ಬ್ರೇಕ್!
ಹಾಗೆ ..., ಒಂದು ಎರ (era)- ಅಥವಾ ಕಾಲಘಟ್ಟ ಮುಗಿಯಿತು ! ಮನು ಬರೆದ ಅಷ್ಟೂ ಕಥೆಗಳು ಖಾಲಿಯಾದವು ! ನೂರಾ ಐವತ್ತೈದು ಕಥೆಗಳು , ಎರಡು ಕಾದಂಬರಿಗಳು , ಮೂರು ಸಿನೆಮಾಗಾಗಿನ ಸ್ಕ್ರಿಪ್ಟ್ - ಸದ್ಯಕ್ಕೆ ಮನುವಿನ ಸಾಧನೆ !! ವೀರಪುತ್ರ , ನಚಿಕೇತ , ಚಾರುದತ್ತದಲ್ಲಿ ನೀವು ಯಾರು ? ಆ ಕೊಲೆಗಳನ್ನು ನೀವೇ ಯಾಕೆ ಮಾಡಿರಬಾರದು ? ಅನ್ನುವ ಪ್ರಶ್ನೆಗಳೊಂದಿಗೆ ..., ಮನಶ್ಶಾಸ್ತ್ರದಲ್ಲಿ ಡಾಕ್ಟರೇಟ್‌ಗೆ ಯೋಗ್ಯವಾದ ಪುಸ್ತಕ - ಕಾಸನೋವ - ಇಷ್ಟವಾಯಿತು ಅಂದವರು ಕೆಲವರು , ಮದುವೆಯಾಗುವವರೆಗೂ ಮನು ಪಕ್ಕಾ ಬ್ರಹ್ಮಚಾರಿಯೆಂದು ಆಣೆಮಾಡಿ ಹೇಳಿದರೂ ನಂಬದೇ , ಆ ಇಬ್ಬರು ಮಕ್ಕಳು ಈಗ ಎಲ್ಲಿದ್ದಾರೆ ಎಂದು ಕೇಳುವಷ್ಟು ಕಾಡಿದ ಪುಸ್ತಕ - ಭಾಮೆ - ಇಷ್ಟವಾಯಿತು ಅಂದವರು ಕೆಲವರು ! ಇನ್ನು ಕಥೆಗಳು ..., ಹತ್ತು ಹದಿನೈದು ವರ್ಷ ಮುಂಚೆ ಬರೆದ ಕಥೆಗಳು ಸುಲಭವಾಗಿ ಅರ್ಥವಾಗುವಂತಿದ್ದು ..., ಇತ್ತೀಚಿನ ಬರಹಗಳು ಕಠಿಣ ಅನ್ನಿಸುತ್ತಿದೆ ಅಂದವರು ಕೆಲವರಾದರೆ ನಿಮ್ಮ ಕಥೆಗಳನ್ನು ಅರಗಿಸಿಕೊಳ್ಳುವುದು ಕಷ್ಟ ಅಂದವರು ಕೆಲವರು ! ಕಥೆಗಳಲ್ಲಿ ಕಥೆಗಾರನನ್ನು ಕಂಡು , ಅವನೇ ಎಂದು ನಿಶ್ಚಯಿಸಿ , ಒಂದೊಂದು ಕಥೆಯಲ್ಲಿ ಒಂದೊಂದು ಬಗೆಯಾದ್ದರಿಂದ ಕಥೆಗಾರನಬಗ್ಗೆ ಊಹೆ ಸಿಗದಂತಾಗುವುದು ಕಥೆಗಾರನ ಗೆಲುವು ! ಕಥೆಗಾರನಬಗ್ಗೆ - ಕಥೆಗಾರನೊಂದಿಗೆ ವೈಯಕ್ತಿಕ ಒಡನಾಟ ಇಟ್ಟುಕೊಂಡವರದ್ದು ಒಂದು ಅಭಿಪ್ರಾಯವಾದರೆ ಕೇವಲ ಕಥೆಗಳನ್ನು ಓದಿ ಅದರಲ್ಲಿ ಕಥೆಗಾರನನ್ನು ಕಂಡುಕೊ...