ಹೃದಯ!
ಹೃದಯ ! ೧ ಹೃದಯವನ್ನು ಇಣುಕಿದೆ ! ನನಗೇನೋ ನಾನು ಒಳ್ಳೆಯವನಂತೆಯೇ ಕಂಡೆ ! ಆದರೆ… , ೨ “ ಲೋ… !” “ ನ್ತದೆ ನಿಂದು ಸಾವು !” “ ನನಗೋಸ್ಕರ… !” “ ನ್ತ ?” “ ಒಂದು ಕಥೆ ಬರಿ !” “ ನಿನಗೋಸ್ಕರವೋ… , ನಿನ್ನ ಕಥೆಯೋ ?” “ ಬರೆಯಬಹುದಾದರೆ - ನನ್ನ ಕಥೆಯನ್ನೇ ಬರೆದುಬಿಡು !” ೩ ಯಾವೊಂದು ಹೆಣ್ಣಿನ ಕಥೆಯನ್ನು ಅಷ್ಟು ಸುಲಭದಲ್ಲಿ ಬರೆಯಲಾಗುವುದಿಲ್ಲ ! ಯಾಕೆ ? ಹೊರಗಿನಿಂದ ಕಾಣುವ ಹೆಣ್ಣಲ್ಲ - ಹೃದಯದಿಂದ ! ಆದರೂ… ., ೪ “ ಅಕೌಂಟ್ ಚೆಕ್ ಮಾಡ್ಕೊ ! ಅಮೌಂಟ್ ಹಾಕಿದೀನಿ !” ಎಂದಳು . ಗೊಂದಲದಿಂದ ನೋಡಿ… , “ ಯಾಕೆ ?” ಎಂದೆ . “ ನಿನಗೆ ನೀಡ್ ಇದೆ ಅಂದ್ಯಲ್ಲೋ ?!” “ ಅದಕ್ಕೆ ?” ಅವಳೇನೂ ಹೇಳಲಿಲ್ಲ . “ ನೀಡ್ ಇದೆ ಅಂದೆ ! ನೀನು ಕೊಡು ಅಂದ್ನ ?” ಎಂದೆ . “ ನನ್ಹತ್ರ ಇದ್ರು ನಿನ್ಹತ್ರ ಇದ್ರೂ ಒಂದೇ ಅಲ್ವೇನೋ… ?” ಎಂದಳು . “ ನಿನ್ಹತ್ರ ಇರುತ್ತೆ !” ಎಂದೆ . ಮುಗುಳುನಕ್ಕು… , “ ನಿನ್ನ ಅಗತ್ಯ ನಡೆಯಲಿ !” ಎಂದಳು . “ ಯಾವ ಧೈರ್ಯದಲ್ಲಿ ಕೊಟ್ಟೆ ?” ಎಂದೆ . “ ಮೋಸ ಹೋಗುವುದೇ ವಿಧಿಯಾದರೆ ನಾನೇನು ಮಾಡಲಿ ? ನಂಬಿದ್ದೇನೆ - ಅಷ್ಟೆ !” “ ಬೇಕೆಂದೇ ಮೋಸ ಮಾಡುವುದಿಲ್ಲ ! ಆದರೆ… , ಹೇಗೆ ಮರಳಿಸಲಿ ?” “ ದುಡ್ಡಿನ ಚಿಂತೆ ಬಿಡು !” ಎಂದಳು . “ ನಿನಗೋಸ್ಕರ ಏನು ಮಾಡಲೆ ?” “ ಮಾಡಿದ್ದೀಯ ! ಮಾಡುತ್ತಿದ್ದೀಯ ! ಹೀಗೇ ಇದ್ದುಬಿಡು - ಸಾಕು !” ಎಂದಳು . ಅರ್ಥವಾಯಿತು ! ಪ್ರೇಮ ! ...