ಧೈರ್ಯ!
ಧೈರ್ಯ ! “ ನಿಜವಾದ ಅಪರಾಧಿಗಳು ಟ್ಯಾಕ್ಸ್ ಪೇಯರ್ಸ್ಉ !” ಎಂದೆ . “ ನಿನ್ನ ತಲೆ ! ಏಳು ಬಣ್ಣಗಳಿಗೆ ಹೊರತಾದ ಬಣ್ಣ ಇಲ್ಲ ಅಂದಿದ್ದೆ ಅವತ್ತು !” ಎಂದ ಗೆಳಯ . “ ನಿಜಾನೋ… ! ನಮ್ಮ ದೇಶದಲ್ಲಿ ಬಡತನವನ್ನು ಜಾತಿ - ಮತಗಳು ನಿರ್ಧರಿಸುತ್ತದೆಯೇ ಹೊರತು ಆರ್ಥಿಕ ಪರಿಸ್ತಿತಿಯಲ್ಲ !” ಎಂದೆ . “ ಕಪ್ಪು - ಬಣ್ಣವೇ ಅಲ್ಲವಂತೆ ?” ಎಂದ ಗೆಳಯ ! “ ಈಗ ನೋಡು… , ಟ್ಯಾಕ್ಸ್ ಕಟ್ಟುವವರು ಯಾವೊಂದು ಬೆನಿಫಿಟ್‌ಗೆ ಅರ್ಹರಲ್ಲವಂತೆ ! ಅವರು ಕಟ್ಟುವ ಟ್ಯಾಕ್ಸ್ ಯಾವುದೋ ಜಾತಿ - ಮತಗಳನ್ನು ಪೊರೆಯಲು ಅಂತೆ ! ಆ ಜಾತಿ - ಮತದವರು ಎಷ್ಟೇ ಶ್ರೀಮಂತರಾಗಿರಲಿ - ಒಂದು ಕಾರ್ಡ್ ಹೊಂದಿದ್ದರೆ ಸಾಕು !” ಎಂದೆ . ಅವನೇನೂ ಮಾತನಾಡಲಿಲ್ಲ ! ಅವನಿಗೆ ಅರ್ಥವಾಯಿತು ! ನಾನು ಸೋಲುವುದಿಲ್ಲ ! ಕೆಲವೊಮ್ಮೆ ನಾವು ಹೀಗೆಯೇ ! ತಲೆಬುಡವಿಲ್ಲದೆ ಮಾತನಾಡುತ್ತೇವೆ ! “ ಈಗ ನೋಡು ! ನಾನು ಟ್ಯಾಕ್ಸ್ ಕಟ್ಟುವಷ್ಟು ಸಂಪಾದನೆ ಮಾಡುವವನಲ್ಲ ! ಹಾಗೆಂದು ಬೆನಿಫಿಟ್‌ಗೆ ಅರ್ಹನಾ… ? ಅದೂ ಅಲ್ಲ ! ಎಂತ ಸಾವು ಮಾರಾಯ ! ಎಲ್ಲರೂ ಒಂದೇ ಅಂದಮೇಲೆ - ನಿಯಮವೂ ಎಲ್ಲರಿಗೂ ಒಂದೇ ಇರಬೇಕಲ್ಲವಾ ? ಟ್ಯಾಕ್ಸ್‌ಪೇಯರ್ಸ್‌ಏ ವಿಕ್ಟಿಮ್‌ಗಳು ಎಂದಿರುವಾಗ… , ಶಿಕ್ಷೆಯೂ ಅವರಿಗೇನೇ ಅನ್ನುವುದು ಯಾವ ನ್ಯಾಯ ?” ಎಂದೆ . ಏನು ಹೇಳಿದರೆ ನಾನು ಸೋಲುತ್ತೇನೆ ಅನ್ನುವ ಅರಿವಿರುವ ಗೆಳೆಯನೆಂದ… , “ ಮಗಾ… , ಧೈರ್ಯ ಯಾವ ರಸಕ್ಕೆ ಬರುತ್ತದೆ ?” “ ಗೊತ್ತಿಲ್ಲವೋ… ! ವೀರರಸಕ್ಕೆ ...