ಬೆಟ್ಟದಲ್ಲಿನ ಗೊಂದಲ!
ಬೆಟ್ಟದಲ್ಲಿನ ಗೊಂದಲ * ಇಂದೇಕೆ ಹೀಗೆ ? ಎಚ್ಚರವಾದಾಗಿನಿಂದ ಏನೋ ಗೊಂದಲ ! ಸೋಮಾರಿತನ ! ಬೆಟ್ಟಕ್ಕೆ ಹೋಗಬೇಕೋ ಬೇಡವೋ… ? ಇಂದು ಹೋಗದಿದ್ದರೆ ಈ ವಾರ ಪೂರ್ತಿ ಹಾಳು ! ಹನ್ನೆರಡು ವರ್ಷದಿಂದ ಸ್ಟೆಪ್ ಹತ್ತುತ್ತಿದ್ದೇನೆ ! ನನ್ನ ದೈಹಿಕ - ಮಾನಸಿಕ ದೃಢತೆಗೆ ಬೆಟ್ಟದ ಪಾತ್ರ ಅಷ್ಟಿಷ್ಟಲ್ಲ ! ಎಂದಿರುವಾಗ ಸೋಮಾರಿಯಾಗಬಹುದೇ ? ಎದ್ದೆ . ತಯಾರಾದೆ . ಬೆಟ್ಟದ ತಪ್ಪಲು ತಲುಪಿದಾಗ… ಗೊಂದಲಕ್ಕೆ ಪುಷ್ಟಿ ಕೊಡುವಂತೆ… ಪ್ರತಿ ದಿನವೂ ಜೊತೆಗೆ ಹತ್ತುತ್ತಿದ್ದ ಐದಾರು ನಾಯಿಗಳಲ್ಲಿ ಒಂದೇ ಒಂದು ನಾಯಿ ನನಗಾಗಿ ಕಾಯುತ್ತಿದೆ ..! “ ಉಳಿದವರು ಎಲ್ಲೋ ?” ಎಂದೆ . “ ಭೌ !” ಎಂದಿತು . ಯಾರಿಗ್ಗೊತ್ತು ಎಂದಿರಬಹುದು ! ಅಥವಾ… , ಬೆಟ್ಟ ಹತ್ತಬೇಡ ಎಂದೇನಾದರೂ ಸೂಚನೆ ಕೊಡುತ್ತಿದೆಯೋ ? ಏಳುವಾಗಿನ ಸೋಮಾರಿತನಕ್ಕೆ ಪುಷ್ಟಿಕೊಡುತ್ತಿದ್ದೇನೆ ಅನ್ನಿಸಿತು… ಅಲ್ಲದೆ… , ಹೆಜ್ಜೆ ಮುಂದಿಟ್ಟಾಗಿದೆ ! ಹತ್ತಲು ಶುರು ಮಾಡಿದಾಗಲೂ ಎರಡುಮೂರುಬಾರಿ .., “ ಭೌ , ಭೌ , ಭೌ !” ಎಂದಿತು . ಯಾಕೋ ಇಂದು ಮಹಾಪ್ರಾಣದಲ್ಲಿ ಬೊಗಳುತ್ತಿದೆ ಅನ್ನಿಸಿ ನಗುಬಂತು ! ಇವ ನಿಲ್ಲುವುದಿಲ್ಲ - ನನ್ನ ಮಾತು ಕೇಳುವುದಿಲ್ಲ - ಅನ್ನಿಸಿತೋ ಏನೋ… ಎಂದಿನಂತೆ ಹಿಂದೆ ಮುಂದೆ ಅಕ್ಕ ಪಕ್ಕ ಸುಳಿಯುತ್ತಾ ಕಾವಲುಗಾರನಂತೆ ಜೊತೆಬಿಡದೆ ನಡೆಯಿತು ! ನನ್ನ ಗೊಂದಲಕ್ಕೆ ಚಿಗುರುಗಳು ಮೊಳೆಯಲಾರಂಭಿಸಿತು ! ಅಲ್ಲಾ… , ಹಾರರ್ ಕಥೆಗಳನ್ನು ಬರೆದೂ ಬರೆದೂ… ಎಷ್ಟು ಮಟ್...