ಲೀನ!
ಲೀನ ! ೧ ಪುರಾತನ ಕಾಲ ! ಕಾಡು ! ಜನಸಂಚಾರವಿಲ್ಲ ! ದಿಕ್ಕುತಪ್ಪಿ ಎರಡು ಮೂರು ದಿನದಿಂದ ಅಲೆಯುತ್ತಿದ್ದೇನೆ ! ದಿಕ್ಕುತಪ್ಪಿ ಅನ್ನಲಾಗದು ! ಹೊರಟಿದ್ದೇ ದಿಕ್ಕು ದೆಸೆ ಇಲ್ಲದೆ - ಗುರಿಯಿಲ್ಲದೆ ! ಕಾಡು ಮೃಗಗಳಿಗಾದರೂ ಆಹಾರವಾದರೆ ಒಂದು ಸಾರ್ಥಕತೆ ! ಆದರೆ ಯಾಕೋ… ಎಲ್ಲರೂ - ಎಲ್ಲವೂ ಮುನಿಸಿಕೊಂಡ ಭಾವ ! ಕುರುಚಲು ಗಿಡಗಳನ್ನು ಸರಿಸಿ ಮತ್ತಷ್ಟು ಮುಂದಕ್ಕೆ ಹೋದಾಗ .., ಒಂದು ಗುಡಿ - ಪಾಳು ಗುಡಿ ! ದಟ್ಟಾರಣ್ಯದ ನಡುವೆ ಪಾಳು ಗುಡಿ ! ಎಲ್ಲಿ ಅಗೆದರೆ ಏನು ರಹಸ್ಯವಿದೆಯೋ ಈ ಭೂಮಿಯಲ್ಲಿ ! ಕಳೆದು ಹೋದ - ಗತ - ಕಾಲಕ್ಕೆ ಹೋಲಿಸಿದರೆ… ದಟ್ಟಾರಣ್ಯವಿದ್ದಕಡೆ ಮಹಾ ಸಾಮ್ರಾಜ್ಯವಿದ್ದಿರಲಿಕ್ಕೂ ಸಾಕು ! ಎಷ್ಟೆಷ್ಟು ನಾಗರೀಕತೆಗಳು… ಮನುಷ್ಯನ ಅರಿವಿನ ಮಿತಿ ಅವನಿಗಿಲ್ಲ ! ಎಲ್ಲವೂ ತಿಳಿದುಕೊಂಡವನೆಂಬ ಅಹಂಕಾರ ! ಆಶ್ಚರ್ಯವೇನೂ ಆಗಲಿಲ್ಲ - ಗುಡಿಯ ಸಮೀಪಕ್ಕೆ ಬಂದೆ . ಅದೆಷ್ಟು ಸಾವಿರ ವರ್ಷ ಹಳೆಯದೋ… ! ಆದರೂ ಸ್ವಚ್ಛವಾಗಿದೆ - ಯಾರೋ ಇರುವ ಸೂಚನೆ ! ಪಾವಿತ್ರ್ಯ ಅಂದರೇನು ? ಇದೇ ! ಪೂರ್ತಿಯಾಗಿ ಕಲ್ಲಿನಿಂದ - ಕೆತ್ತನೆಗಳಿಂದ ಕೂಡಿದ ದೇವಸ್ಥಾನ ! ಇದು ಮಾನವ ನಿರ್ಮಿತವಾ ? ಒಳಕ್ಕೆ ನಡೆದೆ ! ಹೊರಗಿನಿಂದ ಗುಡಿಯಂತೆ ಕಂಡರೂ ಒಳಗೆ - ಗುಹೆ ! ಕಣ್ಣು ಕತ್ತಲೆಗೆ ಹೊಂದಿಕೊಂಡಾಗ ತಿಳಿಯಿತು .., ಗರ್ಭಗುಡಿಯ ಬಾಗಿಲು ಹಾಕಿದೆ ! ಅಲ್ಲಿಯೇ ಕುಳಿತೆ . ಯಾರಾದರೂ ಬರಬಹುದೆ ? ಅಸಾಧ್ಯ ಅನ್ನಿಸ...