ಹೆಣ್ಣು- ನಾನು!
ಹೆಣ್ಣು - ನಾನು ! ನಾ ಹೆಣ್ಣು ! ಕಲಿತವಳು ! ನನ್ನದೇ ಆದ ಸ್ಪಷ್ಟ ಅವಕಾಶ - ಸ್ಥಾನ ಮಾನ ಇರುವವಳು - ಸ್ಥಾನಮಾನಕ್ಕೆ ಅರ್ಹಳಾದವಳು ! ಇರುವವಳು , ಅರ್ಹಳಾದವಳು - ಅಷ್ಟೆ ! ಸ್ಥಾನಮಾನ ಹೊಂದಿದ್ದೇನೆಯೇ ? ಅರ್ಹತೆಗೆ ತಕ್ಕ ಸ್ಥಾನದಲ್ಲಿದ್ದೇನೆಯೇ ಎಂದರೆ .... ಏನು ಹೇಳಲಿ ? ನಾನು ಸತ್ತು ಎಷ್ಟೋ ಆಯಿತು ! ಆಗಾಗ ಸಾಯುತ್ತಿರುತ್ತೇನೆ .... ತೇಜೋವಧೆ ಮಾಡುತ್ತಾರೆ ....! ಯಾರು ? ಯಾರು ಮಾಡುತ್ತಾರೆ ? ಪುರುಷವರ್ಗ ! ಯಾಕೆ ಮಾಡುತ್ತಾರೆ ? ಇದೊಂದು ಸಮಸ್ಯೆ ನನಗೆ ! ಆ ಸಮಸ್ಯೆಗೆ ಉತ್ತರವೆಂಬಂತೆ ಆತ ನನಗೆ ಪರಿಚಯವಾದ ! * “ ಹೆಣ್ಣು ಯಾವ ಗಂಡಿಗೂ ಕಡಿಮೆಯಿಲ್ಲ ! ಗಂಡು ಹೆಣ್ಣು ಸಮಾನರು !” ಎಂದೆ . “ ಹೇಗೆ ?” ಎಂದ . “ ಹೇಗೆ ಅಂದರೆ ? ಪ್ರತಿಯೊಂದರಲ್ಲೂ ... ನೀನೂ ಮಾಮೂಲಿ ಗಂಡಸರಂತೇನ ?” ಎಂದೆ . “ ಅದು ಗೊತ್ತಿಲ್ಲ ! ಆದರೆ ಹೆಣ್ಣು ಹೇಗೆ ಗಂಡಿಗೆ ಸಮ ? ಅಥವಾ ಅದೇ ಪ್ರಶ್ನೆಯನ್ನು ತಿರುವು ಮುರುವಾಗಿ ಕೇಳೋಣ ! ಗಂಡು ಹೇಗೆ ಹೆಣ್ಣಿಗೆ ಸಮಾನ ?” ಎಂದ . ನನಗರ್ಥವಾಗಲಿಲ್ಲ .... ಸಂಶಯದಿಂದ ನೋಡಿದೆ . ನಕ್ಕ , “ ಇದೊಂದು ಟ್ರೆಂಡ್ !” ಎಂದ . “ ಏನು ?” “ ಗಂಡು ಹೆಣ್ಣಿನ ನಡುವಿನ ಹೋಲಿಕೆ !” “ ಹೋಲಿಕೆ ಮಾಡೋದರಲ್ಲೇನು ತಪ್ಪು ? ಹೆಣ್ಣೂ ಕೂಡ ಯಾವ ಗಂಡಿಗೂ ಕಡಿಮೆಯಲ್ಲ !” ಎಂದೆ . ಅವನು ನನ್ನ ಕಣ್ಣುಗಳನ್ನೇ ನೋಡಿದ . ಅವನ ಕಣ್ಣಿನ ಭಾವನೆ ನನಗರ್ಥವಾಗಲಿಲ್ಲ . “ ಅಂದರೆ ಗಂಡು ಹೆಣ್ಣ...