Posts

Showing posts from September, 2024

ಅನಿರುದ್ಧ ಬಿಂಬ!

  ಅನಿರುದ್ಧ ಬಿಂಬ ! * ನಮಸ್ತೇ… , ನಾನು ಅನಿರುದ್ಧ - ಬಿಂಬದಿಂದ ಹೊರಬಂದ ರೂಪವಿಲ್ಲದ ಅನಿರುದ್ಧ ! ನಾವೊಂದು ಕಲ್ಪನೆಯ ಲೋಕಕ್ಕೆ ಹೋಗಿಬರೋಣ . ಈ ಕಾಲ್ಪನಿಕ ಕಥೆಯನ್ನು ಕೇಳಿ ಕೊನೆಗೆ - ಇದರಲ್ಲಿ ಯಾವುದು ಕಲ್ಪನೆ , ಯಾವುದು ವಾಸ್ತವ , ಯಾವುದು ಕನಸು , ಯಾವುದು ಭ್ರಮೆ , ಕಥೆಗೆ ಪ್ರೇರಣೆಯೇನು ಎಂದೆಲ್ಲಾ ಕೇಳಬಾರದು ! ಮತ್ತೊಮ್ಮೆ ಹೇಳುತ್ತಿದ್ದೇನೆ… , ಈ ಬ್ರಹ್ಮಾಂಡದಲ್ಲಿ ಏನೂ ಸಾಧ್ಯ ಅನ್ನುವ ಅಡಿಪಾಯದಲ್ಲಿ ಈ ಕಥೆಯನ್ನು ಹೇಳುತ್ತಿದ್ದೇನೆ . ಈ ಕಥೆ ನಡೆಯುವುದು ಎರಡು ವ್ಯತ್ಯಸ್ತವಾದ ಪ್ರಪಂಚದಲ್ಲಿ ! ಒಂದು… , ನಿದ್ದೆ ಅನ್ನುವ ಮಾಯಾ ಪ್ರಪಂಚದಲ್ಲಿ ! ಇನ್ನೊಂದು… , ನಿದ್ದೆಯ ಹೊರತಾದ ಮಾಯಾ ಪ್ರಪಂಚದಲ್ಲಿ ! ಆದ್ದರಿಂದ ಇದು ಪರಿಪೂರ್ಣವಾಗಿ ಕಾಲ್ಪನಿಕ ಕಥೆ ! * ಮೊನ್ನೆ ನಾನೊಂದು ಊರಿಗೆ ಹೋಗಿದ್ದೆ . ಊರಾ ಅಂದರೆ ಊರಲ್ಲ ಊರಲ್ಲವಾ ಅಂದರೆ ಊರು ! ಅದೊಂದು ಕಾಡಿನಂತಾ ಪ್ರದೇಶ - ಜನಸಂಚಾರವೇ ಇಲ್ಲದ ಪ್ರದೇಶ . ಅಲ್ಲೊಂದು ದೇವಸ್ಥಾನ . ಆ ದೇವಸ್ಥಾನದಬಗ್ಗೆ ಹಲವರು ಹಲವು ಕಥೆಗಳನ್ನು ಹೇಳಿದ್ದರು . ನನಗೋ ಅದರಕಡೆ ಗಮನವೇ ಇಲ್ಲ . ನನ್ನ ಗಮನವೆಲ್ಲಾ ಆ ದೇವಸ್ಥಾನಕ್ಕೆ ನೆರಳಿನಂತೆ ನಿಂತಿದ್ದ ಆ ದೊಡ್ಡ ಆಲದ ಮರದ ಕಡೆಗೆ . ಎಷ್ಟು ವರ್ಷವಿರಬೇಕು ಆ ಮರಕ್ಕೆ ಅನ್ನಿಸಿದರೂ ಅದಕ್ಕಿಂತ ಕುತೂಹಲ .., ಈ ಮರದ ಇರವಿನ ಅರಿವು ನನಗಿತ್ತಲ್ಲಾ - ಅನ್ನುವುದು ! ಅದರ ಸಮೀಪಕ್ಕೆ ಹೋಗುತ್ತಿದ್ದಂತೆ ಮನಸ್ಸಿನೊಳಗೆ ಅರಿ...

ಜೋಡಿ

 ಸಮಯವನ್ನೊಮ್ಮೆ ನೋಡಿಕೊಂಡೆ. ಇನ್ನೂ ಐದುನಿಮಿಷವಿತ್ತು. ತಾಳ್ಮೆಯಿಂದ ಕಾದೆ. ಬಂದರು. ಆಹಾ ಅನ್ನಿಸುವ ಜೋಡಿ. ಮೊದಲಬಾರಿ ಇಂತಾ ಐಶಾರಾಮಿ ಹೋಟೆಲ್ಲಿಗೆ ಬಂದಿದ್ದಳೇನೋ..., ಅವಳ ಮುಖದಲ್ಲಿ ಸಂತೋಷ. ಇಬ್ಬರೂ ಕಂಫರ್ಟ್ ಆಗಿ ಕುಳಿತುಕೊಂಡರು. ಅವನು ಎದ್ದುನಿಂತು ಪ್ಯಾಂಟಿನ ಜೇಬಿಗೆ ಕೈಹಾಕಿದ. ಗೊಂದಲದಿಂದ ತಡಕಾಡಿದ. "ಈಗ ಬಂದೆ" ಎಂದು ಹೇಳಿ ಹೊರಕ್ಕೆ ಹೋದ. ಅವಳು ತಳಮಳದಿಂದಲೂ ಉದ್ವೇಗದಿಂದಲೂ ಕುಳಿತಿದ್ದಳು. ನಿಧಾನಕ್ಕೆ ಹೋಗಿ ಅವಳಮುಂದೆ ಕುಳಿತೆ. ಮುಗುಳುನಕ್ಕೆ. ಪರಿಚಿತನೋ ಅಪರಿಚಿತನೋ ತಿಳಿಯದ ಗೊಂದಲದ ಮುಖಭಾವ. ಎಷ್ಟು ಮುಗ್ಧೆ. "ಅವನಿಂದ ನಮಗೆ ದೊರಕಿದ ಹನ್ನೊಂದನೆಯ ಹುಡುಗಿ ನೀನು" ಎಂದೆ.

ಬಾಲಿಶ ಪ್ರೇಮ

ಅವಳು ತನ್ನ ಪ್ರೇಮವನ್ನು ನಿವೇದಿಸಿದಾಗ ನಿರ್ದಾಕ್ಷಿಣ್ಯವಾಗಿ ನಿಷೇಧಿಸಿದೆ- ಪ್ರೇಮ ಬಾಲಿಶವೆಂದು! ಮುಂದೆ ಮತ್ತೊಬ್ಬಳಲ್ಲಿ ನನಗೆ ಪ್ರೇಮ ಮೂಡಿ ನಾನು ಪ್ರೇಮ ನಿವೇದನೆ ಮಾಡಿದಾಗ ನಿರ್ದಾಕ್ಷಿಣ್ಯವಾಗಿ ನಿಷೇಧಿಸಿದಳು- ಪ್ರೇಮ ಬಾಲಿಶವೆಂದು! ಪ್ರೇಮ ನಿಷೇಧಿಸಲ್ಪಡುವಾಗಿನ ನೋವು ಅರ್ಥವಾಗಿ ನನ್ನಲ್ಲಿ ಪ್ರೇಮ ನಿವೇದಿಸಿದವಳಲ್ಲಿಗೆ ಹೋದೆ!! ಅವಳು ತನ್ನನ್ನು ಪ್ರೇಮಿಸುವವನೊಂದಿಗೆ ನೆಮ್ಮದಿಯಾಗಿದ್ದಳು!

ಆ ಅವಳು!

ಆ ಅವಳು! * ಮಧ್ಯರಾತ್ರಿ ಹನ್ನೆರಡುಗಂಟೆಯೋ…, ಒಂದುಗಂಟೆಯೋ….! ಟ್ರ್ಯಾಕ್ ಪ್ಯಾಂಟ್ ಮಾತ್ರ ಧರಿಸಿ- ಬರಿಮೈಯ್ಯಲ್ಲಿ ಅಂಗಾತನೆ ಮಲಗಿದ್ದೇನೆ. ಆಕಾಶದಲ್ಲಿ ನಕ್ಷತ್ರಗಳು- ಕ್ಷುಬ್ಧಗೊಂಡ ನನ್ನ ಮನಸ್ಸಿನಂತೆ- ಅರ್ಥವಿಲ್ಲದೆ ಹರಡಿಕೊಂಡಿದೆ. ಭೋರ್ಗರೆಯುತ್ತಿರುವ ಮಹಾಸಮುದ್ರ. ಅಮಾವಾಸ್ಯೆಯ ಕತ್ತಲು. “ಸರ್!” ಎಂದ ಟಿ ಅಂಗಡಿಯ ಹುಡುಗ. “ನೀನು ಹೊರಡು ಪುಟ್ಟ…, ನಾನೆಷ್ಟೊತ್ತಿರುತ್ತೇನೋ ಗೊತ್ತಿಲ್ಲ…, ಇಲ್ಲೇ ನಿದ್ರೆ ಮಾಡಿದರೂ ಮಾಡಬಹುದು!” ಎಂದೆ. ಕೈಯ್ಯಲ್ಲಿದ್ದ ಟೀಯನ್ನು ನನ್ನೆಡೆಗೆ ನೀಡಿದ. ಎದ್ದೆ. ಈ ದಿನದ ಕೊನೆಯ ಟೀ…! ಬ್ಲಾಕ್ ಟೀ…! ಕಟ್ಟನ್ ಚಾಯ! ಕೊಟ್ಟು ಅವನು ಹೊರಟು ಹೋದ.  ಮನಸ್ಸು ಸ್ತಬ್ಧವಾದಾಗ, ಯೋಚನೆಯ ನರಗಳು ಸತ್ತಂತಾದಾಗ, ಚಿಂತೆಯೇ ಇಲ್ಲವೆನ್ನುವ ಚಿಂತೆ ಹತ್ತಿಕೊಂಡಾಗ…, ಕಡಲಿಗಿಂತ ಉತ್ತೇಜನ ನೀಡುವುದು ಯಾವುದಿದೆ? ಸದ್ಯಕ್ಕೆ…, ನನ್ನೆದುರಿಗಿನ ಮಹಾಸಾಗರಕ್ಕೆ ನಾನೊಬ್ಬನೇ ಒಡೆಯ! ಅಲೆಗಳು ಉರುಳುರುಳಿ ಬಂದು ನನ್ನ ಕಾಲನ್ನು ತೋಯಿಸಿ ಮರುಳುವುದಕ್ಕೆ ಅನುಸಾರವಾಗಿ ಒಂದೊಂದೆ ಸಿಪ್ ಟೀ-ಯನ್ನು ಗುಟುಕರಿಸತೊಡಗಿದೆ. ನಿಧಾನವಾಗಿ ಅವಳು ನನ್ನನ್ನು ಆವರಿಸತೊಡಗಿದಳು. ಅವಳು…, ಮನಸ್ಸು ಖಾಲಿಯಾಗಿದೆಯೆನ್ನಿಸಿದಾಗ ದುತ್ತನೆ ಪ್ರತ್ಯಕ್ಷವಾಗಿ ನಾನಿಲ್ಲವಾ? ಅನ್ನುತ್ತಿದ್ದವಳು! ಅವಳು…, ಕಥೆಬರಿ…, ಈಗ ಬರೀತೀಯ ನೋಡು- ಎಂದು ಪ್ರೇರೇಪಿಸುತ್ತಿದ್ದವಳು. ಅವಳು…, ಅವಳ ಮೇಲಿನ ನನ್ನ ನಿಷ್ಠುರತೆಯನ್ನು ನನ್ನಿಂದಲೇ ಕಥೆಯ ರೂಪದಲ್ಲಿ ಬರೆಸು...

ಚಿಂತೆ

ಚಿಂತೆ ಕೊಲ್ಲತೊಡಗಿತ್ತು ಚಿಂತೆಯನ್ನೇ ಕೊಂದುಬಿಟ್ಟೆ! 😁😎

ನೆಮ್ಮದಿ

 ನೆಮ್ಮದಿ! * "ಪೆಟ್ಟಿನ ಮೇಲೆ ಪೆಟ್ಟು ಬಿದ್ದರೂ ನೀ ಹೇಗೆ ಇಷ್ಟು ನೆಮ್ಮದಿಯಾಗಿದೀಯೋ ಅರ್ಥವಾಗುತ್ತಿಲ್ಲ!" "ಇದರಲ್ಲಿ ಅರ್ಥವಾಗೋಕೆ ಏನಿದೆ? ನನಗೆ ಅಮ್ಮ ಇದಾರೆ!" "ಎಷ್ಟು ದಿನ?!" "ಇದೆಂತ ಪ್ರಶ್ನೆ!! ನನ್ನಮ್ಮ ಮಿನಿಮಂ ಎಂಬತ್ತು ವರ್ಷ ಬದುಕುತ್ತಾರೆ- ಮಿನಿಮಂ!" "ಆಮೇಲೆ?" "ಆಮೇಲೆಂತ? ಆಗ ನನಗೂ ಐವತ್ತು ವರ್ಷ ವಯಸ್ಸಾಗಿರುತ್ತೆ! ನಂತರ ನಮ್ಮಮ್ಮ ಎಷ್ಟು ವರ್ಷ ಬದುಕುತ್ತಾರೆ ಅನ್ನುವುದು ನನ್ನ ಆಯುಸ್ಸಿಗೂ ಬೋನಸ್!" ಸ್ವಲ್ಪ ಸಮಯಕ್ಕೆ ಅವಳ ಬಿಟ್ಟ ಬಾಯಿ ಮುಚ್ಚಲಿಲ್ಲ..., ಸೊ..., ಸಂಭಾಷಣೆ ಮುಂದುವರೆಯಲಿಲ್ಲ!

ಕವಿತೆ

 ಕವಿತೆ ಹೊಳೆಯುವುದಲ್ಲವಂತೆ- ಹುಟ್ಟುವುದಂತೆ! ನಿಜ! ಎಷ್ಟು ಯೋಚಿಸಿದರೂ ಚಿಂತಿಸಿದರೂ ಮುಂದಕ್ಕೆ ಚಲಿಸದ ನನ್ನ ಲೇಖನಿ... ಅವಳ ದರ್ಶನ ಮಾತ್ರಕ್ಕೆ ಎಷ್ಟು ಸರಾಗವಾಗಿ ಮುಂದೋಡುತ್ತದೆ! ನನ್ನ ಕವಿತೆಯ ಹುಟ್ಟು ಅವಳು ನನ್ನ ಕವಿತೆಯ ಪ್ರೇರಣೆ ಅವಳು ನನ್ನ ಪ್ರತಿ ಕವಿತೆಯೂ ಅವಳೇ!