ಇತ್ತೀಚಿನ- ಮುಗಿದ ಜಿಜ್ಞಾಸೆಗಳು!
ಇತ್ತೀಚಿನ- ಮುಗಿದ ಜಿಜ್ಞಾಸೆಗಳು! * ಜಿಜ್ಞಾಸೆ ಒಂದು:- “ನೀವು ದೇವಸ್ಥಾನಕ್ಕೇ ಹೋಗಲ್ವಾ?” ಎಂದು ಕೇಳಿದರು…, ಹೊಸದಾಗಿ ಪರಿಚಯವಾದ ಗೆಳೆಯರೊಬ್ಬರು- ಆಶ್ಚರ್ಯದಿಂದ. “ಒಬ್ಬನೇ ಹೋಗುವುದಿಲ್ಲ!” ಎಂದೆ. “ಕಾರಣ?” ಎಂದರು. “ಅಷ್ಟುದ್ದ ಕ್ಯೂ…! ಹೇಗೋ ಹತ್ತಿರ ತಲುಪಿ ಒಂದು ಸೆಕೆಂಡ್ ಕೂಡ ದರ್ಶನ ಮಾಡಿರುವುದಿಲ್ಲ…, ಮುಂದಕ್ಕೆ ಹೋಗಿ ಎಂದು ತಳ್ಳುತ್ತಾರೆ! ಅದು ಪಿರಿಪಿರಿ ಆಗುತ್ತದೆ. ನಾವು ದೇವಸ್ಥಾನಕ್ಕೆ ಹೋಗುವುದೇ ನೆಮ್ಮದಿಗಾಗಿ ತಾನೆ? ನೆಮ್ಮದಿ ಭಂಗ ಆಗೋಕೆ ಅಲ್ಲವಲ್ಲಾ? ನನಗೋ ಮನಃಸ್ತೃಪ್ತಿ ಆಗುವವರೆಗೂ ನೋಡಬೇಕು!” ಎಂದೆ. “ನೀವು ಹಾಗೆ ಹೇಳ್ತೀರ? ನನಗೆ ಹೇಗೆ ಗೊತ್ತಾ? ಅಷ್ಟುದ್ದ ಕ್ಯೂ…, ಹೇಗೋ ಹತ್ತಿರ ತಲುಪಿ ದರ್ಶನ ಆಗುತ್ತದೆ. ಅಬ್ಬಾ…, ಇಷ್ಟು ಹೊತ್ತು ಕ್ಯೂ ನಿಂತದ್ದು ಸಾರ್ಥಕವಾಯಿತು- ಕೊನೆಗೂ ದರ್ಶನವಾಯಿತು ಅನ್ನೋ ತೃಪ್ತಿ!” ಎಂದರು. ಅಲ್ಲವಾ…! ಮನಸ್ಸು ಜಿಜ್ಞಾಸೆಗೆ ತೊಡಗಿತು…, ನಾನು ದೇವಸ್ಥಾನಗಳಿಗೆ ಹೋಗದಿರಲು ಇದೊಂದೇ ಕಾರಣವಾ? ದೇವರೆಂದರೆ ಯಾರು? ಯಾಕೆ ದೇವಸ್ಥಾನಕ್ಕೆ ಹೋಗಬೇಕು? ಗೆಳೆಯರೊಂದಿಗೆ ಅಥವಾ ಇತರರೊಂದಿಗಾದರೆ ಹೋಗುತ್ತೇನಲ್ಲ? ಒಬ್ಬನೇ ಹೋಗುವುದಿಲ್ಲ ಅನ್ನುವುದಷ್ಟೇ ವಿಷಯ…, ಯಾಕೆ? ಚಾಮುಂಡಿ ಬೆಟ್ಟ…, ನನ್ನ ಇಮೋಷನ್ ಅದು! ಹತ್ತು-ಹದಿನೈದು ವರ್ಷಗಳಿಂಂದ ನಿರಂತರವಾಗಿ ಮೆಟ್ಟಿಲಮೂಲಕ ಹತ್ತುವುದು- ಇಳಿಯುವುದು- ಮಧ್ಯೆ ವ್ಯಾಯಾಮ ಮಾಡುವುದು…, ನನ್ನ ದೈಹಿಕ ಮತ್ತು ಮಾನಸಿಕ ದೃಢತೆಗೆ ಅತಿಮುಖ್ಯ ಕಾರಣ- ಚಾಮು...