ಅಣಿಮಾಂಡವ್ಯನ ಮಾಯೆಯೂ ನನ್ನ ಭ್ರಮೆಯೂ!
ಅಣಿಮಾಂಡವ್ಯನ ಮಾಯೆಯೂ ನನ್ನ ಭ್ರಮೆಯೂ ! * ನನ್ನನ್ನು ನಾನು ಹುಡುಕಲು ತೊಡಗಿ ಸುಮಾರು ವರ್ಷಗಳಾಯಿತು ! ಇನ್ನೂ ಕಂಡುಕೊಳ್ಳಲಾಗಿಲ್ಲ ...! * ಅಣಿಮಾಂಡವ್ಯ ಅನ್ನುವ ಮಹಾ ಋಷಿಯೊಬ್ಬರಿದ್ದರಂತೆ . ಮಾಡದ ತಪ್ಪಿಗೆ ಶೂಲಕ್ಕೇರಿಸಲ್ಪಟ್ಟು ತಪಸ್ಸಿನ ಶಕ್ತಿಯಿಂದಾಗಿ , ಸಾಯಲೂ ಇಲ್ಲ - ಬದುಕೋ ನರಕ ಅನ್ನುವಂತಾಗಿತ್ತು ಪರಿಸ್ತಿತಿ ! ಮೂರು ದಿನವಾದರೂ ಆತ ಸಾಯದಿರುವುದನ್ನು ನೋಡಿ ಗಾಬರಿಯಾದ ಶೂಲಕ್ಕೇರಿಸಿದ ಮಹಾರಾಜ , ಈತನಾರೋ ಮಹಾನುಭಾವನೇ ಇರಬೇಕು , ತನಗೆ ತಪ್ಪಾಗಿದೆ ಅನ್ನುವುದನ್ನು ಅರಿತು , ತಾನೇ ಖುದ್ದಾಗಿ ಬಂದು , ಋಷಿಯನ್ನು ಶೂಲದಿಂದ ಇಳಿಸಿ , ಋಷಿ ಪಾದಕ್ಕೆ ಬಿದ್ದು ಉರುಳಾಡಿ ಕ್ಷಮೆ ಕೇಳಿದನಂತೆ ! ಪರಮ ಸಾಧು ಋಷಿ ಕ್ಷಮೆಯನ್ನು ನೀಡಿ ಮತ್ತೊಮ್ಮೆ ತಪಸ್ಸಿಗೆ ಹೊರಟ - ತನಗೇಕೆ ದೇವರು ಈ ಶಿಕ್ಷೆಯನ್ನು ನೀಡಿದ ಎಂದು ಕಂಡುಕೊಳ್ಳಬೇಕಿತ್ತು !! * ಅದೇ ಸಮಯದಲ್ಲಿ ನಾನೂ ತಪಸ್ಸಿಗೆ ತೊಡಗಿದ್ದೆ ! ಉದ್ದೇಶ - ದುಃಖದಿಂದ ಹೊರಬರುವುದು ! ನನ್ನೊಳಗೆ ನಾನು ಪರಮಾನಂದವನ್ನು ಕಂಡುಕೊಳ್ಳುವುದು ! ಪ್ರತ್ಯಕ್ಷರಾದ ದೇವರು ಹೇಳಿದ್ದು ...., “ ಅಣಿಮಾಂಡವ್ಯ ತಪಸ್ಸಿಗೆ ಹೊರಟ ಕಾರಣವನ್ನು ನೀನು ಹೇಳಿದೆ ! ನೀನು ಹೊರಟ ಕಾರಣವನ್ನು ಹೇಳಿಲ್ಲ - ಉದ್ದೇಶ ಮಾತ್ರ ಹೇಳಿದ್ದೀಯೆ ! ಕಾರಣವನ್ನು ಪ್ರಪಂಚದ ಮುಂದೆ ಹೇಳಿಕೋ .... ನಿಜದರಿವಾಗುತ್ತದೆ !” * ಅಣಿಮಾಂಡವ್ಯನ ತಪಸ್ಸು ಮುಗಿಯುವ ಸೂಚನೆಯೇ ಇಲ್ಲ ! ಮುಂಚೆಯೆಲ್ಲಾ ಅಷ್ಟು ಬೇಗ...