ನಾಯಿ- ಕಥೆ
ನಾಯಿ ನಾಯಿ ... ಶ್ವಾನ ... ಬಾಲ ಅಲ್ಲಾಡಿಸುತ್ತಾ ನಡೆಯುತ್ತಿತ್ತು ... ಎಲ್ಲೋ ಏನೋ ವಾಸನೆ ಸಿಕ್ಕಿದೆ ... ಆತುರವಿದೆ ... ವಾಸನೆಯ ಮೂಲ ಕಂಡುಬರುತ್ತಿಲ್ಲ ... ಹುಡುಕಾಟ ... ನನಗೂ ಗೊತ್ತು ... ಏನೋ ಇದೆ ... ವಾಸನೆ ಹಿಡಿದಿದ್ದು ನಾಯಿಯಾದರೂ ಅದಕ್ಕಿಂತ ಮುಂಚೆ ನಾನು ತಲುಪಬೇಕು ... ಅದೇ ಮೊದಲು ನೋಡಲಿ ... ವಾಸನೆಯ ಮೂಲ ಎಲ್ಲಿದೆ ಎಂದು ತಿಳಿದಮೇಲೆ ನಾಯಿಯನ್ನು ಓಡಿಸಿ ನಾನು ತಲುಪಬಹುದು ....!! ಕಂಡು ಹಿಡಿದದ್ದು ಮನುಷ್ಯ ತಿನ್ನಲು ಯೋಗ್ಯವಾಗಿರುವಂತಹದ್ದಾದರೆ ? ನಾಯಿಗೇನು ? ಏನುಬೆಕಿದ್ದರೂ ತಿನ್ನಬಹುದು .. ನನಗೆ ಹಾಗೆಯೇ ? ಮನುಷ್ಯ ನಾನು .. ಸ್ಟಾಂಡೇರ್ಡ್ ನೋಡಬೇಡವೇ ? ಎಂಜಲಾದರೂ ಪರವಾಗಿಲ್ಲ .... ಮನುಷ್ಯ ತಿನ್ನುವುದೇ ಆಗಬೇಕು ! ಯಾಕೋ ನಾಯಿಯ ಆತುರ ಕಡಿಮೆಯಾಯಿತು ...! ನನ್ನ ಹಿಂಬಾಲಿಸುವಿಕೆಯ ವಾಸನೆ ಸಿಕ್ಕಿತೇ ? ನಿಜ !! ನನ್ನನ್ನೊಮ್ಮೆ ತಿರುಗಿ ನೋಡಿತು ... ಇರು ನಿನಗೆ ಮಾಡುತ್ತೇನೆ ಎನ್ನುವಂತೆ ... ಪಕ್ಕದಲ್ಲಿಯೇ ನೆರಳಿನಲ್ಲಿ ಮಲಗಿತು . ಏನೋ ಕಾರಣವಿದೆ ಇಲ್ಲದಿದ್ದರೆ ಹಾಗೆ ಮಾಡುವುದಿಲ್ಲ . ಯೋಚಿಸಿದೆ ... ಹ್ಞಾ ... ಮೊನ್ನೆಯ ಮೊನ್ನೆ .... ಇದೇ ನಾಯಿಯನ್ನು - ಅದರ ಜಾಡಿನಲ್ಲಿಯೇ ಹೋಗಿ ವಂಚಿಸಿ ಅದರ ಕಂಡು ಹಿಡಿತವನ್ನು - ಆಹಾರವನ್ನು ನಾನು ಕಬಳಿಸಿದ್ದೆ !! ಮೊನ್ನೆಯ ಮೊನ್ನೆ !! ಅಂದೇ ನನ್ನ ಕೊನೆಯ ಊಟವಾಗಿದ್ದು !! ನೆನಪಿದೆ ದುಷ್ಟ ಶ್ವಾನಕ್ಕೆ !!! ದುಷ್ಟ ಶ್ವಾನ !! ...