ಅಬ್ಧಿ!
ಅಬ್ಧಿ ! ಮೊರೆತ ಸಮುದ್ರದ್ದೋ ಮನಸ್ಸಿನದ್ದೋ ! ಕಿವಿಗೊಟ್ಟು ಕೇಳಿದೆ… , “ ಹೇಳು !” ಎಂದಿತು ಅಬ್ಧಿ ! ಮುಗುಳುನಗುವಿನ ಹೊರತು ನನಗೇನಿದೆ ಉತ್ತರ ? “ ಮುಷ್ಠಿ ಸಡಿಲಿಸು ! ಮನಸ್ಸನ್ನು ಹರಡಲು ಬಿಡು - ನನ್ನಂತೆ !” ಎಂದಿತು . ಶಾಂತವಾಗಿ - ವಿಶಾಲವಾಗಿ ಹರಡಿದೆ ಸಾಗರ ! ಉರುಳುರುಳಿ ಬಂದು ಕಾಲನ್ನು ತೋಯಿಸುತ್ತಿದೆ ಅಲೆಗಳು . ಸಮುದ್ರವೇ ನನ್ನಲ್ಲಿಗೆ ಬಂದು ಕಾಲು ಹಿಡಿಯುತ್ತಿದೆಯೆಂದು ಅಹಂಕರಿಸಲೇ… ? ಸವರಿ ಸಾಂತ್ವಾನ ನೀಡುತ್ತಿದೆಯೆಂದು ಅಧೀರನಾಗಲೇ ? ಅಬ್ಧಿ ! ಸಮುದ್ರ ! ಪುಲ್ಲಿಂಗವೆನ್ನಿಸಿದರೂ… , ನನಗೆ ತಾಯಿ ! ಮನಸ್ಸಿನ ಬಿಗಿತ ಸಡಿಲಗೊಂಡಿತು ! ಏನೋ ಆನಂದ ! “ ಸರಿ ಹಾಗಿದ್ದರೆ ಕೇಳು… !” ಎಂದೆ . * “ ಪಾಪ ಅವನಿಗೆ ಗಲ್ಲು ಶಿಕ್ಷೆಯಂತೆ ?” “ ಪಾಪಾನ ? ಒಬ್ಬ ವ್ಯಕ್ತಿಯನ್ನು ನಿರ್ದಾಕ್ಷಿಣ್ಯವಾಗಿ ಕೊಂದಿದಾನೆ ಮಾರಾಯ !” “ ಯಾರು ಹೇಳಿದ್ದು ?” “ ಸಾಬೀತಾಗಿದೆ !” “ ಆದರೆ ಅವರೇನೂ ಅವನನ್ನು ಕಷ್ಟಪಟ್ಟು ಹುಡುಕಿ ಅರೆಸ್ಟ್ ಮಾಡಲಿಲ್ಲವಲ್ಲ !?” “ ಮತ್ತೆ ?” “ ಹೆಣವನ್ನು ಕಂಡವ ಪೋಲೀಸರಿಗೆ ಮಾಹಿತಿ ಕೊಡಲು ಹೋದ ! ಪಾಪ - ಅವನೇ ಅಪರಾಧಿಯಾದ !” “ ಅವನೇಕೆ ಹೆಣ ಇರುವಲ್ಲಿಗೆ ಹೋದ ? ಅವನೇ ಕೊಂದು ಯಾಕೆ ನಾಟಕ ಮಾಡಿರಬಾರದು ? ಸಾಬೀತಾಗಿದೆ ಅಂದಮೇಲೆ ಅವನೇ ಮಾಡಿರಬೇಕು !” “ ಏನೋಪ್ಪ !” ಇದು ಘಟನೆ ! * “ ಹೇಳು ಪುಟ್ಟ !” ಎಂದೆ . “ ತಮ್ಮ ಎಲ್ಲಿ ?” ಎಂದಳು . “ ಗೆಳೆಯನೊಂದಿಗೆ ಎಲ್...