Posts

ಕಥೆಗಾರನ ಕಥೆ- ಕಥೆ

ಕಥೆಗಾರನ ಕಥೆ ಕಥೆಗಾರ ನಾನು ! ಆದ್ದರಿಂದ ಬರೆಯುತ್ತಲೇ ಇರಬೇಕು ! ಬೇರೆ ವಿಧಿಯಿಲ್ಲ , ಯಾರು ಓದಿದರೂ ಬಿಟ್ಟರೂ - ಬರೆಯುವುದು ನನ್ನ ಧರ್ಮ ! ಸಾಮಾನ್ಯವಾಗಿ ಕಥೆಗಳಲ್ಲಿ ಕಥೆಗಾರನನ್ನು ಹುಡುಕುವುದು ವಾಡಿಕೆ ! ಸಿಗಲಾರ ! ಆದರೂ ಕಂಡುಕೊಂಡಿದ್ದೇ ಅವನು ಅನ್ನುವ ನಂಬಿಕೆ ಇದ್ದೇ ಇರುತ್ತದೆ ! ಆದ್ದರಿಂದ ಇಂದು ಕಥೆಗಾರನ ಕಥೆಯನ್ನು ಹೇಳೋಣ ಅಂದುಕೊಂಡಿದ್ದೇನೆ ! ಬರೆಯುತ್ತಿರುವುದು ಗಂಡು ಪ್ರಾಣಿಯಾದ್ದರಿಂದ ..., ಇದು ..., ಕಥೆಗಾರನ ಕಥೆ ! ಬರೆಯುವವನ ಜೀವನಕ್ಕೆ ಸಂಬಂಧ ಪಡದೇ ಇದ್ದರೂ ಅವನು ಹೇಗೆ ಕಥೆ ಬರೆಯಬಲ್ಲ ಅನ್ನುವ ಕಥೆ ! * ಮನೆಯಮುಂದೆ ಕುಳಿತಿದ್ದೇನೆ . ಕುರ್ಚಿಯಲ್ಲಿ ಕುಳಿತು - ಎಡಗಾಲನ್ನು ಸ್ಟೂಲ್ ಮೇಲಿಟ್ಟು - ಯಾಕೆಂದು ಕೇಳಬೇಡಿ - ಮುರಿದಿದೆ !- ಪಕ್ಕದ ಮತ್ತೊಂದು ಸ್ಟೂಲಿನ ಮೇಲೆ ಬರೆಯಲು ಕಾಗದ - ಪೆನ್ನು - ಜೊತೆಗೆ ಟೀ ! ಕೈಯ್ಯಲ್ಲಿ ಸಿಗರೇಟಿದೆ ಅನ್ನೋಣ ಅನ್ನುವ ಆಸೆ ! ಆದರೆ ನಾನು ಸಿಗರೇಟು ಸೇದಲಾರೆ !- ಕುಳಿತು ಏನು ಬರೆಯಲಿ ಅನ್ನುವ ಯೋಚನೆಯಲ್ಲಿ ದೂರದ ಬೆಟ್ಟವನ್ನೇ ನೋಡುತ್ತಿದ್ದೇನೆ ! ಬೆಟ್ಟವನ್ನು ನೋಡಿದರೆ ಕಥೆ ಬರುತ್ತದೆಯೇ ? ಬರಬೇಕು ! ಕಥೆಯೂ ಕಾದಂಬರಿಯೂ ಕವಿತೆಯೂ ಮಹಾಕಾವ್ಯವೂ .., ಬರಬೇಕು ! ಆದರೆ ಬರುತ್ತಿಲ್ಲ ! ಹೆಂಡತಿ ನಾಲ್ಕನೇ ಟೀಯನ್ನು ತಂದಿಟ್ಟು ನನ್ನನ್ನು ನೋಡಿ ಮುಗುಳುನಕ್ಕು ಹೊರಟು ಹೋದಳು ! ಗೇಲಿ ಮಾಡಿದಳೇ ? ಮಾಡಲಾರಳು ! ಅವಳಿ...

ತಾವರೆ- ಕಥೆ

ತಾವರೆ ತಾವರೆಯನ್ನು ಕಂಡು ನಿಂತೆ ! ಎದೆ ಧಗ್ ಅಂದಿತು ! ತಾವರೆಯನ್ನು ಕಂಡರೆ ಎದೆ ಧಗ್ ಅನ್ನುತ್ತದೆಯೇ ...? ಹಾ ... ತಾವರೆ ಹೆಣ್ಣಿನಂತೆ ಕಂಡರೆ ಎದೆ ಧಗ್ ಅನ್ನುತ್ತದೆ . ವಾಸ್ತವದ ಅರಿವಾದಾಗ ಮುಗುಳುನಗು !! ಹೆಣ್ಣೇ ತಾವರೆಯಂತೆ ಕಂಡಳೆಂಬ ಅರಿವು ! ಪಾರ್ವತಿ ಶಿವನನ್ನು ಪಡೆಯಲು ಗಂಟಲವರೆಗಿನ ನೀರಿನಲ್ಲಿ ತಪಸ್ಸು ಮಾಡಿದಳಂತೆ ... ಆಗ ಅವಳ ತಲೆ ತಾವರೆಯಂತೆಯೇ ಕಂಡಿತಂತೆ ! ಯಾರು ಹೇಳಿದರು ಈ ಕಟ್ಟು ಕಥೆ ? ನಾನೇ ! ಈಗ ಈ ಹೆಣ್ಣನ್ನು ಹೊಗಳಬೇಕಲ್ಲಾ ! ಆಗತಾನೆ ಮುಳುಗುತ್ತಿರುವ ಸೂರ್ಯನ ಕಿರಣ ಅವಳ ಮುಖದಮೇಲೆ ಬಿದ್ದು - ಈಗ - ಸೂರ್ಯನೇ ಅವಳೇನೋ ಅನ್ನಿಸುವಂತಿತ್ತು ! ಕರ್ಮ ನನ್ನದು ... ಇನ್ನೂ ಏನೇನು ಅನ್ನಿಸುತ್ತಿದ್ದಳೋ .... ನಿಧಾನವಾಗಿ ನೀರಿನೊಳಗಿನಿಂದ ನಡೆದು ಬಂದಳು .... ಎಲ್ಲಿಯೋ ನೋಡಿದ್ದೇನೆ ಅನ್ನಿಸಿತು - ಸ್ಪಷ್ಟವಾಗಿ ! ನನ್ನಕಡೆ ನೋಡಿದಳೇ ....? ನೋಡಬೇಕೆ ...!!?? ನನಗೇಕೆ ಇಷ್ಟೊಂದು ಕಾತರ ? ಹೊಗಳಬೇಕೆಂದುಕೊಂಡದ್ದು ಏಕೆ ? ನನ್ನ ಹೊಗಳಿಕೆಗೆ ಎಟುಕದವಳು - ಅವಳೆಂದರೇನರ್ಥ ? ನಾನವಳನ್ನು ಪ್ರೇಮಿಸುತ್ತಿದ್ದೇನೆಂದು ! ಹಾಗಿದ್ದರೆ ಮೊನ್ನೆಯೂ ಮೊದಲಬಾರಿ ಹಾಗನ್ನಿಸಿ ಪ್ರಪೋಸ್ ಮಾಡಿ ತಿರಸ್ಕೃತಗೊಂಡೆನಲ್ಲಾ ಆ ಹುಡುಗಿ ? * ಮರದ ನೆರಳಿನಲ್ಲಿ ಕುಳಿತಿದ್ದಾಳೆ ! ಅವಳನ್ನೇ ನೋಡುತ್ತಾ ಎರಡು ಮೂರುಬಾರಿ ಆಚೆ ಈಚೆ ಸುತ್ತಿದೆ ! ...

ವೈದೇಹಿ- ಕಥೆ

ವೈದೇಹಿ ಕೆಲವೊಂದು ಘಟನೆಗಳಿಗೆ ಕಾರಣವಿರುವುದಿಲ್ಲ ! ಹಾಗೆಯೇ .., ಕೆಲವೊಂದು ಭಾವನೆಗಳಿಗೆ ಅರ್ಥವಿರುವುದಿಲ್ಲ ! * ನನ್ನನ್ನೇ ನೋಡುತ್ತಿದ್ದಳು . ಅದಕ್ಕೆ ಕಾರಣ ನಾನೇ ! ಎಲ್ಲೋ ನೋಡಿದ್ದೇನೆ ಅನ್ನುವ ಭಾವ ನನ್ನ ಮುಖದಲ್ಲಿರುವಾಗ ಹೇಗೆ ನೋಡದಿರುತ್ತಾಳೆ ? ಅವಳ ಮುಖದಲ್ಲಿ ಗೊಂದಲ . ಗೊಂದಲ ಸಂಶಯವಾಗಿ ನನ್ನನ್ನೇ ನೋಡುತ್ತಾ ಹೊರಟು ಹೋದಳು ! ನನ್ನ ಮೆದುಳು ವರ್ತಿಸುತ್ತಿಲ್ಲ ಅನ್ನಿಸಿತು ! ಹೆಣ್ಣುಮುಖವನ್ನು ಮರೆಯುವುದೇ ? ಅದು ನನಗೆ ನಾನೇ ಮಾಡಿಕೊಳ್ಳುವ ಅವಮಾನ !! ಅವಳನ್ನು ನಾನು ನೋಡಿದ್ದೇನೆ - ಸ್ಪಷ್ಟವಾಗಿ ! ಅವಳ ಪರಿಚಯವಿದೆ ..., ಮರೆಯಬಾರದ ಮುಖವದು ..., ಆದರೂ ನೆನಪಾಗುತ್ತಿಲ್ಲಾ ಅಂದರೆ ....? ತಲೆ ಕೊಡವಿ ಮುಂದಕ್ಕೆ ನಡೆದೆ . ಅವಳನ್ನು ಹಿಂಬಾಲಿಸಬೇಕು ಅನ್ನಿಸಲಿಲ್ಲ ..., ಆದರೂ ಸಿಗುತ್ತಾಳೆ ಅನ್ನುವ ಭಾವ ! ಅವಳದೇ ಯೋಚನೆಯಲ್ಲಿ ತಲೆ ಗುಯ್ಗುಡುತ್ತಿತ್ತು . ಸಿಗರೇಟು ಸೇದಬೇಕೆನ್ನಿಸಿತು - ಸೇದಿದವನಲ್ಲ - ಆದರೂ ಅನ್ನಿಸಿತು ! ಸಿಗರೇಟೊಂದನ್ನು ಕೊಂಡು ಸೇದುತ್ತಾ ನಿಂತೆ .... ಅಸ್ಪಷ್ಟ ಯೋಚನೆ !! ಅವಳು ನನ್ನ ಆತ್ಮೀಯಳು ..., ನನ್ನಲ್ಲಿ ಲೀನವಾಗಿರುವ ಏನೋ ಒಂದು ..., ನನಗಿಂತಲೂ ಅವಳು ಬೇರೆಯಲ್ಲ ಅನ್ನುವ ಭಾವ !! ಹುಚ್ಚನಾಗುತ್ತಿದ್ದೇನೆಯೇ ...? ನಿಂತಲ್ಲಿಯೇ ಹತ್ತು ಸಿಗರೇಟನ್ನು ಸೇದಿ ..., ನಶೆ ಹಿಡಿದವನಂತೆ ..., ಯಾವುದೋ ಅಮಲಿನ ಲಹರಿಯಲ್ಲಿ ತ...