ನಂಬಿಕೆ!
ನಂಬಿಕೆ ! ೧ ಏಕಾಂತ - ಎಷ್ಟು ಚಂದ ! ಅದೊಂದು ಸ್ಥಳ ! ನಿರ್ಜನವಾದ ಸ್ಥಳ ! ಜನ ಅಲ್ಲಿಗೆ ಬರಲು ಹೆದರುತ್ತಾರೆ ! ವಿಚಿತ್ರವೆಂದರೆ… , ಅಲ್ಲೊಂದು ದೇವಿಯ ವಿಗ್ರಹವಿರುವ ಗುಡಿಯಿದೆ ! ಯಾವಕಾಲದಲ್ಲಿ - ಯಾವ ಪುಣ್ಯಾತ್ಮ ಕಟ್ಟಿಸಿದನೋ ಏನೋ… ! ದೇವಿಯ ಗುಡಿಯಿದ್ದೂ ಅಲ್ಲಿಗೆ ಬರಲು ಹೆದರುತ್ತಾರೆಂದರೆ… , ನಂಬಿಕೆ ಪ್ರಶ್ನಿಸಲ್ಪಡುತ್ತದೆ ! ನನಗೋ… , ಅದೊಂದು ಸ್ವರ್ಗ ! ಧ್ಯಾನಿಸುತ್ತಾ ಕುಳಿತೆನೆಂದರೆ… , ಪ್ರಪಂಚದ ಇರವೂ ಅರಿವಿಗೆ ಬರುವುದಿಲ್ಲ ! ಧ್ಯಾನದ ಕೊನೆಗೆ ದೇವಿಯೊಂದಿಗೆ ಸಂಭಾಷಿಸುತ್ತೇನೆ ! ಅಲ್ಲಿ ಸರಿ ತಪ್ಪುಗಳ ವಿಶ್ಲೇಷಣೆ ನಡೆಯುತ್ತದೆ ! ಒಬ್ಬರ ಸರಿ ಮತ್ತೊಬ್ಬರ ತಪ್ಪು ಹೇಗಾಗುತ್ತದೆ… , ಕೈಮೀರಿ ಮಾಡುವ ತಪ್ಪುಗಳ ಪರಿಣಾಮವೇನು… , ನಮ್ಮರಿವಿಲ್ಲದೆ ನಮ್ಮಿಂದಾಗುವ ತಪ್ಪುಗಳು ಯಾವುದು… , ತಪ್ಪುಗಳಿಗೆ ಪ್ರಾಯಶ್ಚಿತ್ತಗಳೇನು… , ಕೊನೆಗೆ… , ನಿಜವಾಗಿಯೂ ತಪ್ಪು ಅಂದರೆ ಏನು ಅನ್ನುವುದನ್ನು ಕೂಡ ಚರ್ಚಿಸುತ್ತೇ ( ನೆ ) ವೆ ! ನಿಷ್ಕಾಮ ಕರ್ಮದ ಬಗ್ಗೆಯೂ , ಮತಗಳಿಗೂ ಧರ್ಮಕ್ಕೂ ಇರುವ ವತ್ಯಾಸದ ಬಗ್ಗೆಯೂ ಸಂಸ್ಕೃತಿ , ಸಂಸ್ಕಾರಗಳಬಗ್ಗೆಯೂ… , ಹ್ಹೊ… , ಕೆಲವೊಮ್ಮೆ ನನಗನ್ನಿಸುತ್ತದೆ… , ಹೊರ ಪ್ರಪಂಚವನ್ನು ನೋಡಿ ನಾವು ಕಲಿಯುವುದಕ್ಕಿಂತ ಹೆಚ್ಚಿನ ಅರಿವು ನಮ್ಮೊಳಗೆ ನಾವು ಶೋಧಿಸಿದರೆ ದಕ್ಕುತ್ತದೆಂದು ! ಆತ್ಮಸಾಕ್ಷಿಗನುಗುಣವಾಗಿ ಬದುಕಿದರೆ ಸಾಕು… , ಪ್ರಪಂಚದ ಅಸ್ತಿತ್ವವೇ ಬದಲಾಗುತ್ತದೆ ! ೨ ಚಿಕ್ಕ ವಯ...