ಸತ್ಯಂ ಶಿವಂ ಸುಂದರಂ
ಸತ್ಯಂಶಿವಂಸುಂದರಂ ! * ಕಾಲು ನಡಿಗೆಯ ಪ್ರಯಾಣ . ದಿನಕ್ಕೊಂದು ಹೊತ್ತು ಊಟ . ಎರಡುಗಂಟೆ ಸಮಯ ನಿದ್ರೆ . ಯಾಕೆ ಈ ದಂಡನೆಯೋ ತಿಳಿಯದು . ದಿನಗಳುರುಳಿದವು . ತಪಸ್ಸು ಹೀಗೇ ಇರುತ್ತದಂತೆ . ಯಾಕೆ ತಪಸ್ಸು ? * ಗಂಡು ಹೆಣ್ಣು ಪುರುಷ ಪ್ರಕೃತಿ ಎಷ್ಟು ಹೇಳಿದರೇನು - ಹುಡುಕಿದರೇನು ....! ಈ ನಾನು - ಅಹಂ - ಅನ್ನುವುದು ಅತಿ ಪ್ರಭಲವಾದದ್ದು ! ಅಹಂಬ್ರಹ್ಮಾಸ್ಮಿಯ ಪಾಠದ ಕೊನೆಗೆ - “ ನಿನ್ನನ್ನು ನೀನು ತಿಳಿ !” ಎಂದರು ಗುರುಗಳು . “ ನಿಮ್ಮಿಂದ ನಾನು ಬೇರೆಯೇ ಗುರುಗಳೇ ...?” ಎಂದೆ ನಾನು ! “ ಮೊದಲು ದ್ವೈತ - ನಂತರ ಅದ್ವೈತ !” ಎಂದರು ಗುರುಗಳು . “ ಯಾಕೆ ಗುರುವೇ ...? ನನಗೆಲ್ಲವೂ ನಾನೇ ಆಗಿ ಕಾಣಿಸುತ್ತಿರುವಾಗ ದ್ವೈತವೇಕೆ ?” ಎಂದೆ . ಅಹಂ ! ತನ್ನನ್ನು ಮೀರಿದನೇ ಶಿಷ್ಯ - ಅನ್ನುವ ಅಹಂ ! ಕೆಲವು ಕ್ಷಣಗಳು ಮಾತ್ರ ! ನಂತರ ...., “ ನಿನ್ನ ಅರಿವು ಪರಮಪದವನ್ನು ತಲುಪಿದೆ ! ನೀನಿನ್ನು ಹೊರಡಬಹುದು ...!” ಎಂದರು ಗುರುಗಳು . “ ಗರುರ್ಬ್ರಹ್ಮ , ಗುರುರ್ವಿಷ್ಣೋ , ಗುರುರ್ದೇವೋ ಮಹೇಶ್ವರಾಃ ಗುರುರ್ಸಾಕ್ಷಾತ್ ಪರಃಬ್ರಹ್ಮ ತಸ್ಮೈಶ್ರೀ ಗುರವೇ ನಮಹ ! ಎಂದೆಂದಿಗೂ ನಿಮ್ಮ ಆಶೀರ್ವಾದ ನನ್ನ ಶ್ರೀರಕ್ಷೆಯಾಗಿರಲಿ ಗುರುವೇ ...!” ಎಂದೆ . ಮುಗುಳು ನಕ್ಕರು ಗುರುದೇವ ..., “ ಮಾತಾ ಪಿತಾ ಗುರುರ್ದೈವಂ ! ಮೊದಲು ತಾಯಿ , ನಂತರ ತಂದೆ , ಆನಂತರ ಗುರು ... ಇವರು ಮೂವರ ನಂತರ ಸಾಕು ದೇವರು ! ಹೋಗಿ ಬಾ ...!” ...