ನಿಮಿತ್ತ - ಕಥೆ
ಒಬ್ಬ ರಾಜನಿದ್ದನಂತೆ , ಗೌತಮ ...., ಒಂದು ಶವ - ಒಬ್ಬ ರೋಗಿ - ಒಬ್ಬ ವೃದ್ಧನನ್ನು ಕಂಡು ವೈರಾಗ್ಯ ಹೊಂದಿ ಬುದ್ಧನಾದನಂತೆ ! ಇಂದು ? ಶವಗಳರಾಶಿ , ರೋಗಿಗಳ ಗುಂಪು , ಅಸಂಖ್ಯಾತ ವೃದ್ಧರೇ ಕಂಡುಬರುತ್ತಿದ್ದಾರೆ ... ಯಾರಿಗೂ ಏನೂ ಅನ್ನಿಸುತ್ತಿಲ್ಲ – ಅನ್ನಿಸುವುದಿಲ್ಲ ! ಯಾಕೆ ? ಒಂದೇರೀತಿಯ ಘಟನೆ - ಒಂದೇ ರೀತಿಯಲ್ಲಿ - ಎಲ್ಲರಿಗೂ ಅನ್ವಯಿಸುವುದಿಲ್ಲ . ' ಧರ್ಮವು ನಶಿಸಿದಾಗಲೆಲ್ಲಾ ಅವತಾರವೆತ್ತುತ್ತೇನೆ ' ಎಂದಿದ್ದಾನೆ ಭಗವಂತ . ಭಗವಂತನಾದರೂ ಸರಿಯೇ .. ಭೂಮಿಯಮೇಲೆ ಮನುಷ್ಯನಾಗಿ ಅವತರಿಸಿದರೆ ತನ್ನ ಅವತಾರದ ಉದ್ದೇಶವನ್ನು ತಿಳಿಯಲು ನಿಮಿತ್ತವೊಂದು ನಡೆಯಬೇಕಂತೆ - ಗೌತಮನಿಗೆ ಶವ - ರೋಗಿ - ವೃದ್ಧರು ಕಂಡಂತೆ !! ಇಷ್ಟಕ್ಕೂ ಈ ನಿಮಿತ್ತಗಳೆಂದರೆ ಏನು ? ಮನುಷ್ಯನನ್ನು ಯೋಚಿಸುವಂತೆ ಮಾಡುವ ಸಣ್ಣ - ದೊಡ್ಡ ಘಟನೆಗಳು ! ನಡೆದ ಘಟನೆಯನ್ನು ನಾವು ಯಾವ ರೀತಿ ತೆಗೆದುಕೊಳ್ಳುತ್ತೇವೆ ಎನ್ನುವುದರಮೇಲೆ ನಮ್ಮ ಭವಿಷ್ಯ ನಿಂತಿರುತ್ತದೆ ! ಅದೇ ನಿಮಿತ್ತ ! ೧ ಚಿಕ್ಕಂದಿನಲ್ಲಿ , ನಾನೊಂದು ಚಿತ್ರವನ್ನು ಬಿಡಿಸಿದೆ . ಅಮ್ಮನಿಗೆ ತೋರಿಸಿದಾಗ , “ ನನ್ನ ಮಗ ಚಿತ್ರ ಬಿಡಿಸೋದನ್ನೂ ಕಲಿತನ ? ತುಂಬಾ ಚೆನ್ನಾಗಿದೆ " ಎಂದರು . ಖುಷಿಗೊಂಡೆ . ಆದರೂ ಏನೋ ಸಂಶಯ . ಅದಕ್ಕಿಂತಲೂ ಚೆನ್ನಾಗಿರುವ ಮತ್ತೊಂದು ಚಿತ್ರವನ್ನ...