Posts

Showing posts from March, 2023

ಸಂಶೋಧನೆ!

ಸಂಶೋಧನೆ ! * “ ನಮ್ಮ ವಿಷಯದಲ್ಲಿ ನಾನೊಂದು ಭಯಂಕರ ಸಂಶೋಧನೆ ಮಾಡಿದ್ದೀನ್ಯೆ !” “ ಏನಪ್ಪಾ ಅದು… ? ಅಂಥಾ ಸಂಶೋಧನೆ ?” “ ಮುಖ ಮೂತಿ ನೋಡದೆ ಮಾತನಾಡುವವನು… , ಯಾರಬಳಿಯೂ ಸುಳ್ಳು ಹೇಳದವನು… , ಯಾರಬಗ್ಗೆಯೂ ತಲೆ ಕೆಡಿಸಿಕೊಳ್ಳದವನು ಇತ್ಯಾದಿ ಇತ್ಯಾದಿ ಬಿರುದಿರುವ ನಾನು ನಿನ್ನಲ್ಲಿ ಮಾತ್ರ ಸುಳ್ಳು ಹೇಳಿದ್ದೇನೆಂದರೆ… , ಅರ್ಥವೇನು ?” “ ನನ್ನ ಮಾತ್ರ ನಿನಗೆ ಇಷ್ಟವಿಲ್ಲಂತ !” “ ನಿನ್ನ ತಲೆ… ! ಯಾರು ಇದ್ದರೂ ಹೋದರೂ ಚಿಂತೆಯಿಲ್ಲದ ನನಗೆ ನೀನು ಇರಲೇ ಬೇಕು ಅನ್ನುವ ಆಸೆ !” “ ಅದಕ್ಕೆ ಸುಳ್ಳು ಹೇಳಬೇಕ ?” “ ಇಲ್ಲವೇ… ! ನಿನ್ನ ಮನಸ್ಸು ನನಗೆ ಗೊತ್ತು ! ಅದಕ್ಕೆ ಇಷ್ಟವಾಗದ್ದು ಹೇಳಿದರೆ… !?” “ ಇದೋ… , ತಮ್ಮ ಸಂಶೋಧನೆ ?” “ ಹೂಂನೆ ! ಈ ಪ್ರಪಂಚದಲ್ಲಿ ಪ್ರತಿ ಹುಡುಗನೂ ಮಾಡುವ ಮೂರ್ಖತನ ! ತನ್ನ ಪ್ರೇಮಿ ತನ್ನನ್ನು ಬಿಟ್ಟು ಹೋಗಬಾರದು ಅನ್ನುವ ಕಾರಣಕ್ಕೆ ಅವಳಿಗೆ ಇಷ್ಟವಿಲ್ಲದ ಸತ್ಯಗಳನ್ನು ಮುಚ್ಚಿಡುವುದು ! ನಂತರ… , ಅದೇ ಕಾರಣಕ್ಕೆ ಅವಳನ್ನು - ಶಾಶ್ವತವಾಗಿ ಕಳೆದುಕೊಳ್ಳುವುದು !!” “ ಇಂಥಾ ಗಂಭೀರ ಸಂಶೋಧನೆಯಿಂದ ನಮ್ಮ ವಿಷಯದಲ್ಲಿ ಏನೂ ಪ್ರಯೋಜನವಿಲ್ಲ ಕಂದ ! ಬಿಟ್ಟು ಬಿಡು ನನ್ನ !” “ ಈಗ ನಾನೇನು ಮಾಡಲಿ ಹೇಳು… !” “ ನಿಜವನ್ನು ಒಪ್ಪಿಬಿಡು !” “ ಎಲ್ಲರೂ ಹೀಗೇ ಹೇಳಿದರೆ ನಾನೇನು ಮಾಡಲಿ ?” " ಅಂದ್ರೆ ...??? ಏನರ್ಥ ?" " ಒಪ್ಪಿಕೊಂಡು ಬಿಡು ಅಂದ್ಯಲ್ಲೇ ? ನನ್ನ ಪ್ರ...

ವ್ಯವಸ್ತೆ!

ವ್ಯವಸ್ತೆ ಅಥವಾ ಮಾಫಿಯಾ ! ೧ “ ಈ ಕಥೆಯನ್ನು ನಾನು ಹೇಗೆ ಹೇಳುವುದು ಮನವೇ… ?” ಎಂದೆ . “ ವ್ಯವಸ್ತೆಯಬಗ್ಗೆ ಹೇಳಲು ಇದಕ್ಕಿಂತ ಒಳ್ಳೆಯ ಉದಾಹರಣೆ ಏನಿದೆ ?!” “ ಅರ್ಥವಾಗುತ್ತದೆಯೇ ? ಹೇಗೆ ಶುರುಮಾಡಲಿ ?” “ ಮುದುಕಿಯೊಬ್ಬಳು ಬಂದು ಭಿಕ್ಷೆ ಬೇಡಿದಳು - ಕೊಟ್ಟೆಯ ?” “ ನನ್ನಲ್ಲಿದ್ದರಲ್ಲವೇ ..?” ಎಂದೆ . “ ನಿನ್ನದೂ ಒಂದು ಮನುಷ್ಯ ಜನ್ಮ ! ಭಿಕ್ಷೆಯನ್ನು ಕೊಡಲಿಲ್ಲ… , ಅವಳಿಗಾಗಿ ಮರುಗಿದೆಯಾ ?” ನಾ… , ಮೌನ ! “ ಮಾನವ ಧರ್ಮ ಎಂದೊಂದಿದೆ ! ಗೊತ್ತೇ ?” “ ಅರ್ಥವಾಯಿತು !” ಎಂದೆ . “ ಹಾಗಿದ್ದರೆ… , ಹೇಳಿಬಿಡು !” ೨ ಅದೆಷ್ಟು ಜನ ! ನಾನೊಬ್ಬ ಪ್ರೇಕ್ಷಕ ! ನನ್ನ ವಿಷಯದಲ್ಲಿ ಉಳಿದವರು ! ನಾನು ಕುಳಿತಿರುವ ರೀತಿಯಿಂದಾಗಿಯೋ… , ಅವರನ್ನು ನಾನು ಗಮನಿಸುತ್ತಿದ್ದೇನೆ ಅನ್ನುವ ಅರಿವಿನಿಂದಲೋ… , ತಾವು ನೋಡುತ್ತಿರುವ ಅರಿವು ಬಾರದಂತೆ ಅವರೂ ನನ್ನನ್ನು ಗಮನಿಸುತ್ತಿದ್ದರು… ! “ ಏನಪ್ಪಾ… ! ನಿನ್ನೆಯೂ ಕೇಳಿದೆ - ಕೊಡಲಿಲ್ಲ ! ಇವತ್ತಾದರೂ… !” ಎಂದರು ಆ ವೃದ್ಧೆ ! ಇವತ್ತು ದುಡ್ಡಿದೆ ! ಎದ್ದು… , “ ಬನ್ನಿ !” ಎಂದೆ . ನನ್ನ ಉದ್ದೇಶ ಅರ್ಥವಾಗಿ… , “ ಊಟ ಬೇಡ !” ಎಂದರು . “ ಸರಿ ಹೋಗಿಬನ್ನಿ !” ಎಂದು ಹೇಳಿ ಕುಳಿತುಕೊಂಡೆ . ೩ “ ಮನಸ್ಸೇ… ! ಕ್ಷಮಿಸು ! ನಿನ್ನ ಆತುರಕ್ಕೆ ಅನುಗುಣವಾಗಿ ನಾನು ಮಾನವ ಧರ್ಮವನ್ನು ಪಾಲಿಸಲಾರೆ !” ಎಂದೆ . “ ಅರ್ಥವಾಯಿತು ! ಅವರಿಗೆ ಮಾಡುವ ಸಹಾಯ - ಅವರಿಗೇ ಸ...

ಅವನೊಬ್ಬ!

ಅವನೊಬ್ಬ ! ೧ ಅವನೊಬ್ಬನಿದ್ದ ! ಕನಸು ಕಣ್ಣಿನ ಹುಡುಗ ! ಹೃದಯದ ತುಂಬಾ ಪ್ರೇಮ - ಪ್ರಪಂಚವೂ ಸಾಲದು ಅನ್ನುಷ್ಟು ! ಪ್ರಕೃತಿಯೊಂದಿಗಿನ ಅವಿನಾಭಾವ ಸಂಬಂಧ ಅವನ ಪ್ರೇಮದ ಉತ್ಕೃಷ್ಟತೆಯನ್ನು ಹೆಚ್ಚಿಸುತ್ತಿತ್ತು ! ಗಿಡ - ಮರಗಳೊಂದಿಗೆ ಸಂಭಾಷಿಸುತ್ತಿದ್ದ ! ಕ್ರಿಮಿ ಕೀಟಗಳನ್ನೂ ಬಿಡುತ್ತಿರಲಿಲ್ಲ ! ಎಲ್ಲದರಲ್ಲೂ ಅವನಿಗೆ ಖುಷಿಯೆ - ಪ್ರೇಮವೇ ! ಇನ್ನೂ ಇನ್ನೂ ಪ್ರೇಮಿಸಬೇಕು ! ಮಕ್ಕಳು , ಪ್ರಾಣಿಗಳು , ಪುಸ್ತಕಗಳು , ವಿಗ್ರಹಗಳು… , ಜೀವನಿರ್ಜೀವಾದಿ ವಸ್ತುಗಳೊಂದಿಗೆ ಸಕಲ ಬ್ರಹ್ಮಾಂಡವನ್ನೂ ಪ್ರೇಮಿಸಬೇಕು ! ಅವನ ಪಾಡಿಗೆ ಅವನೆನ್ನುವಂತೆ ಇದ್ದುಬಿಡುತ್ತಿದ್ದ ! ೨ ಅವನೊಬ್ಬನಿದ್ದಾನೆ ! ಅವಳನ್ನು ಕಂಡ ! ಎಷ್ಟು ಚಂದ - ಪ್ರಪಂಚದ ಸೌಂಧರ್ಯವೆಲ್ಲಾ ಅವಳಲ್ಲಿ ಅಡಗಿದೆ ಎಂದು ಭ್ರಮಿಸಿದ ! ಪ್ರೇಮನಿವೇದನೆಯನ್ನು ಮಾಡಿದ ! ಒಪ್ಪಿದಳು ! ಶುರುವಾಯಿತು ಪ್ರೇಮ ಪರೀಕ್ಷೆ ! ನಿನ್ನ ಪ್ರೇಮ ನಿಜವೇ ಆದರೆ… , ಅನ್ನುವಲ್ಲಿಂದ ಪ್ರಾಪಂಚಿಕಕ್ಕೆ ಎಳೆದು ತಂದಳು ! ನಿಧಾನಕ್ಕೆ ಆನಂದ ಮರೆಯಾಗಿ ಏನೋ ವೇದನೆ ! ಅವಳೆಂದ ವೇಗಕ್ಕೆ ತನ್ನ ಪ್ರೇಮವನ್ನು ನಿರುಪಿಸಲಾರದೇ ಹೋದ - ತನ್ನತನವನ್ನು ಕಳೆದುಕೊಳ್ಳಲಾರದೇ ಹೋದ ! ನಿಧಾನವಾಗಿ ಅವನಿಂದ ದೂರವಾದಳು ! ಬಿಟ್ಟೇ ಹೋದಳು ! ೩ ಅವನೊಬ್ಬನಿರುತ್ತಾನೆ ! ಯಾವುದೇ ಅಂಕೆಯಿಲ್ಲದ ಜೀವನ ! ಅವನಿಗೇನು ? ಪ್ರೇಮಿಸಬೇಕು ! ಮನಸೋ ಇಚ್ಛೆ ಪ್ರೇಮಿಸಬೇಕು ! ಪ್ರೇಮಿಸಲ್ಪಡಬೇಕು ಅನ್ನುವ ಚಿಂತೆಯೇನೂ ಅವನಿಗಿ...

ಪ್ರೇಮ- ಧ್ಯಾನ- ದುಃಖ!

ಪ್ರೇಮ - ಧ್ಯಾನ - ದುಃಖ ! ೧ “ ಪ್ರೇಮ ದುಃಖ !” ಎಂದಳು . “ ಪ್ರೇಮ ಧ್ಯಾನ !” ಎಂದೆ . “ ಹೋಗುತ್ತಾ ಹೋಗುತ್ತಾ ನಿನಗೇ ಅರ್ಥವಾಗುತ್ತದೆ !” ಎಂದಳು . “ ನಿನಗೂ !” ಎಂದೆ . ೨ “ ಏನಿವತ್ತು ಇಷ್ಟು ಖುಷಿಯಾಗಿದ್ದೀಯ ?” ಎಂದಳು . “ ಅವಳು ಮತ್ತೊಬ್ಬನನ್ನು ಪ್ರೇಮಿಸುತ್ತಿದ್ದಾಳಂತೆ !” ಎಂದೆ . “ ನಿನ್ನ ತಲೆ ! ನೀನು ಪ್ರಪೋಸ್ ಮಾಡಲಿಲ್ಲವಾ ?” ಎಂದಳು . “ ಮಾಡಿದೆ ! ಆದರೆ ಅವಳಿಗೆ ನನಗಿಂತಲೂ ಶ್ರೇಷ್ಠವಾದ ಪ್ರೇಮಾನುಭೂತಿ ಬೇಕಿತ್ತು !” ಎಂದೆ . ೩ “ ಏನಾಯ್ತೆ ?” ಎಂದೆ . “ ಅವನು ನೋಡು ! ಯಾವಳೊಂದಿಗೋ ತಿರುಗುತ್ತಿದ್ದಾನೆ !” ಎಂದಳು . “ ಅದಕ್ಕೆ ನಿನಗೇನು ?” “ ಎಷ್ಟು ಡೀಪ್ ಆಗಿ ಪ್ರೇಮಿಸಿದೆ !” ಎಂದಳು . “ ಅಷ್ಟೆ ! ನಿನ್ನ ಪ್ರೇಮಕ್ಕೆ ಅವನು ಯೋಗ್ಯನಲ್ಲ ಅಂತ ಅರ್ಥ !” ಎಂದೆ . “ ನಿನಗರ್ಥವಾಗುವುದಿಲ್ಲ !” ಎಂದಳು . ೪ “ ಐ ಲವ್ ಯು !” ಎಂದೆ . “ ಛೀ ! ನಾಚಿಕೆಯಾಗುವುದಿಲ್ಲವಾ ? ಎಷ್ಟು ರೆಸ್ಪೆಕ್ಟ್ ಕೊಟ್ಟಿದ್ದೆ ! ಎಂತಾ ಸ್ಥಾನದಲ್ಲಿ ಇಟ್ಟಿದ್ದೆ ! ಒಬ್ಬ ಒಳ್ಳೆಯ ಗೆಳೆಯನಾಗಿ… ! ನೀನೂ ಎಲ್ಲರಂತೆ ಮಾಮೂಲಿ ಹುಡುಗನಾದೆ ! ನಾನು ಅಂತವಳಲ್ಲ !” ಎಂದಳು . “ ನಿನಗೇನಾಯ್ತೆ ? ನಾನೀಗ ಏನು ಹೇಳಿದೆ ?” “ ಐ ಲವ್ ಯು ಅಂದ್ರೆ ಎಷ್ಟು ಗ್ರೇಟ್ ಇಮೋಷನ್ ಗೊತ್ತಾ… ?” ಎಂದಳು . ೫ “ ಏನಂತಾನೆ ?” ಎಂದೆ . “ ಇಲ್ಲ ! ನನ್ನ ಪ್ರೇಮ ಅವನಿಗೆ ತಾಗುತ್ತಲೇ ಇಲ್ಲ !” ಎಂದಳು . ೬ “ ಎಷ್ಟು ಖ...

ಸನ್ಯಾಸ!

ಸನ್ಯಾಸ ! ೧ ಮದುವೆಯಾದಮೇಲೆ… , ಯಾಕಪ್ಪಾ ಮದುವೆಯಾದೆ , ಸಾಕು ಈ ಜೀವನ ಜಂಜಾಟ ಅನ್ನಿಸುವುದು ಸಾಮಾನ್ಯ ! ಇಲ್ಲೊಬ್ಬನ ಜೀವನವನ್ನು ನೋಡಬೇಕು - ಕರ್ಮ ! ೨ ನಾಂದಿ… , ಹೆಣ್ಣೊಬ್ಬಳಲ್ಲಿ ಪ್ರೇಮ ನಿವೇದನೆಯನ್ನು ಮಾಡಿದೆ !- ನಿಷೇಧಿಸಿದಳು ! ೩ ಪ್ರೇಮ ನೈರಾಶ್ಯವನ್ನು ಅಧಿಗಮಿಸುವುದು ಅಷ್ಟು ಸುಲಭವೇ ? ಎಷ್ಟೇ ಹಗುರವಾಗಿ ತೆಗೆದುಕೊಂಡರೂ… ? ಮನೆಯವರಿಗೆ ತಿಳಿಸದೆ - ಊರುಬಿಟ್ಟೆ ! ಕನ್ಯಾಕುಮಾರಿ ! ಎರಡು ದಿನದ ಪ್ರಯಾಣ - ಆಹಾರವೋ ನಿದ್ದೆಯೋ ಇಲ್ಲದೆ ! ರೈಲ್ವೇ ಸ್ಟೇಷನ್‌ನಿಂದ ಹೊರಬಂದು ನಡೆಯುವಾಗ… , ವಿವೇಕಾನಂದ ಟ್ರಸ್ಟ್ ಕಾಣಿಸಿತು ! ಸ್ನಾನ ಮಾಡಬೇಕು - ನಿದ್ದೆ ಮಾಡಬೇಕು ! ಬೆಡ್‌ ಒಂದಕ್ಕೆ ಐದು ರೂಪಾಯಿ ! ಆದರೆ ಐಡಿ ಪ್ರೂಫ್ ಇಲ್ಲದೆ ಬೆಡ್ ಕೊಡುವುದಿಲ್ಲ ಅನ್ನುವ ತಕರಾರು ! ಸರಿ… , “ ಕೊಂಜನೇರಂ ಇಂಗೆಯೇ ತೂಂಗಟ್ಟುಮಾ ?” ( ಸ್ವಲ್ಪ ಹೊತ್ತು ಇಲ್ಲೇ ನಿದ್ರೆ ಮಾಡಲೇ… ?) ಎಂದೆ - ರಿಸಪ್ಷನ್ ಎದುರಿನ ಜಾಗವನ್ನು ತೋರಿಸಿ ! ಏನನ್ನಿಸಿತೋ ಏನೋ… , “ ಪ್ರಚನೈ ಒಣ್ಣುಂ ಇಲ್ಲಯೇ ?” ( ಸಮಸ್ಯೆಯೇನೂ ಇಲ್ಲ ತಾನೆ ?) ಎಂದ . ಅಂದರೆ… , ಒಬ್ಬನೇ , ಐಡಿಪ್ರೂಫ್ ಇಲ್ಲದೆ , ನಿದ್ದೆಗೆಟ್ಟ ಕಣ್ಣು… ! “ ಪ್ರಚನೈ ಎದುವುಮೈ ಇಲ್ಲೈ… , ರಂಡುನಾಳ್ ತಂಗವೇಡುಂ - ಅವಳವ್‌ದಾನ್ !” ( ಸಮಸ್ಯೆ ಏನಿಲ್ಲ… , ಎರಡು ದಿನ ಇರಬೇಕು ಅಷ್ಟೆ ) ಎಂದೆ . ನಾಲಕ್ಕು ಬೆಡ್‌ ಇರುವ ಒಂದು ರೂಂ ! ಮೂರು ಬೆಡ್‌ ಆಲ್ರೆಡಿ ಬುಕ್ ಆಗಿ...