ಸಾವಿತ್ರಿ
ಸಾವಿತ್ರಿ ನಮಸ್ತೇ ...., ನಾನು ಸಾವಿತ್ರಿ . ಸತ್ಯವಾನನ ಸಾವಿತ್ರಿಯಲ್ಲ - ಕಲಿಯುಗದ ಸಾವಿತ್ರಿ . ನಾನೊಂದು ತೀರ್ಮಾನವನ್ನು ತೆಗೆದುಕೊಳ್ಳಬೇಕೆಂದಿದ್ದೇನೆ . ಎಷ್ಟು ಜನ ಅದನ್ನು ಒಪ್ಪುವಿರೋ - ವಿರೋಧಿಸುವಿರೋ ತಿಳಿಯಬೇಕಿದೆ - ಅಥವಾ ...., ನಿಮ್ಮ ಅಭಿಪ್ರಾಯ ಬೇಕಿದೆ ! ಯಾಕೆ ಆ ತೀರ್ಮಾನಕ್ಕೆ ಬಂದೆ ಅನ್ನುವುದನ್ನು ಹೇಳಿ - ತೀರ್ಮಾನವನ್ನು ಹೇಳುತ್ತೇನೆ ! ಇದು ಒಂದು ದಿನದ ಕಥೆಯಲ್ಲ ! ಮದುವೆ ಆದಾಗಿನಿಂದ ಇಂದಿನವರೆಗಿನ ಕಥೆ ! ಒಂದೇ ದಿನದ ಕಥೆಯಂತೆ ತೋರುತ್ತದೆ ! ಅಲ್ಲ ! ಹೇಳಲು ಬೇರೇನೂ ಇಲ್ಲ ಅಂದಮೇಲೆ ...., ಅರ್ಥವಾಗುತ್ತದೆ ಅಂದುಕೊಳ್ಳುತ್ತೇನೆ ! 1 ಕಣ್ಣು ಮುಚ್ಚಿ ಐದು ನಿಮಿಷವಾಗಿರಲಿಲ್ಲ - ತಲೆ ಸಿಡಿಯುವಷ್ಟು ಶಬ್ದ ! ಹತ್ತು ಸೆಕೆಂಡ್ ಬೇಕಾಯಿತು ಅರಿವಾಗಲು - ಅಲರಾಂ ! ತೆಗೆದು ದೂರಕ್ಕೆ ಎಸೆಯಬೇಕೆನ್ನಿಸುವಷ್ಟು ಕೋಪ ! ಎದ್ದೆ ! ಗಂಡ , ಮಕ್ಕಳು , ಅತ್ತೆ , ಮಾವ ...! ಎಂದಿನಂತೆ ... ಸ್ನಾನವನ್ನು ಮುಗಿಸಿ ಕಾಫಿ ಟೀ ಇಡುವ ಮೂಲಕ ಶರುವಾಯಿತು ದಿನಚರಿ ! ಬೆಳಗಿನ ತಿಂಡಿ ಮಾಡಿ , ಮಕ್ಕಳನ್ನು ರೆಡಿಮಾಡಿ , ಗಂಡನನ್ನು ಆಫೀಸಿಗೆ ಕಳುಹಿಸುವಷ್ಟರಲ್ಲಿ ಸಾಕುಸಾಕಾಯಿತು ! ಮತ್ತೆ ಮನೆ ಒರೆಸುವುದು , ಪಾತ್ರೆಗಳನ್ನು ತೊಳೆದಿಡುವುದು , ಬಟ್ಟೆಗಳನ್ನು ಒಗೆಯುವಷ್ಟರಲ್ಲಿ ... ಮಧ್ಯಾಹ್ನಕ್ಕೆ ಊಟದ ತಯಾರಿಗೆ ಸಮಯವಾಗಿರುತ್ತದೆ ! ಊಟವನ್ನೆಲ್ಲಾ ಪ್ರಿಪೇರ್‌ಮಾಡಿ , ಅತ್ತೆಮಾವಂದಿರಿಗೆ ಬಡಿಸಿ ನಾನೂ ...