Posts

ಭ್ರಮೆ- ಭಾವ- ಏಕಾಂತ!

ಭ್ರಮೆ - ಭಾವ - ಏಕಾಂತ ! ೧ ಪಾಪ ನನ್ನ ಉಷೆ ! ನನ್ನ ಭ್ರಮೆಗೆ ಅವಳ ರೂಪ ಕೊಟ್ಟು ನಾನವಳಿಗೆ ಕೊಟ್ಟ ಹಿಂಸೆ… ! ಎಷ್ಟು ಬೇಡಿದಳು - ಗೋಗರೆದಳು… , ನಾನಲ್ಲವೋ ನಿನ್ನ ಉಷೆ - ಬಿಟ್ಟುಬಿಡು ನನ್ನ ! ಬಿಡಲಿಲ್ಲ ನಾನು ! ಕಾಡಿದೆ… , ಅವಳಿಗಿಂತ ಬೇಡಿದೆ - ಗೋಗರೆದೆ ! ಆದರದು ಅವಳೇ ನನ್ನ ಉಷೆಯೆಂಬ ನಂಬಿಕೆಯಿಂದಲೇ ಹೊರತು… ! ಏನೋಪ್ಪ ! ಪ್ರೇಮಿಯಿಂದ ತಾಯಿಗೆ ಎಷ್ಟು ಚಂದದಲ್ಲಿ ಬಡ್ತಿ ಹೊಂದಿದಳು ! ನನ್ನ ಸಹಕಾರವಿರಲಿಲ್ಲವೇ… ? ಇತ್ತು ! ಯಾಕೆ ? ಅವಳು ಉಷೆ - ಪ್ರೇಮ ...! ನಾನು ಅನಿರುದ್ಧನಲ್ಲ - ಭ್ರಮೆ ! ೨ ಸಿಗಬಾರದಿತ್ತು - ಹಂಸ ! ನೋವು ನೋವು ನೋವು… , ನೋವು ಮಾತ್ರ - ನನ್ನಿಂದ… , ನಾನು ಅತಿ ಹೆಚ್ಚು ಪ್ರೀತಿಸುವವರಿಗೆ !! ಆದರೆ… , ಅವರ ನೋವಿಗೆ ಕಾರಣ - ನನಗೆ ಕಾರಣವೇ ಅಲ್ಲ ಅನ್ನುವ ವಿಪರ್ಯಾಸದಲ್ಲಿ ನನ್ನ ನೋವಿದೆ ! ನನ್ನ ಜೀವನವೇ ಹೀಗೆಯೇ ಏನೋ ! ಹುಡುಕಾಟ ನಿಲ್ಲುವುದಿಲ್ಲ ! ಇವಳೇ ಕೊನೆ ಎಂದು ಅದೆಷ್ಟು ಕೊನೆಗಳು ! ಅಂತ್ಯವಿಲ್ಲದ ಕೊನೆಗಳಿಗೊಂದು ಅಂತ್ಯ - ಹಂಸ ! ಹಂಸ ! ನನ್ನ ಮುಗ್ಧ ಪ್ರೇಮ ! ನನ್ನ ಮನಸ್ಸನ್ನು ಅರಿಯುವವಳೊಬ್ಬಳು ಬೇಕೆನ್ನುವ ನನ್ನ ಹುಡುಕಾಟ ! ಮುಗ್ಧತೆಯೇ ವಿಜೃಂಭಿಸಿ… , ಇನ್ನು ಮುಂದೆ ಯಾರೊಬ್ಬರೂ ಹತ್ತಿರವೇ ಬರದಂತೆ - ತಾನೂ ದೂರವಾಗಿ ಹೋದಳು - ದೂರ ಹೋಗುವುದೆಂದರೆ… , ಬಿಟ್ಟು ಹೋಗುವುದಲ್ಲ - ಮನಸ್ಸು ಅರ್ಥವಾಗದೆ ಒಂದು ಅಂತರ ರೂಪುಗೊಳ್ಳುವುದು ! ನನ್ನ ಮನಸ್...

ನನ್ನಯ್ಯ

ನನ್ನಯ್ಯ “ ಯೋ… ! ನನ್ನಯ್ಯ ! ಪ್ಲೀಸ್… , ಬೇಡ !” ಎಂದಳು . ಬೊಗಸೆಯೊಳಗಿನ ಮುಖ - ಮುತ್ತಿಗಾಗಿ ಕಾತರದಿಂದ ಕಾಯುತ್ತಾ… , ಆತುರವನ್ನು ತಾಳಲಾರದೆ ನನ್ನ ತುಟಿಯೆಡೆಗೆ ತಾನೇ ಚಲಿಸಿತು ! ಯಾವ ಕಾರಣಕ್ಕೂ ನಿನ್ನನ್ನು ಬಿಡಲಾರೆ - ಅನ್ನುವಂತೆ ಇಬ್ಬರ ತುಟಿಗಳೂ ಪರಸ್ಪರ ಬಂಧಿಸಿಕೊಳ್ಳುತ್ತಿದ್ದವು ! ಅವಳ ಬಟ್ಟೆಗಳನ್ನು ಸರಿಸುತ್ತಾ - ದೇಹದಮೇಲೆ ಎಲ್ಲೆಂದರಲ್ಲಿ ಚಲಿಸುತ್ತಿದ್ದ ನನ್ನ ಕೈಗಳನ್ನು ತಡೆಯುವಂತೆ ಹಿಡಿದರೂ… , ಅವಳೇ ತನಗೆ ಬೇಕಾದ ಕಡೆಗೆ ದಾರಿ ತೋರಿಸುತ್ತಿದ್ದಳು… ! ಬೆನ್ನು ಮೂಳೆ ಮುರಿಯುವಂತೆ ಅವಳನ್ನು ಅಪ್ಪಿಕೊಂಡು… , ಮೇಲಕ್ಕೆ ಎತ್ತಿ - ಮಂಚದ ಮೇಲೆ ಅಂಗಾತನೆ ಮಲಗಿಸಿದೆ . ಬಟ್ಟೆಗಳನ್ನೊಂದೊಂದೇ ಕಳಚಿ… , ನೂಲೆಳೆಯೂ ಇಲ್ಲದ ಅವಸ್ತೆಯಲ್ಲಿ… , “ ಬೇಡಿದ್ದರೆ ಬೇಡ - ಹೋಗು !” ಎಂದೆ . ಅವಳಿಗೆ ತಿಳಿಯದ ನಾನೇ ? ಮುಗುಳುನಕ್ಕು… , ನಿಧಾನವೆಂದರೆ ತೀರಾ ನಿಧಾನಕ್ಕೆ… , ಕಾಲಗಲಿಸಿದಳು… ! ಯುದ್ಧಾಹ್ವಾನ ! ನಾನೇನೂ ಆತುರಗಾರನಲ್ಲ ! ಪಾದದಿಂದ ಶುರುವಾದ ಮೊದಲ ಮುತ್ತು… , ನೂರಾ ಒಂದಕ್ಕೆ ತಲುಪಿದಾಗ ಕಿಬ್ಬೊಟ್ಟೆಯ ಕೆಳಗಿತ್ತು ! ಅಲ್ಲೊಂದು ಹುಡುಕಾಟ ! ಅವಳು… , ನನ್ನ ಮುಖವನ್ನು ಒದ್ದೆ ಮಾಡುವಷ್ಟು… , ಯುದ್ಧಕ್ಕೆ ತಯಾರಾಗಿದ್ದಳು ! ಮುಖದ ಒದ್ದೆಯನ್ನು ಅವಳ ಹೊಟ್ಟೆಯಮೇಲೆ ಒರೆಸಿ… , ಹೊಕ್ಕಳನ್ನೊಮ್ಮೆ ನಾಲಗೆಯಿಂದ ತೀಡಿ… , ಯಾರಿಗೂ ಮೋಸವಾಗಬಾರದೆಂಬಂತೆ ಎರಡೂ ಸ್ಥನಾಗ್ರಗಳನ್ನೊಮ್ಮೆ ತುಟಿಯಿಂದ ಬ...

ಭಟ್ಟಿ!

ಭಟ್ಟಿ ! ಮನಸ್ಸೇ… , ಅದೋ ಕಾಲಗರ್ಭ ! ಹೋಗೋಣವೇ ಹಿಂದಕ್ಕೆ ? ಈ ವಾಸ್ತವ - ವ್ಯಾವಹಾರಿಕ ಪ್ರಪಂಚದಿಂದ ಸ್ವಲ್ಪ ಹೊತ್ತಿನ ಮುಕ್ತಿಗಾಗಿ… , ಹೋಗೋಣವೇ ಕಾಲ್ಪನಿಕ ಮಹಾ ಸಾಮ್ರಾಜ್ಯದೊಳಕ್ಕೆ ? ಇತಿಹಾಸವೋ ಐತೀಹ್ಯವೋ… ., ಕೇಳದವರಾರು ವಿಕ್ರಮಾದಿತ್ಯನಬಗ್ಗೆ - ಬೇತಾಳದಬಗ್ಗೆ ? ಆದರೆ… , ಗೊತ್ತೇನು… ? ಅವರೊಂದಿಗೇ ಇದ್ದು - ಅವರಿಬ್ಬರನ್ನು ಮೀರಿಸುವ ವ್ಯಕ್ತಿತ್ವದೊಡೆಯ - ಐಂದ್ರಜಾಲಿಕ ಭಟ್ಟಿಯಬಗ್ಗೆ ? ನೋಡು - ಓಡು… . ಕಾನನಾಂಧಕಾರದೊಳಕ್ಕೆ… , ಮನಸ್ಸೇ… , ಹರಿದುಬಿಡು ! * ಸೂರ್ಯಕಿರಣವೂ ಭೂಮಿಯನ್ನು ತಾಕಲು ಹೆಣಗುವಷ್ಟು ವಿಸ್ತಾರವಾದ ಕಾಡು ! ಹಾಗೆಂದು ಸೂರ್ಯನೇನೂ ನಡುನೆತ್ತಿಯಮೇಲಿಲ್ಲ ! ಇನ್ನೇನು ಪೂರ್ವದಂಚಿನಲ್ಲಿ ಮುಳುಗುವ ಹಂತದಲ್ಲಿದ್ದಾನೆ ! ಆ ಕತ್ತಲು ಬೆಳಕಿನ ಆಟದಲ್ಲಿ - ಪ್ರಕೃತಿಯ ಅದ್ಭುತ - ರೌದ್ರ - ರಮಣೀಯ ಸೌಂಧರ್ಯವನ್ನು ಆಸ್ವಾದಿಸುತ್ತಾ… , ಕುರುಚಲು ಗಿಡಗಳನ್ನು ಲಾಘವವಾಗಿ ಸರಿಸುತ್ತಾ ಮುನ್ನಡೆಯುತ್ತಿದ್ದಾನೆ - ಭಟ್ಟಿ ! ಕತ್ತಲ ಕೀಟಗಳ ಗಿರ್‌ಗಿರ್‌ ನಾದದೊಂದಿಗೆ ನವಿಲುಗಳ ಕೂಗು , ನರಿ , ತೋಳ , ಆನೆಗಳ ಘೀಂಕಾರ , ಹುಲಿ ಸಿಂಹಗಳ ಘರ್ಜನೆ , ಕಾಡು ಪ್ರಾಣಿಗಳ ಓಡಾಟದ ಸದ್ದು… ! ಹೆದರಲು ಅವನೇನು ಸಾಮಾನ್ಯ ಮನುಷ್ಯನೇ… ? ಭಟ್ಟಿ - ಅವನು ! ಬಲಗೈಯ್ಯಲ್ಲಿ ಖಡ್ಗವನ್ನು ಹಿಡಿದು… , ಎಡಗೈಯಿಂದ ಗಿಡಗಳನ್ನು ಸರಿಸಿ… , ಸರಸರನೆ ನಡೆದ - ಯಾರದೋ ಕರೆಗೆ ಓಗೊಟ್ಟು ! ಅದೋ… , ಅಲ್ಲಿ… , ದೂರ...

ಅಬ್ಧಿ!

ಅಬ್ಧಿ ! ಮೊರೆತ ಸಮುದ್ರದ್ದೋ ಮನಸ್ಸಿನದ್ದೋ ! ಕಿವಿಗೊಟ್ಟು ಕೇಳಿದೆ… , “ ಹೇಳು !” ಎಂದಿತು ಅಬ್ಧಿ ! ಮುಗುಳುನಗುವಿನ ಹೊರತು ನನಗೇನಿದೆ ಉತ್ತರ ? “ ಮುಷ್ಠಿ ಸಡಿಲಿಸು ! ಮನಸ್ಸನ್ನು ಹರಡಲು ಬಿಡು - ನನ್ನಂತೆ !” ಎಂದಿತು . ಶಾಂತವಾಗಿ - ವಿಶಾಲವಾಗಿ ಹರಡಿದೆ ಸಾಗರ ! ಉರುಳುರುಳಿ ಬಂದು ಕಾಲನ್ನು ತೋಯಿಸುತ್ತಿದೆ ಅಲೆಗಳು . ಸಮುದ್ರವೇ ನನ್ನಲ್ಲಿಗೆ ಬಂದು ಕಾಲು ಹಿಡಿಯುತ್ತಿದೆಯೆಂದು ಅಹಂಕರಿಸಲೇ… ? ಸವರಿ ಸಾಂತ್ವಾನ ನೀಡುತ್ತಿದೆಯೆಂದು ಅಧೀರನಾಗಲೇ ? ಅಬ್ಧಿ ! ಸಮುದ್ರ ! ಪುಲ್ಲಿಂಗವೆನ್ನಿಸಿದರೂ… , ನನಗೆ ತಾಯಿ ! ಮನಸ್ಸಿನ ಬಿಗಿತ ಸಡಿಲಗೊಂಡಿತು ! ಏನೋ ಆನಂದ ! “ ಸರಿ ಹಾಗಿದ್ದರೆ ಕೇಳು… !” ಎಂದೆ . * “ ಪಾಪ ಅವನಿಗೆ ಗಲ್ಲು ಶಿಕ್ಷೆಯಂತೆ ?” “ ಪಾಪಾನ ? ಒಬ್ಬ ವ್ಯಕ್ತಿಯನ್ನು ನಿರ್ದಾಕ್ಷಿಣ್ಯವಾಗಿ ಕೊಂದಿದಾನೆ ಮಾರಾಯ !” “ ಯಾರು ಹೇಳಿದ್ದು ?” “ ಸಾಬೀತಾಗಿದೆ !” “ ಆದರೆ ಅವರೇನೂ ಅವನನ್ನು ಕಷ್ಟಪಟ್ಟು ಹುಡುಕಿ ಅರೆಸ್ಟ್ ಮಾಡಲಿಲ್ಲವಲ್ಲ !?” “ ಮತ್ತೆ ?” “ ಹೆಣವನ್ನು ಕಂಡವ ಪೋಲೀಸರಿಗೆ ಮಾಹಿತಿ ಕೊಡಲು ಹೋದ ! ಪಾಪ - ಅವನೇ ಅಪರಾಧಿಯಾದ !” “ ಅವನೇಕೆ ಹೆಣ ಇರುವಲ್ಲಿಗೆ ಹೋದ ? ಅವನೇ ಕೊಂದು ಯಾಕೆ ನಾಟಕ ಮಾಡಿರಬಾರದು ? ಸಾಬೀತಾಗಿದೆ ಅಂದಮೇಲೆ ಅವನೇ ಮಾಡಿರಬೇಕು !” “ ಏನೋಪ್ಪ !” ಇದು ಘಟನೆ ! * “ ಹೇಳು ಪುಟ್ಟ !” ಎಂದೆ . “ ತಮ್ಮ ಎಲ್ಲಿ ?” ಎಂದಳು . “ ಗೆಳೆಯನೊಂದಿಗೆ ಎಲ್...