Posts

ನವರಸಗಳೆಂದರೇ...

ನನ್ನನ್ನೇ ನೋಡುತ್ತಿರುವ ಅವಳನ್ನು ಕಂಡು ಗೊಂದಲಗೊಂಡೆ . ಅಪರಿಚಿತೆ . ನೋಟದಲ್ಲಿ ಪರಿಚಯವಾಗಲಿ , ಅಪರಿಚಿತತೆಯಾಗಲಿ ಇಲ್ಲ . ಆದರೂ ನೋಡುತ್ತಿದ್ದಾಳೆ . ಯಾಕೆ ? ಗೊಂದಲಗೊಂಡೆ . ನೋಡುತ್ತಿರುವುದು ನನ್ನನ್ನೋ ಅಥವಾ - ಅನ್ನುವಂತೆ ಸೂಕ್ಷ್ಮವಾಗಿ ನೋಡಿದೆ . ಮುಗುಳುನಕ್ಕಳು . ಹಾಗಿದ್ದರೆ ಪರಿಚಿತೆಯೇ ಇರಬೇಕು . ನಾನು ಮರೆತಿರಬೇಕು . “ ದೇವೀಪುತ್ರ ಅಲ್ವಾ ?” ಎಂದಳು . ಆಶ್ಚರ್ಯವಾಯಿತು . ನನ್ನ ಕಣ್ಣಿನಲ್ಲಿನ ಗೊಂದಲವನ್ನು ಕಂಡುಕೊಂಡಳು . “ ನಿಮಗೆ ನನ್ನ ಪರಿಚಯ ಇಲ್ಲ . ನನಗೆ ನಿಮ್ಮ ಪರಿಚಯ ಇದೆ !” ಎಂದಳು . “ ಹೇಗೆ ?” ಎಂದೆ . “ ನಿಮ್ಮ ಕಥೆಗಳನ್ನು ಓದಿ !” ಎಂದಳು . ಸಣ್ಣ ಅಹಂ ಮನವನ್ನು ಪ್ರವೇಶಿಸಿತು . ನನ್ನ ನೋಟದ ವಿಧಾನ ಬದಲಾಯಿತು . ನಾನೇನೂ ಅವಳನ್ನು ಒಲಿಸಿಕೊಳ್ಳುವುದು ಬೇಕಿಲ್ಲ - ನನ್ನ ಕಥೆಗಳನ್ನು ಓದಿ ಇಂಪ್ರೆಸ್ ಆಗಿದ್ದಾಳೆ ಅನ್ನುವ - ಅಹಂ ! ನನ್ನ ನೋಟದ , ದೇಹಚಲನೆಯ " ಭಾಷೆ " ಬದಲಾಗಿದ್ದು ಅವಳ ಅರಿವಿಗೆ ಬಂತು . ಆದರೆ ಅವಳ ಭಾವವೋ ಉದ್ದೇಶವೋ ನನಗೆ ಹೊಳೆಯಲೇ ಇಲ್ಲ . “ ಹೆಂಗಸರೆಂದರೆ ತುಂಬಾ ಹಗುರವಾದ ಅಭಿಪ್ರಾಯ ಇರುವಂತಿದೆ ?” ಎಂದಳು . ಇದಕ್ಕಿಂತ ಏಟು ಏನು ಬೇಕು ? ಭಾವನೆಗಳನ್ನು ಕಂಡುಕೊಳ್ಳುವುದರಲ್ಲಿ ನಾನೇ ಶ್ರೇಷ್ಠನೆಂದು - ಅಂದುಕೊಂಡಿರುವಾಗ… ? “ ಇಲ್ಲ… , ನನ್ನ ಹೆಸರು ದೇವೀಪುತ್ರ ! ಅದು ಅ - ನು - ಸ - ರ - ಣೆ - ಯ ಸಂಕೇತವೇ ಹೊರತು ಅಧಿಕಾರದ್ದಲ್ಲ !” ಎಂದೆ . “ ಹಾಗಿದ್ದರ...

ಅಸಹಾಯಕ ಪ್ರೇಮಿಯೊಬ್ಬನ ಪತ್ರ!

  ಅಸಹಾಯಕ ಪ್ರೇಮಿಯೊಬ್ಬನ ಪತ್ರ ! ಪ್ರಿಯೆ , ಸ್ವಲ್ಪ ತಾಳ್ಮೆ ..., ಜಾಸ್ತಿ ಶ್ರದ್ಧೆಯಿಂದ ಓದು - ಆಯಿತಾ ! ಇತ್ತೀಚೆಗೆ ನಾನು ಮಾತನಾಡುವುದೇ ಯಾರಿಗೂ ಅರ್ಥವಾಗುತ್ತಿಲ್ಲವಂತೆ ! ಇನ್ನು ಬರಹದ ವಿಷಯ ಕೇಳಬೇಕೆ ? ನಾನೇನೂ ಸಾಹಿತಿಯಲ್ಲ - ಅಂದರೆ… , ಲೇಖಕನಲ್ಲ , ಕವಿಯಲ್ಲ , ಕಥೆಗಾರನಲ್ಲ… , ಒಟ್ಟಾರೆಯಾಗಿ ಬರಹಗಾರನೇ ಅಲ್ಲ ! ನಿನಗಾಗಿ ಬರೆದ ಪ್ರೇಮಪತ್ರಗಳ ಹೊರತು ಬೇರೆ ಏನನ್ನುತಾನೆ ಬರೆದಿದ್ದೇನೆ ? ಆದ್ದರಿಂದ… , ಇದೊಂದು ಪತ್ರ ..., ಇವನ ಕೊನೆಯ ತಲೆನೋವದೇನೋ ನೋಡಿಯೇಬಿಡುತ್ತೇನೆಂದು ಓದಿಬಿಡು ! “ ಗೆಳತಿಯಂತಾದರೂ ಇರಬೇಕೋ ಅಥವಾ ...” ಅನ್ನುವ ನಿನ್ನ ಬೆದರಿಕೆ ನನ್ನನ್ನು ಚಂಚಲಗೊಳಿಸಿದೆಯೇ ! “ ಇರು !” ಎಂದರೆ… , ಅಪರೂಪಕ್ಕಾದರೂ ನಿನ್ನ ಭೇಟಿ ಸಾಧ್ಯ ! ಅದೊಂದು ನಿರಾಳತೆ ಅಂದುಕೊಳ್ಳೋಣವೆಂದರೆ… , ಭೇಟಿಯಾದಾಗಲೆಲ್ಲಾ ನೀನು ನನ್ನ ಪ್ರೇಮಿ , ನನ್ನವಳು , ನನಗೆ ಬೇಕು ಅನ್ನುವ ಭಾವ ಕಾಡಿ - ಅದೊಂದು ನೋವು ! “ ಗೆಳತಿಯಂತಾದರೆ ಬೇಡ !” ಅನ್ನೋಣವೆಂದರೆ… ., ಅ - ನ್ನೋ - ಣ - ವೆಂ - ದ - ರೆ… , ಅನ್ನಲು ಸಾಧ್ಯವೇ ? ನೀನಿಲ್ಲದೆ , ನಿನ್ನ ಸಾನ್ನಿಧ್ಯವಿಲ್ಲದೆ ನನ್ನ ಬದುಕು ಸಾಧ್ಯವೇ ? ಪ್ರೇಮಿಯೋ ಗೆಳತಿಯೋ… , ಹೇಗೋ… , ನೀನು ನನ್ನ ಬದುಕಿನಲ್ಲಿ ಇರುವುದು ಮುಖ್ಯ - ಅಂದುಕೊಂಡಿದ್ದೆ ! ಆದರೆ… , ಆದರೆ… , ದಿನ ಕಳೆದಂತೆ ಅದೊಂಥರಾ ನೋವು ! ಪ್ರೇಮದಲ್ಲಿ ನೋವಿಲ್ಲ ಅನ್ನುವವ ನಾನು ! ನಿಜವೇ… ...

ಅಮ್ಮ ಮಗನ ರಹಸ್ಯ!

  ೧ “ ರಿಸ್ಕ್ ಬೇಕ ಅಣ್ಣಾ ?” ಎಂದ ತಮ್ಮ . “ ರಹಸ್ಯ ಬೇಧಿಸಿಯಾಯಿತಲ್ಲ ? ಇನ್ನೇನು ಹೆದರಿಕೆ ?” ಎಂದೆ . “ ಆದರೂ… ! ಸಾವಿರದ ಒಂಬೈನೂರ ಎಪ್ಪತ್ತ ಎರಡರಲ್ಲಿ ಕೊಲೆಯಾದವಳು ! ಇಷ್ಟು ದಿನ - ಅಂದರೆ ಎರಡುಸಾವಿರದ ಇಪ್ಪತ್ತ ಎರಡರವರೆಗೆ… , ಐವತ್ತು ವರ್ಷ - ಇದೇ ಬಿಲ್ಡಿಂಗಲ್ಲಿ ಇದ್ದಳೆಂದರೆ… ! ಅದೇ ಮನೆ ಬೇಕ ?” ಎಂದ . “ ಕೊಲೆಯಾದವಳು ಇದ್ದಳು - ಅಂದರೆ ಏನರ್ಥ !?” ಎಂದೆ . “ ಮತ್ತೆ ? ಇಷ್ಟುದಿನ ಆ ಮನೆಯಲ್ಲಿ ಅಸಹಜವಾಗಿ ನಡೆಯುತ್ತಿದ್ದ ಘಟನೆಗಳಬಗ್ಗೆ ನಿನಗೆ ಗೊತ್ತಿಲ್ಲದ್ದೇನೂ ಅಲ್ಲವಲ್ಲ !?” “ ಅದೆಲ್ಲಾ ಕಟ್ಟು ಕಥೆಯೋ… ! ಆ ಸ್ಕೆಲ್ಟನ್ ಸಿಕ್ಕ ನಂತರ ಹುಟ್ಟಿಕೊಂಡಿದ್ದು !” ಎಂದೆ . “ ಆದರೂ… !” ಎಂದ . “ ನೋಡೇ ಬಿಡೋಣ ! ಏನಾಗುತ್ತದೆಂದು !” ಎಂದೆ . ೨ ಒಬ್ಬನೇ ಮನೆಯನ್ನು ಪ್ರವೇಶಿಸಿದೆ . ಕೊನೆಯ ಕ್ಷಣದಲ್ಲಿ ತಮ್ಮ ಕೈಕೊಟ್ಟ ! ಹೆದರಿಕೆ ! ನನಗೋ ಅದೇ ಮನೆಬೇಕು ! ಹಾರರ್‌ ಸಿನೆಮಾದ ಶೂಟಿಂಗ್‌ಗೆ ಹೇಳಿ ಮಾಡಿಸಿದಂತಹ ಮನೆ . ಆರು ತಿಂಗಳಿಗೆ ಬಾಡಿಗೆಗೆ ತೆಗೆದುಕೊಂಡಿದ್ದೆ . ಈ ಮನೆಯಬಗ್ಗೆ ಏನೇನೋ ಕಥೆಗಳು ಹುಟ್ಟಿಕೊಂಡಿತ್ತು . ಅದಕ್ಕೆ ಆಧಾರವಾಗಿ ಆ ಮನೆಯಿಂದ ಮೊನ್ನೆಮೊನ್ನೆತಾನೆ ರಹಸ್ಯವೊಂದನ್ನು ಕಂಡುಕೊಂಡಿದ್ದರು . ಬಟ್ಟೆ ಒಗೆಯಲು ನಿರ್ಮಿಸಿದ್ದ ಕಟ್ಟೆ - ಕಾಂಕ್ರೀಟ್ ಕಟ್ಟೆ ! ಬಿರುಕು ಬಿಟ್ಟು ಅದರಲ್ಲಿದ್ದ ಮಾನವನ ಅಸ್ಥಿಪಂಜರ ಕಾಣಿಸಿಕೊಂಡಿತ್ತು ! ಪರೀಕ್ಷೆ ನಡೆಸಿದಾಗ - ಮೂವತ್ತು ವರ್ಷದ...

ಅಮವಾಸ್ಯೆ!

ಬಲಗಣ್ಣು ಅದುರುತ್ತಿತ್ತು… , ಕಿವಿಯೊಳಗೆ ಗೆಳೆಯನ ಮಾತುಗಳು ಮೊರೆಯುತ್ತಿತ್ತು ! “ ನಾಳೆ ಅಮವಾಸ್ಯೆ ಮನು ! ಒಬ್ಬನೆ ಹೊರಗಡೆ ಸುತ್ತಾಡಬೇಡ ! ಅದರಲ್ಲೂ ಕತ್ತಲಲ್ಲಿ ಬೆಟ್ಟ ಹತ್ತಬೇಡ !” ಸಾಮಾನ್ಯರ ನಂಬಿಕೆಯ ಪ್ರಕಾರ… , ಯಾವ ಕಣ್ಣು ಅದುರಿದರೆ ಒಳ್ಳೆಯದು ಯಾವುದು ಕೆಟ್ಟದು ಎಂದು ಕೂಡ ಅರಿಯದವ ನಾನು ! ನನಗೆಂತ ಅಮವಾಸ್ಯೆ - ಹುಣ್ಣಿಮೆ !? ಬೆಟ್ಟ… ! ನನ್ನ ಬದುಕಿನ ಅವಿಭಾಜ್ಯ ಅಂಗ ! ದೈಹಿಕವಾಗಿಯೂ ಮಾನಸಿಕವಾಗಿಯೂ ನಾನಿಂದು ಇಷ್ಟು ದೃಢವಾಗಿದ್ದೇನೆಂದರೆ ಅದರ ಮೂಲ ಕಾರಣ - ಬೆಟ್ಟ ! ಕತ್ತಲಲ್ಲಿಯೇ ಶುರುಮಾಡಿ ಕತ್ತಲಿರುವಾಗಲೇ ಮುಗಿಸದಿದ್ದರೆ ಬೆಟ್ಟ ಹತ್ತಿದಂತೆಯೇ ಅನ್ನಿಸುವುದಿಲ್ಲ ! ಅದಕ್ಕೆ ಕಾರಣ… , ಅಷ್ಟು ಹೊತ್ತಿಗೆ ಯಾರೆಂದರೆ ಯಾರೂ ಇರುವುದಿಲ್ಲ ಅನ್ನುವುದು ! ಬೆಟ್ಟ ಹತ್ತುವಾಗ… , ಆ ದಟ್ಟ ಕತ್ತಲಲ್ಲಿ , ಕಾಡಿನಲ್ಲಿ , ಬಾವಲಿ , ಮುಳ್ಳುಹಂದಿ , ಮೊಲ , ಮುಂಗುಸಿ , ನಾಯಿ… , ಇದಿಷ್ಟು ಅರಿವಿಗೆ ಬಂದಿರುವುದು ! ಇದಲ್ಲದೆ ಅತಿಥಿಯಂತೆ ಅಪರೂಪಕ್ಕೆ ಬರುವ ಚಿರತೆ… , ಅರಿವಿಗೆ ಎಟುಕದ ವಿಚಿತ್ರ ಶಬ್ದಗಳನ್ನು ಹೊರಡಿಸುವ ಪಕ್ಷಿ ಕ್ರಿಮಿ ಕೀಟಗಳು , ಪೊದೆಗಳ ಅಲುಗಾಟಕ್ಕೆ ಕಾರಣವಾಗುವ ಜಂತುಗಳು ಮತ್ತು ನಾನು !!! ಅದೊಂದು ಅದ್ಭುತ ಅನುಭವ ! ಬೆಟ್ಟ ಇಳಿದು… , ಕೊನೆಯ ಹಂತಕ್ಕೆ ತಲುಪಿದಾಗ… , ಆಗ ಹತ್ತಲು ಶರು ಮಾಡುವ ಜನ ನನ್ನನ್ನು ಆಶ್ಚರ್ಯದಿಂದ ನೋಡಬೇಕು ! ಅದೊಂದು ಅಹಂ ! ಗೆಳೆಯನ ಮಾತುಗಳನ್ನು ಕಡೆಗಣಿಸ...