಎಂದೆ.
“ನನಗೆ ಗೊತ್ತಿತ್ತು ನೀನು ಇದನ್ನೇ ಮಾಡುತ್ತೀಯೆಂದು!” ಎಂದಳು.
“ಮತ್ತೆ? ಈಗ ನಾನಿದನ್ನು ಮಾಡದಿದ್ದರೆ ಅದು ನಿನಗೆ ಮಾಡುವ ಅವಮಾನವಾಗುವುದಿಲ್ಲವೇ?” ಎಂದೆ.
“ಆಹಾ…, ಭಾರಿ!” ಎಂದು ಮುಗುಳುನಕ್ಕಳು!
*
ಬಹಳ ಕಷ್ಟ ಪಟ್ಟು ಆರು ಪೆಗ್‌ನಿಂದ ಒಂದು ಪೆಗ್‌ಗೆ (ದಿನಕ್ಕೆ) ಎಂಟು ವಾರಗಳಲ್ಲಿ ಇಳಿಸಿದ್ದಾಯಿತು. ಇನ್ನು ಮುಂದೆ ಪ್ರತೀ ವಾರ ಬರುವುದು ಬೇಡ ಹದಿನೈದು ದಿನಕ್ಕೆ ಒಮ್ಮೆ ಬಾ ಎಂದಿದ್ದೆ.
ಕುಡಿತದ ವಿಪರೀತ ಅಭ್ಯಾಸವಿದ್ದ ಆತನಿಗೆ ಇನ್ನೂ ಇಪ್ಪತ್ತೆಂಟು ವರ್ಷ! ಹೆಚ್ಚು ಓದಲು ಅವಕಾಶವಿಲ್ಲದೇ ಇದ್ದ ಕಾರಣ ಹತ್ತನೇ ತರಗತಿ ಮುಗಿಸಿ ಕೆಲಸಕ್ಕೆ ಸೇರಿದ್ದ- ಬೆಂಗಳೂರಿನಲ್ಲಿ! ಒಂದೊಳ್ಳೆ ಕಡೆ ಕೆಲಸ ಸಿಕ್ಕಿದೆ. ಇದೀಗ ಮತ್ತೆ ಓದಲಾರಂಭಿಸಿದ್ದಾನೆ.
ಅವನ ದೊಡ್ಡ ಸಮಸ್ಯೆ ಮತ್ತು ಸವಾಲು- ಪಾರ್ನ್ ವಿಡಿಯೋ ವೀಕ್ಷಣೆ ಮತ್ತು ಕುಡಿತ.
ಪಾರ್ನ್ ವಿಡಿಯೋ ವೀಕ್ಷಣೆಯನ್ನು…, ಇಲ್ಲವೇ ಇಲ್ಲ ಎನ್ನುವಷ್ಟು ಮಟ್ಟಿಗೆ ನಿಲ್ಲಿಸಿದ್ದಾಯಿತು. ಕುಡಿತ ಕೂಡ ಮೇಲೆ ಹೇಳಿದಂತೆ ಕಂಟ್ರೋಲಿಗೆ ಬಂತು.
ಹದಿನೈದು ದಿನಗಳ ನಂತರ ಬಂದವನೇ…,
"ಮ್ಯಾಮ್ ಮೈ ಫಿರ್‌ಸೆ ಆಧಾ ಬಾಟಲ್ ಲೇಲಿಯೋ ಕಲ್ ಮ್ಯಾಡಮ್!” ( ಮತ್ತೆ ಅರ್ಧ ಬಾಟಲ್ ತೆಗೆದುಕೊಂಡೆ ನೆನ್ನೆ ) ಅಂದ. ಹಿಂದಿಯಲ್ಲಿ ನಡೆದ ಸಂಭಾಷಣೆಯನ್ನು ಕನ್ನಡದಲ್ಲಿಯೇ ಹೇಳುವೆ.
ಇಲ್ಲಿಯವರೆಗಿನ ಎಲ್ಲಾ ಯಶಸ್ಸನ್ನೂ ಹೊಳೆಗೆ ಸುರಿದಂತಾಗಿತ್ತು. ಕೋಪಗೊಂಡಂತೆ ನಟಿಸಿ, ಸ್ಕ್ರೀನಿಗೆ ಹಾಕಲೆಂದು ಇಟ್ಟಿದ್ದ ಕೋಲಿತ್ತು ಟೇಬಲ್ ಕೆಳಗೆ, ಅದನ್ನು ಕೈಗೆ ತೆಗೆದುಕೊಂಡು…,
“ಕೈ ತೋರಿಸು!” ಅಂದೆ ಹೊಡೆಯುವಂತೆ ನಟಿಸುತ್ತಾ.
“ಮ್ಯಾಮ್ ಅವಳ (ಎಕ್ಸ್ ಗರ್ಲ್ ಫ್ರೆಂಡ್) ನೆನಪಾಯಿತು ನಾನೇನು ಮಾಡಲಿ?” ಅಂದ.
“ಸರಿ ಅವಳಿಗೆ ಶಿಕ್ಷೆ ಕೊಡಬೇಕು ಹಾಗಾದರೆ!”
“ನಹೀ ಮೇಡಂ, ಅವಳಿಗೆ ಏನೂ ಆಗಬಾರದು!” ಭಾವುಕನಾದವನ ಕಣ್ಣಲ್ಲಿ ನೀರು.
ಮೊದಲೇ ಸವಾಲಿನ ಬದುಕು. ಗುರಿ ಮುಟ್ಟೋ ಗ್ಯಾಪಿನಲ್ಲಿ ಪ್ರೀತಿ, ಬ್ರೇಕಪ್ ಎಲ್ಲಾ ಬೇಕಾ ಅಂತ ಅಂದುಕೊಂಡೇ ಸೆಶನ್ ಶುರು ಮಾಡಿದೆ.
ಎಲ್ಲೋ ಕೂತು ಎಕ್ಸ್ ಅನ್ನೂ ಮನಸಿನ ರಿಮೋಟ್ ಕಂಟ್ರೋಲಿನಿಂದ ರಿಮೋಟ್ ಆಗಿಯೇ ನಿಯಂತ್ರಿಸುತ್ತಾರಲ್ಲ ಏನೇ ಆದರೂ ಹುಡುಗೀರು ನಿಜಕ್ಕೂ ಸ್ಟ್ರಾಂಗು!
*
ಇದು ಪೋಸ್ಟ್! ಈ ಪೋಸ್ಟಿಗೆ…,
“ಥೀಂ ಇಷ್ಟೇ..., ಹೆಣ್ಣು ಅತಿ ಸುಲಭವಾಗಿ ಗಂಡಿನಿಂದ ದೂರ ಹೋಗಬಲ್ಲಳು- ಅವಳಿಗೆ ಎಕ್ಸ್‌ವೈಜೆಡ್‌ಗಳು ಸುಲಭ! ಗಂಡಿಗೆ ಆಗಲ್ಲ! ಅವಳಂತೆ ನಿನಗೂ ಆಗೋಕೆ ಏನು- ಅನ್ನೋದು ಪಾಠ!" ಎಂದು ಕಮೆಂಟ್ ಮಾಡಿದೆ.
"ಎಕ್ಸ್ ವೈ ಜೆಡ್ ಅಂತಲ್ಲ..., ಆಕೆ ನಿರ್ಧರಿಸಿದರೆ ಮೂವ್ ಆನ್ ಆಗಬಲ್ಲಳು. ಆದರೆ ಗಂಡಿಗೆ ವೈ ಸಿಗುವ ತನಕ ಎಕ್ಸ್‌ನ ಕೊರಗಿನಲ್ಲಿಯೇ ಕುಡಿದೋ ಇಲ್ಲ ಮತ್ತೊಂದು ಗೋಳಿಗೋ ಬೀಳುತ್ತಾನೆ. ವಿಪರ್ಯಾಸವೆಂದರೆ ಹೆಣ್ಣಿಗೆ ವೈ ಸಿಗುವಷ್ಟು ಬೇಗ ಗಂಡಿಗೆ ಸಿಗುವುದಿಲ್ಲ…!” ಎಂದು ರಿಕಮೆಂಟ್ ಮಾಡಿದರು.
“ಇದು ಒನ್‌ವೆ ಅಲ್ಲ...! ಕೆಲವು ಗಂಡಸರು ಹಾಗೆ ಕೆಲವು ಹೆಂಗಸರು ಹಾಗೆ...!" ಎಂದೆ. (ಇಲ್ಲಿ ಉದಾಹರಣೆಗಾಗಿ ನನ್ನ ಒಂದು ಕಥೆಯ ಲಿಂಕ್ ಹಾಕಿದ್ದೆ! ಸಮಯವಾದಾಗ ಓದಿನೋಡಿ ಹೇಳಿ ಎಂದು!)
"ಇದು ಹೆಣ್ಣು ಗಂಡು ಅಂತ ಅಲ್ಲ ಸಮಾಜ ಹಾಗು ಸೃಷ್ಟಿಯೇ ಹೀಗೆ! ಹೆಣ್ಣನ್ನು ಓಲೈಸುವ ಗಂಡಸರ ಸಂಖ್ಯೆಯಷ್ಟು..., ಗಂಡಿಗೆ ಒಲಿಯುವ ಹೆಂಗಸರ ಸಂಖ್ಯೆ ಕಡಿಮೆ- ನಾನು ಆ ಅರ್ಥದಲ್ಲಿ ಹೇಳಿದ್ದು. ಅಲ್ಲಲ್ಲಿ ಒಂದಷ್ಟು ವ್ಯತಿರಿಕ್ತಗಳು ಕಾಣಬಹುದೇನೋ. ಕೆಲವರಲ್ಲಿ ಅವರವರ ಬಾಲ್ಯದಲ್ಲಿನ ಅನುಭವಗಳು ಅವರನ್ನು ಹೇಗೆ ಎಂದು ರೂಪಿಸುತ್ತವೆ. ಆ ಅನುಭವಗಳನ್ನು ಸ್ಕೀಮಾ ಎಂದು ಕರೆಯುತ್ತೇವೆ." ಎಂದರು.
"ಇದು ಸೈಕಲಾಜಿಕಲ್ "ಮಿಸ್‌ಲೀಡ್" ಆಗುತ್ತದೆ! ಹೇಗೆ ಒಬ್ಬ ಗಂಡು ಹೆಣ್ಣಿನ ಸೌಂಧರ್ಯಕ್ಕೆ ಮರುಳಾಗಿ ಓಲೈಸಲು ಶ್ರಮಿಸುತ್ತಾನೋ ಹಾಗೆಯೇ ಹೆಣ್ಣೂ ಆಕಾರಸೌಷ್ಠವ ಹೊಂದಿದ ಗಂಡನ್ನು ಓಲೈಸಲು ಶ್ರಮಿಸುತ್ತಾಳೆ! (ವ್ಯಕ್ತಿತ್ವ ಅನ್ನುವುದು ಸೆಕೆಂಡರಿ! ಯಾಕೆಂದರೆ ಗಂಡು ಹೆಣ್ಣು ಪರಿಚಯವಾಗುವಾಗ ಪರಸ್ಪರ ವ್ಯಕ್ತಿತ್ವದ ಅರಿವಿರುವುದಿಲ್ಲ! ಅರಿವಾಗುತ್ತಾ ಆಗುತ್ತಾ ವ್ಯಕ್ತಿತ್ವ ಪ್ರೈಮರಿಯಾಗುತ್ತದೆ!) ನಿಜ ಹೇಳಬೇಕೆಂದರೆ "ಗಂಡಿಗೆ ಒಲಿಯುವ ಹೆಂಗಸರ ಸಂಖ್ಯೆ ಕಡಿಮೆ" ಅನ್ನೋದು ಸುಳ್ಳು... ಅದು ಬೆಳಕಿಗೆ ಬರೋದು ಕಡಿಮೆ- ಅಷ್ಟೆ! ಹಾಗೆಯೇ ಗಂಡೂ ಕೂಡ ಪ್ರತಿ ಹೆಣ್ಣಿಗೆ ಒಲಿಯುವುದಿಲ್ಲ. ಅವನಿಗೆ ಅವನದೇ ಆದ ಮಾನದಂಡಗಳಿದೆ... "ಹೊರಕ್ಕೆ ಬರುವ ನ್ಯೂಸ್- ಅಥವಾ ಘಟನೆಗಳ ಆಧಾರದಲ್ಲಿ" ನೀವು ಹೇಳಿದ್ದು ನಿಜವಿರಬಹುದು... ಆದರೆ ವೈಯಕ್ತಿಕ ಮನಸ್ಸನ್ನು ಪರಿಗಣಿಸಿದರೆ ಗಂಡು ಹೆಣ್ಣು ಅಂತ ಬಂದಾಗ ಪರಸ್ಪರ ಸೆಳೆಯುವುದರಲ್ಲಿ, ಒಲಿಯುವುದರಲ್ಲಿ, ಬ್ರೇಕಪ್ ಆಗುವುದರಲ್ಲಿ ಇಬ್ಬರ ಪ್ರಮಾಣವೂ ಸೇಂಟುಸೇಂ!" ಎಂದೆ.
"ನಾ ಹೇಳಿದ್ದು ಸೈಕಲಾಜಿಕಲ್ ಆಗಿಯೂ ಸರಿಯೇ, ನ್ಯೂರೋ ಸೈನ್ಸ್ ವೈಸ್ ಕೂಡ ನಿಜವೇ. ಈ ಬಗ್ಗೆಯೂ ಆರ್ಟಿಕಲ್ ಬರೆದಿರುವೆ. ನನ್ನ ಬರಹದ ಹೂರಣ ಯಾವತ್ತಿಗೂ ಅನುಭವ, ವೈಜ್ಞಾನಿಕ ಓದು ಅಥವಾ ಸುತ್ತಲಿನ ಘಟನೆ ಮಾತ್ರವಲ್ಲ, ಯೋಚಿಸಿ ಅರ್ಥ ಮಾಡಿಕೊಂಡ ಅರಿವು ಸಹಾ ಸೇರಿರುತ್ತದೆ. ಹಾಗಾಗಿ ಇದು ಸೈಕಾಲಜಿಕಲ್ಲಿ ಮಿಸ್ ಲೀಡಿಂಗ್ ಅಲ್ಲ. ನಾನು ಮೇಲೆಯೇ ಹೇಳಿದಂತೆ ಕೆಲವರನ್ನು ಬಿಟ್ಟು. (ಕೆಲವರನ್ನು ಬಿಟ್ಟು ಅನ್ನುವಲ್ಲಿ ಉತ್ತರವಿದೆ!) The chemistry between us ಎಂಬ ಪುಸ್ತಕವಿದೆ. ಅದನ್ನು ನ್ಯೂರೋ ಸೈಂಟಿಸ್ಟ್ ಬರೆದಿರುವುದು, ಆಸಕ್ತಿ ಇದ್ದರೆ ಓದಬಹುದು. ಇಲ್ಲವಾದರೆ ವೈರ್ಡ್ ಫಾರ್ ಲವ್ ಅಥವಾ ಮೇಲ್ ಬ್ರೈನ್‌ಗಳಂತಹವನ್ನೂ ಸಹಾ ಓದಬಹುದು. ಇವುಗಳನ್ನು ವೈಜ್ಞಾನಿಕ ಸಂಶೋಧನೆಯ ಆಧಾರಗಳಿಂದ ಸೈಕಾಲಜಿಸ್ಟ್‌ಗಳು ಅಥವಾ ನ್ಯೋರೋಸೈನ್ಸ್ ವಿಜ್ಞಾನಿಗಳು ಬರೆದದ್ದು. ಸೆಲ್ಪ್‌ಹೆಲ್ಪ್ ಗುರುಗಳೋ ಅಥವಾ ಕಥೆಗಾರರೋ ಬರೆದದ್ದಲ್ಲ. ಹಾಗೇ ದಯವಿಟ್ಟು ನನ್ನನ್ನು ಜಡ್ಜ್ ಮಾಡಿ ಬರೆಯುವುದನ್ನು ನಿಲ್ಲಿಸಿ! ಬರಹದ ಹೂರಣಕ್ಕೆ ಮಾತ್ರ ಮಾತಾಡುವುದು ಹೆಲ್ದಿ ಬೌಂಡರಿ ಅನಿಸುತ್ತೆ!" ಎಂದರು.
(ಇಲ್ಲಿ ನಿಮ್ಮನ್ನು ಹೇಗೆ ಜಡ್ಜ್ ಮಾಡಿದ್ದೀನೋ ನನಗಂತೂ ತಿಳಿಯುತ್ತಿಲ್ಲ! ಆ ಮಾತನ್ನು ನೀವು ಯಾಕೆ ಹೇಳಿದ್ದೀರೆಂದೂ ತಿಳಿಯುತ್ತಿಲ್ಲ!)
ಅವರ ಈ ಕಮೆಂಟ್‌ಗೆ ನನ್ನ ಕಮೆಂಟ್ ಏನೂ ಇಲ್ಲ. ಅವರೇ ಮುಂದುವರೆಸಿದ್ದಾರೆ...,
"ಗಂಡಿಗೆ ಒಲಿಯುವ ಹೆಣ್ಣುಗಳ ಸಂಖ್ಯೆ ಹೆಣ್ಣನ್ನು ಓಲೈಸುವ ಗಂಡುಗಳಿಗಿಂತ ಕಡಿಮೆ!" ಇದನ್ನು ಸುಳ್ಳು ಎಂದು ಹೇಳಲು ನಿಮ್ಮಲ್ಲಿ ಆಧಾರವಾದ ಪುಸ್ತಕ ಅಥವಾ ಸಂಶೋಧನೆಗಳನ್ನು ತಿಳಿಸಿ. ನನ್ನ ವಿಚಾರಕ್ಕೆ ಆಧಾರವಾದ ಪುಸ್ತಕಗಳನ್ನು ಈಗಾಗಲೇ ಹೇಳಿರುವೆ!” ಎಂದರು. ನಂತರ ನನ್ನ ಕಮೆಂಟ್ ಅನ್ನು ಪಾಯಿಂಟ್ ಬೈ ಪಾಯಿಂಟ್ ಮಾಡಿ ವಿವರಣೆಯನ್ನು ಕೊಟ್ಟಿದ್ದಾರೆ…, ಹೀಗೆ…, ಅರ್ಥವಾಗಲು ಅದನ್ನು ಡಬಲ್ ಬ್ರಾಕೆಟ್‌ನಲ್ಲಿ ಕೊಡುತ್ತೇನೆ…, ಸ್ಕಿಪ್ ಮಾಡಿ ಓದಿದರೂ ಸಮಸ್ಯೆ ಇಲ್ಲ!
{(೧."ಇದು ಸೈಕಲಾಜಿಕಲ್ "ಮಿಸ್‌ಲೀಡ್" ಆಗುತ್ತದೆ!" ನನ್ನ ಮಾತು...!
"ಇದಕ್ಕೆ ಇನ್ನೊಂದು ಕಾಮೆಂಟಿನಲ್ಲಿ ಉತ್ತರ ಕೊಟ್ಟಿರುವೆ" ಅವರ ಮಾತು…!
೨. "ಹೇಗೆ ಒಬ್ಬ ಗಂಡು ಹೆಣ್ಣಿನ ಸೌಂಧರ್ಯಕ್ಕೆ ಮರುಳಾಗಿ ಓಲೈಸಲು ಶ್ರಮಿಸುತ್ತಾನೋ ಹಾಗೆಯೇ ಹೆಣ್ಣೂ ಆಕಾರಸೌಷ್ಠವ ಹೊಂದಿದ ಗಂಡನ್ನು ಓಲೈಸಲು ಶ್ರಮಿಸುತ್ತಾಳೆ! (ವ್ಯಕ್ತಿತ್ವ ಅನ್ನುವುದು ಸೆಕಂಡರಿ!)" ನನ್ನ ಮಾತು!
"ನಾನು ಇದನ್ನು ಅಲ್ಲಗೆಳೆದೇ ಇಲ್ಲ ಅಸಲಿಗೆ ಇದು ಚರ್ಚೆಯೇ ಅಲ್ಲ ಆದರೂ ವ್ಯಕ್ತಿತ್ವ ಅನ್ನುವುದೇ ಪ್ರೈಮರೀ." ಅವರ ಮಾತು!
೩. "ನಿಜ ಹೇಳಬೇಕೆಂದರೆ "ಗಂಡಿಗೆ ಒಲಿಯುವ ಹೆಂಗಸರ ಸಂಖ್ಯೆ ಕಡಿಮೆ" ಅನ್ನೋದು ಸುಳ್ಳು" ನನ್ನ ಮಾತು.
"ಇದಕ್ಕೆ ಯಾವ ಆಧಾರವಿದೆ?" ಅವರ ಪ್ರಶ್ನೆ.
೪. "ಅದು ಬೆಳಕಿಗೆ ಬರೋದು ಕಡಿಮೆ- ಅಷ್ಟೆ! ಹಾಗೆಯೇ ಗಂಡೂ ಕೂಡ ಪ್ರತಿ ಹೆಣ್ಣಿಗೆ ಒಲಿಯುವುದಿಲ್ಲ. ಅವನಿಗೆ ಅವನದೇ ಆದ ಮಾನದಂಡಗಳಿದೆ... "ಹೊರಕ್ಕೆ ಬರುವ ನ್ಯೂಸ್- ಅಥವಾ ಘಟನೆಗಳ ಆಧಾರದಲ್ಲಿ" ನೀವು ಹೇಳಿದ್ದು ನಿಜವಿರಬಹುದು... ಆದರೆ ವೈಯಕ್ತಿಕ ಮನಸ್ಸನ್ನು ಪರಿಗಣಿಸಿದರೆ ಗಂಡು ಹೆಣ್ಣು ಅಂತ ಬಂದಾಗ ಪರಸ್ಪರ ಸೆಳೆಯುವುದರಲ್ಲಿ, ಒಲಿಯುವುದರಲ್ಲಿ, ಬ್ರೇಕಪ್ ಆಗುವುದರಲ್ಲಿ ಇಬ್ಬರ ಪ್ರಮಾಣವೂ ಸೇಂಟುಸೇಂ!" ನನ್ನ ಮಾತು!
"ಇದಕ್ಕೆ ಅಂಕಿ ಅಂಶಗಳನ್ನು ಕೊಡಿ. ಅಥವಾ ವೈಜ್ಞಾನಿಕ ಆಧಾರಗಳ ಪುಸ್ತಕಗಳನ್ನು ಕೊಡಿ ನಾನೇ ಹುಡುಕಿಕೊಳ್ಳುವೆ." ಅವರ ಮಾತು!)}
"ಹಾಗಿದ್ದರೆ ನಿಮ್ಮ ಪ್ರತಿಯೊಂದು ಅಭಿಪ್ರಾಯವೂ "ಬೇರೊಂದು ಆಧಾರದಮೇಲೆ" ಡಿಪೆಂಡ್ ಆಗಿದೆ ಅಂತ ಆಯ್ತು! ನಿಮ್ಮ ಅಭಿಪ್ರಾಯಕ್ಕೆ ವಿರುದ್ಧವಾಗಿ ಹೇಳಿದರೆ ಅದು ನಿಮ್ಮನ್ನು ಜಡ್ಜ್ ಮಾಡುವುದು ಅಲ್ಲ... ಹೇಗೆ ಒಬ್ಬರು ಒಂದು ಥೀಸಿಸ್ (ಇದು ಹೀಗೆಯೇ) ಎಂದು ಬರೆಯುತ್ತಾರೋ ಹಾಗೆ ನಾನು ಹೇಳುವುದು ನನ್ನ ಥೀಸಿಸ್... ನೀವು ಇನ್ನೊಬ್ಬರು ಹೇಳಿದ್ದರಿಂದ ಇದು ಹೀಗೆ ಅನ್ನುತ್ತೀರಿ... ನಾನು ಹೇಳುವ ಮಾತಿಗೆ "ಈ ಆಧಾರವಿದೆ" ಅನ್ನುತ್ತೀರಿ (ಮಾರ್ಕ್ಸ್‌ಕಾರ್ಡ್!).... ನನ್ನ ಕೆಲಸವೇ ಆ ಆಧಾರಗಳನ್ನು ಅಲ್ಲಗಳೆಯುವುದು!! ಅವರು ಹೇಳಿದ್ದರಿಂದ ಅದು ಹಾಗಲ್ಲ ಅಂತ!!! ಪ್ರಪಂಚದಲ್ಲಿ ಏಳುನೂರು ಕೋಟಿ ಜನಸಂಖ್ಯೆಯಿದ್ದರೆ ಅಷ್ಟೂ ಮನಸ್ತಿತಿ ಇದೆ ಎಂದು ಅರ್ಥ... ನೀವು ನೂರು ಜನರ ಮನಸ್ಸನ್ನು ಅಧ್ಯಯನ ಮಾಡಿ (ಪರಿಪೂರ್ಣ ಅಧ್ಯಯನ ಅಸಾಧ್ಯ!) ಅದರಲ್ಲಿರುವ ಕೆಲವು ಸಾಮ್ಯತೆಗಳನ್ನು ಗುರುತಿಸಿ ಇದು ಹೀಗೆಯೇ ಅನ್ನುತ್ತೀರಿ... ನಾನು ನೂರ ಒಂದನೆಯವನಬಗ್ಗೆ ಹೇಳುತ್ತೇನೆ! ಹಾಗೆಯೇ ಗಂಡು ಹೆಣ್ಣು ಓಲೈಕೆಯಲ್ಲಿ ವ್ಯಕ್ತಿತ್ವ ಪ್ರೈಮರಿ ಆಗುವುದು ಮೊದಲ ಓಲೈಕೆಯ ನಂತರ- ಅಂದರೆ ಪರಸ್ಪರ ಪರಿಚಯವಾದ ನಂತರ! ನೀವು ಪರ್ಸನಲ್ ಆಗಿ ಅಡ್ರೆಸ್ ಕಳಿಸಿದರೆ ಪುಸ್ತಕವೊಂದನ್ನು ಕಳಿಸುತ್ತೇನೆ... ಅದೊಂದು ಮನೋವೈಜ್ಞಾನಿಕ ಕಾದಂಬರಿ... ಓದಿ ಅದರಲ್ಲಿರುವ ವ್ಯಕ್ತಿತ್ವಗಳು "ನೀವು ಓದಿದ ಆಧಾರಗಳಲ್ಲಿ" ಇದೆಯೋ ಇಲ್ಲವೋ ಹೇಳಿ.... ಮನಃಶ್ಶಾಸ್ತ್ರವೆನ್ನುವುದು ಮನುಷ್ಯ ಮನಸ್ಸಿನ ಅಧ್ಯಯನವೇ ಹೊರತು ಇನ್ನೊಬ್ಬರು- ಮನುಷ್ಯ ಮನಸ್ಸಿನಬಗ್ಗೆ ಹೇಳಿದ ವಿಷಯಗಳನ್ನು ಅಧ್ಯಯನ ಮಾಡುವುದಲ್ಲ!! ನನ್ನ ಪ್ರತಿಯೊಂದು ಅಭಿಪ್ರಾಯವೂ ನನ್ನ ವೈಯಕ್ತಿಕ ಅನುಭವದ ಆಧಾರದ ಮೇಲೆ!" ಎಂದು ಹೇಳಿದೆ.
"ಇದು ಸೀದಾ ವೈಯಕ್ತಿಕ ಧಾಳಿ! ನನ್ನ ಬಗೆಗಿನ ಅಭಿಪ್ರಾಯ. ನಾನು ಕಾಮೆಂಟಿನಲ್ಲಿ ನನ್ನ ಅನುಭವ ನನ್ನ ಸುತ್ತಲಿನ ಘಟನೆ ನನ್ನ ಓದು ಹಾಗು ಇವುಗಳೆಲ್ಲದರ ಮೂಲಕ ನಾ ಪಡೆದ ಅರಿವು ಎಂದೂ ಬರೆದಿದ್ದೆ. (ಇದನ್ನೇ ನಾನು ಹೇಳಿದರೆ ಆಧಾರ ಕೇಳಬಹುದೇ?!) ನೀವದನ್ನು ಓದಲಿಲ್ಲ. ಇರಲಿ ಬಿಡಿ. ಸೆಲೆಕ್ಟೀವ್ ರೀಡಿಂಗ್ ಅಷ್ಟೇ. ಗಾಳಿಯಲ್ಲಿ ಆಕ್ಸಿಜನ್ ಇದೆ ಎಂಬುದನ್ನು ಜನ ಓದಿಯೇ ಅರ್ಥ ಮಾಡಿಕೊಂಡಿದ್ದು. ಮನುಷ್ಯನಿಗೆ ಮೆದುಳಿದೆ ಎಂಬುದನ್ನು ಸುತ್ತಮುತ್ತಲಿನ ಅಥವಾ ಓದನ್ನು ನೋಡಿಯೇ ಅರ್ಥ ಮಾಡಿಕೊಂಡದ್ದು. ನಾನೊಬ್ಬ ಸೈಕಾಲಜಿ ಲೈಫ್ ಲಾಂಗ್ ವಿದ್ಯಾರ್ಥಿ ಆಗಿ ಅಥೆಂಟಿಕ್ ಎನಿಸುವ ಮೂಲಗಳನ್ನೇ ನಂಬುವುದು. ಹಾಗೆಯೇ ಪರಾಮರ್ಶಿಸುವುದು. ಕಾದಂಬರಿಗಳು ನನಗೆ ಮನರಂಜನೆಯ ಓದಿಗಷ್ಟೇ, ಹಾಗಾಗಿ ಕಳಿಸಿ…, ಓದಲು ಅಡ್ಡಿ ಇಲ್ಲ. ನಾನು ಆಕರ ಕೇಳಿದ್ದು ನಿಮಗೆ ನನ್ನ ವಿರೋಧ ಜನಿಸಿದ್ದರಿಂದ. ಸೀದಾ ವೈಯಕ್ತಿಕ ಧಾಳಿ ಆಗಿ ಬದಲಾಗಿದೆ. ನಾನು ಇನ್ನು ಈ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ನಿಮ್ಮ ಅಭಿಪ್ರಾಯ ನೀವು ಹೊಂದಲು ನೀವು ಹೇಗೆ ಸರ್ವ ಸ್ವತಂತ್ರರೋ ಹಾಗೆಯೇ ನನ್ನ ಓದು ಹಾಗು ಇತರೇ ಅಥೆಂಟಿಕ್ ಮೂಲಗಳಿಂದ ಬಂದ ಅರಿವನ್ನು ನಾನು ಉಲ್ಲೇಖಿಸಲು ನನಗೂ ಪೂರ್ಣ ಸ್ವಾತಂತ್ರ್ಯವಿದೆ. ನಮಸ್ತೆ!” ಎಂದರು.
(ಇಲ್ಲಿ ನಾನು ಮಾಡಿದ ವೈಯಕ್ತಿಕ ದಾಳಿ ಯಾವುದೆಂದು ಇನ್ನೂ ನನಗೆ ಗೊತ್ತಾಗಿಲ್ಲ! ನೀವು ಆಧಾರ ಕೇಳಿದಿರಿ- ಆಧಾರ ಕೇಳಬೇಕೆಂದರೆ ನಿಮ್ಮ ಮಾತಿಗೆ ಒಂದು ಆಧಾರ ಇರಬೇಕು! ಹಾಗೆ ಆಧಾರ ಇಟ್ಟುಕೊಂಡು ಹೇಳುವುದು ನಿಮ್ಮ ಮಾತು ಹೇಗೆ ಆಗುತ್ತದೋ ನನಗೆ ಗೊತ್ತಿಲ್ಲ! ಇನ್ನು ನಿಮ್ಮದೇ ಅನುಭವ, ಅಧ್ಯಯನದಿಂದ ಹೇಳಿದ ಮಾತಾದರೆ…, ನನ್ನದೂ ಕೂಡ ನನ್ನದೇ ಅಧ್ಯಯನ, ಅನುಭವಗಳಿಂದ ಕೂಡಿದ ಮಾತು! ನನ್ನ ಪರ್ಸನಲ್ ಅನುಭವ ಅನ್ನುವುದು ನಿಮಗೆ ಬೇಡ! ಸೊ ನಾನೇನೂ ಕಮೆಂಟ್ ಮಾಡಿಲ್ಲ.)
“ಸರಿ ನೀವೆಷ್ಟು ಮನುಷ್ಯರ ಮನಸಿನ ಅಧ್ಯಯನ ಮಾಡಿದ್ದೀರಿ. ಕೇವಲ ನಿಮ್ಮ ಅನುಭವ ಅಂದರೆ ಅದು ನಿಮ್ಮ ಅಭಿಪ್ರಾಯವೇ ಹೊರತು ಅಥೆಂಟಿಕ್ ಅಂತ ಪ್ರೂವ್ ಆಗುವುದಿಲ್ಲ! (ಪ್ರತಿಯೊಂದು ಥೀಸಿಸ್ ಕೂಡ ಅವರವರ ಅನುಭವವೇ!) ನಾನೂ ಅದರ ಬಗ್ಗೆ ಕೇಳುವುದೂ ಇಲ್ಲ! ನೀವೂ ಪ್ರಯೋಗ ಮಾಡಿದ್ದೀರಿ ಅಂದರೆ ಅದರ ಅಧ್ಯಯನವ್ನನು ಪ್ರಸ್ತುತ ಪಡಿಸಿ! ಒಬ್ಬರನ್ನು ಹಣಿಯಲು ಕೇವಲ ಅಭಿಪ್ರಾಯ ಸಾಕು. ಆದರೆ ಒಂದು ವಿಷಯವನ್ನು ನಿಜ ಎಂದು ನಿರೂಪಿಸಲು ಆಕರಗಳು ಬೇಕು! ನಿಮ್ಮ ವಾದವಾಗಲಿ ಜಡ್ಜ್‌ಮೆಂಟ್ ಆಗಲೀ ನನಗೆ ಬೇಡ! ಏಕೆಂದರೆ ನೀವು ಯಾರಂತ ನನಗೆ ಗೊತ್ತಿಲ್ಲ. ನಿಮ್ಮ ಅಭಿಪ್ರಾಯವನ್ನು ಗೌರವಿಸಬಲ್ಲೆನೇ ಹೊರತು ಒಪ್ಪಲು ನನಗೆ ಆಕರಗಳು ಬೇಕು. ಅದೂ ನಾನು ಪ್ರಾಕ್ಟೀಸ್ ಮಾಡುತ್ತಿರುವ ವಿಷಯದ ಮೇಲೆ!" ಎಂದರು.
(ನಾನು ನಿಮಗೆ ಒಂದು ಲಿಂಕ್ ಕಳಿಸಿದ್ದೆ- ನನ್ನ ಅಧ್ಯಯನ ಅದು! ಜೊತೆಗೆ ಒಂದು ಪುಸ್ತಕ ಕಳಿಸಿ ಕೊಡುವುದಾಗಿ ಹೇಳಿದ್ದೆ! ಸೈಕಲಾಜಿಕಲ್ ಕಾದಂಬರಿ- ನಾನು ಒದಗಿಸಬಹುದಾದ ಆಧಾರ ಅದು! ನನ್ನ ಅಧ್ಯಯನ! ಆದರೆ ನೀವು ಕಾದಂಬರಿಗಳನ್ನು ಮನರಂಜನೆಗೆ ಮಾತ್ರ ಓದುವುದೆಂದು ನಾನು ಒದಗಿಸಬಯಸಿದ ಆಧಾರವನ್ನು ತಾತ್ಸಾರ ಮಾಡಿದಿರಿ!)
"ಓಕೆ! ಹಾಗೆಯೇ..., ನಿಮ್ಮ ಪ್ರತಿಯೊಂದು ವಿಷಯವನ್ನು ಒಪ್ಪಲಾಗುವುದಿಲ್ಲ! ಪಬ್ಲಿಕ್ ಪೋಸ್ಟ್ ಹಾಕಿರುತ್ತೀರಿ..., ಓದುತ್ತೇನೆ..., ಅಭಿಪ್ರಾಯ ವ್ಯತ್ಯಾಸವಿದ್ದರೆ ಹೇಳುತ್ತೇನೆ... ಅದನ್ನು ಒಪ್ಪುವುದು ಬಿಡುವುದು ಹೇಗೆ ನಿಮಗೆ ಬಿಟ್ಟಿದ್ದೋ ಹಾಗೇ ನಿಮ್ಮ ಬರಹಗಳನ್ನು ಓದುಗರು ಒಪ್ಪುವುದೂ ಕೂಡ! ನಿಮಗೆ ನಾನು ಗೊತ್ತಿಲ್ಲ..., ಆದರೆ ನಿಮ್ಮನ್ನು ನನಗೆ ಗೊತ್ತು! ಸ್ಟಡಿ ಮಾಡಿದ್ದೇನೆ!" ಎಂದೆ.
(ಮೊದಲಬಾರಿ ನಿಮ್ಮನ್ನು ಸ್ಟಡಿ ಮಾಡಿದ್ದೇನೆ ಅಂದಿದ್ದೇನೆ! ಅದೂ ಕೂಡ ಜಡ್ಜ್‌ಮೆಂಟ್ ಅನ್ನಿಸುತ್ತದೆಯೋ ಇಲ್ಲವೋ! ಧಾಳಿ ಅನ್ನಿಸುತ್ತದೆಯೋ ಇಲ್ಲವೋ!)
"ಓ ಸೂಪರ್. ನಿಮ್ಮ ಅಧ್ಯಯನ ಹೀಗೇ ಮುಂದುವರೆಯಲಿ. ಆದರೆ ನನ್ನ ಬಗ್ಗೆ ಬೇಡವಾಗಿತ್ತು. ಇರಲಿ ನಿಮ್ಮ ಸ್ಟಡಿಯಲ್ಲಿ ಖಂಡಿತಾ ನನಗೇ ಗೊತ್ತಿಲ್ಲದ ವಿಷಯಗಳಿರುತ್ತವೆ. ತಿಳಿಯಲು ಉತ್ಸುಕಳಾಗಿರುವೆ. ಇನ್ನು ನಿಮ್ಮ ಹಿಂದಿನ ಕಾಮೆಂಟಿನಲ್ಲಿ ಇದು ಸೈಕಾಲಜಿಕಲ್ಲಿ ಮಿಸ್‌ಲೀಡಿಂಗ್ ಎಂದು ಹೇಳಿದ್ದೀರಿ. ಆದ್ದರಿಂದ ಅದನ್ನು ಪ್ರೂವ್ ಮಾಡಿ ಎಂದು ಕೇಳಬೇಕಾಯಿತು. ನೀವು "ನನ್ನ ಅಭಿಪ್ರಾಯದ ಪ್ರಕಾರ ಇದು ಸರಿ ಅಲ್ಲ" ಎಂದಿದ್ದರೆ ನಾನು ಆಯಿತು ಎಂದಿರುತ್ತಿದ್ದೆ.
ನೀವು ನಾನು ಬೇರೆಯವರು ಹೇಳಿದ್ದನ್ನೇ ಹೇಳುವುದು ಎಂದು ನನ್ನನ್ನು ಜಡ್ಜ್ ಮಾಡಲು ಪ್ರಯತ್ನಿಸಿದ್ದು ವೈಯಕ್ತಿಕ ಧಾಳಿ. (ನಾನೆಲ್ಲಿ ಜಡ್ಜ್‌ಮಾಡಿದೆ? ನೀವೇ ಹೇಳಿದ್ದು- ನನ್ನ ಹೇಳಿಕೆಗೆ ಆಧಾರವಿದೆಯೆಂದು!!!) ವಾದದಲ್ಲಿ ಯಾವಾಗ ನಿಮ್ಮ ಗುಣ, ನಿಮ್ಮ ರೀತೀ, ನಿಮ್ಮ ಹಿನ್ನೆಲೆ, ನಿಮ್ಮನ್ನು ಸ್ಟಡಿ ಮಾಡಿರುವೆ ಎಂದೆಲ್ಲಾ ಬರುತ್ತದೆಯೋ ಆಗ ಚರ್ಚೆ ಹಳಿ ತಪ್ಪಿ ವೈಯಕ್ತಿಕ ಧಾಳಿ ಆಗುತ್ತದೆ! (ನನ್ನ ಕೊನೆಯ ಕಮೆಂಟ್‌ಗಾದರೆ ಇದು ಒಪ್ಪಿತ!) unless ನಾನು ನಿಮ್ಮನ್ನು ನನ್ನ ಬಗ್ಗೆ ಹೇಳಿ ಎಂದು ಕೇಳಿರದ ಹೊರತು. ಇನ್ನು ನಮಸ್ತೆ!” ಎಂದರು.
“ಅದು ನನ್ನ ಜಡ್ಜ್‌ಮೆಂಟ್ ಅಲ್ಲ! ನೀವೇ ಹೇಳಿದ್ದು! ಇಲ್ಲೇ ನೋಡಿ ಇಬ್ಬರೂ ಮಿಸ್‌ಲೀಡ್ ಆಗಿದ್ದು! ನೀವು ನನ್ನ ಅಭಿಪ್ರಾಯ ಒಪ್ಪದೆ ಆಧಾರ ಕೇಳಿದಿರಿ! "ನನ್ನ ವೈಯಕ್ತಿಕ ಅಭಿಪ್ರಾಯ" ಅಂದಿದ್ದರೆ ಒಪ್ಪುತ್ತಿದ್ದೆ ಅಂದಿರಿ! ಸೊ ನೀವು ಹೇಳುವ ಪ್ರತಿಯೊಂದೂ "ಆಧಾರದ" ಮೇಲೆ ಅನ್ನೋದು ಸ್ಪಷ್ಟ- ನಿಮ್ಮ ಅಭಿಪ್ರಾಯವಲ್ಲ! ಇಲ್ಲಿ ನನ್ನ ಜಡ್ಜ್‌ಮೆಂಟ್ ಎಲ್ಲಿದೆ? ಪೋಸ್ಟ್ ನಿಮ್ಮದೇ ಅಭಿಪ್ರಾಯವಾದರೆ ಅದಕ್ಕೆ ಕಮೆಂಟ್ ನನ್ನ ಅಭಿಪ್ರಾಯ! ಪೋಸ್ಟ್ ನಿಮ್ಮ ಅಭಿಪ್ರಾಯ ಅಲ್ಲವಾದರೆ..., ಅದಕ್ಕೆ ಕೊಟ್ಟ ನನ್ನ ಕಮೆಂಟ್‌ಗೆ ಆಧಾರ ಕೇಳುತ್ತೀರಿ! ಅದಕ್ಕೆ ನಾನು ಏನೂ ಮಾಡಲಾಗದು! ಇನ್ನು.... ನಿಮ್ಮಬಗ್ಗೆ ಅಧ್ಯಯನ ಮಾಡಿದ್ದೇನೆ ಅಂದರೆ ಅರ್ಥ ನಿಮ್ಮ ಹಲವಾರು ಬರಹಗಳನ್ನು ಓದಿದ್ದೇನೆ, ಅಭಿಪ್ರಾಯಗಳನ್ನು ನೋಡಿದ್ದೇನೆ, ಧಾಟಿಯ ಅರಿವಿದೆ, ಇನ್ನೊಬ್ಬರ ಬಗ್ಗೆ ನಿಮ್ಮ ಅಭಿಪ್ರಾಯಗಳು, ಇನ್ನೊಬ್ಬರ ಅಭಿಪ್ರಾಯದಬಗ್ಗೆ ನಿಮ್ಮ ನಿಲುವುಗಳು, ನಿಮ್ಮ "ಸ್ಟಡಿ"ಯ ಬಗ್ಗೆ ನಿಮಗಿರುವ ನಂಬಿಕೆ, ಕಮಾಂಡಿಂಗ್‌ನೆಸ್, ಸಣ್ಣ ಸಣ್ಣ ವಿಷಯಕ್ಕೆ ಡಿಸ್ಟರ್ಬ್ ಆಗುವುದು..... ನಿಮ್ಮ ಬಗ್ಗೆ ಒಂದು ಐಡಿಯಾ ಅಂತೂ ಸಿಗುತ್ತದೆ! ಸ್ವಸ್ತಿ... ನಮಸ್ತೇ... ಇನ್ನು ನಿಮ್ಮ ಪೊಸ್ಟ್‌ಗಳಿಗೆ ಕಮೆಂಟ್ ಮಾಡುವುದಿಲ್ಲ- ಇನ್ನೊಬ್ಬರ ಅಭಿಪ್ರಾಯ ನಿಮಗೆ ಬೇಕಾಗಿಲ್ಲವಾದ್ದರಿಂದ!" ಎಂದು ಮುಗಿಸಿದೆ!
"ಧನ್ಯವಾದಗಳು. ನನ್ನ ಮಾತು ಮಿಸ್‌ಲೀಡ್..., ಅದೂ ಸೈಕಾಲಜಿಕಲ್ಲಿ ಅಂದಾಗ ಅದಕ್ಕೆ ಆಧಾರ ಕೊಡಬೇಕಾದದ್ದು ಕರ್ತವ್ಯ. ನೀವದನ್ನು ಇನ್ನೂ ವರೆಗೆ ಮಾಡಿಲ್ಲ. ನನಗೆ ನೀವು…, ಸುತ್ತಲಿನ ಘಟನೆ, ನಿಮ್ಮ ಅನುಭವ ಮಾತ್ರ ನೋಡಿದ್ದೀರಿ ಎಂದಿದ್ದು ನಿಮಗೇ ಮರೆತು ಹೋಯಿತು. ಅಭಿಪ್ರಾಯ ಬೇರೆ ಇನ್ನೊಬ್ಬರ ಹೇಳಿಕೆಯನ್ನು ಆಧಾರವಿಲ್ಲದೇ ಅಲ್ಲಗೆಳೆಯುವುದು ಬೇರೆ! (ಸುತ್ತಮುತ್ತಲಿನ ಘಟನೆ ಎಂದು ಹೇಳಿಲ್ಲ! ನನ್ನ ವೈಯಕ್ತಿಕ ಅನುಭವವೆಂದಷ್ಟೇ ಹೇಳಿದ್ದೇನೆ! ಇಲ್ಲಿ ಅಲ್ಲಗಳೆದಿರುವುದಕ್ಕೆ ಕಾರಣ ನನ್ನ ಅನುಭವ! ನಿಮ್ಮ ಹೇಳಿಕೆಗೆ ವಿರುದ್ಧವಾದ ನನ್ನ ವೈಯಕ್ತಿಕ ಅನುಭವ! ನಿಮ್ಮ ಹೇಳಿಕೆಗೆ ಕಾರಣ ಬೇರೊಬ್ಬರು ಹೇಳಿದ ಅನುಭವ- ಆಧಾರ!!) ನೀವದನ್ನು ಮಾಡಿದಿರಿ! ಅದರ ಕಾನ್ಸೀಕ್ವೆನ್ಸ್ ಅಷ್ಟೇ. ಈಗಲೂ ನಾನು ನಿಮ್ಮ ಬಗೆಗೆ ಏನೂ ಹೇಳಿಲ್ಲ... ನಿಮ್ಮ ಇಲ್ಲಿನ ಹೇಳಿಕೆಗಳ ಬಗ್ಗೆ ಬಿಟ್ಟು! (ನಾನೂ ಕೂಡ ನಿಮ್ಮ ಹೇಳಿಕೆಗಳಿಗೇ ಹೇಳಿರುವುದು!) ಆದರೆ ನೀವು ನನ್ನ ಬಗ್ಗೆ ಹೇಳಿದ ಮಾತುಗಳು ವೈಯಕ್ತಿಕ..! (ಹೇಗೆ?) ಇರಲಿ. ಇನ್ನು ನನ್ನ ಬಗೆಗಿನ ನಿಮ್ಮ ಮಾತುಗಳು ಕೇವಲ ನಿಮ್ಮ ಅಭಿಪ್ರಾಯವಷ್ಟೇ..! ಅದು ನನ್ನನ್ನು ಡಿಫೈನ್ ಮಾಡಬೇಕಿಲ್ಲ. ಇನ್ನು ಡಿಸ್ಟರ್ಬ್ ಮಾಡುವುದಂತೂ ದೂರದ ಮಾತು. ನಿಮ್ಮ ಅಭಿಪ್ರಾಯಮಾತ್ರವಲ್ಲ ಎಲ್ಲರ ಅಭಿಪ್ರಾಯವೂ ಬೇಕು. ಆದರೆ ಅದನ್ನು ಅರಹುವ ಸಮಯದಲ್ಲಿ ನೀವು ನನಗೆ ಮಾಡಿದ ಪರೋಕ್ಷ ಅವಹೇಳನ ನಿಮಗೆ ಗೊತ್ತಾಗುತ್ತಿಲ್ಲ...! (ನಿಜಕ್ಕೂ ಗೊತ್ತಾಗುತ್ತಿಲ್ಲ! ವೈಯಕ್ತಿಕವಾಗಿ ತೆಗೆದುಕೊಂಡರೆ ಹೊಣೆ ಕಮೆಂಟ್‌ದಾರನಲ್ಲ!) ಸೈಕಲಾಜಿಕಲ್ಲಿ ಮಿಸ್ ಲೀಡಿಂಗ್ ಎಂಬ…, ಮತ್ತು "ನಿಮ್ಮ ಅನುಭವ (ಅಷ್ಟೆ! ಸುತ್ತಮುತ್ತಲಿನ ಘಟನೆ ಅನ್ನುವುದು ನಿಮ್ಮ ತಲೆಯೊಳಗೆ ಹೇಗೆ ಸೇರಿದೆಯೋ ಅರ್ಥವಾಗುತ್ತಿಲ್ಲ! ಸುತ್ತಮುತ್ತಲಿನ ಘಟನೆಗೂ ವೈಯಕ್ತಿಕ ಅನುಭವಕ್ಕೂ ವ್ಯತ್ಯಾಸವಿದೆ!) ಹಾಗು ಸುತ್ತಮುತ್ತಲಿನ ಘಟನೆ ಇವುಗಳ ಆಧಾರದ ಮೇಲೆ ಹೇಳುತ್ತಿದ್ದೀರಿ" ಎಂಬ ಮಾತುಗಳು ನನ್ನ ಓದನ್ನು ಹಾಗೂ ಅರಿವನ್ನು ಅಲ್ಲಗೆಳೆದಂತಿದ್ದುದರಿಂದ (ಈಗೋ ಮ್ಯಾಟರ್! ಇನ್ನೊಬ್ಬರುಹೇಳಿದ ಅನುಭವ ಮತ್ತು ಸುತ್ತಮುತ್ತಲಿನ ಘಟನೆಯನ್ನು “ಆಧಾರವಾಗಿಟ್ಟುಕೊಂಡು” ನೀವು ಹೇಳಬಹುದಾದರೆ ನನ್ನ ಅನುಭವವನ್ನು ಯಾಕೆ ಒಪ್ಪುವುದಿಲ್ಲ? ಹೋಗಲಿ ನಿಮ್ಮದೇ ಹೇಳಿಕೆಯಾದರೆ ಅದಕ್ಕೆ ಉತ್ತರವಾಗಿ ನನ್ನ ಹೇಳಿಕೆ! ಅದು ಅಲ್ಲಗಳೆಯುವುದು ಹೇಗಾಗುತ್ತದೆ?) ನಾನು ಮರುಪ್ರಶ್ನೆ ಹಾಕಲೇಬೇಕಾಯಿತು! ಆದರೆ ನೀವು ನನ್ನ ಮೇಲೆಯೇ ಆಪಾದನೆ ಹಾಕಿ ಹೋಗುತ್ತಿದ್ದೀರಿ. (ಹೇಗೆ?) ನನ್ನ ಕಡೆ ಗುರಿ ಇಟ್ಟು ಬರೆದ ಕಾಮೆಂಟ್ ನಿಮ್ಮದು ಎಂದು ನಿಮಗೆ ಇನ್ನೂ ಗೊತ್ತಾಗಿಯೇ ಇಲ್ಲ (ಖಂಡಿತಾ ಇಲ್ಲ!) ಎನ್ನುವುದು…, ನನ್ನನ್ನು ಅರ್ಥ ಮಾಡಿಸುವ ನಿಮ್ಮ ಸಾಮರ್ಥ್ಯಕ್ಕೆ ಮೀರಿದ್ದು (ಯಾರೊಬ್ಬರಿಗೂ ನಿಮ್ಮನ್ನು ಅರ್ಥಮಾಡಿಸಲು ಸಾಧ್ಯವಿಲ್ಲ! ಕಾರಣ ನೀವು ಪರಿಪೂರ್ಣರು! ಕೆಲವು ಇಂಗ್ಲೀಷರು ಬರೆದ ಥೀಸಿಸ್‌ಗಳ ಹೊರತು ಯೋರಬ್ಬರ ಅಭಿಪ್ರಾಯ ಅನುಭವ ಅರಿವನ್ನು ಮನ್ನಿಸದವರು!) ಎಂದು ತಿಳಿದು ನಾನೂ ಇಲ್ಲಿಗೆ ಇತಿಶ್ರಿ ಹಾಡುವೆ. ಹೋಗಿಬನ್ನಿ ನಮಸ್ಕಾರ!!”
ನಂತರ ನಾನೇನೂ ಹೇಳಿಲ್ಲ!
*
“ಈಗ ಕಂಕ್ಲೂಷನ್ ಏನು ಕೊಡುತ್ತೀಯ? ಸೈಕಲಾಜಿಕಲ್ ಮಿಸ್ ಲೀಡಿಂಗ್ ಅನ್ನೋ ನಿನ್ನ ಮಾತಿನಿಂದ ಅವರ ಈಗೋ ಹರ್ಟ್ ಆಗಿದೆ ಮಾರಾಯ!" ಎಂದಳು.
"ಓ... ಹೌದಲ್ವಾ...? ಅವರ ದುಗುಡ ಈಗ ಅರ್ಥವಾಗುತ್ತಿದೆಯೇ! ಪಾಪ! ನನ್ನ ಅನುಭವದ ಆಧಾರದಮೇಲೆ ಅಂದಿದ್ದು ಅವರ ಈಗೋ ಹರ್ಟ್ ಮಾಡಿದೆ! ಅದನ್ನೇ ಅವರು ಜಡ್ಜ್‌ಮೆಂಟ್ ಅಂದಿರೋದು! ಈಗನೋಡು..., ಈ ಕಥೆಯನ್ನು ಏನೆಂದು ಹೇಳ್ತೀಯ? ಮನರಂಜನೆಗಾಗಿ ಬರೆದ ಕಥೆ ಅಂತಾನ? ಅಲ್ಲ..., ಇದೂ ಕೂಡ ನನ್ನ ಅಧ್ಯಯನದ ಒಂದು ಭಾಗ! ನಾನು ಬರೆಯುವ ಕಥೆ- ಕಾದಂಬರಿಗಳು ನನ್ನ ಅಧ್ಯಯನದ ಆಧಾರದಲ್ಲಿ ರೂಪುಗೊಳ್ಳುವುದು! ಈ ರೀತಿಯ ಕಥೆ ಬರೆದಾಗ ಖಂಡಿತಾ ಅದು ಯಾವ ಮೂಲದಿಂದ ಬಂದಿದೆಯೆಂದು ಹೇಳಿಯೇ ಹೇಳುತ್ತೇನೆ! ಇಂತವರೊಂದಿಗಿನ ಸಂಭಾಷಣೆ ಎಂದೋ..., ಇಂತವರ ಉಪದೇಶದಿಂದ ಮೂಡಿದ್ದೆಂದೋ..., ಹಾಗೆಯೇ ಇವರು ಆಧಾರವನ್ನು ಕೇಳುತ್ತಿದ್ದಾರೆ! ಆದರೆ ಸಾವಿರಾರು ಪುಸ್ತಕಗಳನ್ನು ಓದಿ, ಸಾವಿರಾರು ಜನರೊಂದಿಗೆ ಒಡನಾಡಿ, ಸಾವಿರಾರು ಪ್ರದೇಶಗಳಿಂದ ನಾನು ಪಡೆದ ಅನುಭವ ಆಧಾರದಮೇಲೆ ಅಭಿಪ್ರಾಯ ಹೇಳಿದರೆ..., ಕಥೆ ಬರೆದರೆ ಅದಕ್ಕೆ ಆಧಾರ ಒದಗಿಸುವುದು ಹೇಗೆ? ಅವರಿಗೆ ಬೇಕಾದ ಆಧಾರವಾದರೂ ಏನು? ನಾನು ಯಾವ ಸೈಕಾಲಜಿಸ್ಟ್ ಬರೆದ ಪುಸ್ತಕದ ಆಧಾರದಲ್ಲಿ ಈ ಮಾತನ್ನು ಹೇಳಿದ್ದೇನೆ? ಅದು ಯಾವ ಪುಟದಲ್ಲಿದೆ? ಯಾವ ಪ್ಯಾರಾಗ್ರಾಫ್‌ನಲ್ಲಿದೆ? ಯಾವ ಲೈನ್‌ನಲ್ಲಿದೆ- ಅನ್ನುವುದು!! ನಾನು ಕೊಡುವ ಆಧಾರವೇನು? ನೀನು ಹೇಳಿದಂತೆ- ನಾನು ಹುಟ್ಟಿದ್ದು ಇಂತ ದಿನ ಅನ್ನುವುದು! ಅವರಿಗೆ ಬೇಕಿರುವುದು ಏನು? ಅದನ್ನು ಪ್ರೂ ಮಾಡುವ ಮಾರ್ಕ್ಸ್‌ಕಾರ್ಡ್! ಸೋ..., ನನ್ನ ಅನುಭವದ ಆಧಾರದಮೇಲೆ ಹೇಳುತ್ತಿದ್ದೇನೆ ಅನ್ನುವುದು ಅವರ ಈಗೋವನ್ನು ಹರ್ಟ್ ಮಾಡಿದೆ..., ಅವರ ಅಷ್ಟು ವರ್ಷದ ಅಧ್ಯಯನ, ಅನುಭವವನ್ನು ತಿಲ ಮಾತ್ರದವನಾದ ನಾನು ಸ್ವ ಅನುಭವದ ಆಧಾರದಮೇಲೆ ನಿಷೇಧಿಸಿದರೆ ಇನ್ನೇನಾಗುತ್ತದೆ?! ನೆನಪಿರಲಿ..., ಇದು ಒಬ್ಬರು ಸೈಕಾಲಜಿಸ್ಟ್ ಮತ್ತು ಒಬ್ಬ ಸಾಮಾನ್ಯ ಬರಹಗಾರನ ಸಂಭಾಷಣೆ!" ಎಂದೆ.
"ಕಥೆಗೆ ಶೀರ್ಷಿಕೆ ನಾನು ಕೊಡಲ?" ಎಂದಳು.
ತಲೆಯಾಡಿಸಿದೆ.
"ಸೈಕಲಾಜಿಕಲ್ ಮಿಸ್ ಲೀಡಿಂಗ್!" ಎಂದಳು.
Comments
Post a Comment