Posts

ವಾಲ್ಮೀಕೀವೇದಾಂತ!

ವಾಲ್ಮೀಕೀ ವೇದಾಂತ ! * ಶೃಂಗಾರದಲ್ಲಿದ್ದ ಕ್ರೌಂಚ ಪಕ್ಷಿಗಳಲ್ಲಿ ಒಂದನ್ನು ಹೊಡೆದುರುಳಿಸಿದ ವ್ಯಾಧ ! ಅವನಿಗೆ ಮುಖ್ಯ - ಬೇಟೆ ! ಬೇಟೆ ಅವನ - ಧರ್ಮ ! ಪಕ್ಷಿಗಳ ಆನಂದವನ್ನು ತನ್ನದೇ ಆನಂದವೆಂಬಂತೆ ಅನುಭಾವಿಸುತ್ತಿದ್ದ ಕವಿ ಹೃದಯ ಮರುಗಿತು - ಅಯ್ಯೋ ಎಂದಿತು . ಸತ್ತ ಪಕ್ಷಿಯನ್ನು ಸುಟ್ಟು ತಿನ್ನಲು ತೆಗೆದುಕೊಂಡು ಹೋದ ವ್ಯಾಧ ! ಕ್ರೋಧಗೊಂಡ ಕವಿ ವ್ಯಾಧನನ್ನು ಶಪಿಸಿದ - ಎಂದು ಯಾರೋ ಭಾವುಕ ಜೀವಿ ಹೇಳಿದ್ದಾನೆ ! ಅದು ಆ ಹೇಳಿದವನ ಭಾವವೇ ಹೊರತು - ಕವಿ ಶಪಿಸಲಾರ ! ಪಕ್ಷಿಯ ಸಾವಿಗೆ ದುಃಖವಿದೆ ! ಸತ್ತ ಪಕ್ಷಿಯ ಸಂಗಾತಿಯ ದುಃಖಕ್ಕೆ ವಿಷಾದವಿದೆ ! ಹಾಗೆಂದು ತನ್ನ ಧರ್ಮವನ್ನು ತಾನು ನೆರವೇರಿಸಿದ ವ್ಯಾಧನನ್ನು ಶಪಿಸುವಷ್ಟು ಅವಿವೇಕಿಯೋ ಕಠಿಣ ಹೃದಯನೋ ಅಲ್ಲ - ಕವಿ ! ಸಂಗಾತಿಯನ್ನು ಕಳೆದುಕೊಂಡ ಕ್ರೌಂಚದ ದುಃಖ… ಕವಿ ಹೃದಯದಲ್ಲಿ ಮಹಾಕಾವ್ಯವನ್ನೇ ಹುಟ್ಟಿಸಿತು ! ಮಹಾಕಾವ್ಯ ! ಕರುಣರಸ ಪ್ರೇರಿತವಾದರೂ… ಕರುಣರಸವೇ ಪ್ರಧಾನವಾದರೂ… ನವರಸಗಳಲ್ಲಿ ಯಾವೊಂದಕ್ಕೂ ಕೊರತೆಯಾಗದೆ - ಪ್ರತಿ ರಸದ ಪರಾಕಾಷ್ಠೆಯನ್ನು ತಲುಪಿದ - ಮಹಾಕಾವ್ಯ ! ಅಲ್ಲವೇ… ? ಒಂದು ವಿಷಾದಮೂಲ ಘಟನೆಯೇ ಕಾರಣವಾಗಿ ಮಹಾಕಾವ್ಯವೊಂದು ಸೃಷ್ಟಿಯಾಯಿತು ! ಅಂದಮೇಲೆ… , ದುಃಖ - ಕೆಟ್ಟದ್ದೇ ? * “ ನಾನೂ ನಿಮ್ಮ ಮಗಳೇ ! ಸ್ವಲ್ಪದಿನ ನನ್ನೊಂದಿಗೆ ಬಂದು ಇರಲಾಗದೆ ?” ಎಂದರು ಅಕ್ಕ . “ ವಾಲ್ಮೀಕಿ ಒಬ್ಬನೇ ಆಗುತ್ತಾನಲ್ಲ ?” ಎಂದರು ಅಮ್ಮ ! “ ...

ಲೀನ!

  ಲೀನ ! ೧ ಪುರಾತನ ಕಾಲ ! ಕಾಡು ! ಜನಸಂಚಾರವಿಲ್ಲ ! ದಿಕ್ಕುತಪ್ಪಿ ಎರಡು ಮೂರು ದಿನದಿಂದ ಅಲೆಯುತ್ತಿದ್ದೇನೆ ! ದಿಕ್ಕುತಪ್ಪಿ ಅನ್ನಲಾಗದು ! ಹೊರಟಿದ್ದೇ ದಿಕ್ಕು ದೆಸೆ ಇಲ್ಲದೆ - ಗುರಿಯಿಲ್ಲದೆ ! ಕಾಡು ಮೃಗಗಳಿಗಾದರೂ ಆಹಾರವಾದರೆ ಒಂದು ಸಾರ್ಥಕತೆ ! ಆದರೆ ಯಾಕೋ… ಎಲ್ಲರೂ - ಎಲ್ಲವೂ ಮುನಿಸಿಕೊಂಡ ಭಾವ ! ಕುರುಚಲು ಗಿಡಗಳನ್ನು ಸರಿಸಿ ಮತ್ತಷ್ಟು ಮುಂದಕ್ಕೆ ಹೋದಾಗ .., ಒಂದು ಗುಡಿ - ಪಾಳು ಗುಡಿ ! ದಟ್ಟಾರಣ್ಯದ ನಡುವೆ ಪಾಳು ಗುಡಿ ! ಎಲ್ಲಿ ಅಗೆದರೆ ಏನು ರಹಸ್ಯವಿದೆಯೋ ಈ ಭೂಮಿಯಲ್ಲಿ ! ಕಳೆದು ಹೋದ - ಗತ - ಕಾಲಕ್ಕೆ ಹೋಲಿಸಿದರೆ… ದಟ್ಟಾರಣ್ಯವಿದ್ದಕಡೆ ಮಹಾ ಸಾಮ್ರಾಜ್ಯವಿದ್ದಿರಲಿಕ್ಕೂ ಸಾಕು ! ಎಷ್ಟೆಷ್ಟು ನಾಗರೀಕತೆಗಳು… ಮನುಷ್ಯನ ಅರಿವಿನ ಮಿತಿ ಅವನಿಗಿಲ್ಲ ! ಎಲ್ಲವೂ ತಿಳಿದುಕೊಂಡವನೆಂಬ ಅಹಂಕಾರ ! ಆಶ್ಚರ್ಯವೇನೂ ಆಗಲಿಲ್ಲ - ಗುಡಿಯ ಸಮೀಪಕ್ಕೆ ಬಂದೆ . ಅದೆಷ್ಟು ಸಾವಿರ ವರ್ಷ ಹಳೆಯದೋ… ! ಆದರೂ ಸ್ವಚ್ಛವಾಗಿದೆ - ಯಾರೋ ಇರುವ ಸೂಚನೆ ! ಪಾವಿತ್ರ್ಯ ಅಂದರೇನು ? ಇದೇ ! ಪೂರ್ತಿಯಾಗಿ ಕಲ್ಲಿನಿಂದ - ಕೆತ್ತನೆಗಳಿಂದ ಕೂಡಿದ ದೇವಸ್ಥಾನ ! ಇದು ಮಾನವ ನಿರ್ಮಿತವಾ ? ಒಳಕ್ಕೆ ನಡೆದೆ ! ಹೊರಗಿನಿಂದ ಗುಡಿಯಂತೆ ಕಂಡರೂ ಒಳಗೆ - ಗುಹೆ ! ಕಣ್ಣು ಕತ್ತಲೆಗೆ ಹೊಂದಿಕೊಂಡಾಗ ತಿಳಿಯಿತು .., ಗರ್ಭಗುಡಿಯ ಬಾಗಿಲು ಹಾಕಿದೆ ! ಅಲ್ಲಿಯೇ ಕುಳಿತೆ . ಯಾರಾದರೂ ಬರಬಹುದೆ ? ಅಸಾಧ್ಯ ಅನ್ನಿಸ...

ಪರೀಕ್ಷೆ!

ಪರೀಕ್ಷೆ ! ಗಾಢಾಂಧಕಾರ ! ಕಣ್ಣು ಕಳೆದುಕೊಂಡೆನೇನೋ ಅನ್ನಿಸುವಷ್ಟು ಕತ್ತಲು ! ಬಾಹ್ಯವೂ - ಕತ್ತಲು ! ಮನಸ್ಸೋ - ತಮಸ್ಸು ! ಯಾಕಾಗಿ ಹುಡುಕುತ್ತಿದ್ದೇನೋ ಎಲ್ಲಿಗೆ ಚಲಿಸುತ್ತಿದ್ದೇನೋ ..., ಧೈರ್ಯ ಪರೀಕ್ಷೆ ! * ತಟ್ಟನೆ ಎಚ್ಚರಗೊಂಡೆ ! ದಿಗಿಲು ! ಧೈರ್ಯಪರೀಕ್ಷೆಗೆ ಇಳಿದವನಿಗೆ ದಿಗಿಲು ! ಪರೀಕ್ಷೆ ಕನಸ್ಸಿನಲ್ಲಿ ! ವಾಸ್ತವ - ಕಠಿಣ ! ಮರಣಕ್ಕಿಂತ ಹೆಚ್ಚೇನೂ ಇಲ್ಲದಿದ್ದರೂ - ಪ್ರತಿಯೊಂದಕ್ಕೂ ಭಯ ! ಹೆದರಿಕೆ ! ಪರಿಭ್ರಮ ! ಯಾಕೆ ? ಯೋಚನೆಯಲ್ಲಿದ್ದಾಗ ದಾರಿಹೋಕಳೊಬ್ಬಳು ಎಸೆದ ಒಂದು ರೂಪಾಯಿ ನಾಣ್ಯ ಉರುಳಿ ಬಂತು ! ಕನಸು ! ಎಚ್ಚರಗೊಂಡರೆ ಯೋಚನೆ ! ಯೋಚನೆಯಿಂದ ಎಚ್ಚರಗೊಂಡರೆ ..., ವಾಸ್ತವ ! * ನಿಜವೇ ...! ನಾವು ವಾಸ್ತವದಲ್ಲಿರುವುದು ಕಡಿಮೆಯೇ ! ಒಂದೋ ...., ಭೂತಕಾಲದಲ್ಲಿರುತ್ತೇವೆ ! ಇಲ್ಲವೇ ಭವಿಷ್ಯದಲ್ಲಿರುತ್ತೇವೆ ! ಅಥವಾ ಕನಸಿನಲ್ಲಿ ... ಅದೂ ಅಲ್ಲವಾ ...? ಭ್ರಮೆ ! ಮತ್ತೆ - ಯೋಚನೆ ...! ಹಾಗಿದ್ದರೆ ವರ್ತಮಾನಕಾಲ ಯಾವಾಗ ? ಇರುವುದಿಲ್ಲ ! * ಕಣ್ಣು ಮಂಜಾಗತೊಡಗಿದೆ ! ಏನೂ ಸ್ಪಷ್ಟವಾಗಿ ಕಾಣಿಸುವುದಿಲ್ಲ ! ವಯಸ್ಸಾಯಿತಾ ....? ಇಲ್ಲ ! ಆದರೆ ...., ಸಾವು ಯಾವ ಸಮಯದಲ್ಲಿ ಬರುತ್ತದೋ ಯಾರಿಗೆ ಗೊತ್ತು ?! ಈಗ ..., ವಯಸ್ಸಾಯಿತಾ ...? ನಾನಾಗಿ ಸಾಯದೆ ಈ ಮರಣವೂ ಹತ್ತಿರಬರುತ್ತಿಲ್ಲವೆನ್ನುವ ವ್ಯಥೆ ನನಗೆ ! ಮತ್ತೆ ಹೆದರಿಕೆಯೇನು ? * ದೇವರ ಗುಡಿ ! ಸಣ್ಣ ಗುಡಿಯಲ...