ಭ್ರಮೆ ಕಳಚಿದಾಗ!
ಭ್ರಮೆ ಕಳಚಿದಾಗ ! ಕೆಲವೊಂದು ಭ್ರಮೆಗಳನ್ನು ಕಳಚಿಕೊಳ್ಳಲು ಪ್ರತ್ಯೇಕ ಕಾರಣಗಳೇನೂ ಬೇಕಿಲ್ಲ ! ಹಾಗೆಯೇ… , ಯಾವುದೋ ಘಟನೆ , ಚಿಂತನೆಗಳು ಇನ್ಯಾವುದೋ ಪ್ರಶ್ನೆಗಳಿಗೆ ಉತ್ತರವಾಗುತ್ತದೆ ! * “ ನಿನಗೆ ಫೇಸ್‌ಬುಕ್ ಸೆಟ್ ಆಗುವುದಿಲ್ಲ ಮಾರಾಯ ! ಒಬ್ಬನೇ ಎಲ್ಲಾದರೂ ಹಾಳಾಗಿ ಹೋಗು - ಸನ್ಯಾಸಿ !” ಎಂದಳು . “ ಅದೇ ಯೋಚನೆಯಲ್ಲಿದ್ದೇನೆ !” ಎಂದೆ . “ ಅದು ಹೇಗಾದರೂ ಮನಸ್ಸು ಬರುತ್ತೋ… ? ನೀನೇನೋ ಭಾರಿ - ಯಾರು ಏನಂದುಕೊಂಡರೆ ನನಗೇನು ನಾನಿರುವುದೇ ಹೀಗೆ - ಅನ್ನುವವ ! ಹಾಗೆಂದು ನಿನ್ನ ಬದುಕಿಗಂಟಿಕೊಂಡವರ ಕಥೆಯೇನು ?” ಎಂದಳು . ನಾನೇನೂ ಮಾತನಾಡಲಿಲ್ಲ . “ ಎಲ್ಲರೂ ನಿನ್ನ ಮನಸ್ಸಿನಂಥವರೇ ಆಗಬೇಕೆಂದಿಲ್ಲವೋ… ! ನೀ ಏನೇ ಬರೆದರೂ ಅದು ನಿನ್ನ ಪರ್ಸನಲ್ ಎಂದೇ ಬಿಂಬಿತವಾಗುವುದು ! ಯಾರನ್ನು ಉದ್ದೇಶಿಸಿ ಬರೆದಿದ್ದೀಯ ಎಂದೂ ಊಹಿಸುತ್ತಾರೆ !” ಎಂದಳು . ಅದು ನನಗೆ ಗೊತ್ತಿರುವ ವಿಷಯವೇ ! ನಾನು ಯಾವತ್ತೂ ಪ್ರಪಂಚದ ಮುಂದೆ ತೆರೆದುಕೊಳ್ಳಲು ಹಿಂಜರಿದವನಲ್ಲ . ಮನುಷ್ಯ ಅಂದಮೇಲೆ ಕೆಟ್ಟದ್ದು ಒಳ್ಳೆಯದ್ದು ಎರಡೂ ಇರುತ್ತದೆ ! ಕೇವಲ ಒಳ್ಳೆಯದನ್ನು ಮಾತ್ರ ಬಿಂಬಿಸಿ - ನಾನು ಭಾರಿ ಒಳ್ಳೆಯವ - ಅನ್ನಿಸಿಕೊಳ್ಳುವುದರಲ್ಲಿರುವ ಪುರುಷಾರ್ಥ ನನಗರ್ಥವಾಗುವುದಿಲ್ಲ ! “ ನಾನೇನು ಮಾಡಲೆ ? ನಿನ್ನ ಕೇಳಿದೆ ತಾನೆ ? ನೀನು ಮಾಡಿದ್ದು ಸರಿಯಾ - ಎಂದು ? ನೀನೇನೂ ಉತ್ತರಿಸದಿದ್ದರೆ ನಾನೇನು ಮಾಡಲಿ ? ನನಗೆ ಉತ್ತರ ಬೇಕು ! ಕಥೆಯಂತೆ ಬರ...